Homeಮುಖಪುಟಜೈಲಿನಲ್ಲಿರದೇ ಬೇಲ್: ಚುನಾವಣೆಯಲ್ಲಿ ಸ್ಪರ್ಧಿಸಲು ತೊಂದರೆಯಿಲ್ಲವೇ ಪ್ರಗ್ಯಾ ಠಾಕೂರ್?

ಜೈಲಿನಲ್ಲಿರದೇ ಬೇಲ್: ಚುನಾವಣೆಯಲ್ಲಿ ಸ್ಪರ್ಧಿಸಲು ತೊಂದರೆಯಿಲ್ಲವೇ ಪ್ರಗ್ಯಾ ಠಾಕೂರ್?

- Advertisement -
- Advertisement -

ಅನಾರೋಗ್ಯವಿರುವ ಕಾರಣ ಜೈಲಿನಲ್ಲಿರದೇ ಬೇಲ್: ಚುನಾವಣೆಯಲ್ಲಿ ಸ್ಪರ್ಧಿಸಲು ತೊಂದರೆಯಿಲ್ಲವೇ ಪ್ರಗ್ಯಾ ಠಾಕೂರ್?

‘ಭಯೋತ್ಪಾದಕ ಕೃತ್ಯದ ಆರೋಪಿ’ಗೆ ಜಾಲತಾಣಿಗರ ಪ್ರಶ್ನೆ

ಭೋಪಾಲ್.ನಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಪಡೆದಿರುವ ಪ್ರಗ್ಯಾಸಿಂಗ್ ಅವರು ಎರಡು ಪ್ರಮುಖ ಕಾರಣಗಳಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗೊಳಗಾಗುತ್ತಿದ್ದಾರೆ.

ಮಾಲೆಗಾಂವ್ ಸ್ಫೋಟದ ಆರೋಪಿ ಪ್ರಗ್ಯಾ ಸಿಂಗ್ ಠಾಕೂರ್ ಕೇಸರಿ ಭಯೋತ್ಪಾದನೆಯ ಪ್ರಮುಖ ಸಂಕೇತವಾಗಿದ್ದರು. ಅವರ ಜೊತೆಗೆ ಅಸೀಮಾನಂದ, ಕರ್ನಲ್ ಪುರೋಹಿತ್ ಮತ್ತಿತರರು ವಿವಿಧ ಬಾಂಬ್ ಬ್ಲಾಸ್ಟ್ ಕೇಸುಗಳಲ್ಲಿ ಜೈಲಿಗೆ ಹೋಗಿದ್ದರು. ಬಿಜೆಪಿ ಸರ್ಕಾರ ಬಂದ ನಂತರ ಎಲ್ಲರೂ ಬಿಡುಗಡೆಯಾದರು. ಆದರೆ ಪ್ರಗ್ಯಾಸಿಂಗ್ ಠಾಕೂರ್ ಅವರ ಮೇಲಿನ ವಿಚಾರಣೆ ಇನ್ನೂ ಮುಂದುವರೆಯುತ್ತಿದ್ದು, ಆಕೆಗೆ ತೀವ್ರ ಅನಾರೋಗ್ಯವಿರುವ ಕಾರಣದಿಂದ ಜಾಮೀನು ಕೊಡಿ ಎಂದು ವಕೀಲರು ಕೇಳಿದ್ದರು. ಅದರಂತೆ ಪ್ರಗ್ಯಾಗೆ ಜಾಮೀನು ಸಿಕ್ಕಿ ಹೊರಬಂದಿದ್ದಾರೆ.

ಪ್ರಗ್ಯಾ ಸೇರಿದಂತೆ ಬಹುತೇಕ ಕೇಸರಿ ಭಯೋತ್ಪಾದಕತೆಯ ಆರೋಪಿಗಳನ್ನು ಬಂಧಿಸಿದ್ದು, ಬಹಳ ಖ್ಯಾತಿ ಗಳಿಸಿದ ಪೊಲೀಸ್ ಆಫೀಸರ್ ಹೇಮಂತ್ ಕರ್ಕರೆ. ಅವರು ಮಹಾರಾಷ್ಟ್ರದ ಭಯೋತ್ಪಾದಕ ವಿರೋಧಿ ದಳದ ಪ್ರಮುಖ ಅಧಿಕಾರಿಗಳಲ್ಲೊಬ್ಬರಾಗಿದ್ದರು. ಸ್ವತಃ ಹೇಮಂತ್ ಕರ್ಕರೆಯವರು ಮುಂಬೈ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಗುಂಡಿಗೆ ಬಲಿಯಾಗಿದ್ದರು.

ಇದೀಗ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಗ್ಯಾ ಅವರ, ಉಮೇದುವಾರಿಕೆಯು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಭಯೋತ್ಪಾದನೆಯ ವಿರುದ್ಧ ಹೋರಾಡುತ್ತೇವೆಂದು ಹೇಳಿಕೊಳ್ಳುವ ಬಿಜೆಪಿಯು ಭಯೋತ್ಪಾದನೆಯ ಆರೋಪ ಹೊತ್ತಿರುವ ವ್ಯಕ್ತಿಯನ್ನು ಅದ್ಹೇಗೆ ಅಭ್ಯರ್ಥಿಯನ್ನಾಗಿಸುತ್ತದೆ ಎಂಬುದು ಹಲವರ ಪ್ರಶ್ನೆ. ಏಕೆಂದರೆ ಆಕೆಯ ಮೇಲಿರುವ ಆರೋಪಗಳು ಸಾಮಾನ್ಯವಾದುವಲ್ಲ. ಗಮನಿಸಬೇಕಾದ ವಿಚಾರವೆಂದರೆ, ಡಿಸೆಂಬರ್ 2017ರಲ್ಲಿ ಎನ್ಐಎ ವಿಶೇಷ ನ್ಯಾಯಾಲಯವು ಪ್ರಗ್ಯಾ ಮತ್ತಿತರರ ಮೇಲೆ ಯುಎಪಿಎ ಕಾನೂನಿನ ಕೆಳಗೆ ವಿಚಾರಣೆ ನಡೆಸಬೇಕೆಂದು ಆದೇಶ ನಡೆಸಿತ್ತು.

ಇದಕ್ಕೆ ಬಿಜೆಪಿಯ ಸಮರ್ಥಕರಿಂದ ಬಂದ ಉತ್ತರ ಹೀಗಿದೆ, ‘ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಅವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಲಾಗಿತ್ತು. ಅವರು ಈಗಾಗಲೇ ಖುಲಾಸೆಯಾಗಿ ಹೊರಬಂದಿದ್ದಾರೆ’.

ಈ ಸಮರ್ಥನೆಯು ಸಾಕಷ್ಟು ಸದ್ದು ಮಾಡಿದ ನಂತರ ಆಲ್ಟ್ ನ್ಯೂಸ್ ವಾಸ್ತವ ಸಂಗತಿಯನ್ನು ಮುಂದಿಟ್ಟಿತು ‘ಪ್ರಗ್ಯಾ ಸಿಂಗ್ ಅನಾರೋಗ್ಯದ ಕಾರಣ ಮುಂದಿಟ್ಟು ಜಾಮೀನು ಪಡೆದುಕೊಂಡು ಹೊರಬಂದಿದ್ದಾರೆಯೇ ಹೊರತು, ಅವರಿನ್ನೂ ಖುಲಾಸೆಯಾಗಿಲ್ಲ’.

False claim: Sadhvi Pragya has been acquitted of terror charges

ಇದರಲ್ಲಿ ಹೇಳಲಾಗಿರುವಂತೆ, ಪ್ರಗ್ಯಾಸಿಂಗ್ ಇನ್ನೊಬ್ಬರ ಸಹಾಯವಿಲ್ಲದೇ ನಡೆಯಲೂ ಸಾಧ್ಯವಿಲ್ಲ ಮತ್ತು ಆಕೆಗೆ ಸ್ತನ ಕ್ಯಾನ್ಸರ್ ಇರುವುದರಿಂದ 5 ಲಕ್ಷ ರೂ.ಗಳ ಬಾಂಡ್.ಅನ್ನು ಪಡೆದುಕೊಂಡು ಜಾಮೀನಿನ ಮೇಲೆ ಬಿಡಬಹುದು ಎಂದು ಹೇಳಿದ್ದಲ್ಲದೇ ಕೆಲವು ಷರತ್ತುಗಳನ್ನೂ ಮುಂಬೈ ನ್ಯಾಯಾಲಯ ವಿಧಿಸಿತ್ತು. ಜೊತೆಗೆ ಜಾಮೀನಿನ ಕಾರಣಕ್ಕೆ ಕೆಲವು ಅನಿಸಿಕೆಗಳನ್ನು ನಾವು ಮುಂದಿಟ್ಟಿದ್ದೇವೆಯೇ ಹೊರತು ಆಕೆಯನ್ನು ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ಅವನ್ನು ಗಣನೆಗೆ ತೆಗೆದುಕೊಳ್ಳಬಾರದೆಂದು ಹೈಕೋರ್ಟ್ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿತ್ತು.

  1. Moreover, the Appellant in this case is a woman. She was arrested on 23rd October 2008 and is in custody since last more than 8 years. Medical certificate annexed to the petition and written submissions show that appellant is suffering from breast cancer. The medical report of the Appellant indicates that she has become infirm and cannot even walk without support. The medical certificate further shows that Appellant is being given treatment in Ayurvedic hospital. In our opinion, Ayurvedic Hospital cannot give proper treatment to the Appellant, who is suffering from cancer.
  2. Taking, therefore, totality of the facts and circumstances of the case mentioned here-in-above, we are of the considered opinion that the Appellant has made out a case for bail under sub-section (5) of section 43D of the UAP Act. We, accordingly, allow the Appeal and Appellant is directed to be released on bail on her furnishing bail bond of Rs.5,00,000/-, with with one or two sureties of like amount, subject to following conditions :

[a] Appellant shall deposit her passport, if any, with the Special Court.

[b] Appellant shall report to the NIA as and when required.

76 APEAL-545-16-Pragya Singh.doc

[c] Appellant shall not tamper with the evidence or prosecution witnesses.

[d] Appellant shall remain present at the time of hearing of the case before the Special Court.

  1. At this stage, it is clarified that whatever observations made here-in-above about the merits of the case, they are made for the purpose of deciding this Appeal only and Trial Court is not to be influenced by them in any way.

ಎರಡನೆಯದಾಗಿ,

ಇದೇ ಪ್ರಗ್ಯಾ ಸಿಂಗ್ ಠಾಕೂರ್ ಹೇಳಿರುವ ಮತ್ತೊಂದು ಮಾತೆಂದರೆ, ‘ನನ್ನನ್ನು ಹಿಂಸಿಸಿದ ಹೇಮಂತ್ ಕರ್ಕರೆಯವರಿಗೆ ನೀವು ನಾಶವಾಗಿ ಹೋಗಿ ಎಂದು ಶಾಪ ಕೊಟ್ಟಿದ್ದೆ, ಅದಕ್ಕಾಗಿಯೇ ಅವರು ಕೊಲ್ಲಲ್ಪಟ್ಟರು’. ಹೇಮಂತ್ ಕರ್ಕರೆಯವರು ಕೊಂದದ್ದು ಕಸಬ್ ಮತ್ತು ಸಂಗಡಿಗರು ನಡೆಸಿದ ಭಯೋತ್ಪಾದಕ ದಾಳಿಯಲ್ಲಿ! ಹಾಗಾದರೆ ಈಕೆಯ ಶಾಪದನ್ವಯವೇ ದೇವರು ಕಸಬ್ ನನ್ನು ಕಳಿಸಿದರೇ ಎಂಬ ಪ್ರಶ್ನೆಯನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಕೇಳಿದ್ದಾರೆ.

ದೇಶವನ್ನು ರಕ್ಷಿಸಲು ನಡೆದ ಹೋರಾಟದಲ್ಲಿ ಪ್ರಾಣವನ್ನು ಪಣಕ್ಕಿಟ್ಟು ಹುತಾತ್ಮರಾದ ಅಧಿಕಾರಿಯೊಬ್ಬರ ಕುರಿತು ಈ ರೀತಿ ಮಾತಾಡಬಹುದೇ ಎಂಬ ಪ್ರಶ್ನೆಗೆ ಸಾಧ್ವಿ ಎಂದು ಕರೆಸಿಕೊಳ್ಳುತ್ತಿರುವ ಪ್ರಗ್ಯಾ ಏನು ಉತ್ತರ ಹೇಳಿದ್ದಾರೆಂಬುದು ಗೊತ್ತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...