ಕೆಲ ದಿನಗಳ ಹಿಂದೆ ಯುವತಿಯರು ಹರಿದ ಜೀನ್ಸ್ ತೊಡುವ ಬಗ್ಗೆ ವಿವಾದತ್ಮಕ ಹೇಳಿಕೆ ನೀಡಿ, ತೀವ್ರ ಟೀಕೆಗೆ ಒಳಗಾಗಿ ಕ್ಷಮೆ ಕೇಳಿದ್ದ ಉತ್ತರಾಖಂಡದ ನೂತನ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್, ಮತ್ತೆ ಪಡಿತರ ವಿತರಣೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೊರೊನಾ ಸಾಂಕ್ರಾಮಿಕದ ಮಧ್ಯೆ ತಮ್ಮನ್ನು ತಾವು ಪೋಷಿಸಲು ಕಷ್ಟಪಡುತ್ತಿರುವ ಬಡ ಕುಟುಂಬಗಳು ಆಹಾರ ಧಾನ್ಯಗಳು ಮತ್ತು ಬೇಳೆಕಾಳುಗಳನ್ನು ವಿತರಿಸುವ ಕೇಂದ್ರ ಸರ್ಕಾರದ ಯೋಜನೆಯಿಂದ ಹೆಚ್ಚಿನ ಪಡಿತರವನ್ನು ಬಯಸಿದರೆ 20 ಮಕ್ಕಳನ್ನು ಹೆರಬೇಕಿತ್ತು ಎಂದಿದ್ದಾರೆ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್.
“ಪ್ರತಿ ಮನೆಗೆ ಐದು ಕೆಜಿ ಪಡಿತರವನ್ನು ನೀಡಲಾಯಿತು. ಒಂದು ಮನೆಯಲ್ಲಿ 10 ಜನರಿದ್ದರೆ 50 ಕೆಜಿ , 20 ಜನರಿಗೆ 100 ಕೆಜಿ ಪಡಿತರ ದೊರೆತಿದೆ. ಆದರೆ ಕೆಲವರು ಇದಕ್ಕೆ ಅಸೂಯೆ ಪಟ್ಟಿದ್ದಾರೆ. ಇಬ್ಬರೇ ಇರುವವರಿಗೆ 10 ಕೆಜಿ ಪಡಿತರ ದೊರೆತಿದೆ. ಏಕೆಂದರೆ ನೀವು ಇಬ್ಬರಿಗೆ ಮಾತ್ರ ಜನ್ಮ ನೀಡಿದಿರಾ..ಸಮಯವಿದ್ದರೂ 20 ಮಕ್ಕಳನ್ನು ಯಾಕೆ ಹೆರಲಿಲ್ಲ” ಎಂದು ರಾವತ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಉಲ್ಲೇಖಿಸಿದೆ.
ಇದನ್ನೂ ಓದಿ: ಜೀನ್ಸ್ ಪ್ಯಾಂಟ್ ವಿವಾದ: ತನ್ನ ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಿದ ಉತ್ತರಾಖಂಡ್ ಸಿಎಂ
ಕಳೆದ ವರ್ಷ ಸಾಂಕ್ರಾಮಿಕ ರೋಗವು ಭಾರತಕ್ಕೆ ಅಪ್ಪಳಿಸಿದಾಗಿನಿಂದ ದೇಶದ ಆರ್ಥಿಕತೆ ಕುಸಿದಿದೆ. ಸಾವಿರಾರು ಕಂಪನಿಗಳು, ಉದ್ಯೋಗಗಳು ಸಂಪೂರ್ಣ ಮುಚ್ಚಿ ಹೋಗಿದೆ. ಉದ್ಯೋಗ ಅಥವಾ ಆಹಾರವಿಲ್ಲದೆ ಕೋಟಿಗಟ್ಟಲೆ ಜನ ಸಂಕಷ್ಟದಲ್ಲಿ ಬೀಳುವಂತಾಗಿದೆ. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಪ್ರತಿ ವ್ಯಕ್ತಿಗೆ ಐದು ಕೆಜಿ ಆಹಾರ ಧಾನ್ಯಗಳು ಮತ್ತು ಒಂದು ಕೆಜಿ ಕೆಜಿ ದ್ವಿದಳ ಧಾನ್ಯವನ್ನು ನೀಡುವುದಾಗಿ ಘೋಷಿಸಿತ್ತು.
#WATCH हर घर में पर यूनिट 5 किलो राशन दिया गया।10 थे तो 50 किलो, 20 थे तो क्विंटल राशन दिया। फिर भी जलन होने लगी कि 2 वालों को 10 किलो और 20 वालों को क्विंटल मिला। इसमें जलन कैसी? जब समय था तो आपने 2 ही पैदा किए 20 क्यों नहीं पैदा किए: उत्तराखंड CM मुख्यमंत्री तीरथ सिंह रावत pic.twitter.com/cjh2hH5VKh
— ANI_HindiNews (@AHindinews) March 21, 2021
ಮಾರ್ಚ್ 10 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ತಿರತ್ ಸಿಂಗ್ ರಾವತ್, ನೈನಿತಾಲ್‌ನ ರಾಮನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಡಿತರ ಕುರಿತು, ಬಡವರು ಮಕ್ಕಳು ಹೆರುವ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿದ್ದಾರೆ.
ಇದೇ ವೇಳೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು “200 ವರ್ಷಗಳ ಕಾಲ ನಮ್ಮನ್ನು ಗುಲಾಮರನ್ನಾಗಿ ಮಾಡಿ ಇಡೀ ಜಗತ್ತನ್ನು ಆಳಿದ ಅಮೆರಿಕವು ಹೆಣಗಾಡುತ್ತಿದೆ” ಎಂದು ತಪ್ಪು ತಪ್ಪಾಗಿ ಮಾತಾಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ.
#WATCH "…As opposed to other countries, India is doing better in terms of handling #COVID19 crisis. America, who enslaved us for 200 years and ruled the world, is struggling in current times," says Uttarakhand CM Tirath Singh Rawat pic.twitter.com/gHa9n33W2O
— ANI (@ANI) March 21, 2021
ಇದನ್ನೂ ಓದಿ: ಜೀನ್ಸ್ ಪ್ಯಾಂಟ್ ವಿವಾದ: ಸಾಂಸ್ಕೃತಿಕ ಪರಂಪರೆ ಉಳಿಸುವುದು ಮಹಿಳೆಯರ ಜವಾಬ್ದಾರಿ ಎಂದ ಉತ್ತರಾಖಂಡ ಸಿಎಂ ಪತ್ನಿ


