Homeಮುಖಪುಟತುಳು ರಂಗಭೂಮಿಯ ಸಾಕ್ಷಿಪ್ರಜ್ಞೆ ಅರವಿಂದ ಬೋಳಾರ್

ತುಳು ರಂಗಭೂಮಿಯ ಸಾಕ್ಷಿಪ್ರಜ್ಞೆ ಅರವಿಂದ ಬೋಳಾರ್

- Advertisement -
- Advertisement -

ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಕನ್ನಡದ ಎಲ್ಲಾ ಚಾನೆಲ್‌ಗಳು ದ್ವೇಷ ಬಿತ್ತುತ್ತಾ ಜನರನ್ನು ಭಯಭೀತರನ್ನಾಗಿಸುತ್ತಿದ್ದಾಗ ಮಂಗಳೂರಿನ ಸ್ಥಳೀಯ ಚಾನೆಲ್ ಆದ ದೈಜಿ ವರ್ಲ್ಡ್ ವಿನೂತನ ಪ್ರಯೋಗವೊಂದನ್ನು ಹುಟ್ಟುಹಾಕಿತು. ಪ್ರತಿಭಾವಂತ ಕಾರ್ಯಕ್ರಮ ನಿರೂಪಕರಾದ ವಾಲ್ಟರ್ ನಂದಳಿಕೆಯವರು ನಡೆಸಿಕೊಟ್ಟ “ಕೊರೊನಾ ಗೆಲ್ಲೋಣ” ಎಂಬ ಕಾರ್ಯಕ್ರಮದಲ್ಲಿ ತುಳುನಾಡಿನ ವಿವಿಧ ಕಲಾವಿದರನ್ನು ಸ್ಟುಡಿಯೋಗೆ ಕರೆಸಿ ಜನಜಾಗೃತಿ, ಮನರಂಜನೆಯ ಜೊತೆಗೆ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಅಗತ್ಯವಿರುವ ಕುಟುಂಬಗಳಿಗೆ ಕಿಟ್ ವಿತರಿಸುವುದರ ಮೂಲಕ ಬಡವರ ಸಂಕಷ್ಟಕ್ಕೆ ಸ್ಪಂದಿಸಿತು.

ಇದರ ಜೊತೆಗೆ ಪ್ರತಿ ಭಾನುವಾರ ರಾತ್ರಿ ಒಂಭತ್ತು ಗಂಟೆಗೆ ಪ್ರಸಾರವಾಗುವ ಪ್ರೈವೇಟ್ ಚಾಲೆಂಜ್” ಎಂಬ ಕಾರ್ಯಕ್ರಮದಲ್ಲಿ ತೀಕ್ಷ್ಣವಾದ ವ್ಯಂಗ್ಯ, ವಿಡಂಬನೆಯೊಂದಿಗೆ ರಾಜಕೀಯ, ಸಾಮಾಜಿಕ ವಿಚಾರಗಳನ್ನೆತ್ತಿಕೊಂಡು ಚಿಕಿತ್ಸಕ ದೃಷ್ಟಿಯಲ್ಲಿ ವಿಶ್ಲೇಷಿಸುವ ಹೊಸ ವಿಧಾನಕ್ಕೆ ಕೈ ಹಾಕಿತು. ಸ್ಥಳೀಯ ಚಾನೆಲ್‌ವೊಂದರ ಇಂತಹ ಕಾರ್ಯಕ್ರಮ ಹೃಸ್ವ ಅವಧಿಯಲ್ಲಿ ಸುಮಾರು ಮೂರು ಲಕ್ಷದಷ್ಟು ವೀಕ್ಷಕರನ್ನು ಸಂಪಾದಿಸಲು ಸಾಧ್ಯವಾಗಿದೆಯೆಂದರೆ ಅದು ಆ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿ.

ಸದರಿ ಕಾರ್ಯಕ್ರಮದ ವಿಶೇಷ ವ್ಯಕ್ತಿ “ತುಳುನಾಡ ಮಾಣಿಕ್ಯ” ಎಂದೇ ಮನೆಮಾತಾಗಿರುವ ಅರವಿಂದ ಬೋಳಾರ್. ಇವರನ್ನು ತುಳುನಾಡಿನ ಚಾರ್ಲಿ ಚಾಪ್ಲಿನ್ ಎಂದರೆ ತಪ್ಪಾಗಲಾರದು. ಚಾರ್ಲಿ ಹೇಗೆ ತನ್ನ ಅದ್ಭುತ ನಟನೆಯ ಮೂಲಕ ವ್ಯವಸ್ಥೆಯನ್ನು ಅಣಕಿಸಿದನೋ ಅದೇ ರೀತಿ ಬೋಳಾರ್ ತನ್ನನ್ನು ತಾನು ಹಾಸ್ಯದ ವಸ್ತುವಾಗಿಸಿ ಬಹಳ ಸರಳವಾಗಿ, ಅಷ್ಟೇ ಸಹಜವಾಗಿ ಸೃಜನಶೀಲ ಮಾತುಗಾರಿಕೆಯಿಂದ, ಆಯಾಯ ಪಾತ್ರಗಳಿಗೆ ಸೂಕ್ತವೆನಿಸುವ ಕಾಸ್ಟ್ಯೂಮ್‌ಗಳನ್ನು ಧರಿಸಿ ಪ್ರಸ್ತುತ ಕಾಲಘಟ್ಟದೊಂದಿಗೆ ಮುಖಾಮುಖಿಯಾಗುತ್ತಾರೆ. ಚಾರ್ಲಿ ಚಾಪ್ಲಿನ್, ಕನ್ನಡದ ನರಸಿಂಹರಾಜು, ಅವರ ನಟನೆ, ಅವರುಗಳ ಮುಖ ನೋಡಿದ ಕೂಡಲೇ ಹೇಗೆ ನಗು ಉಕ್ಕಿ ಬರುತ್ತಿತ್ತೋ, ಹಾಗೆಯೇ ತುಳುರಂಗ ಭೂಮಿಯ ಬೋಳಾರರನ್ನು ಕಂಡ ಕೂಡಲೇ ಜನ ಬಿದ್ದು ಬಿದ್ದು ನಗತೊಡಗುತ್ತಾರೆ.


ಇದನ್ನೂ ಓದಿ: ಜ್ಯೋತಿಷಿ ವಿಡಂಬನೆ ಮಾಡಿದ ಅರವಿಂದ್ ಬೋಳಾರ್ ಮೇಲೆ ಕೇಸ್; ಕಲಾವಿದನ ಬೆನ್ನಿಗೆ ನಿಂತ ಕರಾವಳಿ


ದಕ್ಷಿಣ ಕನ್ನಡ ಜಿಲ್ಲೆಯ ಪ್ರಾದೇಶಿಕ ಭಾಷೆಗಳಾದ ತುಳು, ಬ್ಯಾರಿ, ಕೊಂಕಣಿಯನ್ನು ನಿರರ್ಗಳವಾಗಿ ಮಾತನಾಡಬಲ್ಲ ಬೋಳಾರರೆಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಬೋಳಾರ್ ತಮ್ಮ ಸಹಜ ಪ್ರತಿಭೆಯ ಮೂಲಕ ತುಳುರಂಗಭೂಮಿಯಲ್ಲಿ ಮಿಂಚತೊಡಗಿದರು. ನಾನು ವಿದ್ಯಾರ್ಥಿನಿಯಾಗಿದ್ದಾಗ ತುಳು ನಾಟಕಗಳಲ್ಲಿ ಎಂತಹ ಆಸಕ್ತಿಯಿತ್ತೆಂದರೆ ದೇವದಾಸ್ ಕಾಪಿಕಾಡ್, ನವೀನ್.ಡಿ.ಪಡೀಲರ ತುಳು ನಾಟಕಗಳ ಆಡಿಯೋ ಕ್ಯಾಸೆಟ್‌ಗಳನ್ನು ತಂದು ಟೇಪ್‌ರೆಕಾರ್ಡರ್‌ನಲ್ಲಿ ಹಾಕಿ ಆಲಿಸುತ್ತಿದ್ದೆ. ಅಷ್ಟೇ ಏಕೆ, ಅವರ ಪಂಚಿಂಗ್ ಡೈಲಾಗ್‌ಗಳನ್ನು ಯಥಾವತ್ತಾಗಿ ಅನುಕರಿಸುತ್ತಿದ್ದೆ. ನನಗಲ್ಲಿ ಹಾಸ್ಯದ ಹೊರತಾಗಿ ಮತ್ತೇನನ್ನೂ ಕೇಳಿಸಿಕೊಂಡ ನೆನಪಿಲ್ಲ. ಬಹುಶಃ ನನ್ನ ಆ ವಯಸ್ಸಿನ ಅರಿವಿನ ಇತಿಮಿತಿಗೆ ಗಂಭೀರ ವಿಚಾರಗಳು ಅರ್ಥವಾಗದಿದ್ದಿರಲೂಬಹುದು.

ತುಳು ರಂಗಭೂಮಿಯೆಂಬುವುದು ಕಮರ್ಷಿಯಲ್ ಸಿನಿಮಾಗಳಿದ್ದಂತೆ. ಒಟ್ಟಿನಲ್ಲಿ ತುಳು ರಂಗಭೂಮಿಯಲ್ಲಿ ಹಾಸ್ಯವೇ ಪ್ರಧಾನ. ಪ್ರೇಕ್ಷಕರ ಅಭಿರುಚಿಯ ನಾಡಿಮಿಡಿತ ಅರಿತು ಸ್ಕ್ರಿಪ್ಟ್ ಬರೆಯಲಾಗುತ್ತದೆ. ಕೆಲವು ನಾಟಕಗಳಲ್ಲಿ ಅಲ್ಲಲ್ಲಿ ದ್ವಂದ್ವಾರ್ಥದ ಹಾಸ್ಯಗಳನ್ನು ತುರುಕಲಾಗುತ್ತಿತ್ತು. ಇದರಿಂದಾಗಿ ಬುದ್ಧಿವಂತರೆನಿಸಿದ ಗಂಭೀರ ಪ್ರೇಕ್ಷಕರು ವಿಶೇಷ ಸಂದೇಶವಿರದ ತುಳುನಾಟಕಗಳಿಂದ ವಿಮುಖರಾದದ್ದೂ ಇದೆ.

ಆ ಬಳಿಕ ಹಾಸ್ಯಪ್ರಧಾನ ತುಳು ಸಿನಿಮಾಗಳು ಒಂದರ ಮೇಲೊಂದರಂತೆ ತೆರೆಗೆ ಬರತೊಡಗಿದಾಗ ತುಳು ನಾಟಕ ಪ್ರೇಮಿಗಳು ಅವುಗಳತ್ತಲೂ ಆಕರ್ಷಿತರಾಗತೊಡಗಿದರು. ಸಾಮಾಜಿಕ ಜಾಲತಾಣಗಳ ಬಳಕೆಯು ವ್ಯಾಪಕವಾಗುತ್ತಿದ್ದಂತೆಯೇ ತುಳುನಾಟಕಗಳ ಹಾಸ್ಯಮಯ ಕ್ಲಿಪ್‌ಗಳು ಹೆಚ್ಚೆಚ್ಚು ಹರಿದಾಡತೊಡಗಿದವು.

ಆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ರಾಜಕಾರಣಿಗಳನ್ನು, ವ್ಯವಸ್ಥೆಯನ್ನು ವ್ಯಂಗ್ಯವಾಡಲು ಜನ ಬೋಳಾರರ ಭಾವಚಿತ್ರವನ್ನು ಬಳಸತೊಡಗಿದರು. ಅವುಗಳಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ವಿರೋಧೀ ರಾಜಕೀಯ ಪಕ್ಷಗಳನ್ನು ವ್ಯಂಗ್ಯವಾಡಲು ಬೋಳಾರರ ಹಾಸ್ಯತುಣುಕುಗಳನ್ನು ಬಳಸತೊಡಗಿದರು. (ಎಲ್ಲವೂ ಅವರವರಿಗೆ ಬೇಕಾದಂತೆ).

ಇದೀಗ ದೈಜಿ ವರ್ಲ್ಡ್ ಚಾನೆಲ್‌ನ ಪ್ರೈವೇಟ್ ಚಾಲೆಂಜ್ ಕಾರ್ಯಕ್ರಮದಲ್ಲಿ ಪ್ರತೀ ಭಾನುವಾರವೂ ಒಂದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುವ ಬೋಳಾರರ ವೇಷಭೂಷಣ, ಮಾತುಗಾರಿಕೆ, ಹಾವಭಾವಗಳೆಲ್ಲವೂ ಆಯಾ ಪಾತ್ರಕ್ಕೆ ಜೀವತುಂಬುತ್ತದೆ. ಶಾಲೆಯ ಮುಖ್ಯೋಪಾಧ್ಯಾಯನಾಗಿ, ಬ್ಯಾಂಕ್ ಒಂದರ ಎಂ.ಡಿ.ಯಾಗಿ, ಮಹಿಳಾ ರಾಜಕಾರಣಿಯಾಗಿ, ನಕಲಿ ವೈದ್ಯನಾಗಿ, ಜ್ಯೋತಿಷಿಯಾಗಿ, ಡ್ರೋನ್ ಪ್ರಚಂಡ ಎಂಬ ಪಾತ್ರದಲ್ಲಿ, ಚೀನಾ ಅಧ್ಯಕ್ಷನಾಗಿ ಹೀಗೆ ಆಯಾ ಪಾತ್ರವೇ ಆಗಿ ಬರುವ ಬೋಳಾರರಿಗೆ ಕಾರ್ಯಕ್ರಮ ನಿರೂಪಕ ಹಾಸ್ಯಮಿಶ್ರಿತವಾಗಿ ಗಂಭೀರ ಪ್ರಶ್ನೆಗಳನ್ನೆಸೆಯುತ್ತಾರೆ. ತನ್ನ ಪಾತ್ರವನ್ನೇ ವ್ಯಂಗ್ಯವಾಡುತ್ತಾ ವ್ಯವಸ್ಥೆ, ಪ್ರಭುತ್ವ, ರಾಜಕೀಯ ಕುತಂತ್ರ, ಇತ್ಯಾದಿಗಳನ್ನೆಲ್ಲಾ ತೀಕ್ಷ್ಣ ಹಾಸ್ಯದ ಮೂಲಕ ಬೋಳಾರ್ ವಿಡಂಬಿಸುತ್ತಾರೆ. ಈ ಕಾರ್ಯಕ್ರಮ ಮೇಲ್ನೋಟಕ್ಕೆ ಬರೀ ತಮಾಷೆಯಂತೆ ಕಂಡರೂ ಆಳದಲ್ಲಿ ಸಾಮಾಜಿಕ, ರಾಜಕೀಯ ಪ್ರಜ್ಞೆಯಿಂದ ಕೂಡಿದ ವ್ಯಂಗ್ಯ ತುಳುನಾಡಿನ ಸೋ ಕಾಲ್ಡ್ ಬುದ್ಧಿವಂತ ಜನರಲ್ಲಿ ಜಾಗೃತಿ ಮೂಡಿಸಬಹುದೇನೋ ಎಂಬ ಆಶಾಭಾವನೆ ಹುಟ್ಟುಹಾಕಿದೆ.

ಪ್ರೈವೇಟ್ ಚಾಲೆಂಜ್ ಕಾರ್ಯಕ್ರಮಕ್ಕೆ ಕಾರಾಗೃಹ ಸಚಿವೆಯ ಪಾತ್ರದಲ್ಲಿ ಬಂದು ಹೆಣದ ರಾಜಕೀಯವನ್ನು ಹೇಗೆ ವಿಡಂಬಿಸುತ್ತಾರೆಂದರೆ ಇಲ್ಲಿ ಜಾತಿ, ಧರ್ಮ, ಹೆಣದ ರಾಜಕೀಯ ಮಾಡಲು ಬಲು ಸುಲಭ. ಇಲ್ಲಿರುವುದೇ ಹೆಣಗಳು ಎಂದು ಜನರ ಸಂವೇದನಾರಾಹಿತ್ಯವನ್ನು ವ್ಯಂಗ್ಯವಾಡುತ್ತಾರೆ. ಮಂತ್ರಿಯಾಗಲು ಬೇಕಾದ ಅರ್ಹತೆಯೇನು ಎಂಬ ನಿರೂಪಕನ ಪ್ರಶ್ನೆಗೆ “ಉದ್ರೇಕಕಾರಿಯಾಗಿ ಮಾತನಾಡಲು ಗೊತ್ತಿದ್ದರೆ ಸಾಕು” ಎಂದು ಮಾರ್ಮಿಕ ಉತ್ತರ ನೀಡುತ್ತಾರೆ. ವೀಕ್ಷಕಿಯೊಬ್ಬಳು ಕರೆ ಮಾಡಿ ತನ್ನ ಗಂಡ ಮಂಗವೊಂದನ್ನು ಕೊಂದ ತಪ್ಪಿಗಾಗಿ ಆರು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ ಎಂದು ಅಳಲು ತೋಡಿಕೊಂಡಾಗ “ಬುದ್ಧಿಯಿದ್ದವರು ಯಾರಾದರೂ ಮಂಗನನ್ನು ಕೊಲ್ಲುತ್ತಾರೆಯೇ..? ಬದಲಾಗಿ ಮನುಷ್ಯನನ್ನು ಕೊಂದಿದ್ದರೆ ಆರಾಮವಾಗಿ ತಿರುಗಾಡಬಹುದಿತ್ತು. ಮನುಷ್ಯರನ್ನು ಕೊಂದು ಜೈಲು ಸೇರಿದವರಿಗಿಂತ ಪ್ರಾಣಿಗಳನ್ನು ಕೊಂದು ಜೈಲು ಸೇರಿದವರೇ ಹೆಚ್ಚು” ಎಂದು ವ್ಯವಸ್ಥೆಯನ್ನು ಅಣಕಿಸುತ್ತಾರೆ.

ಕೋವಿಡ್-19ನ್ನು ಚೈನೀಸ್ ವೈರಸ್ ಎಂದಿದ್ದ ಟ್ರಂಪ್‌ಗೆ ಉತ್ತರವಾಗಿ ಚೀನಾದ ಅಧ್ಯಕ್ಷನ ಪಾತ್ರದಲ್ಲಿ ಬಂದ ಬೋಳಾರ್ ಅಮೆರಿಕಾದ ಜನತೆಯೇ ಆತನಿಗೆ ಕವಡೆ ಕಾಸಿನ ಬೆಲೆ ಕೊಡುವುದಿಲ್ಲ, ಇನ್ನು ನಾನ್ಯಾಕೆ ಆತನಿಗೆ ಉತ್ತರ ಕೊಟ್ಟು ಪ್ರಚಾರ ನೀಡಲಿ ಎಂದು ಮರುಪ್ರಶ್ನೆ ಹಾಕುತ್ತಾರೆ. ಚೀನಾದಲ್ಲಿ ಅವ್ಯಾಹತವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯಲಾಗುತ್ತಿದೆ ಎಂಬ ನಿರೂಪಕನ ಪ್ರಶ್ನೆಗೆ ಉತ್ತರಿಸುತ್ತಾ “ನಿಮ್ಮಲ್ಲೇನು ಕಡಿಮೆಯೇ..? ಆಳುವವರ ತಪ್ಪುಗಳ ವಿರುದ್ಧ ಮಾತನಾಡಿದರೆ ದೇಶದ್ರೋಹದ ಪಟ್ಟ ಕಟ್ಟಿ ಜೈಲಿಗಟ್ಟುವುದಿಲ್ಲವೇ..?” ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಸಮಕಾಲೀನ ಭಾರತದ ರಾಜಕೀಯ ವ್ಯವಸ್ಥೆಯನ್ನು ವಿಮರ್ಶಿಸುತ್ತಾರೆ.

ನೋಟು ಅಮಾನ್ಯೀಕರಣದಿಂದಾಗಿ ಜನತೆ ಅನುಭವಿಸಿದ ಸಂಕಷ್ಟಗಳನ್ನು, ಬ್ಯಾಂಕ್‌ಗಳ ಒಳಗುಟ್ಟುಗಳನ್ನು ಬ್ಯಾಂಕ್ ಎಂ.ಡಿ.ಪಾತ್ರದಲ್ಲಿ ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ. 2000 ನೋಟಿನಲ್ಲಿ ಚಿಪ್ ಇದೆ ಎಂದು ಥಕ ಥಕ ಕುಣಿದಿದ್ದವರಿಗೆ ನಾಟುವಂತೆ ಚಿಪ್ಪುಲಾ ಇಜ್ಜಿ, ಮರುವಾಯಿಲಾ ಇಜ್ಜಿ (ಮರುವಾಯಿ ಅಂದರೆ ಒಂದು ಬಗೆಯ ಚಿಪ್ಪು ಮೀನು) ಎನ್ನುತ್ತಾರೆ.

ಖಾಸಗಿ ಶಾಲಾ ಮುಖ್ಯೋಪಾಧ್ಯಾಯನಾಗಿ ಬಂದಾಗ ಆನ್‌ಲೈನ್ ಶಿಕ್ಷಣ ಹಾಗೂ ಗ್ರಾಮೀಣ ಭಾರತದ ವಾಸ್ತವವನ್ನು ತೆರೆದಿಡುತ್ತಾರೆ. ಆಗಾಗ ಟಿಆರ್‌ಪಿಯ ಬಗ್ಗೆ ಕುಟುಕುತ್ತಾ ನನ್ನನ್ನಿಲ್ಲಿ ಕೂರಿಸಿ ಅಸಂಬದ್ಧ ಪ್ರಶ್ನೆಗಳನ್ನು ಕೇಳಿ ನಿಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳುತ್ತೀರಿ ಎಂದು ಟಿವಿ ಚಾನೆಲ್‌ಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

ಮಾಧ್ಯಮಗಳು ಪ್ರಭುತ್ವದ ಅಡಿಯಾಳಾಗಿರುವ ಇಂದಿನ ವಿಷಮಕಾಲದಲ್ಲಿ ಮಾಧ್ಯಮದ ಜವಾಬ್ದಾರಿಯೇನೆಂದು ತೋರಿಸಿಕೊಟ್ಟ ದೈಜಿ ವರ್ಲ್ಡ್ ಮತ್ತು ಕಲಾವಿದನಾಗಿ ತನ್ನ ಸಾಮಾಜಿಕ ಜವಾಬ್ದಾರಿಯೇನೆಂದು ತೋರಿಸಿಕೊಟ್ಟ ಬೋಳಾರರ ನಡೆ ಇಡೀ ದೇಶಕ್ಕೆ ಮಾದರಿ. ಒಂದು ಸ್ಥಳೀಯ ಚಾನೆಲ್ ಸ್ಥಳೀಯ ಭಾಷೆಯಲ್ಲಿ (ತುಳು) ನಡೆಸಿಕೊಡುವ ಈ ಕಾರ್ಯಕ್ರಮ ರಾಜ್ಯದಲ್ಲೇ ಒಂದು ಅಪೂರ್ವ ಮಾಧ್ಯಮ ಪ್ರಯೋಗ.


ಇದನ್ನೂ ಓದಿ: ಪ್ರವಾಹ, ಕೊರೊನಾ ಸಂದರ್ಭದಲ್ಲಿ ಕಣ್ಮರೆ, ಗಲಭೆ ಆದಾಗ ಪ್ರತ್ಯಕ್ಷ: ಯಾರಿವರು ಗೊತ್ತೇ? 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...