Homeಮುಖಪುಟಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಸಂಸದರಲ್ಲಿ ಶೇ.55% ಬಿಜೆಪಿಯವರು

ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಸಂಸದರಲ್ಲಿ ಶೇ.55% ಬಿಜೆಪಿಯವರು

- Advertisement -
- Advertisement -

16ನೇ ಲೋಕಸಭೆ ಮುಕ್ತಾಯದ ಹಂತಕ್ಕೆ ಬಂದಿದೆ. ಈ ಸಮಯದಲ್ಲಿ ಅತಿ ಹೆಚ್ಚು ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಸಂಸದರನ್ನು ಹೊಂದಿರವು ಪಕ್ಷ ಯಾವುದೆಂದು ತಿರುಗಿ ನೋಡಿದರೆ ಅದು ಭಾರತೀಯ ಜನತಾ ಪಕ್ಷ ಎಂದು ಮುಖಕ್ಕೆ ರಾಚುವಂತೆ ಕಾಣಿಸುತ್ತಿದೆ. ಒಟ್ಟು 174 ಜನ ಪ್ರಕರಣಗಳನ್ನು ಎದರಿಸುತ್ತಿದ್ದರೆ ಅದರಲ್ಲಿ 92ಜನ ಎಂದರೆ ಶೇ.55% ರಷ್ಟು ಬಿಜೆಪಿಯ ಸಂಸದರೆ ಆಗಿದ್ದಾರೆ.

ಇನ್ನುಳಿದಂತೆ ಕಾಂಗ್ರೆಸ್ 07, ಎಐಡಿಎಂಕೆ 06, ಶಿವಸೇನಾ 17, ತೃಣಮೂಲ ಕಾಂಗ್ರೆಸ್ ನ 07 ಸಂಸದರು ಕ್ರಮಿನಲ್ ಪ್ರಕರಣದಲ್ಲಿ ಭಾಗಿಯಾದ ಆರೋಪವನ್ನು ಹೊಂದಿದ್ದಾರೆ ಎಂದು ಅಸೋಷಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾಮ್ರ್ಸ ತನ್ನ ನ್ಯಾಷನಲ್ ಎಲೆಕ್ಷನ್ ವಾಚ್ ವಿಶ್ಲೇಷಣೆಯಲ್ಲಿ ತಿಳಿಸಿದೆ. ಎಲ್ಲಾ ಪಕ್ಷಗಳಿಂದಲೂ ಒಟ್ಟು 106 ಜನ ಸಂಸದರು ಕೊಲೆ, ಕೋಮು ದ್ವೇಷ ಹರಡುವುದು, ಕಿಡ್ನಾಪ್ ಮತ್ತು ಮಹಿಳೆಯರ ಮೇಲಿನ ಹಲ್ಲೆಯಂತಹ ಗಂಭೀರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.

2014ರ ಲೋಕಸಭೆಯೇ ಇದುವರೆಗೂ ಅತಿ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಚುನಾವಣೆಯಾಗಿದೆ ಎಂದು ಇಂಡಿಯಾಸ್ಪೆಂಡ್ ವರದಿ ಮಾಡಿದೆ. 2009ಕ್ಕೆ ಹೋಲಿಸಿಕೊಂಡಲ್ಲಿ 2014ರಲ್ಲಿ ಶೇ. 14% ಹೆಚ್ಚಳವಾಗಿದೆ ಎಂದು 2014ರ ಮೇ 23ರ ಫಲಿತಾಂಶದ ದಿನವೇ ಇದು ವರದಿಯಾಗಿತ್ತು.

ಒಟ್ಟಾರೆಯಾಗಿ ನೋಡುವುದಾದರೆ ಈ ಬಿಜೆಪಿ ಪಕ್ಷವೆಂಬುದು ದೇಶದಲ್ಲಿ ಕ್ರೈಮ್ ಅನ್ನು ತಡೆಗಟ್ಟಲು ಸಾಧ್ಯವಿಲ್ಲ ಅನ್ನಿಸುತ್ತದೆ. ಏಕೆಂದರೆ ದೇಶದ ಕಾನೂನು ರೂಪಿಸುವ ಸಂಸತ್ತಿನಲ್ಲಿಯೇ ಅತಿ ಹೆಚ್ಚು ಕ್ರಿಮಿನಲ್ ಹಿನ್ನೆಲೆಯುಳ್ಳ ಸಂಸದರನ್ನು ಹೊಂದಿರುವ ಇವರು ಬೇರೆಯವರಲ್ಲಿ ಬದಲಾವಣೆ ತರುತ್ತಾರೆಯೇ? ಇದರಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಬಿಜೆಪಿಯ ಮಿತ್ರಪಕ್ಷಗಳಾದ ಶಿವಸೇನೆ, ಎಐಡಿಎಂಕೆ, ಜೆಡಿಯು ಪಕ್ಷಗಳು ಸಹ ಹೆಚ್ಚಿನ ಸಂಖ್ಯೆಯ ಅಪರಾಧ ಹಿನ್ನೆಲೆಯುಳ್ಳ ಸಂಸದರನ್ನೇ ಹೊಂದಿವೆ.
ಆಧಾರ: ಬ್ಲೂಮ್ ಬರ್ಗ್ ಕ್ವಿಂಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...