Homeಮುಖಪುಟದಾದ್ರಿ ಮಹಾಪಂಚಾಯತ್‌ನಲ್ಲಿ 50 ಸಾವಿರ ರೈತರು ಭಾಗಿ: 5 ನಿರ್ಣಯಗಳ ಅಂಗೀಕಾರ

ದಾದ್ರಿ ಮಹಾಪಂಚಾಯತ್‌ನಲ್ಲಿ 50 ಸಾವಿರ ರೈತರು ಭಾಗಿ: 5 ನಿರ್ಣಯಗಳ ಅಂಗೀಕಾರ

ಸಂಯುಕ್ತ ಕಿಸಾನ್ ಮೋರ್ಚಾದ ಡಾ.ದರ್ಶನ್ ಪಾಲ್, ಬಿಕೆಯುನ ರಾಕೇಶ್ ಟಿಕಾಯತ್, ಬಲ್ವೀರ್ ಸಿಂಗ್ ರಾಜೇವಾಲ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

- Advertisement -
- Advertisement -

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಡುತ್ತಿರುವ ರೈತರನ್ನು ಬೆಂಬಲಿಸಿ ಮಹಾಪಂಚಾಯತ್‌ಗಳು ಹೆಚ್ಚಾಗುತ್ತಲೆ ಇವೆ. ಇಂದು ಹರಿಯಾಣದಲ್ಲಿ ಬಿವಾನಿ ದಾದ್ರಿ ಟೋಲ್ ಪ್ಲಾಜಾದ ಬಳಿ ನಡೆದ ಪಂಚಾಯತ್‌ನಲ್ಲಿ 50 ಸಾವಿರ ರೈತರು ಭಾಗಿಯಾಗಿ 5 ನಿರ್ಣಯಗಳನ್ನು ಅಂಗೀಕರಿಸಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾದ ಡಾ.ದರ್ಶನ್ ಪಾಲ್, ಬಿಕೆಯುನ ರಾಕೇಶ್ ಟಿಕಾಯತ್, ಬಲ್ವೀರ್ ಸಿಂಗ್ ರಾಜೇವಾಲ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದಾದ್ರಿ ಮಹಾಪಂಚಾಯತ್ 5 ನಿರ್ಣಯಗಳನ್ನು ಅಂಗೀಕರಿಸಿದ್ದು ಅವುಗಳು ಈ ಕೆಳಗಿನಂತಿವೆ.
1. ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿ.
2. ಎಂಎಸ್‌ಪಿ ಖಾತ್ರಿಗಾಗಿ ಕಾಯ್ದೆ ತನ್ನಿ.
3. ರೈತರ ವಿರುದ್ಧ ಹಾಕಲಾಗಿರುವ ಎಫ್‌ಐಆರ್ ರದ್ದುಮಾಡಿ ಮತ್ತು ಬಂಧಿಸಿರುವ ರೈತರನ್ನು ಬಿಡುಗಡೆ ಮಾಡಿ.
4. ಪೊಲೀಸರು ವಶಪಡಿಸಿಕೊಂಡ ವಾಹನಗಳನ್ನು ರೈತರಿಗೆ ಹಸ್ತಾಂತರಿಸಬೇಕು.
5. ಎನ್ಎಚ್ 122 ಬಿ ಗಾಗಿ ಭೂಮಿಯನ್ನು ಕಳೆದುಕೊಂಡ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕು.

ರೈತ ಮುಖಂಟ ರಾಕೇಶ್ ಟಿಕಾಯತ್ ಮಾತನಾಡಿ “ಕೇಂದ್ರ ಸರ್ಕಾರ ಈ ಮೂರು ಕರಾಳ ಕಾನೂನುಗಳನ್ನು ವಾಪಸ್ ಪಡೆಯಲೇಬೇಕು. ಇದಕ್ಕಾಗಿ ಅಕ್ಟೋಬರ್ ವರೆಗೂ ಸಮಯ ನೀಡುತ್ತೇವೆ. ಅಕ್ಟೋಬರ್ ನಲ್ಲಿ ಮತ್ತೊಮ್ಮೆ ಟ್ರ್ಯಾಕ್ಟರ್ ರ್ಯಾಲಿ ಮಾಡಬೇಕಾಗುತ್ತದೆ. 40 ಲಕ್ಷ ಟ್ರ್ಯಾಕ್ಟರ್‌ಗಳು ಪಾಲ್ಗೊಳ್ಳುತ್ತವೆ” ಎಂದು ಎಚ್ಚರಿಕೆ ನೀಡಿದ್ದಾರೆ.


ಇದನ್ನೂ ಓದಿ; ಟ್ರಾಕ್ಟರ್‌ ಕ್ರಾಂತಿ’ಯಲ್ಲಿ ಭಾಗವಹಿಸಿ: ದೇಶಕ್ಕೆ ರೈತ ಮುಖಂಡ ಟಿಕಾಯತ್‌ ಕರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read