ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ 25 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಅನ್ನದಾತರಿಗೆ ಹಲವು ಸಂಘ ಸಂಸ್ಥೆಗಳು, ಎನ್‌ಜಿಒಗಳು ನೆರವಿಗೆ ಧಾವಿಸಿವೆ. ಕೊರೆಯುವ ಚಳಿಯಲ್ಲಿ ನಡುಗುತ್ತಾ, ಮೂಲಸೌಕರ್ಯಗಳಿಲ್ಲದ ಪರಿಸ್ಥಿತಿಯಲ್ಲೂ ರೈತರ ಹೋರಾಟ ಆತ್ಮಸ್ಥೈರ್ಯ ಕಳೆದುಕೊಂಡಿಲ್ಲ.
ಸರ್ಕಾರ ತನ್ನ ವಿವಾದಿತ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಮಾಡೇ ಮಾಡುತ್ತೆವೆ ಎಂಬ ದೃಢ ಸಂಕಲ್ಪ ತೊಟ್ಟಿರುವ ರೈತರ ನೆರವಿಗೆ ಹಲವು ಸಂಘ ಸಂಸ್ಥೆಗಳು, ವಿದ್ಯಾರ್ಥಿ ಸಂಘಗಳು, ದೇಶಿಯ, ವಿದೇಶಿ ಸಂಘಗಳು ನಿಂತಿವೆ.
ದೆಹಲಿಯ ಟಿಕ್ರಿ ಗಡಿಯಲ್ಲಿ ಈಗ ಸಾವಿರಾರು ಸಂಖ್ಯೆಯಲ್ಲಿ ನೆರೆದಿರುವ ರೈತರಿಗೆ ಅಮೆರಿಕಾ ಮೂಲದ 2 ಸಿಖ್ ಎನ್‌ಜಿಒಗಳು ಶೌಚಾಲಯಗಳು, ಗೀಸರ್ ಮತ್ತು ಮಲಗಲು ಡೇರೆಗಳನ್ನು ದಾನ ಮಾಡಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: ಅನ್ನದಾತರಿಗೆ ಆಹಾರ ವಿತರಿಸಿದ ಬಾಕ್ಸರ್ ವಿಜೇಂದರ್ ಸಿಂಗ್
Delhi: 2 US-based Sikh NGOs donate toilets, geysers & tents to farmers at Tikri border.
"Due to lack of basic facilities at protest sites, we've decided to donate 200 portable toilets & geysers," says S P Singh Khalsa, Hoshiarpur Coordinator, Sikh Panchayat Fremont California pic.twitter.com/seQqwwD9SV
— ANI (@ANI) December 20, 2020
“ಪ್ರತಿಭಟನಾ ಸ್ಥಳಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇರುವುದರಿಂದಾಗಿ, ನಾವು 200 ಪೋರ್ಟಬಲ್ ಶೌಚಾಲಯ ಮತ್ತು ಗೀಸರ್‌ಗಳನ್ನು ದಾನ ಮಾಡಲು ನಿರ್ಧರಿಸಿದ್ದೇವು” ಎಂದು ಸಿಖ್ ಪಂಚಾಯತ್ ಫ್ರೀಮಾಂಟ್ ಕ್ಯಾಲಿಫೋರ್ನಿಯಾದ ಹೋಶಿಯಾರ್‌ಪುರದ ಸಂಯೋಜಕ ಎಸ್.ಪಿ.ಸಿಂಗ್ ಖಲ್ಸಾ ಮಾಹಿತಿ ನೀಡಿದ್ದಾರೆ.
ತೀವ್ರ ಚಳಿ ಇರುವ ದೆಹಲಿಯಲ್ಲಿ ರೈತರಿಗೆ ಉಳಿದುಕೊಳ್ಳಲು ಡೇರೆಗಳನ್ನು ನೀಡಲಾಗಿದೆ. ಪ್ರತಿಭಟನಾ ನಿರತ 20ಕ್ಕೂ ಹೆಚ್ಚು ರೈತರು ಚಳಿ ಸೇರಿದಂತೆ ಅನೇಕ ಅನಾರೋಗ್ಯ ಕಾರಣದಿಂದ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ರೈತ ಹೋರಾಟವನ್ನು ಬೆಂಬಲಿಸಿ ಆತ್ಮಹತ್ಯೆ ಮಾಡಿಕೊಂಡ ಸಿಖ್ ಧರ್ಮಗುರು!
Delhi: Volunteers serve tea & breakfast to protesting farmers as their agitation against Centre's three farm laws enters Day-25 at Singhu border (Delhi-Haryana border) pic.twitter.com/Ah3ft0pQwQ
— ANI (@ANI) December 20, 2020
ಪ್ರತಿಭಟನಾ ನಿರತ ರೈತರಿಗೆ ದೆಹಲಿ-ಹರಿಯಾಣದ ಸಿಂಘ ಗಡಿಯಲ್ಲಿ ಸ್ವಯಂ ಸೇವಕರು ಚಹಾ ಮತ್ತು ಉಪಹಾರವನ್ನು ನೀಡಿದ್ದಾರೆ.
ದೆಹಲಿಯ ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಅನ್ನದಾತರಿಗೆ ಜಮೀನ್ದಾರ ವಿದ್ಯಾರ್ಥಿ ಸಂಸ್ಥೆ (ಜೆಎಸ್‌ಒ) ಆಯೋಜಿಸಿದ್ದ ವತಿಯಿಂದ ಕಾಂಗ್ರೆಸ್ ಮುಖಂಡ ಮತ್ತು ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ಬಾಕ್ಸರ್ ವಿಜೇಂದರ್ ಸಿಂಗ್ ರೈತರಿಗೆ ಆಹಾರ ವಿತರಿಸಿದ್ದರು.
ಈ ಹಿಂದೆ ರೈತರಿಗೆ ಪಿಜ್ಜಾ ವಿತರಿಸಿದ್ದ ನಾಲ್ವರು ಸ್ನೇಹಿತರ ತಂಡದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ರೈತರು ಪಿಜ್ಜಾ ತಿಂದಿದ್ದನ್ನು ಅನೇಕ ಜನ ವ್ಯಂಗ್ಯದ ಧಾಟಿಯಲ್ಲಿ ಟೀಕಿಸಿದ್ದರು ಇದಕ್ಕೆ ಅನೇಕರು ನಮಗಾಗಿ ಅನ್ನ ಬೆಳೆಯುವವರಿಗೆ ಪಿಜ್ಜಾ ತಿನ್ನುವ ಹಕ್ಕಿಲ್ಲವೇ ಎಂದು ಪೋಸ್ಟ್‌ಗಳನ್ನು ಹಾಕುವ ಮೂಲಕ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನು ಓದಿ: ರೈತ ಹೋರಾಟಕ್ಕೆ ಬೆಂಬಲ ನೀಡಿದ ಚಿಪ್ಕೋ ಚಳುವಳಿಯ ನೇತಾರ ಸುಂದರ್‌ಲಾಲ್ ಬಹುಗುಣ


