Homeಮುಖಪುಟಧೈರ್ಯವಿದ್ದರೆ ನೇರಾ ನೇರ ಚರ್ಚೆಗೆ ಬನ್ನಿ: ಮೋದಿಗೆ ರಾಹುಲ್ ಚಾಲೆಂಜ್

ಧೈರ್ಯವಿದ್ದರೆ ನೇರಾ ನೇರ ಚರ್ಚೆಗೆ ಬನ್ನಿ: ಮೋದಿಗೆ ರಾಹುಲ್ ಚಾಲೆಂಜ್

- Advertisement -
- Advertisement -

ಮೂರು ಪ್ರಶ್ನೆಗಳನ್ನು ನಿಮಗೆ ಮೊದಲೇ ಕಳಿಸಿಕೊಟ್ಟಿರುತ್ತೇವೆ. ಪುಸ್ತಕ ತೆಗೆದು ಸಿದ್ದವಾಗಿ. ಕೇವಲ 20 ನಿಮಿಷ ನನ್ನ ಜೊತೆಗೆ ನೇರಾ ನೇರ ಚರ್ಚೆಗೆ ಬರುತ್ತೀರಾ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಇಂದು ಸವಾಲ್ ಹಾಕಿದ್ದಾರೆ.

1 ರಫೇಲ್ + ಅನಿಲ್ ಅಂಬಾನಿ 2. ನೀರವ್ ಮೋದಿ 3. ಅಮಿತ್ ಶಾ ಮತ್ತು ನೋಟು ಅಮಾನ್ಯೀಕರಣ. ನಿಮಗೆ ಸುಲಭವಾಗಲೆಂದು ಈ ಮೂರು ವಿಚಾರದ ಕುರಿತ ಪ್ರಶ್ನೆಗಳನ್ನು ಕಳಿಸಿಕೊಡುತ್ತೇವೆ. ಧೈರ್ಯವಿದ್ದರೆ ಚರ್ಚೆಗೆ ಬರುತ್ತೀರಾ ಪ್ರಧಾನಿ ಮಂತ್ರಿಯವರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡುವ ಮೂಲಕ ಬಹಿರಂಗ ಚಾಲೆಂಜ್ ಮಾಡಿದ್ದಾರೆ. ಜೊತೆಗೆ ಸ್ಕೇರೆಡ್2ಡಿಬೆಟ್ ಎಂಬ ಹ್ಯಾಸ್ ಟ್ಯಾಗ್ ಸಹ ಸೇರಿಸಿದ್ದು ಚರ್ಚೆಗೆ ಭಯವೇ ಎಂದು ಲೇವಡಿ ಮಾಡಿದ್ದಾರೆ.

ಇಂದು ಬೆಳಿಗ್ಗೆ ಮಹರಾಷ್ಟ್ರದ ಲಾತೂರ್‍ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮೋದಿ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಪಾಕಿಸ್ತಾನದ ಭಾಷೆಯ ತರವೇ ಮಾತನಾಡುತ್ತಿದೆ ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ ಆಗಿದ್ದರೆ ನೇರವಾಗಿ ಕೂತು ಫೇಸ್ ಟು ಫೇಸ್ ಮಾತನಾಡೋಣ ಎಂದು ಆಹ್ವಾನ ನೀಡಿದ್ದಾರೆ. ಈ ಹಿಂದೆಯೂ ಹಲವು ಬಾರಿ ಚರ್ಚೆಗೆ ಕರೆದಿದ್ದೇನೆ, ಕೇವಲ 20 ನಿಮಿಷ ಮಾತನಾಡಲು ಸಹ ಮೋದಿಯವರಿಗೆ ಧೈರ್ಯವಿಲ್ಲ ಎಂದಿದ್ದಾರೆ.

ರಫೇಲ್ ಯುದ್ಧ ವಿಮಾನಗಳ ಖರೀದಿ ವಿಚಾರದಲ್ಲಿ ಭಾರತದ ಪರವಾಗಿ ಆಫ್‍ಸೆಟ್ ಪಾಲುದಾರನಾಗಿ ಅನಿಲ್ ಅಂಬಾನಿಯ ರಿಲೆಯನ್ಸ್ ಡಿಫೆನ್ಸ್ ಅನ್ನು ತೆಗೆದುಕೊಂಡ ವಿಚಾರದಲ್ಲಿ ಪ್ರಧಾನಿ ಕಾರ್ಯಲಯ ಮಧ್ಯಪ್ರವೇಶ ಮಾಡಿದೆ. ಇಲ್ಲಿ ಅನಿಲ್ ಅಂಬಾನಿಗೆ ಲಾಭ ಮಾಡಿಕೊಡಲು ಇಷ್ಟೆಲ್ಲ ನಡೆದಿರುವುದು ಸ್ಪಷ್ಟವಾಗಿದೆ. ಅದೇ ರೀತಿ ನಮ್ಮ ದೇಶದ ಬ್ಯಾಂಕುಗಳಿಗೆ ಸಾವರಾರು ಕೋಟಿ ರೂಗಳನ್ನು ವಂಚಿಸಿ ಪರಾರಿಯಾಗಿರುವ ನೀರವ್ ಮೋದಿ, ಮೆಹುಲ್ ಚೋಕ್ಸಿ ಮತ್ತು ವಿಜಯ್ ಮಲ್ಯರಂತಹ ಆರೋಪಿಗಳನ್ನು ವಾಪಸ್ ಭಾರತಕ್ಕೆ ಕರೆತರಲು ಮೋದಿ ಸರ್ಕಾರ ಹಿಂದೇಟು ಹಾಕುತ್ತಿದೆ. ಅದೇ ರೀತಿ ರಾತ್ರೋರಾತ್ರಿ ತೆಗೆದುಕೊಂಡ ನೋಟು ಅಮಾನ್ಯೀಕರಣವೂ ಸಹ ಜನವಿರೋಧಿ ನೀತಿಯಾಗಿದೆ ಎಂದು ರಾಹುಲ್ ದೂರಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...