| ನಾನು ಗೌರಿ ಡೆಸ್ಕ್ |
ಅಮೆರಿಕದ ನ್ಯೂಯಾರ್ಕಿನಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಬಿಜೆಪಿಯ ವಿರುದ್ಧ ಅಲ್ಲಿನ ಭಾರತೀಯರು ಪ್ರತಿಭಟನೆ ನಡೆಸಿದ್ದಾರೆ.
ನ್ಯೂಯಾರ್ಕಿನ ರಾಯಭಾರಿ ಕಚೇರಿ ಎದುರು ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಾರತೀಯರು ಮೋದಿ, ಶಾ ಮತ್ತು ಬಿಜೆಪಿಯ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದಾರೆ.

ದೇಶದ ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳಿಗೆ ಬಿಜೆಪಿಯೇ ಕಾರಣ ಎಂದು ದೂರಿದ ಪ್ರತಿಭಟನೆಕಾರರು, ‘ಹಿಂಸಾಚಾರ ನಿಲ್ಲಲಿ’, ‘ಮೋದಿ ಸೆ ಅಜಾದಿ’, ‘ಶಾ ಸೆ ಅಜಾದಿ’ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಪ್ರತಿಭಟನೆಯಲ್ಲಿ ಗೌರಿ ಲಂಕೇಶರ ಹತ್ಯೆಯ ಕುರಿತೂ ಪ್ರಸ್ತಾಪಿಸಲಾಯಿತು.
‘ಫೋರಂ ಅಗೇನಸ್ಟ್ ಹೇಟ್’, ಸೌತ್‌ಏಷ್ಯಾ ಸಾಲಿಡಾರಿಟಿ ಗುಂಪು ಮುಂತಾದ ಭಾರತೀಯರ ಸಂಘಟನೆಗಳು ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದವು. ವಿದೇಶಗಳಲ್ಲಿ ಬಿಜೆಪಿ ಪರ ಹಲವು ಭಾರತೀಯರು ರ‍್ಯಾಲಿ ಮಾಡಿದಾಗ ಅದನ್ನು ಸಾಕಷ್ಟು ಪ್ರಚಾರಗೊಳಿಸಲಾಗುತ್ತಿದೆ. ಆದರೆ, ಅಲ್ಲಿ ಬಿಜೆಪಿಯ ಸಿದ್ದಾಂತ ವಿರೋಧಿಸುವ ಭಾರತೀಯರು ಪ್ರತಿಭಟಿಸಿದಾಗ ಅದನ್ನು ಇಲ್ಲಿಯ ಮಾಧ್ಯಮಗಳು ಪ್ರಚಾರ ಮಾಡುವುದಿಲ್ಲ.


