Homeಎಕಾನಮಿಮುಂದಿನ ಮಾರ್ಚ್‌ ವೇಳೆಗೆ ಏರ್ ಇಂಡಿಯಾ, ಭಾರತ್ ಪೆಟ್ರೋಲಿಯಂ ಮಾರಾಟ: ನಿರ್ಮಲಾ ಸೀತಾರಾಮನ್

ಮುಂದಿನ ಮಾರ್ಚ್‌ ವೇಳೆಗೆ ಏರ್ ಇಂಡಿಯಾ, ಭಾರತ್ ಪೆಟ್ರೋಲಿಯಂ ಮಾರಾಟ: ನಿರ್ಮಲಾ ಸೀತಾರಾಮನ್

- Advertisement -
- Advertisement -

ಸರ್ಕಾರಿ ಸ್ವಾಮ್ಯದ ಎರಡು ಕಂಪನಿಗಳಾದ ಏರ್ ಇಂಡಿಯಾ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಗಳನ್ನು ಮುಂದಿನ ಮಾರ್ಚ್ ವೇಳೆಗೆ ಸರ್ಕಾರವು ಮಾರಾಟವಾಗುವ ನಿರೀಕ್ಷೆಯಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ತೀವ್ರ ಹಣಕಾಸು ಕುಸಿತದಿಂದಾಗಿರುವ ಸುಮಾರು ರೂ. 58,000 ಕೋಟಿ ಸಾಲದ ಹೊರೆಯಿಂದಾಗಿ ಈ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದಿದ್ದಾರೆ.

“ನಾವು ಈ ವರ್ಷ ಅವುಗಳನ್ನು ಪೂರ್ಣಗೊಳಿಸಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದೇವು. ಆದರೆ ವಾಸ್ತವ ಸ್ಥಿತಿಗತಿಗಳು ಬೇರೆ ಇವೆ” ಎಂದು ಅವರು ಹೇಳಿದ್ದಾರೆ.

ಏರ್ ಇಂಡಿಯಾ ಅಧ್ಯಕ್ಷ ಅಶ್ವನಿ ಲೋಹಾನಿ, ಏರ್ ಇಂಡಿಯಾ ಉದ್ಯೋಗಿಗಳಿಗೆ ಬಹಿರಂಗ ಪತ್ರದಲ್ಲಿ, ಈ ವಿತರಣೆಯು ವಿಮಾನಯಾನ ಸಂಸ್ಥೆಯ ಸುಸ್ಥಿರತೆಗೆ ಅನುವು ಮಾಡಿಕೊಡುತ್ತದೆ ಎಂದು ಈ ಮೊದಲೇ ತಿಳಿಸಿದ್ದಾರೆ.

ಏರ್ ಇಂಡಿಯಾಕ್ಕೆ ಸಂಬಂಧಿಸಿದಂತೆ, ಹೂಡಿಕೆದಾರರಲ್ಲಿ “ಹೆಚ್ಚಿನ ಆಸಕ್ತಿ” ಇದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.

ಕಳೆದ ವರ್ಷ, ಏರ್ ಇಂಡಿಯಾದ ಏರ್‌ಲೈನ್ಸ್‌ನಲ್ಲಿ ಶೇ 76 ರಷ್ಟು ಪಾಲನ್ನು ಮತ್ತು ನಿರ್ವಹಣಾ ನಿಯಂತ್ರಣವನ್ನು ಮಾರಲು ಹೊರಟಿತ್ತು. ಆದರೆ ಒಬ್ಬರೂ ಸಹ ಬಿಡ್‌ ಮಾಡಲಿಲ್ಲ. ಏಕೆಂದರೆ ಉಳಿದ 24 ಶೇಕಡಾ ಪಾಲನ್ನು ಹೊಂದಿರುವ ಸರ್ಕಾರವು ಹೂಡಿಕೆದಾರರ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಬಹುದೆಂಬ ಭಯದಿಂದಾಗಿ ಕಳೆದ ವರ್ಷ ಏರ್ ಇಂಡಿಯಾ ಷೇರು ಮಾರಾಟಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸೆಂಟರ್ ಫಾರ್ ಏಷ್ಯಾ ಪೆಸಿಫಿಕ್ ಏವಿಯೇಷನ್ ​​ವರದಿಯಲ್ಲಿ ತಿಳಿಸಿದೆ. ಈಗ ಆ ಅಡಚಣೆಯನ್ನು ತೆಗೆದುಹಾಕಲಾಗಿದ್ದು ಸರ್ಕಾರವು ಪ್ರಸ್ತುತ ಏರ್ ಇಂಡಿಯಾದ ಶೇ 100 ರಷ್ಟು ಷೇರುಗಳನ್ನು ಮಾರಲು ಹೊರಟಿದೆ.

ಏರ್ ಇಂಡಿಯಾ ಕಳೆದ ಹಣಕಾಸು ವರ್ಷದಲ್ಲಿ ಸುಮಾರು 4,600 ಕೋಟಿ ರೂನಷ್ಟು ನಷ್ಟ ಹೊಂದಿತ್ತು. ಮುಖ್ಯವಾಗಿ ಹೆಚ್ಚಿದ ತೈಲ ಬೆಲೆಗಳು ಮತ್ತು ವಿದೇಶೀ ವಿನಿಮಯ ನಷ್ಟ ಇದಕ್ಕೆ ಕಾರಣವಾಗಿತ್ತು. ಆದರೆ 2019-20ರಲ್ಲಿ ಕಾರ್ಯಾಚರಣೆಯಲ್ಲಿ ಏರ್‌ ಇಂಡಿಯಾಗೆ ಲಾಭದಾಯಕವಾಗಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್) ವಿಷಯದಲ್ಲಿ, ಅಕ್ಟೋಬರ್‌ನಲ್ಲಿ ಕಂಪನಿಯ ಒಟ್ಟು 53.29 ಶೇಕಡಾ ಪಾಲನ್ನು ಮಾರಾಟ ಮಾಡಲು ಕಾರ್ಯದರ್ಶಿಗಳ ಗುಂಪು ಒಪ್ಪಿಕೊಂಡಿತ್ತು.

ಭಾರತ್ ಪೆಟ್ರೋಲಿಯಂ ಮಾರುಕಟ್ಟೆ ಮೌಲ್ಯವು ಸುಮಾರು ರೂ. 1.02 ಲಕ್ಷ ಕೋಟಿ ರೂಗಳಷ್ಟಿದೆ. ಅದರ 53 ಪ್ರತಿಶತದಷ್ಟು ಪಾಲನ್ನು ಮಾರಾಟ ಮಾಡುವುದೆಂದರೆ, ಎಲ್ಲಾ ಪ್ರವೇಶ ಪ್ರೀಮಿಯಂ ಸೇರಿದಂತೆ 65,000 ಕೋಟಿ ರೂ ಸರ್ಕಾರದ ಬೊಕ್ಕಸಕ್ಕೆ ಸೇರಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...