Homeಮುಖಪುಟದಿಶಾ ರವಿ ಪ್ರಕರಣ: ದೆಹಲಿ ಪೊಲೀಸರಿಗೆ, ಮಾಧ್ಯಮಗಳಿಗೆ ಹೈಕೋರ್ಟ್ ಎಚ್ಚರಿಕೆ

ದಿಶಾ ರವಿ ಪ್ರಕರಣ: ದೆಹಲಿ ಪೊಲೀಸರಿಗೆ, ಮಾಧ್ಯಮಗಳಿಗೆ ಹೈಕೋರ್ಟ್ ಎಚ್ಚರಿಕೆ

ಪ್ರಕರಣದ ತನಿಖೆಗೆ ಅಡ್ಡಿಯಾಗದಿರುವಂತೆ ಸರಿಯಾದ ಸಂಪಾದಕೀಯ ನಿಯಂತ್ರಣವನ್ನು ಸುದ್ದಿ ಮಾಧ್ಯಮ ಹೊಂದಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸುದ್ದಿ ಚಾನೆಲ್‌ಗಳಿಗೆ ಹೈಕೋರ್ಟ್ ತಿಳಿಸಿದೆ.

- Advertisement -
- Advertisement -

ಪರಿಸರ ಕಾರ್ಯಕರ್ತೆ ದಿಶಾ ರವಿ ಅವರ ವಾಟ್ಸಾಪ್ ಸಂಭಾಷಣೆಯ ವಿಷಯಗಳನ್ನು ಪ್ರಕಟಿಸುವುದನ್ನು ನಿಷೇಧಿಸಬೇಕೆಂದು ಕೋರಿದ್ದ ಅರ್ಜಿ ವಿಚಾರಣೆ ನಡೆಸುತ್ತಿರುವ ದೆಹಲಿ ಹೈಕೋರ್ಟ್ ಈ ಕುರಿತು ದೆಹಲಿ ಪೊಲೀಸರಿಗೆ, ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದೆ.

ನಿನ್ನೆ (ಫೆ.18) ರಂದು ಖಾಸಗಿ ಸುದ್ದಿ ಚಾನೆಲ್‌ಗಳಾದ ನ್ಯೂಸ್ 18, ಇಂಡಿಯಾ ಟುಡೆ ಮತ್ತು ಟೈಮ್ಸ್ ನೌ ಚಾನೆಲ್‌ಗಳಿಗೆ  ನೋಟಿಸ್ ನೀಡಲಾಗಿತ್ತು. ಈ ಚಾನೆಲ್‌ಗಳು ಮೂರನೇ ವ್ಯಕ್ತಿಯೊಂದಿಗೆ ತನ್ನ ಖಾಸಗಿ ಚಾಟ್‌ಗಳ ವಿಷಯವನ್ನು ಪ್ರಕಟಿಸಿದ್ದಕ್ಕಾಗಿ ಕೇಬಲ್ ಟಿವಿ ನೆಟ್‌ವರ್ಕ್ ನಿಯಮಗಳನ್ನು ಉಲ್ಲಂಘಿಸಿವೆ ಎಂದು ದಿಶಾ ಆರೋಪಿಸಿದ್ದಾರೆ.

ಇಂದು ಕೂಡ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್, ವರದಿಗಾರರು ಕೇಳುವ ಯಾವುದೇ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂಬ ತಮ್ಮ ನಿಲುವಿಗೆ ಅಂಟಿಕೊಳ್ಳಬೇಕೆಂದು ದೆಹಲಿ ಪೊಲೀಸರಿಗೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ದಿಶಾಳ ವಾಟ್ಸಾಪ್ ಚಾಟ್ಸ್‌, ತನಿಖಾ ಮಾಹಿತಿ ಸೋರಿಕೆ: ನ್ಯೂಸ್‌ ಚಾನೆಲ್‌ಗಳಿಗೆ ನೋಟಿಸ್!

“ಪತ್ರಕರ್ತರಿಗೆ ತಮ್ಮ ಮೂಲವನ್ನು ಬಹಿರಂಗಪಡಿಸಲು ಹೇಳಲಾಗುವುದಿಲ್ಲ, ಅದರೂ ಸುದ್ದಿ ಅಧಿಕೃತವಾಗಿರಬೇಕು. ದೆಹಲಿ ಪೊಲೀಸರು ಕೂಡ ಯಾವುದೇ ಮಾಹಿತಿ ಸೋರಿಕೆ ಮಾಡಿಲ್ಲ ಎಂದು ಹೇಳುತ್ತಾರೆ. ಆದರೆ ಮಾಧ್ಯಮಗಳು ಇದಕ್ಕೆ ವಿರುದ್ಧವಾಗಿ ಹೇಳಿಕೊಳ್ಳುತ್ತಿವೆ” ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಯಾವುದೇ ಮಾಹಿತಿಯನ್ನು ಪ್ರಸಾರ ಮಾಡುವಾಗ, ಪ್ರಕರಣದ ತನಿಖೆಗೆ ಅಡ್ಡಿಯಾಗದಿರುವಂತೆ ಸರಿಯಾದ ಸಂಪಾದಕೀಯ ನಿಯಂತ್ರಣವನ್ನು ಸುದ್ದಿ ಮಾಧ್ಯಮ ಹೊಂದಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸುದ್ದಿ ಚಾನೆಲ್‌ಗಳಿಗೆ ಹೈಕೋರ್ಟ್ ತಿಳಿಸಿದೆ.

ದಿಶಾ ಅವರನ್ನು ಟೂಲ್‌ಕಿಟ್ ಪ್ರಕರಣದಲ್ಲಿ ಭಾನುವಾರ (ಫೆ.14) ದಂದು ಅವರ ಬೆಂಗಳೂರು ಮನೆಯಿಂದ ಬಂಧಿಸಲಾಗಿದ್ದು, ಅಂದಿನಿಂದ ದೆಹಲಿ ಪೊಲೀಸರ ವಶದಲ್ಲಿದ್ದಾರೆ.


ಇದನ್ನೂ ಓದಿ: ಪಶ್ಚಿಮ ಬಂಗಾಳ: ’ಸಚಿವರ ಮೇಲಿನ ಬಾಂಬ್ ದಾಳಿ ಪಿತೂರಿಯ ಭಾಗ’ ಎಂದ ಮಮತಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚರ್ಚ್‌ಗಳಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನ: ಕೋಮು ಅಜೆಂಡಾ ಬಗ್ಗೆ ಎಚ್ಚರಿಸಿದ ತಲಶ್ಶೇರಿ ಬಿಷಪ್

0
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇರಳದ ಕೆಲ ಚರ್ಚ್‌ಗಳಲ್ಲಿ ವಿವಾದಿತ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನ ಮಾಡಲಾಗಿತ್ತು. ಮುಸ್ಲಿಮರ ಬಗ್ಗೆ ಸುಳ್ಳು ಪ್ರತಿಪಾದಿತ ಈ ಸಿನಿಮಾ ಪ್ರದರ್ಶನದ ಮೂಲಕ ಮುಸ್ಲಿಮರ ಬಗ್ಗೆ ಕ್ರಿಶ್ಚಿಯನ್ನರಲ್ಲಿ...