ಭಾನುವಾರದಂದು ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ತಪೋವನ್ ಪ್ರದೇಶದಲ್ಲಿ ಹಿಮಪ್ರವಾಹ ಸಂಭವಿಸಲು ಕಾರಣ ಏನೆಂಬುವುದು ಇನ್ನೂ ತಿಳಿದು ಬಂದಿಲ್ಲ ಎಂದು ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ. ಅಲ್ಲಿನ ಹಿಮ ನದಿಯಾದ ’ನಂದಾ ದೇವಿ’ಯಲ್ಲಿ ಹಿಮ ಪ್ರವಾಹ ಉಂಟಾಗಿ 153 ಜನರು ಕಾಣೆಯಾಗಿದ್ದರು. ಈಗಾಗಲೆ ಹತ್ತು ಮಂದಿಯ ಮೃತದೇಹ ಪತ್ತೆಯಾಗಿದ್ದು, 12 ಜನರನ್ನು ರಕ್ಷಣೆ ಮಾಡಲಾಗಿದೆ. ಘಟನೆಯಲ್ಲಿ 100 ಕ್ಕೂ ಅಧಿಕ ಜನರು ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಮುಖ್ಯಮಂತ್ರಿ, “ಹಿಮನದಿ ಸ್ಫೋಟಕ್ಕೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪ್ರಸ್ತುತ ರಕ್ಷಣಾ ಕಾರ್ಯಾಚರಣೆ, ಜನರ ಜೀವ ಉಳಿಸುವ ಕಾರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡ: ಹಿಮನದಿಯಲ್ಲಿ ಭಾರಿ ಹಿಮ ಪ್ರವಾಹ, 150 ಜನರು ನಾಪತ್ತೆ
ನಾಪತ್ತೆಯಾಗಿರವವರ ಶೋಧ ನಡೆಸುವುಕ್ಕೆ ಶ್ವಾನ ದಳವನ್ನು ನಿಯೋಜಿಸಲಾಗಿದೆ. ಚಮೋಲಿಯ ತಪೋವನ ಅಣೆಕಟ್ಟೆ ಬಳಿ ಶ್ವಾನ ದಳದ ಸಹಾಯದೊಂದಿಗೆ ಶೋಧ ಕಾರ್ಯ ನಡೆಯುತ್ತಿದೆ. ಅಲ್ಲದೆ ಇಂಡೊ–ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿಗಳು ಕೂಡಾ ಶೋಧಕಾರ್ಯದಲ್ಲಿ ತೊಡಗಿದ್ದಾರೆ.
Uttarakhand: Canine squad also deployed to carry out the search operation near Tapovan dam in Chamoli. A flash flood hit the area yesterday.
(Pic Source: NDRF Director-General SN Pradhan) pic.twitter.com/gwIS8w8dVN
— ANI (@ANI) February 8, 2021
ಈ ಬಗ್ಗೆ ಮಾತನಾಡಿದ ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್, “ಭಯವನ್ನು ಹರಡುವ ಅಗತ್ಯವಿಲ್ಲ. ನಿನ್ನೆ ಹಿಮನದಿ ಸ್ಪೋಟಗೊಂಡಿದ್ದು, ಇದರಿಂದಾಗಿ ತಪೋವನ್‌ನ ರೈನಿ ವಿದ್ಯುತ್ ಯೋಜನೆಗೆ ಹಾನಿಯಾಗಿದೆ.ಒಟ್ಟು 153 ಜನರು ಕಾಣೆಯಾಗಿದ್ದಾರೆ” ಹೇಳಿದ್ದಾರೆ.
ಇದನ್ನೂ ಓದಿ: ದಿಲ್ಜಿತ್ ತಾನು ಖಲಿಸ್ತಾನಿ ಅಲ್ಲ ಎಂದು ಸಾಬೀತುಪಡಿಸಲಿ: ಕಂಗನಾ ರಾಣಾವತ್
No need to spread panic. The glacier burst yesterday, boulders and debris followed which washed away the Raini power project causing a massive impact on Tapovan. All of this happened yesterday. 32 people from first and 121 people are missing from the 2nd project: Uttarakhand DGP pic.twitter.com/Q2b7uYZdlD
— ANI (@ANI) February 8, 2021
“ಈ ಪೈಕಿ 10 ಮೃತ ಶರೀರವನ್ನು ಪತ್ತೆ ಮಾಡಲಾಗಿದೆ. ತಪೋವನ್‌ನ ಸಣ್ಣ ಸುರಂಗದಿಂದ ನಿನ್ನೆ 12 ಜನರನ್ನು ರಕ್ಷಿಸಲಾಗಿದೆ. ದೊಡ್ಡ ಸುರಂಗವನ್ನು ತೆರೆಯುವ ಪ್ರಯತ್ನಗಳು ನಡೆಯುತ್ತಿವೆ. ಅದರ ಮೇಲಿರುವ ಬಂಡೆಗಳನ್ನು ತೆಗೆದುಹಾಕಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
Brave #Himveers of ITBP rescuing trapped persons from the tunnel near Tapovan, #Dhauliganga, #Uttarakhand this evening after 4 hrs of efforts. Total 12 persons were rescued from the tunnel out of which 3 were found unconscious. After first aid, carried on stretchers to road head. pic.twitter.com/iHsrFXjhDd
— ITBP (@ITBP_official) February 7, 2021
ಇದನ್ನೂ ಓದಿ: ದಾದ್ರಿ ಮಹಾಪಂಚಾಯತ್‌ನಲ್ಲಿ 50 ಸಾವಿರ ರೈತರು ಭಾಗಿ: 5 ನಿರ್ಣಯಗಳ ಅಂಗೀಕಾರ


