ಜನವರಿ ಒಂದರಿಂದ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯ ಎಂದಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಫಾಸ್ಟ್ಯಾಗ್ ಗಡುವನ್ನು ಮತ್ತೆ ವಿಸ್ತರಣೆ ಮಾಡಿದೆ. ಫೆ.15ರ ವರೆಗೆ ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾಗಳಲ್ಲಿ ನಗದು ಮತ್ತು ಫಾಸ್ಟ್ಯಾಗ್ ಲೈನ್ ಕಾರ್ಯ ನಿರ್ವಹಿಸಲಿವೆ.
ಫಾಸ್ಟ್ಯಾಗ್ ಇಲ್ಲದ ವಾಹನಕ್ಕೆ ಟೋಲ್ ಗೇಟ್‌ನಲ್ಲಿ ಅಧಿಕ ಶುಲ್ಕ ವಸೂಲು ಮಾಡಲು ಈ ಹಿಂದೆ ನಿರ್ಧರಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಸಂಬಂಧ ಹೊಸ ಆದೇಶವನ್ನು ಹೊರಡಿಸಿದೆ.
ಆದೇಶದ ಪ್ರಕಾರ ಮುಂದಿನ ತಿಂಗಳ ಅರ್ಧದವರೆಗೂ, ವಾಹನ ಸವಾರರು ನಗದು ಅಥವಾ ಫಾಸ್ಟ್ಯಾಗ್ ಬಳಸಿ ಟೋಲ್ ಪಾವತಿ ಮಾಡಬಹುದಾಗಿದೆ. ಫಾಸ್ಟ್ಯಾಗ್ ಲೈನ್‌ನಲ್ಲಿ ಈಗಿನಂತೆಯೇ ಕೇವಲ ಫಾಸ್ಟ್ಯಾಗ್ ಮೂಲಕವೇ ಪಾವತಿ ಪ್ರಕ್ರಿಯೆ ಮುಂದುವರಿಯಲಿದೆ.
ಇದನ್ನೂ ಓದಿ: ಪಕ್ಷಗಳಿಲ್ಲದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ‘ಈ ಪಕ್ಷಗಳ ಬೆಂಬಲಿತರ’ ಸಾಧನೆ ಎಷ್ಟು?
ಸದ್ಯ ದೇಶಾದ್ಯಂತ ಶೇ. 70 ರಿಂದ 80 ರಷ್ಟು ವಾಹನಗಳಲ್ಲಿ ಫಾಸ್ಟ್ಯಾಗ್ (FasTag) ಅಳವಡಿಸಿಕೊಳ್ಳಲಾಗಿದೆ. ಹಳೆಯ ಆದೇಶದಂತೆ ಫಾಸ್ಟ್ಯಾಗ್ ಹಾಕಿಸಿಕೊಳ್ಳಲು ಡಿಸೆಂಬರ್ 31 ಕೊನೆಯ ದಿನವಾಗಿತ್ತು.
ಟೋಲ್‌ಗಳನ್ನು ಕ್ಯಾಶ್ ಲೆಸ್ ಮಾಡುವ ನಿಟ್ಟಿನಲ್ಲಿ ಕಾನೂನು ಅಗತ್ಯ ಕ್ರಮಗಳನ್ನು ಫೆ. 15ರ ಒಳಗೆ ಪೂರೈಸಿಕೊಳ್ಳುವಂತೆ ಭೂಸಾರಿಗೆ ಇಲಾಖೆ, ರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರಕ್ಕೆ ತಿಳಿಸಿದೆ.
ಟೋಲ್ ಪ್ಲಾಜಾಗಳಲ್ಲಿ ಹಣ ಪಾವತಿಸುತ್ತಾ ಸಮಯ ವ್ಯರ್ಥವಾಗುವುದನ್ನು ತಡೆಯಲು, ಟೋಲ್‌ಗೇಟ್‌ಗಳಲ್ಲಿ ಉದ್ದದ ಕ್ಯೂಗಳನ್ನು ತಡೆಯಲು ಫಾಸ್ಟ್ಯಾಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದರಿಂದ ವಾಹನಗಳು ಟೋಲ್ ಪ್ಲಾಜಾದಲ್ಲಿ ನಿಲ್ಲಿಸಿ, ಪೇಮೆಂಟ್ ಮಾಡುವ ಅಗತ್ಯವಿರುವುದಿಲ್ಲ. ಟೋಲ್ ಮೂಲಕ ವಾಹನ ಹಾದು ಹೋಗುತ್ತಿರುವಂತೆಯೇ, ಫಾಸ್ಟ್ಯಾಗ್ ಮೂಲಕ ಟೋಲ್ ಶುಲ್ಕ ಕಡಿತವಾಗುತ್ತದೆ.
ಇದನ್ನೂ ಓದಿ: ರಿಲಾಯನ್ಸ್ ಬಹಿಷ್ಕರಿಸಲು ಕರೆ: ರೈತ ಹೋರಾಟ ಬೆಂಬಲಿಸಿ ಸಿಂಧನೂರಿನಲ್ಲಿ ಪ್ರತಿಭಟನೆ


