ಇತ್ತಿಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ತಮಿಳುನಾಡು ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಬಿಜೆಪಿಯ ವೆಟ್ರಿವೆಲ್ ಯಾತ್ರೆಯಲ್ಲಿ ಭಾಗವಹಿಸಲು ನಟಿ ಕಡಲೂರಿನ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಬುಧವಾರ ಬೆಳಿಗ್ಗೆ ಮೇಲ್‌ಮರವತ್ತೂರ್ ಸಮೀಪ ಅಪಘಾತ ಸಂಭವಿಸಿದೆ.
ಟ್ಯಾಂಕರ್ ಒಂದು ತಾನು ಪ್ರಯಾಣಿಸುತ್ತಿದ್ದ ಕಾರಿಗೆ ಗುದ್ದಿದೆ ಎಂದು ಹಾನಿಗೊಳಗಾದ ತನ್ನ ಕಾರಿನ ಚಿತ್ರಗಳನ್ನು ಖುಷ್ಬೂ ಟ್ವೀಟ್ ಮಾಡಿದ್ದು, ತಾನು ಸುರಕ್ಷಿತವಾಗಿದ್ದೇನೆ ಎಂದು ಹೇಳಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದು, ಖುಷ್ಬೂ ಕಡಲೂರು ಕಡೆಗೆ ಪ್ರಯಾಣ ಮುಂದುವರಿಸಿದ್ದಾರೆ.
Met with an accident near Melmarvathur..a tanker rammed into us.With your blessings and God's grace I am safe. Will continue my journey towards Cuddalore to participate in #VelYaatrai #Police are investigating the case. #LordMurugan has saved us. My husband's trust in him is seen pic.twitter.com/XvzWZVB8XR
— KhushbuSundar ❤️ (@khushsundar) November 18, 2020
ಖುಷ್ಬೂ ತನ್ನ ಟ್ವಿಟ್ಟರ್ ಖಾತೆಯಲ್ಲಿ ಭಾರಿ ಹಾನಿಗೊಳಗಾದ ತಮ್ಮ ಕಾರಿನ ಚಿತ್ರಗಳನ್ನು ಹಂಚಿಕೊಂಡು, “ಮೇಲ್‌ಮರವತ್ತೂರ್ ಬಳಿ ಕಾರು ಅಪಘಾತ ಸಂಭವಿಸಿದೆ..ಒಂದು ಟ್ಯಾಂಕರ್ ಒಂದು ನಮ್ಮ ಕಾರಿಗೆ ಗುದ್ದಿದೆ. ನಿಮ್ಮ ಆಶೀರ್ವಾದ ಮತ್ತು ದೇವರ ಅನುಗ್ರಹದಿಂದ ನಾನು ಸುರಕ್ಷಿತ. ವೆಟ್ರಿವೇಲ್ ಯಾತ್ರೆಯಲ್ಲಿ ಭಾಗವಹಿಸಲು ಕಡಲೂರಿನ ಕಡೆಗೆ ನನ್ನ ಪ್ರಯಾಣವನ್ನು ಮುಂದುವರಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮನುಸ್ಮೃತಿ ಬಗ್ಗೆ ಟೀಕೆ: ಪ್ರತಿಭಟನೆಗೆ ತೆರಳುತ್ತಿದ್ದ ನಟಿ ಖುಷ್ಬೂ ಬಂಧನ
ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಸೇರಿಸಿದ ಖುಷ್ಬೂ ಅವರು ದೇವರ ಮೇಲಿನ ನಂಬಿಕೆಯ ಬಗ್ಗೆಯೂ ಬರೆದಿದ್ದಾರೆ. “ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ನನ್ನ ಪತಿ ನಂಬಿರುವ ಮುರುಗನ್ ದೇವರು ನಮ್ಮನ್ನು ಉಳಿಸಿದ್ದಾರೆ” ಎಂದು ಹೇಳಿದ್ದಾರೆ.
ಬಿಜೆಪಿಯ ತಮಿಳುನಾಡು ಉಸ್ತುವಾರಿ ಸಿ.ಟಿ ರವಿ ಕೂಡ “ಅಪಘಾತ ನಡೆದ ಬಗ್ಗೆ ನನಗೆ ಆಘಾತವಾಗಿದೆ. ಮುರುಗನ್ ದೇವರ ಕೃಪೆಯಿಂದ ನೀವು ಸುರಕ್ಷಿತರಾಗಿದ್ದೀರಿ ಎಂದು ನನಗೆ ಸಮಾಧಾನವಿದೆ” ಎಂದು ಟ್ವೀಟ್ ಮಾಡಿದ್ದಾರೆ.
Shocked to learn about this unfortunate accident Smt @khushsundar Avare. I am relieved that by the grace of Lord Murugan, You are safe ?. https://t.co/NayTnY7I6D
— C T Ravi ?? ಸಿ ಟಿ ರವಿ (@CTRavi_BJP) November 18, 2020
ವೆಟ್ರಿವೇಲ್ ಯಾತ್ರೆ ಒಂದು ತಿಂಗಳ ಕಾಲ ನಡೆಯುವ ಮೆರವಣಿಗೆಯಾಗಿದ್ದು, ನವೆಂಬರ್ 6 ರಿಂದ ಡಿಸೆಂಬರ್ 6 ರವರೆಗೆ ತಿರುತ್ತಣಿ ದೇವಸ್ಥಾನದಿಂದ ತಮಿಳುನಾಡಿನ ತಿರುಚೆಂದೂರು ದೇವಸ್ಥಾನದವರೆಗೆ ನಡೆಯಲಿದೆ. ಸುಬ್ರಹ್ಮಣ್ಯ ಸ್ವಾಮಿಯ (ಮುರುಗ) ಒಟ್ಟು ಆರು ದೇವಸ್ಥಾನಗಳಿಗೆ ಭಕ್ತರು ಭೇಟಿ ನೀಡುತ್ತಾರೆ.
2021 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಹಿಂದೂ ಮತಗಳನ್ನು ಕ್ರೋಢೀಕರಿಸುವ ಪ್ರಯತ್ನವಾಗಿ ಬಿಜೆಪಿ ಈ ಪ್ರಯತ್ನ ಮಾಡುತ್ತಿದೆ ಎಂದು ಹಲವರು ಟೀಕಿಸಿದ್ದಾರೆ. ಈ ಮೆರವಣಿಗೆಯಲ್ಲಿ ಪಕ್ಷದ ಸದಸ್ಯರು ರಾಜ್ಯಾದ್ಯಂತ ಮುರುಗನ್ ದೇವಾಲಯಗಳಿಗೆ ಭೇಟಿ ನೀಡಲು ಯೋಜಿಸಿದ್ದಾರೆ. ಆದರೆ ರಾಜ್ಯ ಸರ್ಕಾರ ಈ ಯಾತ್ರೆಗೆ ಅನುಮತಿ ನೀಡಿಲ್ಲ.


