Homeಮುಖಪುಟ26 ಬಂದೇ ಬಿಟ್ಟಿತು: ದೆಹಲಿ ಗಡಿಯಲ್ಲಿ ಕಿಕ್ಕಿರಿಯುತ್ತಿರುವ ಪ್ರತಿಭಟನಾಕಾರರು

26 ಬಂದೇ ಬಿಟ್ಟಿತು: ದೆಹಲಿ ಗಡಿಯಲ್ಲಿ ಕಿಕ್ಕಿರಿಯುತ್ತಿರುವ ಪ್ರತಿಭಟನಾಕಾರರು

- Advertisement -
- Advertisement -

ದೆಹಲಿಯಲ್ಲಿ ಮತ್ತು ಅದರ ಗಡಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಭರ್ಜರಿಯಾಗಿ ಹಾಕಲಾಗುತ್ತಿರುವ ಈ ಸಂದರ್ಭದಲ್ಲೇ ದೆಹಲಿಯ ಗಡಿಗಳಲ್ಲಿ ರೈತ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಡಿವೈಡರ್ ಮೇಲೆ ಕುಳಿತ ರೈತಾಪಿಯೊಬ್ಬರ ಜೊತೆ ನಡೆದ ಮಾತುಕತೆಯ ಮೂಲಕ ಒಂದು ಅರ್ಥಪೂರ್ಣ ಪ್ರತ್ಯಕ್ಷ ವರದಿಯನ್ನು ಇಲ್ಲಿ ಕಟ್ಟಿ ಕೊಡಲಾಗಿದೆ.

ಘಾಜಿಪುರ ಗಡಿಯಲ್ಲಿ ಶನಿವಾರ ಒಂದು ಪ್ರತಿಭಟನೆಯ ಬಲೂನನ್ನು ಹಾರಿಸಲಾಯಿತು. ಆಕಾಶದತ್ತ ಹಾರಿದ ಈ ಬಲೂನನ್ನು ಪೂರ್ವ ಮತ್ತು ಪಶ್ಚಿಮದ ಕಡೆಯಿಂದ ಹಲವು ಕಿಲೋಮೀಟರ್‌ಗಳ ದೂರದಿಂದ ನೋಡಬಹುದಿತ್ತು. ಪಶ್ಚಿಮಕ್ಕೆ ದೇಶದ ರಾಜಧಾನಿ ದೆಹಲಿಯಿದೆ, ಪೂರ್ವದಲ್ಲಿ ಉತ್ತರ ಪ್ರದೇಶ ರಾಜ್ಯವಿದೆ.
ಬಲೂನ್ ಹಾರಿಸುವ ಈ ಸಂದರ್ಭದಲ್ಲಿ ರೈತ ಮತ್ತು ಕೃಷಿ ಕಾರ್ಮಿಕ ರಾಮ್ ಚರಣ್ ತ್ರಿಪಾಠಿಯವರು, ದಕ್ಷಿಣ ಏಷ್ಯಾದಲ್ಲೇ ದೊಡ್ಡದಾದ ಎಕ್ಸ್‌ಪ್ರೆಸ್‌ವೇನ ವಿಭಜಕದ (ಡಿವೈಡರ್) ಮೇಲೆ ಕುಳಿತಿದ್ದರು. ಅವರು ಶನಿವಾರ ಸಂಜೆ ದಿ ಟೆಲಿಗ್ರಾಫ್ ಆನ್‌ಲೈನ್ ಜೊತೆ ಮಾತಿಗೆ ಸಿಕ್ಕು, ನವೆಂಬರ್ 2, 2020 ರಂದು ತಮ್ಮ ಮಗನನ್ನು ಕಳೆದುಕೊಂಡ ವಿಷಯ ತಿಳಿಸಿದರು.

ರಾಮ್ ಚರಣ್ ತ್ರಿಪಾಠಿ ಅವರಿಗೆ 78 ವರ್ಷ. ಹವಾಮಾನ ವೈಪರೀತ್ಯಕ್ಕೆ ನಲುಗಿದ ಮುಖ, ಕೆಂಪು ಪೇಟ, ಚುರುಕಾದ ಬೂದು ಮೀಸೆಯ ಅಜ್ಜ ಹೇಳಿದರು: ನನಗೆ ಮೂವರು ಗಂಡು ಮಕ್ಕಳಿದ್ದರು. ಈಗ ನನಗೆ ಇಬ್ಬರು ಮಾತ್ರ ಉಳಿದರು. ನವೆಂಬರ್ 2 ರಂದು ಒಬ್ಬ ಮಗ ಸುಕೇಶ್ ನಿಧನರಾದರು. ನವೆಂಬರ್ 28 ರಿಂದ ನಾನು ಇಲ್ಲಿದ್ದೇನೆ. ನನ್ನಲ್ಲಿ ಒಂದೂವರೆ ಎಕರೆ ಭೂಮಿ ಇದೆ, ಅದನ್ನು ಮೂವರ ನಡುವೆ ಹಂಚಬೇಕಿತ್ತು……’
ಬೆಳಕು ಚೆಲ್ಲುವ ಒಂದು ಟ್ರಾಕ್ಟರ್ ಮತ್ತು ಧ್ವನಿವರ್ಧಕಗಳ ಮೂಲಕ ಪಂಜಾಬಿ ರ್‍ಯಾಪ್ ಹರಿದು ಬಂದ ಕಾರಣಕ್ಕೆ ಸಂಭಾಷಣೆಗೆ ಅಡಚಣೆಯಾಗಿತು. ಯುಪಿ ಕಡೆಯಿಂದ ಬಂದ ಈ ಟ್ರ್ಯಾಕ್ಟರ್ ಫ್ಲೈ ಓವರ್ ಏರುತ್ತಿತ್ತು. ಗಾಜಿಪುರದ ಪ್ರತಿಭಟನಾ ಸ್ಥಳದ ಮೂಲಕ ಟ್ರ್ಯಾಕ್ಟರ್ ಹಾದುಹೋಗಿತು. ಗಾಜಿಪುರ ಪ್ರತಿಭಟನಾ ಸ್ಥಳದಲ್ಲಿ, ರೈತರು ನೇತಾಜಿಯನ್ನು ಅವರ 125 ನೇ ಜನ್ಮ ದಿನಾಚರಣೆಯಂದು ನೆನಪಿಸಿಕೊಂಡರು.

ಇದನ್ನೂ ಓದಿ: ಬಲವಂತವಾಗಿ ರೈತ ಜಾಥಾ ತಡೆದ ಪೊಲೀಸರು: ರೈತ ಮುಖಂಡರ ಆಕ್ಷೇಪ

ನಾನು ಟ್ರಾಕ್ಟರ್ ಖರೀದಿಸಲು ಸಾಧ್ಯವಿಲ್ಲ. ಆದ್ದರಿಂದ, ನಾನು ಮೊದಲ ಬಾರಿಗೆ ಇಲ್ಲಿ ನಡಕೊಂಡೇ ಬಂದಿದ್ದೇನೆ ಎಂದು ರಾಮ್ ಚರಣ್ ಹೇಳುತ್ತಾರೆ. ನಾನು ಮೊದಲ ಬಾರಿಗೆ ಇಲ್ಲಿಗೆ ಬಂದಾಗಿನಿಂದ ಎರಡು ಬಾರಿ ಮನೆಗೆ ಮರಳಿದ್ದೇನೆ. ’ಖೇತಿ ಭಿ ತೋ ಕರ್ನಿ ಹೈನಾ?’ ಎನ್ನುವ ಅವರಿಗೆ ಈ ವಯಸ್ಸಿನಲ್ಲೂ ಕೃಷಿ ಮಾಡುವುದು ಹೆಮ್ಮೆಯ ವಿಷಯ.

ಬೆಳಗುತ್ತಿರುವ ದೀಪಗಳು ಮತ್ತು ಸ್ಟಿರಿಯೊಫೋನಿಕ್ ಸಂಗೀತವನ್ನು ಹೊಂದಿರುವ ಟ್ರ್ಯಾಕ್ಟರ್ ರಾಮ್ ಚರಣ್ ಬಳಿ ಇಲ್ಲ. ರಾಮ್ ಚರಣ್ ತನ್ನ ಜಮೀನಿನಿಂದ 20 ಕ್ವಿಂಟಾಲ್ ಗೋಧಿಯನ್ನು ಕೊಯ್ಲು ಮಾಡುತ್ತಾರೆ. ಕಳೆದ ವರ್ಷ, ಸರ್ಕಾರ ನಿಗದಿಪಡಿಸಿದ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಪ್ರತಿ ಕ್ವಿಂಟಲ್‌ಗೆ 1,868 ರೂ. ಅವರು ಉಳುಮೆಗೆ ಟ್ರ್ಯಾಕ್ಟರ್ ಅನ್ನು ಬಾಡಿಗೆಗೆ ಪಡೆಯಬೇಕು, ನೀರಾವರಿ ಮಾಡಲು ನೆರೆಯವರಿಂದ ಪಂಪ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. ಅವರ ಭೂಮಿ ಒಟ್ಟು 10 ಬಿಘಾ ಅಷ್ಟೇ. ಅದಕ್ಕೆ ಪಂಪ್ ಬಾಡಿಗೆಗೆಂದೇ 1,500 ರೂ. ಖರ್ಚು ಮಾಡಬೇಕು. ಒಂದು ಹಂಗಾಮಿನಲ್ಲಿ ಕನಿಷ್ಟ ನಾಲ್ಕು ಬಾರಿ ಇದನ್ನು ಮಾಡಬೇಕು. ಕಳೆದ ಕೆಲವು ವಾರಗಳಲ್ಲಿ ಮಳೆ ಬಂದಿದ್ದು ಅವರಿಗೆ ಒಂದು ವರವಾಗಿತ್ತು. ಅದು ರಾಮ್‌ಚರಣ್‌ಗೆ ಒಂದಿಷ್ಟು ಉಳಿತಾಯ ಮಾಡಿತು.

ಇದಲ್ಲದೆ, ಗೊಬ್ಬರ ಮತ್ತು ಕೀಟನಾಶಕಗಳಿಗೂ ಅವರು ಪಾವತಿಸಬೇಕಾಗುತ್ತದೆ. ಸದ್ಯ ಯುಪಿ-ದೆಹಲಿ ಗಡಿಯಲ್ಲಿರುವ ಈ ಹಿರಿಯ ರೈತ 20 ಕ್ವಿಂಟಾಲ್ ಧಾನ್ಯವನ್ನು (ಗೋಧಿ) ಕೊಯ್ಯಲು ಸುಮಾರು 31,000 ರೂ. ಖರ್ಚು ಮಾಡಿದರು. ಆದರೆ ಸರ್ಕಾರವು ಕ್ವಿಂಟಲ್‌ಗೆ 1,868 ರೂ. ಎಂಎಸ್‌ಪಿ ಖಾತ್ರಿಯನ್ನು ನೀಡಲೇ ಇಲ್ಲ, ಅದನ್ನು 125 ರೂ. ಕಡಿಮೆ ಮಾಡಿದ ಕಾರಣಕ್ಕೆ ರಾಮ್‌ಚರಣ್ ಅವರಿಗೆ ಸಿಕ್ಕಿದ್ದು ಕೇವಲ 35,000 ರೂ!

ಇದನ್ನೂ ಓದಿ: ಕೃಷಿ ಕಾಯ್ದೆ ಹಿಂತೆಗೆದುಕೊಳ್ಳಲು ಹೇಳಿ: ಮೋದಿ ತಾಯಿಗೆ ಪತ್ರ ಬರೆದ ಪಂಜಾಬ್ ರೈತ!

“ನನ್ನ ಜೀವನದಲ್ಲಿ, ನಾನು ಎಂದಿಗೂ ಸಾಲದಿಂದ ಮುಕ್ತನಾಗಿಲ್ಲ” ಎಂದು ಅವರು ಹೇಳುತ್ತಾರೆ.
ಬ್ರಾಹ್ಮಣರು ಸಹ ಹಸಿವಿನ ನೋವನ್ನು ಅನುಭವಿಸುತ್ತಾರೆ. ರಾಮ್ ಚರಣ್ ತ್ರಿಪಾಠಿ ಬ್ರಾಹ್ಮಣ, ಹಿಂದೂ ಜಾತಿ ಶ್ರೇಣಿಯಲ್ಲಿನ ಗಣ್ಯ ಗುಂಪಿನವರು. ಅಮ್ರೋಹಾ ಜಿಲ್ಲೆಯ ಗೋಸಾಯಿ ಬ್ಲಾಕ್‌ನಲ್ಲಿರುವ ಅವರ ಗ್ರಾಮ ಶೈಲೇಂದ್ರನಗರವು ಸಮೃದ್ಧ ಜಾಟ್ ಮತ್ತು ಬಡ ರೈತರ ಮಿಶ್ರಣವಾಗಿದೆ. ವರ್ಷದ ಉಳಿದ ಭಾಗವನ್ನು ಸರಿದೂಗಿಸಲು, ರಾಮ್‌ಚರಣ್ ದೊಡ್ಡ ರೈತರ ಜಮೀನುಗಳಲ್ಲಿ ಕೆಲಸ ಮಾಡುತ್ತಾರೆ ದಿನಕ್ಕೆ 300 ರೂ. ವೇತನ ಪಡೆಯುತ್ತಾರೆ.

“ಪೂರ್ವ ಯುಪಿ ಮತ್ತು ಬಿಹಾರದ ಜನರು ಇಲ್ಲಿಗೆ (ಪ್ರತಿಭಟನಾ ಸ್ಥಳಕ್ಕೆ) ದೊಡ್ಡ ಪ್ರಮಾಣದಲ್ಲಿ ಬರುತ್ತಿಲ್ಲ. ರೈಲು ಸಂಪರ್ಕ ಈಗ ಕಡಿಮೆಯಾಗಿದೆ, ಅದಕ್ಕೂ ಮುಖ್ಯವಾಗಿ ಕಾರ್ಮಿಕರಿಗೆ ದಿನಕ್ಕೆ ಕೇವಲ 100 ರೂ. ವಿರಳವಾಗಿ ಸಿಗುತ್ತಿದೆ ಎಂಬುದು ಇದಕ್ಕೆ ಕಾರಣ ಎಂದು ರಾಮ್ ಚರಣ್ ವಿವರಿಸುತ್ತಾರೆ.

ಅವರು ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇನ ವಿಭಜಕದ ಮೇಲೆ ಕುಳಿತಿದ್ದರು. ತಮ್ಮ ಬಲಕ್ಕೆ ಕೈ ಮಾಡಿ ತೋರಿಸಿದ ಅವರು, ವಹಾಂ ಜಾಯಿಯೆ, ಎಂದು ದೆಹಲಿಯತ್ತ ಕೈ ಮಾಡಿದರು. ದೇಖಿಯೆ ದಿಲ್ಲಿ ಸರ್ಕಾರ್ (ಕೇಂದ್ರ ಸರ್ಕಾರ)ಕ್ಯಾ ಕರ್ ರಹಿ ಹೈಂ (ಹೋಗಿ ದೆಹಲಿಯ ಸರ್ಕಾರ ಏನು ಮಾಡುತ್ತಿದೆ ಎಂದು ನೋಡಿ) ಎಂದು ರಾಮಚರಣ್ ಹೇಳಿದರು.

ಇದನ್ನೂ ಓದಿ: ಗೆದ್ದ ಅನ್ನದಾತನ ಹಠ: ಟ್ರಾಕ್ಟರ್‌ ರ್‍ಯಾಲಿಗೆ ದೆಹಲಿ ಪೊಲೀಸರ ಅನುಮತಿ

ದೆಹಲಿಯಲ್ಲಿ ಕುಳಿತ ಭಾರತ ಸರ್ಕಾರ ಮಾಡುತ್ತಿರುವುದೇನು?

ಜನವರಿ 23 ರ ಸಂಜೆ ನೇತಾಜಿ ಸುಭಾಷ್‌ಚಂದ್ರರನ್ನು ರೈತರು ಸ್ಮರಿಸುತ್ತಿದ್ದರು. ಉತ್ತರಪ್ರದೇಶವನ್ನು ರಾಷ್ಟ್ರ ರಾಜಧಾನಿಯೊಂದಿಗೆ ಸಂಪರ್ಕಿಸುವ ಫ್ಲೈ ಓವರ್‌ನಲ್ಲಿ ದೆಹಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕುತ್ತಿದ್ದರು. ದೆಹಲಿ ಪೊಲೀಸರು ಇದನ್ನು ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಮಾಡುತ್ತಿದ್ದಾರೆ, ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದನ್ನು ಮಾಡುತ್ತಿಲ್ಲ.

ಇಲ್ಲಿರುವ ಬ್ಯಾರಿಕೇಡ್ 1,400 ಪೇಸ್ ಅಗಲವಿದೆ. ಇದು ಪೂರ್ವದಿಂದ ಪಶ್ಚಿಮಕ್ಕೆ ಕಾಂಕ್ರೀಟ್ ಬ್ಲಾಕ್‌ಗಳಿಂದ ನಿರ್ಮಾಣ ಆಗಿದ್ದು, ದೆಹಲಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಈ “ಕಲ್ಲಿನ ಕಂಬಗಳ” ಫೋಟೊಗಳನ್ನು ತೆಗೆಯಲು ವರದಿಗಾರನಿಗೆ ಬಿಡಲಿಲ್ಲ. ಅವು ವಾಸ್ತವವಾಗಿ ಕಾಂಕ್ರೀಟ್ ಬ್ಲಾಕ್‌ಗಳೇ ಆಗಿವೆ. ಎಕ್ಸ್‌ಪ್ರೆಸ್‌ವೇ ಲೇನ್‌ಗಳನ್ನು ಸರ್ವಿಸ್ ರೋಡ್‌ಗಳಿಂದ ಬೇರ್ಪಡಿಸುವುದು ಅವರ ಉದ್ದೇಶ. ಪ್ರತಿಯೊಂದು ಕಾಂಕ್ರೀಟ್ ಬ್ಲಾಕ್ ನಾಲ್ಕು ಅಡಿ ಎತ್ತರ ಮತ್ತು ಐದು ಅಡಿ ಉದ್ದವಿದೆ.. ಅವುಗಳನ್ನು ರಸ್ತೆಗೆ ಅಡ್ಡಲಾಗಿ ಇಡಲಾಗುತ್ತಿದೆ.

ಇದನ್ನೂ ಓದಿ: ಗಡಿಯಲ್ಲಿ ಮೃತಪಟ್ಟರೆ ದೇಶಪ್ರೇಮಿ, ಹಕ್ಕುಗಳನ್ನು ಕೇಳಿದರೆ ಖಾಲಿಸ್ಥಾನಿ!

ದೇಶದ ರಾಜಧಾನಿ ತನ್ನ ರಕ್ಷಣೆ ಮಾಡಿಕೊಳ್ಳುತ್ತಿದೆ!

ಫ್ಲೈ ಓವರ್ ಅಡಿಯಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಮುಂತಾದವರಿದ್ದಾರೆ. ಭಾರತದ ಗಣರಾಜ್ಯೋತ್ಸವದ ಜನವರಿ 26 ರಂದು ಕಿಸಾನ್ ಟ್ರ್ಯಾಕ್ಟರ್ ರ್‍ಯಾಲಿಯನ್ನು ಹತ್ತಿಕ್ಕುವ ಎಲ್ಲ ಪ್ರಯತ್ನಗಳನ್ನೂ ಕೇಂದ್ರ ಸರ್ಕಾರ ಮಾಡುತ್ತಿದೆ.

ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ ಎಂದು ಬಿಕೆಯುನ ಪ್ರತ್ಯೇಕ ಬಣವನ್ನು ಮುನ್ನಡೆಸುವ ವಕೀಲ ಭಾನು ಪ್ರತಾಪ್ ಸಿಂಗ್ ಹೇಳುತ್ತಾರೆ. ’ಆತ ಸೂಟ್-ಬೂಟ್ ಮತ್ತು ಟೈ ಧರಿಸುತ್ತಾನೆ. ಕ್ಯಾಮೆರಾಗಳು ಮತ್ತು ಮೈಕ್ರೊಫೋನ್‌ಗಳ ಎದುರು ಮಿಂಚಲು ಆದ್ಯತೆ ನೀಡುತ್ತಾನೆ’ ಎಂದು ಅವರು ದೇಶದ ’ಗಣ್ಯ’ ವ್ಯಕ್ತಿಯನ್ನು ಟೀಕಿಸಿದರು.

ಫ್ಲೈಓವರ್ ಅಡಿಯಲ್ಲಿ, ಸರ್ವಿಸ್ ರಸ್ತೆಗಳಲ್ಲಿ ಪಕೋಡಗಳನ್ನು ತಯಾರಿಸಲಾಗುತ್ತಿದೆ. ’ಮೋದಿಜಿ, ಇಸಿ ಕೊ ಜಿಡಿಪಿ ಗ್ರೋಥ್ ಮಾಂತೆ ಹೈ’ (ಮೋದಿ ಇದನ್ನು ಆರ್ಥಿಕ ಬೆಳವಣಿಗೆ ಅಂದುಕೊಳ್ಳುತ್ತಾರೆ) ಎಂಬ ಭಿತ್ತಿಪತ್ರವೂ ಇಲ್ಲಿದೆ.  ಕಳೆದ ವಾರ ಮತ್ತು ಈಗಿನ ನಡುವಿನ ಅವಧಿಯಲ್ಲಿ, ಯುಪಿ-ದೆಹಲಿ ಗಡಿಯಲ್ಲಿರುವ ಗಾಜಿಪುರದಲ್ಲಿ ಪ್ರತಿಭಟನಾ ಶಿಬಿರದ ಗಾತ್ರವು ದ್ವಿಗುಣಗೊಂಡಿದೆ. ಅಂಗಡಿಯೊಂದರ ಮುಂಭಾಗದಲ್ಲಿ ಹಳದಿ ಟೆಂಟ್‌ನ ಅಂಚಿನಲ್ಲಿ ಮಹಿಳೆಯರು ಕ್ಯೂನಲ್ಲಿ ನಿಂತಿದ್ದಾರೆ, ಅಲ್ಲಿ 2 ರೂ. ದಾನ ಮಾಡಿ ಎಲ್ಲವನ್ನೂ ಪಡೆಯಿರಿ ಎಂಬ ಪೋಸ್ಟರ್ ಇದೆ, ಅದು ಸಾಧ್ಯವಾಗದವರು ತಮಗೆ ಬೇಕಾದುದನ್ನು ಉಚಿತವಾಗಿ ತೆಗೆದುಕೊಳ್ಳಬಹುದು ಎಂದೂ ಹೇಳಲಾಗಿದೆ.

ಮೂಲ: ಸುಜನ್ ದತ್ತಾ (ದಿ ಟೆಲಿಗ್ರಾಫ್ ಆನ್‌ಲೈನ್)
ಅನುವಾದ: ಮಲ್ಲನಗೌಡರ್‌ ಪಿ.ಕೆ.

ಇದನ್ನೂ ಓದಿ: ಪೊಲೀಸರು ರೈತರ ಟ್ರ್ಯಾಕ್ಟರ್‌ಗಳನ್ನು ತಡೆದರೆ ರಾಜ್ಯಾದ್ಯಂತ ರಸ್ತೆ ಬಂದ್: ಬಡಗಲಪುರ ನಾಗೇಂದ್ರ ಎಚ್ಚರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...