Homeಮುಖಪುಟನಟಿ ಕಂಗನಾ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಿದ ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್

ನಟಿ ಕಂಗನಾ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಿದ ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್

ಜಾರಿ ನಿರ್ದೇಶನಾಲಯ ಶೋಧದ ವೇಳೆ ಸರ್ನಾಯಕ್‌ ಅವರಿಂದ ಪಾಕಿಸ್ತಾನದ ಕ್ರೆಡಿಟ್‌ ಕಾರ್ಡ್‌ ಒಂದನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ನಟಿ ಕಂಗನಾ ಟ್ವೀಟ್ ಮಾಡಿದ್ದರು.

- Advertisement -
- Advertisement -

ನಟಿ ಕಂಗನಾ ರಣಾವತ್ ವಿರುದ್ಧ ಶಿವಸೇನಾ ನಾಯಕ ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ ಅವರು ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ. ನಟಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿವಸೇನೆ ಶಾಸಕರು ಮಹಾರಾಷ್ಟ್ರ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಸಲ್ಲಿಸಿದ್ದಾರೆ.

ಅರ್ನಾಬ್ ಗೋಸ್ವಾಮಿ ಮತ್ತು ನಟಿ ಕಂಗನಾ ವಿರುದ್ಧ ಆರೋಪ ಮಾಡಿದ್ದ ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ ಮನೆ ಮತ್ತು ಕಛೇರಿಗಳ ಮೇಲೆ ಮಹಾರಾಷ್ಟ್ರ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಾಸಕ ಮತ್ತು ಅವರ ಮಗ ವಿಹಾಂಗ್ ಸರ್ನಾಯಕ್ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೊಳಪಡಿಸಿತ್ತು.

ಈ ದಾಳಿಯನ್ನು ಖಂಡಿಸಿದ್ದ ಶಿವಸೇನೆ, “ಬಿಜೆಪಿಯ ರಾಜಕೀಯ ದುರುದ್ದೇಶಪೂರಿತ ದಾಳಿ ಇದು” ಎಂದು ಆಕ್ರೋಶ ವ್ಯಕ್ತಪಡಿಸಿತ್ತು. ಈ ವೇಳೆ ಟ್ವೀಟ್‌ ಮಾಡಿದ್ದ ನಟಿ ಕಂಗನಾ, ಜಾರಿ ನಿರ್ದೇಶನಾಲಯ ಶೋಧದ ವೇಳೆ ಪಾಕಿಸ್ತಾನದ ಕ್ರೆಡಿಟ್‌ ಕಾರ್ಡ್‌ ಒಂದನ್ನು ಸರ್ನಾಯಕ್‌ ಅವರಿಂದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ  ಎಂದಿದ್ದರು.

ಇದನ್ನೂ ಓದಿ: ಅರ್ನಾಬ್, ಕಂಗನಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದ ಶಿವಸೇನೆ ಶಾಸಕನ ಮನೆ ಮೇಲೆ ಇ.ಡಿ ದಾಳಿ!

ಇದಕ್ಕೂ ಮೊದಲು, ಮಹಾರಾಷ್ಟ್ರ ವಿಧಾನಸಭೆಯ ಮಾನ್ಸೂನ್ ಅಧಿವೇಶನದಲ್ಲಿ, ಬಾಲಿವುಡ್ ನಟಿ ಕಂಗನಾ ರಣಾವತ್ ‘ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ’ ಹೋಲಿಸಿದ್ದಕ್ಕೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶಾಸಕ ಪ್ರತಾಪ್ ಸರ್ನಾಯಕ್ ಒತ್ತಾಯಿಸಿದ್ದರು.

ಇಡಿ ಅಧಿಕಾರಿಗಳು ಎರಡು ಬಾರಿ ತಮ್ಮ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಇಡಿ ವಿಚಾರಣೆಗೆ ತಾನೂ ಹಾಗೂ ತಮ್ಮ ಮಗ ಸಹಕರಿಸಿದ್ದೇವೆ. ಆದರೆ, ಯಾವುದೇ ಅನುಮಾನಾಸ್ಪದ ವಸ್ತುಗಳನ್ನು ಪತ್ತೆಯಾಗಿಲ್ಲ. ಆದರೆ, ಕಂಗನಾ ಟ್ವೀಟ್ ನಂತರ ಸುದ್ದಿ ಮಾಧ್ಯಮಗಳಲ್ಲಿ ತಮ್ಮಗೆ ಅಪಮಾನವಾಗುವಂತಹ ಸುದ್ದಿಗಳು ಬಿತ್ತರಗೊಂಡಿವೆ. ಈ ಸುಳ್ಳು ಸುದ್ದಿಯು ನನ್ನ ಮಾನಕ್ಕೆ ಹಾನಿಯುಂಟು ಮಾಡಿದೆ ಎಂದು ಸರ್ ನಾಯಕ್ ನೋಟಿಸ್ ನಲ್ಲಿ ಹೇಳಿದ್ದಾರೆ.

ಇತ್ತಿಚೆಗೆ ನಟಿ ಕಂಗನಾ ಅವರ ಟ್ವೀಟ್‌ಗಳು ಭಾರಿ ವಿವಾದಕ್ಕೆ ಕಾರಣವಾಗುತ್ತಿದು, ಅವರ ಮೇಲೆ ಎಫ್‌ಐಆರ್‌ಗಳು ದಾಖಲಾಗಿವೆ. ಜೊತೆಗೆ ಹಲವು ಬಾರಿ ನೋಟಿಸ್ ನೀಡಲಾಗಿದೆ.

ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಪ್ರತಿಭಟನೆ ಬಗ್ಗೆಯೂ ಹಗುರವಾಗಿ ಮಾತನಾಡಿ, ಟೀಕೆಗೆ ಗುರಿಯಾಗಿದ್ದರು. ಬಾಲಿವುಡ್ ನಟ, ನಟಿಯರು, ಕ್ರೀಡಾಪಟುಗಳು ಕಂಗನಾ ರಣಾವತ್ ವಿರುದ್ಧ ಆಕ್ರೋಶ ಹೊರಹಾಕಿದ್ದರು.


ಇದನ್ನೂ ಓದಿ: ಭಯೋತ್ಪಾದಕರು ನಮ್ಮ ಸೈನಿಕರನ್ನು ಕೊಲ್ಲುತ್ತಿದ್ದಾರೆ, ಆದರೆ ಸರ್ಕಾರ ರೈತರನ್ನು ಭಯೋತ್ಪಾಕರಂತೆ ನೋಡುತ್ತಿದೆ: ಶಿವಸೇನೆ ಕಿಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಮಾಧ್ಯಮಗಳ ಮೇಲೆ ಸೆನ್ಸಾರ್‌ಶಿಪ್ ಹೇರಲು ಸಾಧ್ಯವಿಲ್ಲ..’; ಅರ್ಜಿದಾರರಿಗೆ ದಂಡ ವಿಧಿಸಿದ ದೆಹಲಿ ಹೈಕೋರ್ಟ್

0
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಅಥವಾ ಅವರ ರಾಜೀನಾಮೆ ಕುರಿತ ಊಹಾಪೋಹದ ಕುರಿತು ಸಂವೇದನಾಶೀಲ ಶೀರ್ಷಿಕೆಗಳನ್ನು ಪ್ರಸಾರ ಮಾಡದಂತೆ ಸುದ್ದಿ ವಾಹಿನಿಗಳನ್ನು ನಿರ್ಬಂಧಿಸಲು ಕೋರಿದ್ದ ಅರ್ಜಿದಾರರಿಗೆ ₹1 ಲಕ್ಷ ದಂಡ ವಿಧಿಸಿದ...