Homeಕರೋನಾ ತಲ್ಲಣಕೊರೊನಾ ಉಲ್ಬಣ: ಪಂಜಾಬ್‌ನಲ್ಲಿ ಡಿಸೆಂಬರ್‌ 1ರಿಂದ ನೈಟ್ ಕರ್ಫ್ಯೂ

ಕೊರೊನಾ ಉಲ್ಬಣ: ಪಂಜಾಬ್‌ನಲ್ಲಿ ಡಿಸೆಂಬರ್‌ 1ರಿಂದ ನೈಟ್ ಕರ್ಫ್ಯೂ

ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಚಿಕಿತ್ಸೆಗಾಗಿ ಪಂಜಾಬ್‌ಗೆ ಬರುವವರ ಸಂಖ್ಯೆ ಹೆಚ್ಚಾಗುವ  ದೃಷ್ಟಿಯಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

- Advertisement -
- Advertisement -

ದೆಹಲಿ ಮತ್ತು ಅದರ ನೆರೆಯ ಜಿಲ್ಲೆಗಳಲ್ಲಿನ ಭೀಕರ ಕೊರೊನಾ ಪರಿಸ್ಥಿತಿ ಮತ್ತು ಪಂಜಾಬ್‌ನಲ್ಲಿ ಕೊರೊನಾ ಎರಡನೇ ಅಲೆಯ ಭೀತಿ ಇರುವುದರಿಂದ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಂಜಾಬ್‌ನ ಎಲ್ಲ ಪಟ್ಟಣ, ನಗರಗಳಲ್ಲಿ ಡಿಸೆಂಬರ್ 1ರಿಂದ ನೈಟ್ ಕರ್ಫ್ಯೂ ವಿಧಿಸಲು ಆದೇಶಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌, “ಡಿಸೆಂಬರ್ 1 ರಿಂದ ಪಂಜಾಬ್‌ನ  ಎಲ್ಲಾ ನಗರಗಳು ಮತ್ತು ಪಟ್ಟಣಗಳಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ವಿಧಿಸಿದೆ. ಹೋಟೆಲ್, ರೆಸ್ಟೋರೆಂಟ್ ಮತ್ತು ವಿವಾಹ ಸ್ಥಳಗಳು ರಾತ್ರಿ 9.30 ಕ್ಕೆ ಮುಚ್ಚಲ್ಪಡುತ್ತವೆ” ಎಂದು ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ಗಳನ್ನು ಧರಿಸದಿರುವುದು ಮತ್ತು ದೈಹಿಕ ಅಂತರ ಕಾಪಾಡದಿದ್ದರೆ, ಶಿಸ್ತು ಉಲ್ಲಂಘಿಸಿದವರಿಗೆ ಒಂದು ಸಾವಿರ ರೂ.ಗಳ ವರೆಗೂ ದಂಡ ವಿಧಿಸಿಲಾಗುವುದು ಎಂದು ರಾಜ್ಯ ಕೋವಿಡ್ ಪರಿಶೀಲನಾ ಸಭೆಯ ನಂತರ ತಿಳಿಸಿದ್ದಾರೆ.

ಇದನ್ನೂ ಓದಿ: ತೀವ್ರ ಟೀಕೆ: ಪೊಲೀಸ್ ತಿದ್ದುಪಡಿ ಕಾಯ್ದೆ ರದ್ದುಗೊಳಿಸಿದ ಕೇರಳ ಸರ್ಕಾರ!

 

ಈ ಎಲ್ಲಾ ನಿರ್ಬಂಧಗಳನ್ನು ಡಿಸೆಂಬರ್ 15 ರಂದು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ. ಇದರೊಂದಿಗೆ, ರಾಜಸ್ಥಾನ, ಹಿಮಾಚಲ ಪ್ರದೇಶ, ಗುಜರಾತ್, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದ ನಂತರ ಕೊರೊನಾ ಸೋಂಕಿನ ಹೆಚ್ಚಳದಿಂದಾಗಿ ರಾತ್ರಿ ಕರ್ಫ್ಯೂ ವಿಧಿಸಿದ ಆರನೇ ರಾಜ್ಯ ಎನಿಸಿಕೊಂಡಿದೆ.

“ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಚಿಕಿತ್ಸೆಗಾಗಿ ಪಂಜಾಬ್‌ಗೆ ಬರುವವರ ಸಂಖ್ಯೆ ಹೆಚ್ಚಾಗುವ  ದೃಷ್ಟಿಯಿಂದ, ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಮತ್ತು ಐಸಿಯುಗಳು ಸೇರಿದಂತೆ ಹಾಸಿಗೆ ಲಭ್ಯತೆಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಮುಖ್ಯ ಕಾರ್ಯದರ್ಶಿ ವಿನಿ ಮಹಾಜನ್‌ಗೆ ನಿರ್ದೇಶಿಸಲಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ, 249 ವೈದ್ಯರು ಮತ್ತು 407 ವೈದ್ಯಕೀಯ ಅಧಿಕಾರಿಗಳ ನೇಮಕಾತಿಯೊಂದಿಗೆ, ಹೆಚ್ಚುವರಿಯಾಗಿ ತಜ್ಞರು, ದಾದಿಯರು ಮತ್ತು ಅರೆವೈದ್ಯರನ್ನು ತುರ್ತು ನೇಮಕ ಮಾಡಲು ಸರ್ಕಾರ ಆದೇಶಿಸಿದೆ.


ಇದನ್ನೂ ಓದಿ: ಕೊರೊನಾ: 500 ರಿಂದ 2 ಸಾವಿರಕ್ಕೆ ಮಾಸ್ಕ್ ದಂಡ ಹೆಚ್ಚಿಸಿದ ದೆಹಲಿ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಲೋಕಸಭಾ ಅಭ್ಯರ್ಥಿಗಳ ಪೈಕಿ ಶೇ. 25ರಷ್ಟು ಮಂದಿ ಇತರ ಪಕ್ಷಗಳಿಂದ ವಲಸೆ ಬಂದವರು

0
ಈ ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪೈಕಿ ಶೇ 25ರಷ್ಟು ಮಂದಿ ಬೇರೆ ಪಕ್ಷಗಳಿಂದ ವಲಸೆ ಬಂದವರು ಎಂದು ವರದಿಗಳು ಹೇಳಿವೆ. ಬಿಜೆಪಿ ಕಣಕ್ಕಿಳಿಸಿರುವ 435 ಅಭ್ಯರ್ಥಿಗಳ ಪೈಕಿ 106 ಮಂದಿ...