Homeಮುಖಪುಟಡಿಬಿಎಸ್ ಬ್ಯಾಂಕ್‌ನೊಂದಿಗೆ ಲಕ್ಷ್ಮಿ ವಿಲಾಸ್ ಬ್ಯಾಂಕ್ ವಿಲೀನಕ್ಕೆ ಸಂಪುಟ ಅನುಮೋದನೆ

ಡಿಬಿಎಸ್ ಬ್ಯಾಂಕ್‌ನೊಂದಿಗೆ ಲಕ್ಷ್ಮಿ ವಿಲಾಸ್ ಬ್ಯಾಂಕ್ ವಿಲೀನಕ್ಕೆ ಸಂಪುಟ ಅನುಮೋದನೆ

ಡಿಬಿಎಸ್ ಇಂಡಿಯಾ ಹೊಸ ಬಂಡವಾಳವಾಗಿ ಲಕ್ಷ್ಮಿ ವಿಲಾಸ್ ಬ್ಯಾಂಕ್‌ಗೆ 2,500 ಕೋಟಿ ರೂಪಾಯಿಯನ್ನು ತುಂಬಲಿದೆ

- Advertisement -
- Advertisement -

ಡಿಬಿಎಸ್ ಬ್ಯಾಂಕಿನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಡಿಬಿಎಸ್ ಇಂಡಿಯಾದೊಂದಿಗೆ ಲಕ್ಷ್ಮಿ ವಿಲಾಸ್ ಬ್ಯಾಂಕ್ (LVB) ಅನ್ನು ವಿಲೀನಗೊಳಿಸಲು ಬುಧವಾರ(ನ.25) ಸಂಪುಟ ಅನುಮೋದನೆ ನೀಡಿದೆ. ಜೊತೆಗೆ ಠೇವಣಿದಾರರು ತಮ್ಮ ಠೇವಣಿ ಹಿಂಪಡೆಯುವ ಬಗ್ಗೆ ಯಾವುದೇ ನಿರ್ಬಂಧಗಳಿಲ್ಲ ಎಂದಿದೆ.

“ಬ್ಯಾಂಕುಗಳ ವಿಲೀನವಾಗುವುದರಿಂದ ಠೇವಣಿದಾರರು ತಮ್ಮ ಠೇವಣಿ ಹಿಂಪಡೆಯುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲ” ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಬ್ಯಾಂಕುಗಳ ವಿಲೀನದ ಯೋಜನೆಯ ಭಾಗವಾಗಿ, ಡಿಬಿಎಸ್ ಇಂಡಿಯಾ ಹೊಸ ಬಂಡವಾಳವಾಗಿ ಲಕ್ಷ್ಮಿ ವಿಲಾಸ್ ಬ್ಯಾಂಕ್‌ಗೆ 2,500 ಕೋಟಿ ರೂಪಾಯಿಯನ್ನು ಭರಿಸಲಿದೆ.

ತಮಿಳುನಾಡು ಮೂಲದ ಖಾಸಗಿ ವಲಯದ ಲಕ್ಷ್ಮಿ ವಿಲಾಸ್ ಬ್ಯಾಂಕ್ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಬಂಧ ಹೇರಿ,  ಒಂದು ತಿಂಗಳವರೆಗೆ ಹಣ ವಿತ್ ಡ್ರಾ ಮಿತಿಯನ್ನು 25,000ಕ್ಕೆ ನಿಗದಿಪಡಿಸಿತ್ತು. ಬ್ಯಾಂಕ್​ನ ಆರ್ಥಿಕ ಪರಿಸ್ಥಿತಿ ನಿರಂತರವಾಗಿ ಕುಸಿತ ಕಂಡ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತ್ತು.

ಇದನ್ನೂ ಓದಿ: ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾ ವಿಲೀನಗೊಂಡರೆ ನಮ್ಮ ಸ್ವಾಗತವಿದೆ: ಕಾಂಗ್ರೆಸ್ ಸಚಿವ

ಈ ನಿರ್ಬಂಧ ನವೆಂಬರ್ 17 ರಿಂದ ಡಿಸೆಂಬರ್ 16 ರವರೆಗೆ ಜಾರಿಗೆ ತರಲಾಗಿದ್ದು, ಈ ಆದೇಶವನ್ನು ಎಬಿಐ ಕಾಯ್ದೆಯ ಸೆಕ್ಷನ್ 45 ರ ಅಡಿಯಲ್ಲಿ ಜಾರಿಗೊಳಿಸಲಾಗಿದೆ ಎಂದು ತಿಳಿಸಿತ್ತು.

2019 ರ ಸೆಪ್ಟೆಂಬರ್‌ನಲ್ಲಿ ಎಲ್‌ವಿಬಿಯನ್ನು ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್ ಅಡಿಯಲ್ಲಿ ಇರಿಸಲಾಗಿತ್ತು.
ಕೆಟ್ಟ ಸಾಲಗಳು ಮತ್ತು ನಿಬಂಧನೆಗಳ ಏರಿಕೆಯಿಂದಾಗಿ ಸೆಪ್ಟೆಂಬರ್ 2020ಕ್ಕೆ ತನ್ನ ನಿವ್ವಳ ನಷ್ಟ 397 ಕೋಟಿ ರೂಪಾಯಿಗೆ ವಿಸ್ತರಿಸಿದೆ ಎಂದು ಬ್ಯಾಂಕ್ ತಿಳಿಸಿತ್ತು. ತಮಿಳುನಾಡಿನ ಕರೂರು ಮೂಲದ ಲಕ್ಷ್ಮೀ ವಿಲಾಸ ಬ್ಯಾಂಕ್‌ 1926ರಲ್ಲಿ ಸ್ಥಾಪನೆಯಾಗಿದೆ.

ಸೆಪ್ಟೆಂಬರ್ 27 ರಂದು ಭಾರತೀಯ ರಿಸರ್ವ್ ಬ್ಯಾಂಕ್‌ ಮೀತಾ ಮಖಾನ್‌ ನೇತೃತ್ವದ ತ್ರಿಸದಸ್ಯ ಸಮಿತಿಯನ್ನು ಬ್ಯಾಂಕ್‌ ಮುನ್ನಡೆಸಲು ರಚನೆ ಮಾಡಿತ್ತು. ಕೆನರಾ ಬ್ಯಾಂಕ್‌ನ ಮಾಜಿ ಕಾರ್ಯನಿರ್ವಾಹಕೇತರ ಅಧ್ಯಕ್ಷ ಟಿ.ಎನ್‌. ಮನೋಹರನ್‌ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ.


ಇದನ್ನೂ ಓದಿ: ಖಾಸಗೀಕರಣ ಪ್ರಕ್ರಿಯೆ: ರೈಲ್ವೇ ಮಂಡಳಿಯ 7 ಕಾರ್ಖಾನೆಗಳನ್ನು ವಿಲೀನಗೊಳಿಸಿದ ಕೇಂದ್ರ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...