Homeಮುಖಪುಟದೇಶದ ಕಾನೂನುಗಳನ್ನು ಗಾಳಿಗೆ ತೂರುತ್ತಿರುವ ನರೇಂದ್ರ ಮೋದಿ

ದೇಶದ ಕಾನೂನುಗಳನ್ನು ಗಾಳಿಗೆ ತೂರುತ್ತಿರುವ ನರೇಂದ್ರ ಮೋದಿ

- Advertisement -
ಮೊದಲ ಮತವನ್ನು ಹುತಾತ್ಮ ಯೋಧರಿಗೆ ಸಮರ್ಪಿಸಿ ಎಂದ ಮೋದಿ.
ಮತ್ತೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ನರೇಂದ್ರ ಮೋದಿ.
ಈ ದೇಶದ ಪ್ರಧಾನಿ ಸ್ಥಾನದಲ್ಲಿರುವ ವ್ಯಕ್ತಿ ದೇಶದ ಕಾನೂನುಗಳನ್ನು ಕಾಪಾಡಬೇಕು. ಆದರೆ ದೇಶದ ಕಾನೂನುಗಳನ್ನು ಮುರಿಯುವುದರಲ್ಲಿ ಅವರೆ ಮೊದಲಿಗರಾದರೆ ಅವರ ಅಂಧಾಭಿಮಾನಿಗಳು ಮತೇನು ಮಾಡುತ್ತಾರೆ? ಅವರು ಈ ದೇಶವನ್ನೇ ಹಾಳು ಮಾಡುತ್ತಾರೆ. ಅಂತಹ ದುರಂತಕ್ಕೆ ನಾವೆಲ್ಲಾ ಸಾಕ್ಷಿಯಾಗಬೇಕಿದೆ.
ಇಂದು ಮೋದಿಯವರು ನಡೆಸಿದ ಚುನಾವಣಾ ರ‍್ಯಾಲಿಯಲ್ಲಿ ಅವರು ಮೊದಲ ಮತದಾರರಿಗೆ ‘ನಿಮ್ಮ ಮೊದಲ ಮತವನ್ನು ಮತವನ್ನು ಹುತಾತ್ಮ ಯೋಧರಿಗೆ ಸಮರ್ಪಿಸಿ’ ಎಂದು ಕರೆ ನೀಡಿದ್ದಾರೆ. ಇನ್ನೊಂದು ಕಡೆಯ ಭಾಷಣದಲ್ಲಿ ನಿಮ್ಮ ಮತವನ್ನು ಬಾಲಾಕೋಠ್ ಏರ್ ಸ್ಟ್ರೈಕ್ ನಲ್ಲಿ ಹುತಾತ್ಮರಾದ ಯೋಧನಿಂದ ಹಿಡದು ಪುಲ್ವಾಮ ದಾಳಿಯಲ್ಲಿ ಬಲಿಯಾದ ಸಿ.ಆರ್.ಪಿ.ಎಫ್ ಯೋಧರಿಗೆ ಅರ್ಪಿಸಿ ಎಂದು ಹೇಳಿದ್ದಾರೆ.
ಕಳೆದ ಇಪ್ಪತ್ತು ದಿನಗಳ ಹಿಂದೆ ಭಾರತೀಯ ಚುನಾವಣಾ ಆಯೋಗ ಸೈನ್ಯ, ಯೋಧರ ಹೆಸರಿನಲ್ಲಿ ಯಾವುದೆ ಕಾರಣಕ್ಕೂ ಮತ ಯಾಚನೆ ಮಾಡಬಾರದೆಂದು ಸ್ಪಷ್ಟವಾಗಿ ಆದೇಶ ಹೊರಡಿಸಿತ್ತು. ಆದರೆ ಪ್ರಧಾನಿ ಮೋದಿಯೇ ಇದನ್ನು ಉಲ್ಲಂಘಿಸುವ ಮೂಲಕ ಕೆಟ್ಟ ಬೆಳವಣಿಗೆಗೆ ಕಾರಣರಾಗಿದ್ದಾರೆ. ಸೋಲಿನ ಭಯದಲ್ಲಿರುವ ಮೋದಿ ಹತಾಶೆ ಮನೋಭಾವದಿಂದ ಅಕ್ರಮ ಮಾರ್ಗ ಹಿಡಿದಿರುವುದನ್ನು ಸರ್ವಾಥ ಒಪ್ಪಲು ಸಾಧ್ಯವಿಲ್ಲ.
ಇದೇ ಮೊದಲಲ್ಲ.
ಮೋದಿ ಹೀಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವುದು ಇದೆ ಮೊದಲಲ್ಲ. ಕಳೆದ 2014ರ ಚುನಾವಣೆಯಲ್ಲಿಯೇ ಚುನಾವಣಾ ದಿನವೇ ರೋಡ್ ಶೋ ಮಾಡಿದ್ದರು. ಮತ ಚಲಾಯಿಸಿದ ಬಳಿಕ ಬಿಜೆಪಿ ಚಿಹ್ನೆಯಾದ ಕಮಲವನ್ನು ಎತ್ತಿ ಹಿಡಿದು ಬೆಂಬಲಿಗರಿಗೆ ಹುರಿದುಂಬಿಸಿದ್ದರು. ಕಳೆದ ಗುಜರಾತ್ ವಿಧಾನಸಭೆಯ ಚುನಾವಣೆಯ ಸಂದರ್ಭದಲ್ಲಿಯೂ ಕೂಡ ರೋಡ್ ಶೋ ಗೆ ಅನುಮತಿ ಸಿಗದಿದ್ದಾಗ ಸೀ ಪ್ಲೇನ್ ಎಂದು ನದಿಯಲ್ಲಿದ್ದುಕೊಂಡೆ ಪ್ರಚಾರ ಮಾಡಿದ್ದರು.
ಅಂದರೆ ಈ ದೇಶದ ಸಂವಿಧಾನ, ಕಾನೂನು ಎಂದರೆ ಮೋದಿಗೆ ಕಾಲ ಕಸಕ್ಕೆ ಸಮಾನ ಎಂಬಾತ್ತಾಗಿದೆ. ಸೈನಿಕರ ಹೆಸರಿನಲ್ಲಿ ಭಾಷಣ ಮಾಡಿ ಜನರನ್ನು ಭಾವೋದ್ರೇಕಗೊಳಿಸಿ, ಮರಣ ಹೊಂದಿದ ಯೋಧರ ಹೆಸರಿನಲ್ಲಿ ನಮಗೆ ಓಟು ಕೊಡಿ ಎಂದು ಕೇಳುವ ಕೀಳು ಮಟ್ಟಕ್ಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಅತ್ತ ಸೈನ್ಯದಲ್ಲಿರುವ ಯೋಧರಿಗೆ ಉತ್ತಮ ಆಹಾರ, ಸಂಬಳ ನೀಡುತ್ತಿಲ್ಲ. ಆಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿಲ್ಲ. ಸೈನ್ಯದಲ್ಲಿನ ಭ್ರಷ್ಟಾಚಾರವನ್ನು ಮಟ್ಟ ಹಾಕಿಲ್ಲ. ಸಿ.ಆರ್.ಪಿ.ಎಫ್ ಯೋಧರಿಗೆ ಸಮರ್ಪಕ ಪೆನ್ಷನ್ ಕೊಟ್ಟಿಲ್ಲ. ಅವರು ಮಡಿದರೆ ಅವರಿಗೆ ಹುತಾತ್ಮ ಪಟ್ಟವನ್ನು ಸಹ  ಮೋದಿ ಸರ್ಕಾರ ಮಾಡಿಲ್ಲ ಎಂದು ಸಾವಿರಾರು ಸೈನಿಕರು ಮೋದಿ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಆದರೆ ಇತ್ತ ಮೋದಿ ನಾಚಿಕೆಬಿಟ್ಟು ಸೈನಿಕರ ಹೆಸರಿನಲ್ಲಿಯೂ ಓಟು ಕೇಳುತ್ತಿದ್ದಾರೆ ಅಂದರೆ ಈ ದೇಶದ ಪರಿಸ್ಥಿತಿ ಎಲ್ಲಿಗೆ ತಲುಪಿದೆ ನೀವೆ ಯೋಚಿಸಿ.
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೊಪ್ಪಳ: ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್‌ಗೆ ಸುವರ್ಣಾವಕಾಶ!?

0
ಹಿಂದುತ್ವ ರಾಜಕಾರಣದ ವಿಚಾರದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ಕಳೆದ ಒಂದೂವರೆ ದಶಕದಿಂದ ಥೇಟ್ ಚಿಕ್ಕಮಗಳೂರು-ಶಿವಮೊಗ್ಗದ ತದ್ರೂಪಿ. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಹಿಂದುತ್ವದ ಅಜೆಂಡಾ ಇಲ್ಲಿ ನಿರ್ಣಾಯಕ. ಆದರೆ, 2014ರಲ್ಲಿ ಲೋಕಸಭಾ ಕಣಕ್ಕೆ ಸಂಗಣ್ಣ ಕರಡಿ...