Homeಅಂತರಾಷ್ಟ್ರೀಯಜಾರ್ಜ್ ಫ್ಲಾಯ್ಡ್ ಹೆಸರಿನಲ್ಲಿ ಪೊಲೀಸ್ ಸುಧಾರಣಾ ಶಾಸನ ಅಂಗೀಕರಿಸಿದ ಅಮೆರಿಕ

ಜಾರ್ಜ್ ಫ್ಲಾಯ್ಡ್ ಹೆಸರಿನಲ್ಲಿ ಪೊಲೀಸ್ ಸುಧಾರಣಾ ಶಾಸನ ಅಂಗೀಕರಿಸಿದ ಅಮೆರಿಕ

- Advertisement -
- Advertisement -

ಬುಧವಾರ (ಮಾರ್ಚ್ 3) ’ಜಾರ್ಜ್ ಫ್ಲಾಯ್ಡ್ ಜಸ್ಟೀಸ್ ಇನ್ ಪೋಲಿಸಿಂಗ್ ಆಕ್ಟ್’ ಅನ್ನು ಅಮೆರಿಕ ಸಂಸತ್ತಿನ ಶಾಸಕರು (ಲಾ ಮೇಕರ್ಸ್) ಅಂಗೀಕರಿಸಿದ್ದಾರೆ. ಇದು ಕಾನೂನು ಜಾರಿಗಾಗಿ ಅರ್ಹವಾದ ವಿನಾಯಿತಿ ಎಂದು ಕರೆಯಲ್ಪಡುವ ಸುಧಾರಣಾ ಮಸೂದೆಯಾಗಿದೆ. ಈ ಮಸೂದೆ ಪೊಲೀಸ್ ದುಷ್ಕೃತ್ಯದ ಘಟನೆಗಳನ್ನು ಪರಿಶೀಲನೆಗೆ ಒಳಪಡಿಸುತ್ತದೆ ಎಂದು ಎನ್‌ಪಿಆರ್ ಪೋರ್ಟಲ್ ವರದಿ ಮಾಡಿದೆ.

ಕಳೆದ ವರ್ಷ ಮಿನ್ನಿಯಾಪೋಲಿಸ್ ಅಧಿಕಾರಿಗಳಿಂದ 46 ವರ್ಷದ ಕಪ್ಪು ವ್ಯಕ್ತಿ ಫ್ಲಾಯ್ಡ್ ಕೊಲ್ಲಲ್ಪಟ್ಟ ಒಂಬತ್ತು ತಿಂಗಳ ನಂತರ ಈ ಕಾನೂನು ಅಂಗೀಕಾರವಾಗಿದೆ. ಈ ಶಾಸನವು ಕೆಲವು ಸಂದರ್ಭಗಳಲ್ಲಿ ನೋ-ನಾಕ್ ವಾರಂಟ್‌ಗಳನ್ನು ನಿಷೇಧಿಸುತ್ತದೆ.

ಪೊಲೀಸ್ ಎನ್‌ಕೌಂಟರ್‌ಗಳಲ್ಲಿ ದತ್ತಾಂಶ ಸಂಗ್ರಹಣೆಯನ್ನು ಕಡ್ಡಾಯಗೊಳಿಸುತ್ತದೆ, ಜನಾಂಗೀಯ ಮತ್ತು ಧಾರ್ಮಿಕ ಪ್ರೊಫೈಲಿಂಗ್ ಅನ್ನು ನಿಷೇಧಿಸುತ್ತದೆ ಮತ್ತು ಸಮುದಾಯ ಆಧಾರಿತ ಪೊಲೀಸ್ ಕಾರ್ಯಕ್ರಮಗಳಿಗೆ ಹಣವನ್ನು ಮರುನಿರ್ದೇಶಿಸುತ್ತದೆ.

ಇದನ್ನೂ ಓದಿ: ಗುಜರಾತ್: ಮಗಳ ಕಣ್ಣ ಮುಂದೆಯೆ ದಲಿತ ಹೋರಾಟಗಾರನನ್ನು ಕೊಂದ ಮೇಲ್ಜಾತಿಯ ದುಷ್ಕರ್ಮಿಗಳು

“ನಿರಾಯುಧ ವ್ಯಕ್ತಿಯನ್ನು ಕಾಪಾಡಬೇಕಾದವರು ಇನ್ನೆಂದಿಗೂ ಹತ್ಯೆ ಮಾಡಬಾರದು ಎಂಬ ಉದ್ದೇಶವನ್ನು ಶಾಸನ ಹೊಂದಿದೆ’ ಎಂದು ರಿಪಬ್ಲಿಕನ್ ಕರೆನ್ ಬಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಮಿನ್ನೇಸೋಟದ ಬೀದಿಗಳಲ್ಲಿ ಜಾರ್ಜ್ ಫ್ಲಾಯ್ಡ್‌ಗೆ ಏನಾಯಿತು ಎಂದು ನಾವು ನೋಡಿದ್ದೇವೆ. ಜಗತ್ತು ಮತ್ತೊಮ್ಮೆ ಅಂಥದ್ದಕ್ಕೆ ಸಾಕ್ಷಿಯಾಗಬಾರದು’ ಎಂದು ಅವರು ತಿಳಿಸಿದ್ದಾರೆ.

ಮತದಾನದ ಮೊದಲು ಸದನದಲ್ಲಿ ನಡೆದ ಚರ್ಚೆಯಲ್ಲಿ, ಮಿನ್ನೇಸೋಟದ ಡೆಮಾಕ್ರಟಿಕ್ ಇಲ್ಹಾನ್ ಒಮರ್, ’ಫ್ಲಾಯ್ಡ್ ಸಾವಿನಿಂದ ಮಿನ್ನಿಯಾಪೋಲಿಸ್ ಪ್ರದೇಶವು ಇನ್ನೂ ಆಘಾತಕ್ಕೊಳಗಾಗಿದೆ. ನಮ್ಮ ಸಮುದಾಯಗಳನ್ನು ರಕ್ಷಿಸಲು ಪ್ರಮಾಣವಚನ ಸ್ವೀಕರಿಸಿದ ಜನರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಎಂಬುದನ್ನು ನಾವು ಮತ್ತೆ ಮತ್ತೆ ನೋಡಿದ್ದೇವೆ” ಎಂದು ಹೇಳಿದರು.

ಕಳೆದ ವರ್ಷ, ಸದನವು ಮಸೂದೆಯ ಇದೇ ರೀತಿಯ ಆವೃತ್ತಿಯನ್ನು ಅಂಗೀಕರಿಸಿತ್ತು. ಆದರೆ ಅದು ರಿಪಬ್ಲಿಕನ್ ನಿಯಂತ್ರಿತ ಸೆನೆಟ್‌ನಲ್ಲಿ ವಿಫಲವಾಗಿತ್ತು. ರಿಪಬ್ಲಿಕನ್ನರು (ಟ್ರಂಪ್ ಪಕ್ಷದವರು), ’ಈ ಶಾಸನವು ಪೊಲೀಸರು ತಮ್ಮ ಕೆಲಸಗಳನ್ನು ಪರಿಣಾಮಕಾರಿಯಾಗಿ ಮಾಡುವುದನ್ನು ತಡೆಯುತ್ತದೆ ಎಂದು ಹೇಳಿದ್ದರು.

George Floyd Death: ಜಾರ್ಜ್ ಫ್ಲಾಯ್ಡ್ ಶವಪರೀಕ್ಷೆಯಲ್ಲಿ ಕಂಡುಬಂದ ಸ್ಫೋಟಕ ಅಂಶಗಳೇನು.? - Kannada Oneindia

ಈ ವಾರದ ಆರಂಭದಲ್ಲಿ, ಬಿಡೆನ್ ಆಡಳಿತವು ಪ್ರಸ್ತಾವನೆಯ ಪರವಾಗಿ ಮತ ಚಲಾಯಿಸುವಂತೆ ಸದನವನ್ನು ಕೋರುವ ಹೇಳಿಕೆ ಬಿಡುಗಡೆ ಮಾಡಿತ್ತು. “ನಮ್ಮ ಸಮುದಾಯಗಳನ್ನು ಸುರಕ್ಷಿತವಾಗಿಸಲು, ಕಾನೂನು ಜಾರಿ ಮಾಡುವವರು ಮತ್ತು ಜನರ ನಡುವೆ ವಿಶ್ವಾಸವನ್ನು ಪುನರ್‌ ನಿರ್ಮಿಸುವ ಮೂಲಕ ನಾವು ಪ್ರಾರಂಭಿಸಬೇಕು” ಎಂದು ಬಿಡೆನ್ ಹೇಳಿಕೆಯಲ್ಲಿ ತಿಳಿಸಿದ್ದರು.

ಇದನ್ನೂ ಓದಿ: ಜಾರ್ಜ್ ಫ್ಲಾಯ್ಡ್ ಹತ್ಯೆ ಮಾದರಿಯಲ್ಲೇ ಜೋಧಪುರದಲ್ಲೊಂದು ಅಮಾನವೀಯ ಘಟನೆ; ವಿಡಿಯೋ ವೈರಲ್

“ಅಧಿಕಾರದ ದುರುಪಯೋಗಕ್ಕೆ ನಾವು ಪೊಲೀಸ್ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡದಿದ್ದರೆ ಮತ್ತು ಪೊಲೀಸ್ ಇಲಾಖೆಗಳಲ್ಲಿ ವ್ಯವಸ್ಥಿತ ದುಷ್ಕೃತ್ಯ ಮತ್ತು ವ್ಯವಸ್ಥಿತ ವರ್ಣಭೇದ ನೀತಿಯನ್ನು ನಿಭಾಯಿಸದಿದ್ದರೆ ನಾವು ಆ ನಂಬಿಕೆಯನ್ನು ಪುನರ್ನಿರ್ಮಿಸಲು ಸಾಧ್ಯವಿಲ್ಲ’ ಎಂದು ಬಿಡೆನ್ ತಿಳಿಸಿದ್ದರು.

ಅಧ್ಯಕ್ಷ ಬಿಡೆನ್ ಟ್ವಿಟರ್‌ನಲ್ಲಿ ಈ ಶಾಸನದ ಅಂಗೀಕಾರಕ್ಕಾಗಿ ಒತ್ತಾಯಿಸಿದ್ದರು. “ಸೆನೆಟ್ ಪರಿಗಣನೆಯ ನಂತರ, ಮಹತ್ವದ ಪೊಲೀಸ್ ಸುಧಾರಣಾ ಮಸೂದೆ ಕಾನೂನಿಗೆ ಸಹಿ ಹಾಕಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದರು.

ಫ್ಲಾಯ್ಡ್‌ನನ್ನು ಕೊಂದ ಆರೋಪದ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್‌ನ ವಿಚಾರಣೆ ಮಾರ್ಚ್ 8 ರಂದು ಮಿನ್ನಿಯಾಪೋಲಿಸ್‌ನಲ್ಲಿ ಪ್ರಾರಂಭವಾಗಲಿದೆ. ಫ್ಲಾಯ್ಡ್‌ನ ಕುತ್ತಿಗೆಗೆ ಮಂಡಿಯೂರಿ ಕೊಂದ ಚೌವಿನ್, ಕೊಲೆ ಮತ್ತು ನರಹತ್ಯೆ ಆರೋಪಗಳನ್ನು ಎದುರಿಸುತಿದ್ದಾರೆ.

ವಿಚಾರಣೆ ನಡೆಯಲಿರುವ ನ್ಯಾಯಾಲಯದ ಸುತ್ತಲೂ ಬ್ಯಾರಿಕೇಡ್‌ಗಳು ಮತ್ತು ಬೇಲಿ ಹಾಕುವುದು ಸೇರಿದಂತೆ ಭಾರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದಿನ ವಾರ ಮಿನ್ನಿಯಾಪೋಲಿಸ್‌ನಲ್ಲಿ ಸಾವಿರಾರು ಪೊಲೀಸ್ ಅಧಿಕಾರಿಗಳು ಮತ್ತು ನ್ಯಾಷನಲ್ ಗಾರ್ಡ್ ಸಿಬ್ಬಂದಿ ಹಾಜರಾಗಲಿದ್ದಾರೆ. ಫ್ಲಾಯ್ಡ್‌ನ ಹತ್ಯೆಯಲ್ಲಿ ಭಾಗಿಯಾಗಿರುವ ಇತರ ಅಧಿಕಾರಿಗಳನ್ನು ಆಗಸ್ಟ್‌ನಲ್ಲಿ ಪ್ರತ್ಯೇಕ ವಿಚಾರಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತದೆ.


ಇದನ್ನೂ ಓದಿ: ದೇಶವನ್ನು ಒಗ್ಗೂಡಿಸಿ ಮುನ್ನಡೆಸಲು ಜೋ ಬೈಡೆನ್ ಉತ್ತಮ ವ್ಯಕ್ತಿ- ಮಾಜಿ ಅಧ್ಯಕ್ಷ ಜಾರ್ಜ್ ಬುಷ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಮೂಲಕ ಕೇಂದ್ರ ಸರ್ಕಾರ ಪ್ರಜಾತಂತ್ರ ವ್ಯವಸ್ಥೆಯನ್ನು ನಾಶ ಮಾಡಲು ಹೊರಟಿದೆ: ಮಾಜಿ ಸಚಿವ ಬಿ.ಬಿ.ಲಿಂಗಯ್ಯ ಆಕ್ರೋಶ

ಕೇಂದ್ರದ ಬಿಜೆಪಿ ಸರ್ಕಾರವು ‘SIR’ ಜಾರಿಯ ಮೂಲಕ ಜನರ ಮತದಾನದ ಹಕ್ಕನ್ನು ಕಿತ್ತುಕೊಳ್ಳಲು ಮತ್ತು ಪ್ರಜಾತಂತ್ರ ವ್ಯವಸ್ಥೆಯನ್ನು ಕಗ್ಗೊಲೆ ಮಾಡಲು ಸಂಚು ರೂಪಿಸಿದೆ ಎಂದು ಮಾಜಿ ಸಚಿವ ಬಿ.ಬಿ. ಲಿಂಗಯ್ಯ ತೀವ್ರ ಆಕ್ರೋಶ...

ಖ್ಯಾತ ಪತ್ರಕರ್ತ ಪಿ. ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

ಕನ್ನಡ ಪತ್ರಿಕೋದ್ಯಮದ ಧ್ರುವತಾರೆ, ದಿವಂಗತ ಪಿ. ಲಂಕೇಶ್ ಅವರ ಧರ್ಮಪತ್ನಿ ಹಾಗೂ ದಿವಂಗತ ಪತ್ರಕರ್ತೆ ಗೌರಿ ಲಂಕೇಶ್ ಅವರ ತಾಯಿಯಾದ ಇಂದಿರಾ ಲಂಕೇಶ್ (84) ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ...

ಬಾಗಲಕೋಟೆಯ ವಿವಿಧ ಪ್ರದೇಶಗಳಲ್ಲಿ ಎಸ್‌ಐಆರ್‌ ವಿರುದ್ಧ ಜನಜಾಗೃತಿ ಜಾಥಾ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಬಾಗಲಕೋಟೆ ನಗರದ ವಿವಿಧ ಭಾಗಗಳಲ್ಲಿ ಭಾನುವಾರ (ಜೂ.14) ಜಾಗೃತಿ ಜಾಥಾ ನಡೆಯಿತು. ನವನಗರದ ವಿದ್ಯಾಗಿರಿ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಸರ್ಕಲ್‌ನಿಂದ ಪ್ರಾರಂಭವಾದ ಜಾಥಾ...

SIR ವಿರೋಧಿ ಜನಜಾಗೃತಿ ಜಾಥಾ: ಕಾಫಿ ನಾಡು ಚಿಕ್ಕಮಗಳೂರಲ್ಲಿ ಅದ್ದೂರಿ ಸ್ವಾಗತ

ಚಿಕ್ಕಮಗಳೂರು: ರಾಜ್ಯಾದ್ಯಂತ ಐದು ವಿಭಾಗಗಳಲ್ಲಿ ಸಂಚರಿಸುತ್ತಿರುವ 'SIR ವಿರೋಧಿ ಜನಜಾಗೃತಿ ಜಾಥಾ'ದ 3ನೇ ಮಾರ್ಗದ ತಂಡಕ್ಕೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಭಾನುವಾರ ಬೆಳಗ್ಗೆ ಜಿಲ್ಲೆಯ ಕೊಪ್ಪ ತಾಲ್ಲೂಕಿಗೆ ಆಗಮಿಸಿದ ಜಾಥಾ...

ಚಿಕ್ಕಮಗಳೂರಿನಲ್ಲಿ ಎಸ್‌ಐಆರ್ (SIR) ವಿರೋಧಿ ಜಾಥಾ: ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಆಕ್ರೋಶ

ಭಾರತ ಚುನಾವಣಾ ಆಯೋಗವು ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ....

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...