Homeಅಂತರಾಷ್ಟ್ರೀಯಉತ್ತರ ಸಿಕ್ಕಿಂನಲ್ಲಿ ಭಾರತ-ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿದೆ: ಸೇನಾ ಅಧಿಕಾರಿಗಳು

ಉತ್ತರ ಸಿಕ್ಕಿಂನಲ್ಲಿ ಭಾರತ-ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿದೆ: ಸೇನಾ ಅಧಿಕಾರಿಗಳು

- Advertisement -
- Advertisement -

ಕಳೆದ ವಾರ ಉತ್ತರ ಸಿಕ್ಕಿಂನಲ್ಲಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ಘರ್ಷಣೆ ಉಂಟಾಗಿದ್ದು, ಎರಡೂ ಕಡೆಯ ಸೈನಿಕರು ಗಾಯಗೊಂಡಿದ್ದಾರೆ ಎಂದು ಸೇನಾ ಅಧಿಕಾರಿಗಳನ್ನು ಉಲ್ಲೇಖಿಸಿ ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ. ಸಮುದ್ರ ಮಟ್ಟಕ್ಕಿಂತ 5,000 ಮೀಟರ್‌ ಎತ್ತರದಲ್ಲಿರುವ ’ನಕು ಲಾ’ದಲ್ಲಿ ಈ ಆಕ್ರಮಣಕಾರಿ ಮುಖಾಮುಖಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತ-ಚೀನಾ ಗಡಿ: ಅರುಣಾಚಲ ಪ್ರದೇಶದಲ್ಲಿ ಒಂದು ಪುಟ್ಟ ಗ್ರಾಮವನ್ನೇ ನಿರ್ಮಿಸಿದ ಚೀನಾ!

ಘರ್ಷಣೆಯ ಕುರಿತು ಸೇನೆ ಅಧೀಕೃತ ಹೇಳಿಕೆ ಶೀಘ್ರದಲ್ಲೇ ನೀಡುತ್ತದೆ ಎನ್ನಲಾಗಿದೆ. ಚೀನಾದ ಸೈನಿಕರು ಭಾರತದ ಭೂಪ್ರದೇಶಕ್ಕೆ ನುಸುಳಲು ಪ್ರಯತ್ನಿಸಿದಾಗ ಈ ಘರ್ಷಣೆ ನಡೆದಿದೆ ಎಂದು ಸೇನಾ ಮೂಲಗಳು ಹೇಳಿದೆ.

ಒಂದು ವರ್ಷದೊಳಗೆ ನಡೆಯುತ್ತಿರುವ ಎರಡನೇ ಘಟನೆಯಾಗಿದೆ ಇದು. ಕಳೆದ ವರ್ಷ ಮೇ ನಲ್ಲಿ ನಾಕು ಲಾದ ಭಾರತ-ಚೀನಾ ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರು ಮುಖಾಮುಖಿಯಾಗಿದ್ದರು. ಮೇ 9, 2020 ರಂದು ನಡೆದ ಈ ಘರ್ಷಣೆಯಲ್ಲಿ ನಾಲ್ಕು ಭಾರತೀಯ ಸೈನಿಕರು ಮತ್ತು ಏಳು ಚೀನೀ ಸೈನಿಕರು ಗಾಯಗೊಂಡಿದ್ದರು ಎಂದು ವರದಿಯಾಗಿತ್ತು.

ಇದನ್ನೂ ಓದಿ: ಚೀನಿಯರನ್ನು ಭಾರತದಿಂದ ಯಾವಾಗ ಹೊರಹಾಕುತ್ತೀರಿ? ಮೋದಿ ಭಾಷಣಕ್ಕೆ ರಾಹುಲ್ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...