Homeಮುಖಪುಟಇಸ್ರೇಲ್‌ಗೆ 230 ವಿಮಾನ, 20 ಹಡಗುಗಳಲ್ಲಿ ಯುದ್ಧ ಸಾಮಗ್ರಿ ಒದಗಿಸಿದ ಯುಎಸ್‌

ಇಸ್ರೇಲ್‌ಗೆ 230 ವಿಮಾನ, 20 ಹಡಗುಗಳಲ್ಲಿ ಯುದ್ಧ ಸಾಮಗ್ರಿ ಒದಗಿಸಿದ ಯುಎಸ್‌

- Advertisement -
- Advertisement -

ಅಕ್ಟೋಬರ್‌ 7ರಂದು ಇಸ್ರೇಲ್‌-ಹಮಾಸ್ ನಡುವೆ ಸಂಘರ್ಷ ಪ್ರಾರಂಭವಾದಾಗಿನಿಂದ ಇದುವರೆಗೆ (ಡಿ.26) ಯುಎಸ್ 230 ಸರಕು ವಿಮಾನಗಳು ಮತ್ತು 20 ಹಡಗುಗಳಲ್ಲಿ ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಉಪಕರಣಗಳನ್ನು ಕಳುಹಿಸಿಕೊಟ್ಟಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳು ತಿಳಿಸಿವೆ.

ಯುಎಸ್ ಮಿಲಿಟರಿ ನೆರವು ಫಿರಂಗಿ ಶೆಲ್‌ಗಳು, ಶಸ್ತ್ರಸಜ್ಜಿತ ವಾಹನಗಳು ಮತ್ತು ಸೈನಿಕರಿಗೆ ಬೇಕಾದ ಮೂಲಭೂತ ಯುದ್ಧ ಸಾಧನಗಳನ್ನು ಒಳಗೊಂಡಿತ್ತು ಎಂದು ಇಸ್ರೇಲ್ ಮೂಲದ ಯೆಡಿಯಟ್ ಅಹ್ರೊನೊತ್ ಪತ್ರಿಕೆ ವರದಿ ಮಾಡಿದೆ.

ಇಸ್ರೇಲ್‌ನ ರಕ್ಷಣಾ ಸಚಿವಾಲಯವು ಗಾಝಾ ಪಟ್ಟಿಯ ಮೇಲಿನ ಪ್ರಸ್ತುತ ಯುದ್ಧದ ವೆಚ್ಚವನ್ನು ಸುಮಾರು 65 ಶತಕೋಟಿ ಶೆಕೆಲ್‌ಗಳು ($17 ಶತಕೋಟಿ) ಎಂದು ಅಂದಾಜಿಸಿದೆ.

ಯುದ್ದದ ಆರಂಭದಲ್ಲಿ ಇಸ್ರೇಲ್ ತನ್ನ ಗೋದಾಮಿನಲ್ಲಿ ಶೇಖರಿಸಿಟ್ಟ ಯುದ್ದ ಸಾಮಾಗ್ರಿಗಳು, ಮದ್ದು ಗುಂಡುಗಳನ್ನು ಬಳಸಿತ್ತು. ಅದನ್ನು ತುಂಬಿಸುವ ಸಲುವಾಗಿ ಯುಎಸ್‌ನ ನೆರವು ಪಡೆದುಕೊಂಡಿದೆ. ಲೆಬಾನಾನಿನ ಹಿಝ್ಬುಲ್ಲಾ ಗುಂಪಿನ ಜೊತೆ ಯುದ್ಧ ನಡೆಯುವ ಸಾಧ್ಯತೆಗಳು ಇರುವ ಹಿನ್ನೆಲೆ, ಇಸ್ರೇಲ್ ತನ್ನ ಸೇನಾ ಗೋದಾಮನ್ನು ತುಂಬಿಸುತ್ತಿದೆ ಎಂದು ಯೆಡಿಯಟ್ ಅಹ್ರೊನೊತ್ ವರದಿ ಹೇಳಿದೆ.

ಅಂದರೆ, ಇಸ್ರೇಲ್‌ನ ರಕ್ತದಾಹ ಇನ್ನೂ ನೀಗಿಲ್ಲ. ಹಮಾಸ್‌ನಂತೆ ಹಿಝ್ಬುಲ್ಲಾದ ಹೆಸರೇಳಿಕೊಂಡು ಲೆಬಾನಾನಿನ ಮಣ್ಣಿನಲ್ಲಿ ರಕ್ತ ಹರಿಸುವ ಉತ್ಸಾಹದಲ್ಲಿದೆ ಎಂಬುವುದು ಇದರಿಂದ ಖಾತ್ರಿಯಾಗುತ್ತಿದೆ.

ಇಸ್ರೇಲ್-ಹಮಾಸ್ ಸಂಘರ್ಷ ಪ್ರಾರಂಭವಾದಾಗಿನಿಂದ ಯುಎಸ್ ಇಸ್ರೇಲ್ ಪರವಾಗಿ ನಿಂತಿದೆ. ಹಮಾಸ್‌ ಅನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿರುವ ಯುಎಸ್, ಅದನ್ನು ನಿರ್ಣಾಮ ಮಾಡಲು ಹೊರಟಿರುವ ಇಸ್ರೇಲ್‌ಗೆ ನಮ್ಮ ಬೆಂಬಲ ಎಂದು ಹೇಳಿಕೊಳ್ಳುತ್ತಿದೆ.

ವರದಿಗಳನ್ನು ಗಮನಿಸಿದರೆ, ಇದುವರೆಗೆ 8 ಸಾವಿರ ಹಮಾಸ್ ಸದಸ್ಯರನ್ನು ಹತ್ಯೆಗೈದಿದ್ದೇವೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಈ ನಡುವೆ ಇಸ್ರೇಲ್ ದಾಳಿಗೆ ಬಲಿಯಾದ ಗಾಝಾದ ಅಮಾಯಕ ನಾಗರಿಕರ ಸಂಖ್ಯೆ 20 ಸಾವಿರ ದಾಟಿದೆ.

ನಾವು ಹಮಾಸ್ ಭಯೋತ್ಪಾದಕರನ್ನು ನಿರ್ಣಾಮ ಮಾಡಲು ಇಸ್ರೇಲ್‌ಗೆ ಸಹಾಯ ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಯುಎಸ್‌, ಮೇಲೆ ತಿಳಿಸಿದ ಪುಟ್ಟ ಕಂದಮ್ಮಗಳೂ ಸೇರಿದಂತೆ 20 ಸಾವಿರಕ್ಕಿಂತಲೂ ಅಧಿಕ ಅಮಾಯಕ ನಾಗರಿಕರ ರಕ್ತವನ್ನು ತನ್ನ ಕೈಯಲ್ಲಿ ಮೆತ್ತಿಕೊಂಡಿದೆ.

ಶಾಂತಿಗೆ ದೊಡ್ಡಣ್ಣನ ಸ್ಥಾನದಲ್ಲಿ ನಿಂತು ಪಾಠ ಮಾಡುವ ಯುಎಸ್‌ನಲ್ಲಿ, ಜನಾಂಗೀಯ ದ್ವೇಷ ಹರಡುವ ಡೊನಾಲ್ಡ್ ಟ್ರಂಪ್‌ನ ಆಡಳಿತ ಹೋಗಿ ಜೋ ಬೈಡೆನ್‌ ಅಧ್ಯಕ್ಷಗಾದಿಗೆ ಏರಿದಾಗ ಇಡೀ ಮಾನವ ಜಗತ್ತು ಖುಷಿ ಪಟ್ಟಿತ್ತು. ಆರಂಭದಲ್ಲಿ ಮಾಧ್ಯಮಗಳ ಮುಂದೆ ಮುಸ್ಲಿಂ ಮಕ್ಕಳನ್ನು ಮುದ್ದಿಸಿ ಜೋ ಬೈಡೆನ್ ಭರವಸೆ ಮೂಡಿಸಿದ್ದರು. ಆದರೆ, ಗಾಝಾದಲ್ಲಿ ಸಾವಿರಾರು ಕಂದಮ್ಮಗಳು ಇದೇ ಬೈಡೆನ್ ಆಡಳಿತ ನೆರವಿನಿಂದ ಬಲಿಯಾಗಿವೆ, ಆಗುತ್ತಿವೆ ಎಂಬುವುದು ದುಖಃದ ಸಂಗತಿ.

ಇಸ್ರೇಲಿ ಮಿಲಿಟರಿ ಅಂಕಿ ಅಂಶಗಳ ಪ್ರಕಾರ, ಅಕ್ಟೋಬರ್ 7 ರಿಂದ ಗಾಝಾ ಪಟ್ಟಿಯ ನಡೆದ ಘರ್ಷಣೆಯಲ್ಲಿ ಕನಿಷ್ಠ 489 ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದಾರೆ. ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯಲ್ಲಿ 1,200 ಇಸ್ರೇಲಿಗಳು ಸಾವನ್ನಪ್ಪಿದ್ದಾರೆ.

ಇಸ್ರೇಲ್ ಗಾಝಾ ಮೇಲೆ ನಡೆಸುತ್ತಿರುವ ನಿರಂತರ ದಾಳಿಯಿಂದ ಇದುವರೆಗೆ 20,674 ಪ್ಯಾಲೆಸ್ತೀನಿಯರು ಬಲಿಯಾಗಿದ್ದಾರೆ ಮತ್ತು 54,536 ಮಂದಿ ಗಾಯಗೊಂಡಿದ್ದಾರೆ ಎಂದು ಗಾಝಾದ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

ಇಸ್ರೇಲ್‌ ದಾಳಿಯಿಂದ ಸುಂದರ ಗಾಝಾ ಪಾಳುಬಿದ್ದಿದೆ. ಇಲ್ಲಿನ ಕರಾವಳಿ ಪ್ರದೇಶದ ಅರ್ಧದಷ್ಟು ವಸತಿ ಕಟ್ಟಡಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ. ಆಹಾರ ಮತ್ತು ಶುದ್ಧ ನೀರಿನ ಕೊರತೆಯ ನಡುವೆ ಸುಮಾರು 2 ಮಿಲಿಯನ್ ಜನರು ಜನನಿಬಿಡ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ.

ಇದನ್ನೂ ಓದಿ : ಮೌಸಾವಿ ಹತ್ಯೆ: ಗಾಝಾದಂತೆ ಸಿರಿಯಾ ಮೇಲೂ ದಾಳಿಗೆ ಇಸ್ರೇಲ್‌ ಸಜ್ಜು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...