“ಚೆಂಡಿನೊಂದಿಗೆ ಆಟವಾಡಲು ಮಿದುಳು ಅಥವಾ ಹೃದಯದ ಅವಶ್ಯಕತೆ ಹೆಚ್ಚು ಬೇಕಿಲ್ಲ” ಎಂದು ಕನ್ನಡ ಚಲನಚಿತ್ರ ನಟ ಚೇತನ್ ವಾಗ್ದಾಳಿ ನಡೆಸಿದ್ದಾರೆ. ರೈತರನ್ನು ಬೆಂಬಲಿಸಿದ ಅಂತರಾಷ್ಟ್ರೀಯ ಗಣ್ಯರ ವಿರುದ್ಧ ಭಾರತೀಯ ಕ್ರಿಕೆಟಿಗರು ನಡೆಸಿದ ಟ್ವೀಟ್ ದಾಳಿಯನ್ನು ಉಲ್ಲೇಖಿಸದೇ ಕ್ರಿಕರೆಟಿಗರನ್ನು ನಟ ಚೇತನ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಚೇತನ್, “ಅತ್ಯಂತ ಸ್ವಾರ್ಥಿಗಳು, ಬೌದ್ಧಿಕ ದುರ್ಬಲರು ಮತ್ತು ಹೇಡಿತನಕ್ಕೆ ಪ್ರಸಿದ್ದರಾದವರು ಕೇವಲ ಭಾರತೀಯ ಚಲನಚಿತ್ರ ನಟರು ಮಾತ್ರವಲ್ಲ. ಇನ್ನು ಮುಂದೆ ಆ ವಿಭಾಗಗಳಲ್ಲಿ ಭಾರತೀಯ ಕ್ರಿಕೆಟ್ ಆಟಗಾರರು ಮುನ್ನಡೆ ಸಾಧಿಸಲಿದ್ದಾರೆ. ಚೆಂಡಿನೊಂದಿಗೆ ಆಟವಾಡಲು ಮಿದುಳು ಅಥವಾ ಹೃದಯದ ಅವಶ್ಯಕತೆ ಹೆಚ್ಚು ಬೇಕಿಲ್ಲ ಎಂಬುದು ನಮಗೆ ಗೊತ್ತೆ ಇದೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ನಮ್ಮದು ರಾಷ್ಟ್ರೀಯ ಪಕ್ಷ, ಹಾಗಾಗಿ ಯಾವುದೇ ತೀರ್ಮಾನ ಕೈಗೊಳ್ಳುವ ಅಧಿಕಾರ ನನಗಿಲ್ಲ: ಸಿಎಂ ಯಡಿಯೂರಪ್ಪ!
Indian film actors are no more the most self-serving, intellectually vapid, spineless celebrity scourges on the block —> Indian cricket players now carry that mantle! 🙂
As we all know, it doesn’t require much brains or heart to play with balls#FarmersAreIndia #SpinelessCelebs
— Chetan Kumar / ಚೇತನ್ (@ChetanAhimsa) February 6, 2021
ಇದನ್ನೂ ಓದಿ: ‘ನನಗಿಂತಲೂ ನೊಂದವರಿದ್ದಾರೆ, ಜೈಲೊಳಗಿನ ರೈತರ ಕುರಿತು ವರದಿ ಮಾಡುವೆ’: ಮಂದೀಪ್ ಪುನಿಯಾ
ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಜಾಗತಿಕ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್, ಪಾಪ್ ಸಿಂಗರ್ ರಿಹಾನ್ನ, ಅಮೆರಿಕದ ವಕೀಲೆ ಮೀನಾ ಹ್ಯಾರಿಸ್ ಸೇರಿದಂತೆ ಹತ್ತಾರು ಜಾಗತಿಕ ಸೆಲೆಬ್ರೆಟಿಗಳು ಟ್ವೀಟ್ ಮಾಡಿದ್ದರು.
ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ದೆಹಲಿ ಪೊಲೀಸರು ಘರ್ಷಣೆ ನಡೆಸಿದ ನಂತರ ಅಲ್ಲಿ ಇಂಟರ್ನೆಟ್ ಕಡಿತಗೊಳಿಸಿರುವುದನ್ನು ಉಲ್ಲೇಖಿಸಿ ಸಿಎನ್‌ಎನ್ ಹೋರಾಟದ ಬಗ್ಗೆ ವರದಿ ಮಾಡಿತ್ತು. ಇದನ್ನು ತನ್ನ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದ ಪಾಪ್ ತಾರೆ ರಿಹಾನ್ನಾ “ರೈತ ಹೋರಾಟದ ಬಗ್ಗೆ ನಾವೇಕೆ ಮಾತನಾಡುತ್ತಿಲ್ಲ” ಎಂದು ಪ್ರಶ್ನಿಸಿದ್ದರು.
ರಿಹಾನ್ನಾ ಟ್ವೀಟ್ ಮಾಡಿದ ನಂತರ ಹೋರಾಟವು ಜಾಗತಿಕವಾಗಿ ಸದ್ದು ಮಾಡಿದ್ದು ಹಲವಾರು, ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ರೈತ ಹೋರಾಟದ ಪರವಾಗಿ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಆಂತರಿಕ ವ್ಯವಹಾರಗಳಿಗೆ ತಲೆ ಹಾಕಬೇಡಿ: ಭಾರತಕ್ಕೆ ಮೀನಾ ಹ್ಯಾರಿಸ್ ನೀಡಿದ ಪ್ರತ್ಯುತ್ತರ ಏನು ಗೊತ್ತಾ?
ಮೀನಾ ಹ್ಯಾರಿಸ್ ರೈತರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿ, “ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆದಿರುವುದು ಕಾಕತಾಳೀಯವಲ್ಲ, ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಜಾಪ್ರಭುತ್ವವು ಆಕ್ರಮಣಕ್ಕೊಳಗಾಗಿದೆ. ಭಾರತದ ಅಂತರ್ಜಾಲ ಸ್ಥಗಿತಗೊಳಿಸುವಿಕೆ ಮತ್ತು ರೈತ ಪ್ರತಿಭಟನಾಕಾರರ ವಿರುದ್ಧ ಅರೆಸೈನಿಕ ಪಡೆಗಳ ದೌರ್ಜನ್ಯದ ವಿರುದ್ಧ ನಾವೆಲ್ಲರೂ ಆಕ್ರೋಶಗೊಳ್ಳಬೇಕು”ಎಂದು ಅವರು ಟ್ವೀಟ್ ಮಾಡಿದ್ದರು.
ಇವರನ್ನು ಖಂಡಿಸಿ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಬಾಲಿವುಡ್ ನಟರು ಟ್ವೀಟ್ ಮಾಡಿದ್ದರು. ಇವರಿಬ್ಬರಿಗೂ ಪರೋಕ್ಷವಾಗಿ ಚೇತನ್ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ: ದೆಹಲಿ ಗಡಿಯಲ್ಲಿ 50,000 ಪೊಲೀಸರ ನಿಯೋಜನೆ – ಸಂಯಮ ಕಾಪಾಡಿ ಎಂದ ವಿಶ್ವಸಂಸ್ಥೆ


