ಶಿವಸೇನೆ

ದೇಶದ ಗಡಿಯಲ್ಲಿ ಭಯೋತ್ಪಾದಕರು ನಮ್ಮ ಸೈನಿಕರನ್ನು ಕೊಲ್ಲುತ್ತಿದ್ದಾರೆ, ಆದರೆ ಸರ್ಕಾರ ದೆಹಲಿ ಗಡಿಯಲ್ಲಿನ ಪ್ರತಿಭಟನಾನಿರತ ರೈತರನ್ನು ಭಯೋತ್ಪಾಕರಂತೆ ನೋಡುತ್ತಿದೆ ಎಂದು ಶಿವಸೇನೆ ಕಿಡಿಕಾರಿದೆ.

ಶಿವಸೇನೆ ತನ್ನ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ, ತನ್ನ ಮಾಜಿ ಮಿತ್ರಪಕ್ಷ ಬಿಜೆಪಿ ಮೇಲೆ ದಾಳಿ ಮಾಡಿದೆ. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭಯೋತ್ಪಾದಕರು ಎಂದು ಕರೆದಿರುವ ಕೇಂದ್ರದ ನಡೆಯನ್ನು ಟೀಕಿಸಿರುವ ಶಿವಸೇನೆ, ಉತ್ತರ ಭಾರತದಲ್ಲಿ ಕೊರೆಯುವ ಚಳಿಯಿದ್ದರೂ ಕೇಂದ್ರ ಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕಲು ಜಲ ಫಿರಂಗಿಗಳನ್ನು ಬಳಸಿರುವುದು “ಕ್ರೂರ” ಎಂದು ಆಕ್ರೋಶ ವ್ಯಕ್ತಪಡಿಸಿದೆ.

“ಗುಜರಾತ್‌ನ ಸರ್ದಾರ್ ಪಟೇಲ್ ಅವರ ದೈತ್ಯ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ನಿರ್ಮಿಸಿದ್ದಾರೆ. ಬ್ರಿಟೀಷರ ವಿರುದ್ದ ಅನೇಕ ರೈತ ಆಂದೋಲನಗಳಿಗೆ ಕಾರಣರಾಗಿರುವ ದೇಶದ ಮೊದಲ ಗೃಹ ಸಚಿವರ ಪ್ರತಿಮೆಯು ಕೇಂದ್ರ ಸರ್ಕಾರ ರೈತರನ್ನು ಹತ್ತಿಕ್ಕುತ್ತಿರುವ ರೀತಿ ನೋಡಿ ಅಳುತ್ತಿರಬೇಕು” ಎಂದು ಹೇಳಿದೆ.

ಇದನ್ನೂ ಓದಿ: ಸುಪ್ರೀಂ ಹೊರಗೆ ಪ್ರತಿಭಟನೆ: ರೈತರ ಹೋರಾಟಕ್ಕೆ ಸಾಥ್ ನೀಡಿದ ದೆಹಲಿ ವಕೀಲರು!

ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅನ್ನು ಗಡಿಗಳಿಗೆ ಕಳುಹಿಸಬೇಕು

ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಪ್ರತಿಪಕ್ಷಗಳನ್ನು ಗುರಿಯಾಗಿಸಲು ಕೇಂದ್ರದ ತನಿಖಾ ಏಜೆನ್ಸಿಗಳನ್ನು ಬಳಸಲಾಗಿದೆ ಎಂದಿರುವ ಸಾಮ್ನಾ ಸಂಪಾದಕೀಯವು, “ಸರ್ಕಾರವು ವಿರೋಧವನ್ನು ತಡೆಯಲು ಸಿಬಿಐ ಮತ್ತು ಇಡಿಯನ್ನು ಬಳಸುತ್ತದೆ. ಆದ್ದರಿಂದ ಈ ಏಜೆನ್ಸಿಗಳಿಗೆ ಶೌರ್ಯವನ್ನು ಸಾಬೀತುಪಡಿಸುವ ಅವಕಾಶ ನೀಡಬೇಕು. ಈ ಸಮಯದಲ್ಲಿ, ಇಡಿ ಮತ್ತು ಸಿಬಿಐ ಅನ್ನು ಗಡಿಗಳಿಗೆ ಕಳುಹಿಸಬೇಕು. ಬೇರೆ ಆಯ್ಕೆಗಳಿಲ್ಲ…” ಎಂದು ಬರೆದಿದೆ.

ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ತನಿಖೆ ನಡೆಸುತ್ತಿರುವ ತಮ್ಮ ಪಕ್ಷದ ಶಾಸಕ ಪ್ರತಾಪ್ ಸರ್ನಾಯಕ್ ಅವರನ್ನು ಕೇಂದ್ರ ಸರ್ಕಾರ ಗುರಿಯಾಗಿಸಿಕೊಂಡಿದೆ ಎಂದು ಶಿವಸೇನೆ ಆರೋಪಿಸಿದೆ.

“ಬಿಜೆಪಿ ದೇಶದ ವಾತಾವರಣವನ್ನು ಹಾಳು ಮಾಡುತ್ತಿರುವುದು ಮಾತ್ರವಲ್ಲದೆ, ನಿರಂಕುಶಾಧಿಕಾರವನ್ನು ಆಹ್ವಾನಿಸುತ್ತಿದೆ. ಖಾಲಿಸ್ತಾನ್ ವಿಷಯವು ಮುಗಿದಿದೆ, ಅದಕ್ಕಾಗಿ ಇಂದಿರಾ ಗಾಂಧಿ ಮತ್ತು ಜನರಲ್ ಅರುಣ್ ಕುಮಾರ್ ವೈದ್ಯ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಆದರೆ ಬಿಜೆಪಿ ಆ ವಿಷಯವನ್ನು ಮತ್ತೆ ಮುನ್ನಲೆಗೆ ತಂದು ಪಂಜಾಬ್‌ನಲ್ಲಿ ರಾಜಕೀಯ ಮಾಡಲು ಬಯಸಿದೆ. ಇದು ಕಿಡಿಯನ್ನು ಹೊತ್ತಿಸಿದರೆ ಅದು ದೇಶಕ್ಕೆ ಹಾನಿಕಾರಕವಾಗಿದೆ” ಎಂದು ಶಿವಸೇನೆ ಹೇಳಿದೆ.

ಇದನ್ನೂ ಓದಿ: ಪ್ರತಿಭಟನಾ ನಿರತ ರೈತರಿಗೆ ಆಹಾರ-ನೀರು ಒದಗಿಸಿದ ಆಪ್: ಹೋರಾಟಕ್ಕೆ ಬೆಂಬಲ

ಕಳೆದ ವಾರ ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಮತ್ತು ಇತರ ಬಿಜೆಪಿ ನಾಯಕರು, ಹೋರಾಟಗಾರರು ಸಿಖ್ ಪ್ರತ್ಯೇಕತಾವಾದಿ ಚಳವಳಿಯ ಘೋಷಣೆಗಳನ್ನು ಕೂಗಿದ್ದಾರೆ ಎಂದು ಆರೋಪಿಸಿ ರೈತರ ಪ್ರತಿಭಟನೆಯನ್ನು “ಖಾಲಿಸ್ತಾನ್” ತಿರುವು ನೀಡಲು ಪ್ರಯತ್ನಿಸಿದ್ದರು.

ಸುಧಾರಣೆಗಳನ್ನು ತರಲಾಗುವುದು ಎಂದು ಕೇಂದ್ರ ಸರ್ಕಾರ ಹೇಳುವ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ದೇಶಾದ್ಯಂತದ ರೈತರು ದೆಹಲಿಯ ಸುತ್ತಲೂ ಜಮಾಯಿಸಿದ್ದಾರೆ. ಪ್ರತಿಭಟನಾ ನಿರತ ರೈತರು ಈ ಕಾನೂನುಗಳು ತಮ್ಮ ಕನಿಷ್ಠ ಬೆಂಬಲ ಬೆಲೆಯನ್ನು ಕಿತ್ತುಕೊಳ್ಳುತ್ತವೆ ಮತ್ತು ಕಾರ್ಪೊರೇಟ್‌ಗಳಿಗೆ ಬೆಲೆಗಳನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ ಎಂದು ಆರೋಪಿಸಿದ್ದಾರೆ.

ಈ ನಡುವೆ ದೆಹಲಿಗೆ ಬರುವ ಎಲ್ಲಾ ಹೆದ್ದಾರಿಗಳನ್ನು ನಿರ್ಬಂಧಿಸುವುದಾಗಿ ಮತ್ತು ಕಾನೂನುಗಳನ್ನು ರದ್ದುಗೊಳಿಸಲು ಸರ್ಕಾರ ಒಪ್ಪದ ಹೊರತು ಪ್ರತಿಭಟನೆ ಮುಂದುವರಿಯುವುದಾಗಿ ರೈತರು ಸರ್ಕಾರಕ್ಕೆ ಬೆದರಿಕೆ ಹಾಕಿದ್ದಾರೆ. ಆದರೆ ನಿನ್ನೆ ಪ್ರಧಾನಿ ಮೋದಿ ತಮ್ಮ “ಮನ್‌ ಕಿ ಬಾತ್‌” ರೇಡಿಯೋ ಕಾರ್ಯಕ್ರಮದಲ್ಲಿ ಕೃಷಿ ಕಾಯ್ದೆಗಳನ್ನು ಮತ್ತೇ ಸಮರ್ಥನೆ ಮಾಡಿದ್ದಾರೆ.

ಇದನ್ನೂ ಓದಿ: ಆಜ್‌‌ತಕ್ ವರದಿಗಾರರನ್ನು ’ಗೋದಿ ಮೀಡಿಯಾ’ ಎಂದು ಕರೆದು ಸ್ವಾಗತಿಸಿದ ಚಳವಳಿ ನಿರತ ರೈತರು!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here