ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಕುರಿತು ಚರ್ಚಿಸಲು ಕರೆದಿರುವ ವಿಶೇಷ ಅಸೆಂಬ್ಲಿ ಅಧಿವೇಶನದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೃಷಿ ಮಸೂದೆಗಳ ಪ್ರತಿಗಳನ್ನು ಹರಿದುಹಾಕಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರಕ್ಕೆ, “ಬ್ರಿಟಿಷರಿಗಿಂತ ಕೆಟ್ಟವರಾಗಬೇಡಿ” ಎಂದು ಎಚ್ಚರಿಸಿದ್ದಾರೆ.
ಕೇಂದ್ರ ಸರ್ಕಾರವನ್ನು ತೀವ್ರವಾಗಿ ಟೀಕಿಸಿರುವ ಕೇಜ್ರಿವಾಲ್, “ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಕೃಷಿ ಕಾನೂನುಗಳನ್ನು ಜಾರಿಗೆ ತರಲು ಏನು ಅವಸರ” ಎಂದು ಪ್ರಶ್ನಿಸಿದ್ದಾರೆ.
ಕೃಷಿ ಮಸೂದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಎಲ್ಲಾ ಸೌಲಭ್ಯಗಳನ್ನು ಕೇಜ್ರಿವಾಲ್ ಒದಗಿಸಿದ್ದರು. ತಾವೇ ಖುದ್ದು ಪ್ರತಿಭಟನಾಕಾರರನ್ನು ಭೇಟಿಯಾಗಿ ವಿಚಾರಿಸಿದ್ದರು. ಇದರಿಂದ ಗೃಹ ಬಂಧನಕ್ಕೂ ಒಳಗಾಗಿದ್ದರು.
ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಕೇಜ್ರಿವಾಲ್, ’ನಾನು ಈ ಅಸೆಂಬ್ಲಿಯಲ್ಲಿ ಮೂರು ಕೃಷಿ ಕಾನೂನುಗಳನ್ನು ಹರಿದು ಹಾಕುತ್ತೇನೆ ಮತ್ತು ಬ್ರಿಟಿಷರಿಗಿಂತ ಕೆಟ್ಟವರಾಗದಂತೆ ಕೇಂದ್ರಕ್ಕೆ ಮನವಿ ಮಾಡುತ್ತೇನೆ. ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಸಂಸತ್ತಿನಲ್ಲಿ ಕೃಷಿ ಕಾನೂನುಗಳನ್ನು ಅಂಗೀಕರಿಸುವ ಆತುರ ಏನು?” ಎಂದು ರೈತರ ಪ್ರತಿಭಟನೆ ಕುರಿತು ಚರ್ಚಿಸಲು ಕರೆಯಲಾದ ಅಧಿವೇಶನದಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ತೀವ್ರ ಚಳಿಗಾಳಿಯಿಂದಾಗಿ ಪಂಜಾಬ್- ಹರಿಯಾಣ ಗಡಿಯಲ್ಲಿ ಪ್ರತಿಭಟನಾ ನಿರತ ರೈತ ಸಾವು
CM @ArvindKejriwal tears the copy of Centre's farm bills in Delhi Assembly.
We refuse to accept these farm bills which are against our farmers. #KejriwalAgainstFarmBills pic.twitter.com/rBrcc67sRz
— AAP (@AamAadmiParty) December 17, 2020
ಮುಂದುವರಿದು, “ಪ್ರತಿಯೊಬ್ಬ ರೈತ ಭಗತ್ ಸಿಂಗ್ ಆಗಿ ಮಾರ್ಪಟ್ಟಿದ್ದಾರೆ’ ಎಂದು ರೈತರ ಪ್ರತಿಭಟನೆಯ ಬಗ್ಗೆ, ಕೃಷಿ ಕಾನೂನುಗಳ ರದ್ಧತಿ ಬಗ್ಗೆ ಪಟ್ಟು ಹಿಡಿದು ಕುಳಿತಿರುವ ರೈತರ ಬಗ್ಗೆ ವಿವರಿಸಿದ್ದಾರೆ.
ಈವರೆಗೆ ಪ್ರತಿಭಟನಾ ನಿರತ ರೈತರಲ್ಲಿ 20ಕ್ಕೂ ಹೆಚ್ಚು ರೈತರು ಚಳಿ, ಅನಾರೋಗ್ಯ ಹಿನ್ನೆಲೆ ಸಾವನ್ನಪ್ಪಿದ್ದು, ಕೇಂದ್ರ ಸರ್ಕಾರ ಇನ್ನೂ ರೈತರ ಮಾತುಗಳನ್ನು ಕೇಳಲು ರೈತರು ಇನ್ನೆಷ್ಟು ಬಲಿದಾನ ನೀಡಬೇಕು. ಬ್ರಿಟಿಷರಿಗಿಂತ ಕೆಟ್ಟವರಾಗಬೇಡಿ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ’ಈ ಹೋರಾಟ ಕೇವಲ ರೈತರದ್ದಲ್ಲ, ಎಲ್ಲಾ ದೇಶವಾಸಿಗಳದ್ದು’: ಭಾರತ್ ಬಂದ್ ಬೆಂಬಲಿಸಿದ ಆಪ್
ಈ ಕೃಷಿ ಕಾನೂನುಗಳು ರೈತರಿಗೆ ಸಹಾಯವಾಗಲಿ ಎಂದು ತಂದಿಲ್ಲ. ಇವುಗಳನ್ನು ಭಾರತೀಯ ಜನತಾ ಪಾರ್ಟಿಗೆ ಚುನಾವಣೆಯ ಸಮಯದಲ್ಲಿ ಹಣಕಾಸು ನೀಡುವವರಿಗಾಗಿ ತರಲಾಗಿದೆ ಎಂದು ಆರೋಪಿಸಿದ್ದಾರೆ.
ಆಪ್ ಕಾರ್ಯಕರ್ತರು, ನಾಯಕರು ದೆಹಲಿ ವಿಧಾನಸಭೆಯ ಮುಂದೆಯೂ ಕೂಡ ಕೃಷಿ ಮಸೂದೆಗಳನ್ನು ಸುಟ್ಟು ವಿರೋಧ ವ್ಯಕ್ತಪಡಿಸಿದ್ದಾರೆ.
आम आदमी पार्टी के विधायकों ने दिल्ली विधानसभा के बाहर जलाए तीनों किसान विरोधी काले कानून।#KejriwalAgainstFarmBills pic.twitter.com/FhsSZAybQu
— AAP (@AamAadmiParty) December 17, 2020
ದೆಹಲಿಯ ಆಡಳಿತರೂಢ ಆಪ್ ಸರ್ಕಾರ ರೈತರ ಧ್ವನಿಗೆ ಬೆಂಬಲವಾಗಿ ನಿಂತಿದೆ. ಕೇಂದ್ರ ಸರ್ಕಾರದ ದೌರ್ಜನ್ಯಗಳಾದ ಜಲಫಿರಂಗಿ, ಆಶ್ರುವಾಯು ಪ್ರಯೋಗ ಮತ್ತು ಲಾಠಿಚಾರ್ಜ್ ಅನುಭವಿಸಿ ಈಗ ತೀವ್ರ ಶೀತದಲ್ಲೂ ಪ್ರತಿಭಟೆಇಸುತ್ತಿರುವ ಸಾವಿರಾರು ರೈತರಿಗೆ ಕುಡಿಯುವ ನೀರು, ವೈದ್ಯಕೀಯ ಆರೈಕೆ ಮತ್ತು ನೈರ್ಮಲ್ಯ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಿದೆ.
ಆಪ್ ಶಾಸಕರು ಕೃಷಿ ಮಸೂದೆಗಳ ವಿರುದ್ಧ ಘೋಷಣೆಗಳನ್ನು ಕೂಗಿ, ಕೃಷಿ ಮಸೂದೆಗಳ ಪ್ರತಿಗಳನ್ನು ಹರಿದು ಹಾಕಿ ಸ್ಪೀಕರ್ ಅವರನ್ನು ಮುತ್ತಿಗೆ ಹಾಕಿದ ಕಾರಣ, ಕಲಾಪವನ್ನು ನಾಳೆ 11 ಗಂಟೆಗೆ ಮುಂದೂಡಲಾಗಿದೆ.
ಇದನ್ನೂ ಓದಿ: ರೈತರನ್ನು ಬೆಂಬಲಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಆಪ್ ಮುಖಂಡರು


