Homeಮುಖಪುಟನರೇಂದ್ರ ಮೋದಿ ಒಬ್ಬ ಸಾಮಾನ್ಯ ಪ್ರಜೆಯಾಗಿದ್ದಿದ್ದರೆ ಜೈಲಿನಲ್ಲಿರುತ್ತಿದ್ದ ಅಲ್ಲವೇ?

ನರೇಂದ್ರ ಮೋದಿ ಒಬ್ಬ ಸಾಮಾನ್ಯ ಪ್ರಜೆಯಾಗಿದ್ದಿದ್ದರೆ ಜೈಲಿನಲ್ಲಿರುತ್ತಿದ್ದ ಅಲ್ಲವೇ?

- Advertisement -
- Advertisement -

|ಎ.ಕೆ.ಸುಬ್ಬಯ್ಯ, ಹಿರಿಯ ಚಿಂತಕರು|

ನಾನು ಇಸಿಜಿ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಬಂದಿದ್ದೆ.ಇಸಿಜಿ ಮಾಡುವ ಟೆಕ್ನಿಷಿಯನ್ ಒಬ್ಬರು ಲೇಡಿ, ಇನ್ನೊಬ್ಬ ಟೆಕ್ನಿಷಿಯನ್ ಹುಡುಗ.ಆ ಹುಡುಗ ಜೆಡಿಎಸ್‌ನವನು. ಈ ಲೇಡಿ ಬಿಜೆಪಿಯವರು. ಅವನು ಬಿಜೆಪಿಗೆ ಓಟ್ ಮಾಡಲ್ಲ ಅನ್ನೊದು ಗೊತ್ತಿತ್ತು.ಅವನನ್ನ ಕೆಣಕುತ್ತಿದ್ದಳು. ಏನು ನೀವು ಸದಾನಂದ ಗೌಡನಿಗೆ ಓಟು ಕೊಡೋದಿಲ್ಲವಾ… ಇಲ್ಲ ಹಂಗೇನಿಲ್ಲ. ಯಾರಿಗೇನು ಓಟು ಕೊಡಬೇಕು ಅಂತೇನಿಲ್ಲ ಎಂದು ಗೌರವದಿಂದಲೇ ಆ ದಿನ ಯಾರ್ಯಾರು ಎಂದು ಮುಖ ನೋಡಿ ಓಟು ಮಾಡುವುದು ಎಂದ. ನಾನಂದೆ ಸದಾನಂದರ ಮುಖ ನೋಡಿದರೆ ನಿಮಗೆ ಕಾಣೋದು ಬರೀ ಹಲ್ಲು ಮಾತ್ರ.. ಓಟು ಯಾರಿಗೆ ಕೊಡ್ತೀರಿ.. ಹಲ್ಲಿಗೆ ಕೊಟ್ಟು ಬಿಡ್ತೀರಾ ಅಂದಾಗ ಸ್ವಲ್ಪ ಸ್ತಭ್ದರಾದರು. ನಂತರ ಆ ಲೇಡಿ, ಸದಾನಂದ ಗೌಡರಲ್ಲ, ನರೇಂದ್ರ ಮೋದಿಯವರನ್ನು ನೋಡಿ ಓಟು ಕೊಡಬೇಕಿದೆ ಎಂದರು.ನಾನೇಳುವುದೂ ಅದನ್ನೇ, ನರೇಂದ್ರ ಮೋದಿಯವರನ್ನು ನೋಡಿ ಆ ಮುಖದ ಹಿಂದೆ ಅಡಗಿಕೊಂಡಿರುವ ಕರಾಳ ಮುಖದ ದರ್ಶನವನ್ನು ಸಂಪೂರ್ಣವಾಗಿ ಪಡೆದು, ಅದರ ನಂತರವೂ ಓಟು ಮಾಡಬೇಕೆಂದರೆ ಮಾಡಿ ಎಂದೆ.

ನರೇಂದ್ರ ಮೋದಿಯ ಮೊದಲ ಕರಾಳ ಮುಖ ಯಾವುದೆಂದು ನಾನೇಳಲಾ ಎಂದೆ, ಹಾ ಹೇಳಿ ಅಂದರು.ನೋಡಿ ಚೆನ್ನಾಗಿ ನೋಡಿ.

ನರೇಂದ್ರ ಮೋದಿ ಚುನಾವಣೆಗೆ ಅರ್ಜಿ ಹಾಕುವಾಗ ನಾನು ಮದುವೆ ಆಗಿದ್ದೇನೆ ಎಂತಲೂ, ಹೆಂಡತಿಯ ಹೆಸರೂ ಬರೆದಿದ್ದಾನೆ, ಅವನ ಜೊತೆ ಹೆಂಡತಿ ಇದ್ದಾಳಾ.. ಅಥವಾ ಹೆಂಡತಿಗೆ ಏನಾದರೂ ಡೈವರ್ಸ್ ಹಾಕಿ ಆಕೆಗೇನಾದರೂ ನೆಮ್ಮದಿಯ ಬದುಕಿಗೇನಾದರೂ ನರೇಂದ್ರ ಮೋದಿ ವ್ಯವಸ್ಥೆ ಮಾಡಿದ್ದಾನಾ.. ಆಕೆಗೆ ಡೈವರ್ಸೂ ನೀಡಲಿಲ್ಲ, ಆಕೆಯ ಬದುಕನ್ನೂ ನೋಡಲಿಲ್ಲ. ಆಕೆಯ ಹೆಸರನ್ನೂ ಬಳಸಿಕೊಳ್ಳುತ್ತಿದ್ದಾನೆ. ಆಕೆ ಗಂಜಿ ಕುಡಿಯಲಿಕ್ಕೂ ವ್ಯವಸ್ತೆಯೂ ಮಾಡಿಲ್ಲ. ಇದು ಮಹಿಳೆಯ ಮೇಲೆ ನಡೆದಂತಹ ಅತ್ಯಂತ ಕ್ರೌರ್ಯವಲ್ಲವೇ? ನರೇಂದ್ರ ಮೋದಿ ಒಬ್ಬ ಸಾಮಾನ್ಯ ಪ್ರಜೆಯಾಗಿದ್ದಿದ್ದರೆ ಜೈಲಿನಲ್ಲಿರುತ್ತಿದ್ದ ಅಲ್ಲವೇ? ಸಾಮಾನ್ಯ ಪ್ರಜೆ ಜೈಲಿನಲ್ಲಿರಬೇಕಾದ ಅಪರಾಧ ಮಾಡಿ, ಜೈಲಿನಿಂದ ತಪ್ಪಿಸಿಕೊಂಡಿರುವುದು ನರೇಂದ್ರ ಮೋದಿಯಲ್ಲಿರುವಂತಹಾ ಕರಾಳ ಮುಖವಲ್ಲವೇ? ಇಂತಹ ಹಲವಾರು ಮುಖಗಳು ಕಾಣುತ್ತವೆ. ನರೇಂದ್ರ ಮೋದಿಯ ಈ ಮುಖವನ್ನು ಆಳವಾಗಿ ನೋಡಿ, ತೀಕ್ಷಣವಾಗಿ ನೋಡಿ, ಎಲ್ಲಾ ಕರಾಳ ಮುಖದ ದರ್ಶನವನ್ನು ಪಡೆದುಕೊಂಡು ನಂತರವೂ ಅವನಿಗ್ಯಾರಾದರೂ ಓಟು ಮಾಡೋದಾದರೆ ಅವರು ಪಿಶಾಚಿಗಳೇ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಆಂಧ್ರದಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿ ಕಡಿತಗೊಳಿಸಿ ಮುಸ್ಲಿಮರಿಗೆ ನೀಡಲಾಗಿದೆ ಎಂಬ...

0
"ಮುಸ್ಲಿಂ ಮೀಸಲಾತಿಯನ್ನು ಜಾರಿಗೊಳಿಸಲು ಕಾಂಗ್ರೆಸ್ ಆಂಧ್ರ ಪ್ರದೇಶದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿಯನ್ನು ಕಡಿಮೆ ಮಾಡಿದೆ. ಇದೊಂದು ಪ್ರಮುಖ ಯೋಜನೆಯಾಗಿದ್ದು, ಇದನ್ನು ಇಡೀ ದೇಶದಾದ್ಯಂತ ಜಾರಿಗೆ ತರಲು ಕಾಂಗ್ರೆಸ್ ಬಯಸಿದೆ" ಎಂದು ಟೋಂಕ್‌ನಲ್ಲಿ ಮಂಗಳವಾರ (ಏ.23)...