ಕಳೆದ ವಾರ ನಡೆದ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಎರಡನೇ ಹಂತದಲ್ಲಿ ನಂದಿಗ್ರಾಮದಲ್ಲೂ ಮತದಾನವಾಗಿದೆ. ನಂದಿಗ್ರಾಮದ ಬೂತ್‌ಗಳಲ್ಲಿ ಮತ ಚಲಾವಣೆಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಡಿದ್ದ ಆರೋಪ ತಪ್ಪಾಗಿದೆ ಎಂದು ದೂರನ್ನು ಚುನಾವಣಾ ಆಯೋಗ ವಜಾಗೊಳಿಸಿದೆ.
ಬ್ಯಾನರ್ಜಿಯವರ ದೂರು ಸರಿಯಿಲ್ಲ ಎಂದಿರುವ ಆಯೋಗ ನಂದಿಗ್ರಾಮದ ಮತದಾನ ಕೇಂದ್ರವೊಂದರಲ್ಲಿ ಅವರ ವರ್ತನೆ ಬಗ್ಗೆ ವಿಚಾರಣೆ ನಡೆಸಲಾಗುತ್ತಿದ್ದು, ವಿಚಾರಣಾ ಹಂತದಲ್ಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇದನ್ನೂ ಓದಿ: ಅಸ್ಸಾಂ: ಬಿಜೆಪಿ ಮುಖಂಡನ ಮೇಲಿನ ಪ್ರಚಾರ ನಿಷೇಧ ಅರ್ಧ ತೆರವುಗೊಳಿಸಿದ ಚುನಾವಣಾ ಆಯೋಗ!
ಮಮತಾ ಬ್ಯಾನರ್ಜಿಯವರ ಕೈಬರಹದ ದೂರನ್ನು “ವಾಸ್ತವಿಕವಾಗಿ ತಪ್ಪಾಗಿದೆ” ಎಂದು ಕರೆದ ಆಯೋಗವು, ಮತದಾನ ಕೇಂದ್ರದಲ್ಲಿ ಬ್ಯಾನರ್ಜಿಯ ವರ್ತನೆಯು “ಕಾನೂನು ಮತ್ತು ಪಶ್ಚಿಮ ಬಂಗಾಳದ ಮೇಲೆ ಮತ್ತು ಇತರ ರಾಜ್ಯಗಳಲ್ಲಿ ಪ್ರತಿಕೂಲ ಪರಿಣಾಮ ಬೀರುವ ಅಪಾರ ಸಾಮರ್ಥ್ಯವನ್ನು ಹೊಂದಿದೆ” ಎಂದು ಹೇಳಿದೆ.
ಪಶ್ಚಿಮ ಬಂಗಾಳ ಚುನಾವಣೆಯ ಕೇಂದ್ರಬಿಂದುವಾಗಿದ್ದ ನಂದಿಗ್ರಾಮದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಘಟನೆಗಳ ಕುರಿತು, ಬಿಜೆಪಿ ಬೆಂಬಲಿಗರು ಬೂತ್‌ಗಳನ್ನು ವಶಪಡಿಸಿಕೊಂಡಿರುವ ಕುರಿತು ಚುನಾವಣಾ ಆಯೋಗಕ್ಕೆ ಸುಮಾರು 63 ದೂರುಗಳನ್ನು ಟಿಎಂಸಿ ನೀಡಿತ್ತು. ದೂರು ನೀಡಿದ್ದರೂ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರು.
ಮತದಾನ ಕೇಂದ್ರವೊಂದರ ಬಳಿಯಿಂದಲೇ ರಾಜ್ಯಪಾಲರಿಗೆ ಕರೆ ಮಾಡಿ ಚುನಾವಣೆಗೆ ಬಿಜೆಪಿ ಬೆಂಬಲಿಗರು ಅಡ್ಡಿ ಪಡಿಸುತ್ತಿದ್ದಾರೆ ಎಂದು ದೂರು ನೀಡಿದ್ದರು.
ಇದನ್ನೂ ಓದಿ: ನಂದಿಗ್ರಾಮ: ಬಿಜೆಪಿ ಕಾರ್ಯಕರ್ತರಿಂದ ಬೂತ್ ವಶ ಎಂದು ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು


