Homeಚಳವಳಿಬೆಳಗಾವಿ ರೈತ ಮಹಾಪಂಚಾಯತ್: ಕಿತ್ತೂರು ರಾಣಿ ಚೆನ್ನಮ್ಮನ ಮಾದರಿಯಲ್ಲಿ ಹೋರಾಡೋಣ- ರಾಕೇಶ್ ಟಿಕಾಯತ್

ಬೆಳಗಾವಿ ರೈತ ಮಹಾಪಂಚಾಯತ್: ಕಿತ್ತೂರು ರಾಣಿ ಚೆನ್ನಮ್ಮನ ಮಾದರಿಯಲ್ಲಿ ಹೋರಾಡೋಣ- ರಾಕೇಶ್ ಟಿಕಾಯತ್

ದೆಹಲಿಯಲ್ಲಿ ಈಗ 40 ಡಿಗ್ರಿ ಬಿಸಿಲಿದೆ. ನಾವು ತೀವ್ರ ಚಳಿಯನ್ನು ನೋಡಿದ್ದೇವೆ. ಮುಂದೆ ಮಳೆಯೂ ಬರಲಿದೆ. ಆದರೆ, ರೈತರು ಅಲ್ಲಿಂದ ಕದಲುವುದಿಲ್ಲ

- Advertisement -
- Advertisement -

ಬ್ರಿಟಿಷರ ವಿರುದ್ದ ಕಿತ್ತೂರು ರಾಣಿ ಚೆನ್ನಮ್ಮ ಇದೇ ಬೆಳಗಾವಿಯಲ್ಲಿ ಹೋರಾಟ ಆರಂಭಿಸಿದ್ದರು. ಈಗ ನೀವುಗಳು ಅದೇ ಮಾದರಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ರಸ್ತೆಗಳಿಗೆ ಇಳಿದು ಹೋರಾಟ ಆರಂಭಿಸಬೇಕಾಗಿದೆ’ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಕರೆ ನೀಡಿದ್ದಾರೆ.

ಬೆಳಗಾವಿಯಲ್ಲಿ ನಡೆದ ರೈತ ಮಹಾಪಂಚಾಯತ್‌ನಲ್ಲಿ ಮಾತನಾಡಿದ ಅವರು, ’ರೈತರು ಹೋರಾಟಗಳಿಗೆ, ರೈತ ಸಭೆಗಳಿಗೆ ಸರ್ಕಾರದಿಂದ ಅನುಮತಿ ತೆಗೆದುಕೊಳ್ಳಬೇಕಿಲ್ಲ. 25 ವರ್ಷಗಳ ಸುಧೀರ್ಘ ಹೋರಾಟದಲ್ಲಿ ನಾವು ಎಂದೂ ಸರ್ಕಾರದಿಂದ ಅನುಮತಿ ಪಡೆದಿಲ್ಲ’ ಎಂದು  ಹೇಳಿದ್ದಾರೆ.

“ಬೆಳಗಾವಿಯ ರೈತರು ಅದೃಷ್ಟವಂತರಿದ್ದಿರಿ. ನೀವು ಹೋರಾಟ ನಡೆಸಲು ಬೆಂಗಳೂರಿಗೆ ಹೋಗಬೇಕಾಗಿಲ್ಲ. ಏಕೆಂದರೇ ನಿಮ್ಮ ವಿಧಾನಸೌಧ ಇಲ್ಲಿಯೇ ಇದೆ. ‌ಇದೇ ವಿಧಾನಸೌಧವನ್ನು ಸುತ್ತುವರಿಯಿರಿ. ಎಂಎಸ್‌ಪಿ ಆಧಾರದಲ್ಲಿ ನಿಮ್ಮ ಬೆಳೆಗಳನ್ನು ಮಾರಾಟ ಮಾಡಿ. ಹೋರಾಟ ಮಾಡಿ, ಟ್ಯ್ರಾಕ್ಟರ್‌ಗಳಿಂದ ಬ್ಯಾರಿಕೇಡ್‌ಗಳನ್ನು ಮುರಿಯಿರಿ, ‌‌ಒಂದು ಬ್ಯಾರಿಕೇಡ್ ಮುರಿದರೆ ನಿಮ್ಮ ಆಂದೋಲನ ಯಶಸ್ಸಯ ಕಾಣುತ್ತದೆ’ ಎಂದು ಟಿಕಾಯತ್ ಹೇಳಿದ್ದಾರೆ.

“ಒಕ್ಕೂಟ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ಜಾರಿಗೆ ತಂದಿತು. ಇದನ್ನೂ ವಿರೋಧಿಸಿ ರೈತರು ದೆಹಲಿಯನ್ನು ನಾಲ್ಕು ದಿಕ್ಕುಗಳಿಂದ ಆವರಿಸಿದ್ದಾರೆ. ಹೋರಾಟವನ್ನು ಮುರಿಯಲು ಸರ್ಕಾರ ಹಲವು ವಿಧಗಳಲ್ಲಿ ಪ್ರಯತ್ನಿಸಿತು. ಆದರೆ ರೈತ ಹೋರಾಟ ಮತ್ತಷ್ಟು ಗಟ್ಟಿಯಾಯಿತು. ’ದೆಹಲಿಯಲ್ಲಿ ಈಗ 40 ಡಿಗ್ರಿ ಬಿಸಿಲಿದೆ. ನಾವು ತೀವ್ರ ಚಳಿಯನ್ನು ನೋಡಿದ್ದೇವೆ. ಮುಂದೆ ಮಳೆಯೂ ಬರಲಿದೆ. ಆದರೆ, ರೈತರು ಅಲ್ಲಿಂದ ಕದಲುವುದಿಲ್ಲ” ಎಂದರು.

ಇದನ್ನೂ ಓದಿ: ಪಂಜಾಬ್ ಬಿಜೆಪಿ ಶಾಸಕನ ಮೇಲೆ ಹಲ್ಲೆ ಪ್ರಕರಣ: ನಮ್ಮ ರೈತರು ಭಾಗಿಯಾಗಿಲ್ಲವೆಂದ ರಾಕೇಶ್ ಟಿಕಾಯತ್

ಕರ್ನಾಟಕದಲ್ಲಿ ಆಂದೋಲನ ಗಟ್ಟಿಯಾಗಿಲ್ಲ, ಅದನ್ನು ಮತ್ತಷ್ಟು ಜೋರು ಮಾಡಬೇಕೆಂದ  ಟಿಕಾಯತ್, “ನೀವು ಹೋರಾಟ ನಡೆಸಲು ಸರ್ಕಾರಕ್ಕೆ, ಪೊಲೀಸರಿಗೆ ಏಕೆ ಹೆದರುತ್ತಿರಿ…? ಜೈಲಿಗೆ ಹೋಗುವುದರಿಂದ ಹೆದರುತ್ತಿರ? ಇಷ್ಟು ದಿನಗಳ ಹೋರಾಟದಲ್ಲಿ ಇಲ್ಲಿ ಒಂದು ಲಾಠಿಚಾರ್ಜ್, ಒಂದು ಆಶ್ರುವಾಯು ಪ್ರಯೋಗ ನಡೆದಿಲ್ಲ ಎಂದ ಮೇಲೆ ಎಂತಹ ಹೋರಾಟ ನಿಮ್ಮದು…? ನೀವು ಗಟ್ಟಿಯಾಗಿ ಹೋರಾಟ ಮಾಡಿ, ನಿಮಗೆ ತೊಂದರೆಯಾದರೆ ದೆಹಲಿಯ ಸುತ್ತಲೂ ರೈತರಿದ್ದಾರೆ ನಿಮಗೆ ಚಿಕಿತ್ಸೆ ನೀಡುತ್ತಾರೆ” ಎಂದರು.

ಇದನ್ನೂ ಓದಿ: ರೈತ ಹೋರಾಟ: ಸಿಂಘು ಗಡಿಯಲ್ಲಿ ನಡೆಯಲಿದೆ ಶೂಟಿಂಗ್ ಬಾಲ್ ಕಿಸಾನ್ ಪ್ರೀಮಿಯರ್ ಲೀಗ್!

’ಈ 2021 ರ ವರ್ಷ ಹೋರಾಟದ ವರ್ಷವಾಗಿದೆ. ದೇಶದಲ್ಲಿ ಹೋರಾಟ ಪಸರಿಸುತ್ತಿದೆ. ಮಹಾತ್ಮ ಗಾಂಧಿಯ ಅನುಯಾಯಿಗಳಾದ ರೈತರು, ಶಾಂತಿಯುತ ಹೋರಾಟ ಮಾಡುತ್ತಿದ್ದಾರೆ. ಆದರೆ ಯಾರಾದರೂ ಕ್ರಾಂತಿ ಮಾಡಲು ಬಯಸಿದರೇ ಅದಕ್ಕೂ ನಮ್ಮ ಬಳಿ ಪರಿಹಾರವಿದೆ. ಯಾರು ಹೆದರುವ ಯಾವ ಅವಶ್ಯಕತೆಯೂ ಇಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಪಕ್ಷ ಹಲವು ರಾಜ್ಯಗಳಲ್ಲೂ ಅಧಿಕಾರದಲ್ಲಿದೆ. ಆದರೆ, ಪಂಜಾಬ್, ಹರಿಯಾಣದಲ್ಲಿ ಈ ಪಕ್ಷದ ಮುಖ್ಯಮಂತ್ರಿಗಳು ಹೆಲಿಕಾಪ್ಟರ್‌ ಇಳಿಸಲು ಸಾಧ್ಯವಿಲ್ಲ, ಕಾರ್ಯಕರ್ತರ ಸಭೆಗಳನ್ನು ನಡೆಸಲು ಬಿಡುತ್ತಿಲ್ಲ. ಹಾಗಾಗಿ ನೀವೂ ಹೊದರಬೇಕಿಲ್ಲ. ರೈತ ಹೋರಾಟ, ರೈತ ಸಭೆಗಳನ್ನು ನಡೆಸಿ. ಇದಕ್ಕೆ ಯಾರ ಅಪ್ಪಣೆಯೂ ಬೇಕಾಗಿಲ್ಲ ಎಂದಿದ್ದಾರೆ.

ಭಾರತ ಸರ್ಕಾರ ಎಂಎಸ್‌ಪಿ ಕೊಡುವ ಕಾನೂನು ತರುವವರೆಗೂ, ಆ ಮೂರು ಕರಾಳ ಕಾನೂನುಗಳು ವಾಪಸ್ ಆಗುವವರೆಗೆ ಯಾವ ರೈತರು ಮನೆಗೆ ವಾಪಸ್ ಹೋಗುವುದಿಲ್ಲ. ದೆಹಲಿಯ ಗಡಿಗಳಲ್ಲಿ ಮನೆಗಳು, ರೋಟಿ ಮಾಡಲು ಮೆಷಿನ್‌ಗಳು, ವಿದ್ಯುತ್ ವ್ಯವಸ್ಥೆ ಎಲ್ಲಾ ಮಾಡಿಕೊಂಡಿದ್ದೇವೆ ಇನ್ನೂ 8 ತಿಂಗಳು ಈ ಹೋರಾಟ ಮುನ್ನಡೆಯಬೇಕಾಗಿದೆ ಎಂದರು.

ಒಂದು ಟ್ಯ್ರಾಕ್ಟರ್‌, ಒಂದು ಊರು, 15 ಜನರು, 10 ದಿನ ಇದು ಹೋರಾಟ ನಡೆಸಲು ನಮ್ಮ ಯೋಜನೆ. ಇದರಲ್ಲಿ 200 ಜನರಿದ್ದರೂ ನಡೆಯುತ್ತದೆ. ಈ ರೀತಿ ಹೋರಾಟಕ್ಕೆ ಯೋಜನೆ ರೂಪಿಸಿಕೊಂಡರೇ, ಯಾವ ಹೋರಾಟವು ಸೋಲುವುದಿಲ್ಲ. ಬಿಸಿಲಲ್ಲಿ, ಚಳಿಯಲ್ಲಿ ಬದುಕುವುದನ್ನು ಕಲಿಯಬೇಕಾಗಿದೆ. ಜಿಲ್ಲಾ ಮಟ್ಟದಲ್ಲಿ ಸಭೆ ಮಾಡಿ, ಗ್ರಾಮ ಗ್ರಾಮಗಳಲ್ಲಿ ಕಮಿಟಿಗಳನ್ನು ಮಾಡಿರಿ. ನಿಮ್ಮ ಸಂಘಟನೆಯನ್ನು ಬಲಗೊಳಿಸಿ, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸಿ, ಇಲ್ಲದಿದ್ದರೇ ನಿಮ್ಮ ಭೂಮಿ ನಿಮ್ಮ ಬಳಿ ಉಳಿಯುವುದಿಲ್ಲ ಎಂದಿದ್ದಾರೆ.

ಕೊನೆಯಲ್ಲಿ, ’ನೆನಪಿಡಿ, ಇಂದಿನಿಂದ ಯಾರು ಸಭೆ, ಹೋರಾಟಕ್ಕೆ ಅನುಮತಿ ತೆಗೆದುಕೊಳ್ಳಬಾರದು. ಪೊಲೀಸರು ಹೋರಾಟ ನಿಲ್ಲಿಸಲು ಪ್ರಯತ್ನಿಸುತ್ತಾರೆ.  ಆದರೆ, ಅಲ್ಲೇ ನಿಮ್ಮ ಹೋರಾಟ ಶುರುವಾಗುತ್ತದೆ. ಅಲ್ಲೇ ಅಡುಗೆ ಮಾಡಿ, ನಿಮ್ಮ ಟ್ಯ್ರಾಕ್ಟರ್‌ಗಳ ಬಳಿ ಮೀಟಿಂಗ್ ಮಾಡಿ. ಒಟ್ಟಿನಲ್ಲಿ ಆಂದೋಲನ ನಡೆಸಿ. ಇವು ಟ್ಯ್ರಾಕ್ಟರ್‌ಗಳಲ್ಲ, ಟ್ಯಾಂಕರ್‌ಗಳು,  ಆಂದೋಲನ ನಡೆಸಿ… ಯುವಜನರಿಗೆ ಮಣ್ಣಿನೊಡನೆ ಸಂಬಂಧ ಬೆಳೆಸಬೇಕಿದೆ ಎಂದಿದ್ದಾರೆ.


ಇದನ್ನೂ ಓದಿ: ಕೆಲ ಬಿಜೆಪಿ ಮುಖಂಡರೆ ನಮ್ಮ ರೈತ ಆಂದೋಲನ ಮೆಚ್ಚಿಕೊಂಡಿದ್ದಾರೆ: ರಾಕೇಶ್ ಟಿಕಾಯತ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕುವಂತೆ...

0
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರಿ ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ " ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ...