ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಮಾರ್ಚ್ 26ಕ್ಕೆ ಕರ್ನಾಟಕ ಬಂದ್‌ಗೆ ಸಂಯುಕ್ತ ಹೋರಾಟ ವೇದಿಕೆ ಕರೆ ನೀಡಿದೆ.
ರೈತ ಮುಖಂಡರಾದ ದರ್ಶನ್ ಪಾಲ್ ಮತ್ತು ರಾಕೇಶ್ ಟಿಕಾಯತ್ ಮತ್ತು ಯದುವೀರ್ ಸಿಂಗ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನಸೌಧ ಚಲೋ ರ್‍ಯಾಲಿಯಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಸಂಯುಕ್ತ ಹೋರಾಟ-ಕರ್ನಾಟಕದ ಬಡಗಲಪುರ ನಾಗೇಂದ್ರ ಬಂದ್ ಕರೆಗೆ ಬೆಂಬಲ ಘೋಷಿಸಿದ್ದಾರೆ.
ಮಾರ್ಚ್ 20 ರಂದು ಶಿವಮೊಗ್ಗ ಮತ್ತು ಮಾರ್ಚ್ 212 ರಂದು ಹಾವೇರಿಯಲ್ಲಿ ರೈತ ಮಹಾಪಂಚಾಯತ್‌ಗಳು ನಡೆದಿದೆ. ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಆಗ್ರಹಿಸಿ ದೆಹಲಿಯ ಗಡಿಗಳಲ್ಲಿ ಕಳೆದ ನಾಲ್ಕು ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕಾಯ್ದೆ ವಾಪಸಾತಿ ಮಾತನಾಡುತ್ತಿರುವ ಯುವಜನರು ಸರ್ಕಾರ ವಾಪಸಾತಿ ಮಾಡುತ್ತಾರೆ ಎಚ್ಚರ: ರಾಕೇಶ್ ಟಿಕಾಯತ್
ರೈತ ಹೋರಾಟವನ್ನು ದೇಶಾದ್ಯಂತ ವಿಸ್ತರಿಸಲು ರೈತ ಮುಖಂಡರು ಹಲಬು ರಾಜ್ಯಗಳಲ್ಲಿ ಮಹಾಪಂಚಾಯತ್‌ಗಳ ಮೂಲಕ ಜನರಲ್ಲಿ ರೈತ ಹೋರಾಟದ ಪ್ರಾಮುಖ್ಯತೆಯನ್ನು ತಿಳಿಸುತ್ತಿದ್ದಾರೆ. ದೆಹಲಿಯ ರೈತ ಹೋರಾಟವನ್ನು ಬೆಂಬಲಿಸಲು ಕರೆ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಸೋಮವಾರ (ಮಾರ್ಚ್ 22) ವಿಧಾನಸಭಾ ಸಭಾ ಚಲೋಗೆ ಸಂಯುಕ್ತ ಕಿಸಾನ್ ಮೋರ್ಚಾದ ರೈತ ನಾಯಕರಾದ ದರ್ಶನ್ ಪಾಲ್ ಮತ್ತು ರಾಕೇಶ್ ಟಿಕಾಯತ್ ಮತ್ತು ಯದುವೀರ್ ಸಿಂಗ್ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.
ರೈತರ ಚಳವಳಿಗೆ ನಾಲ್ಕು ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಮಾರ್ಚ್ 26ರಂದು ದೇಶವ್ಯಾಪಿ ಮುಷ್ಕರ ನಡೆಯಲಿದ್ದು, ಸಂಪೂರ್ಣ ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. ಎಲ್ಲ ಅಂಗಡಿಗಳು ಹಾಗೂ ಇತರ ವ್ಯವಹಾರ ಸಂಸ್ಥೆಗಳು 12 ಗಂಟೆಗಳ ಕಾಲ ಮುಚ್ಚಲಿವೆ. ಮಾರ್ಚ್ 28ರಂದು ಹೋಳಿ ದಹನದ ವೇಳೆ ಕೃಷಿ ಕಾನೂನುಗಳ ಪ್ರತಿಗಳನ್ನು ಸುಡಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ಇದನ್ನೂ ಓದಿ: ಮಾ. 26ಕ್ಕೆ ಭಾರತ್ ಬಂದ್: ಹೋಳಿ ದಿನದಂದು ಕೃಷಿ ಕಾನೂನುಗಳ ಪ್ರತಿ ದಹನ


