Homeಪುಸ್ತಕ ವಿಮರ್ಶೆಪುಸ್ತಕ ವಿಮರ್ಶೆ: ಸ್ತ್ರೀ ಸಂವೇದನೆಯ ಕವಿತೆಗಳ ಹೊಸ ಓದು

ಪುಸ್ತಕ ವಿಮರ್ಶೆ: ಸ್ತ್ರೀ ಸಂವೇದನೆಯ ಕವಿತೆಗಳ ಹೊಸ ಓದು

- Advertisement -
- Advertisement -

ಒಲವಿನ ಹುಡುಕಾಟದ ನಡುವೆಯೇ ಕವಿತೆಗಳು ಹುಟ್ಟುತ್ತವೆ. ಪ್ರಕೃತಿ ಮತ್ತು ಪ್ರೀತಿ ಮನುಷ್ಯನ ಅವಿಭಾಜ್ಯ ಅಂಗ. ತದನಂತರದಲ್ಲಿ ವ್ಯಕ್ತಿನಿಷ್ಠ ಅನುಭವಗಳನ್ನು ಸಮಷ್ಠಿಯತ್ತ ಕೊಂಡೊಯ್ಯುವ ಶಕ್ತಿ ಕವಿಗಿರುತ್ತದೆ. ಅಂತಹ ಕವಿ ಮಾತ್ರ ಕಾಲದಾಚೆಗೂ ನಿಂತುಕೊಳ್ಳುತ್ತಾನೆ ಅನ್ನುವುದನ್ನು ಮರೆಯುವಂತಿಲ್ಲ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಬಹಳಷ್ಟು ಜನರು ಬೇಗುದಿಗಳನ್ನು, ತಲ್ಲಣಗಳನ್ನು, ಆತಂಕಗಳನ್ನೂ ಅನುಭವಿಸಿದರು. ಅದರ ನಡುವೆಯೇ ಬಹಳಷ್ಟು ಸಾಹಿತ್ಯ ಕೃತಿಗಳು ಹೊರಬಂದವು. ಆದರೆ ಅನಾದಿಕಾಲದಿಂದಲೂ, ಅಡುಗೆಮನೆಯ ಬೇಗುದಿ ಬೇರೊಂದು ತೆರನಾದದ್ದು ಎಂದು ಹೇಳಬೇಕಾಗಿಲ್ಲ. ಅದಕ್ಕೊಂದು ಹೊಗೆ ಕೊಳವೆ – ಚಿಮಣಿ ಆಮೇಲೆ ಎಕ್ಸಾಸ್ಟ್ ಫ್ಯಾನ್ ಆಧುನಿಕ ಕಾಲದಲ್ಲಿ ಬಂದರೂ ಹೊಗೆ ಪೂರ್ಣವಾಗಿ ಹೊರಹೋಗಿದ್ದುರ ಖಚಿತತೆ ಇನ್ನೂ ಗೊತ್ತಾಗಿಲ್ಲವೆಂದೇ ಹೇಳಬೇಕಾಗುತ್ತದೆ. ಕೊರೊನಾ ಕಾಲದ 2020ರಲ್ಲಿನ ಎರಡು ಮಹಿಳಾ ಕವನ ಸಂಕಲನಗಳನ್ನು ಉಲ್ಲೇಖಿಸುವ ಸಂದರ್ಭ ಬಂದಾಗ, ಒಂದು ಬಿ. ಆರ್. ಶೃತಿಯವರ ’ಜೀರೋ ಬ್ಯಾಲೆನ್ಸ್’ ಇನ್ನೊಂದು ಮಂಜುಳಾ ಹಿರೇಮಠರವರ ’ಗಾಯಗೊಂಡವರಿಗೆ’ ನೆನಪಾಗುತ್ತದೆ.

’ಜೀರೋ ಬ್ಯಾಲೆನ್ಸ್’ ಶೀರ್ಷಿಕೆ ಕ್ಯಾಚಿಯಾಗಿರುವ ಹಾಗೆ ಅದರೊಳಗಿರುವ ಕವಿತೆಗಳು ಸಹ ಓದುಗನ ಮನಸ್ಸನ್ನು ಹಿಡಿದಿಡುವುದರಲ್ಲಿ ಸಫಲವಾಗಿವೆ. ಆರ್ಥಿಕ ಮುಗ್ಗಟ್ಟು, ಜಿಡಿಪಿ ಕುಸಿತಗಳ ನಡುವೆ ’ಜೀರೋ ಬ್ಯಾಲೆನ್ಸ್’ ಅನ್ನುವ ಶೀರ್ಷಿಕೆ ಏನು ಹೇಳಲು ಹೊರಟಿದೆ ಅನ್ನುವ ಕುತೂಹಲ ಮೂಡಿಸುವುದು ಸಹಜವಾಗಿದೆ. ’ಏರುತ್ತಿರುವ ದರಗಳೊಂದಿಗೆ ಸೆಣಿಸಿ ಸೋತು’ ಮಧ್ಯಮ ವರ್ಗದ ಜನರ ಉಳಿತಾಯದ ಖಾತೆಯಲ್ಲಿ ಬ್ಯಾಲೆನ್ಸ್ ಜೀರೋ ಎನ್ನುವುದರ ಸಾಂಕೇತಿಕವಾಗಿದೆ ’ಜೀರೋ ಬ್ಯಾಲೆನ್ಸ್’ ಕವಿತೆ.

ಒಳಗಿನ ಬೇಗುದಿಯ ಹೊರಹಾಕಲು
ಎದೆಗೊಂದು ಎಕ್ಸಾಸ್ಟ್ ಫ್ಯಾನೋ
ಸಣ್ಣ ಕಿಟಕಿಯೋ ಇರಬಹುದಿತ್ತೆನಿಸಿತು

ಎನ್ನುವ ಸಾಲುಗಳಲ್ಲಿ ಮಹಿಳಾ ಬೇಗುದಿಯನ್ನು ಹೊರಹಾಕಲು ಒಂದು ಕವಾಟದ ಅಪೇಕ್ಷೆಯನ್ನಿಡುವ ಶೃತಿಯವರ ಹಲವಾರು ಕವನಗಳು ಮನದ ತೊಳಲಾಟಗಳ ಬ್ಯಾಲೆನ್ಸ್‌ನ್ನು ಜೀರೋ ಮಾಡಿಕೊಳ್ಳುವ ಪ್ರಯತ್ನವಂತೂ ಕವನಸಂಕಲನದಲ್ಲಿ ಕಾಣಸಿಗುತ್ತದೆ. ಆದರೆ ಇನ್ನೊಂದು ಮಗ್ಗುಲಲ್ಲಿ ’ಜೀರೋ’ ಅನ್ನುವುದನ್ನು ಶೂನ್ಯ ಎಂದು ಪರಿಗಣಿಸಿದರೆ ಪೂರ್ಣತೆಯಡೆ ಹೋಗಬೇಕಾಗುತ್ತದೆ. ಒಂದು ಕಾಲಕ್ಕೆ ಇಲ್ಲದಿದ್ದ ಸಮಸ್ಯೆಗಳು ಹಾಗೂ ಇದ್ದ ಸಮಸ್ಯೆಗಳು ಇವತ್ತು ಭಿನ್ನ ಸ್ವರೂಪದೊಡನೆ ಹೊಸ ಸವಾಲುಗಳೊಂದಿಗೆ ಸಮಾಜದ ಮುಂದೆ ನಿಂತಾಗ ಅದನ್ನು ಯಾವ ರೀತಿಯಾಗಿ ತೆಗೆದುಕೊಳ್ಳಬೇಕು ಎನ್ನುವುದು ಅಕೌಂಟ್ ಹೋಲ್ಡರ್‌ನ ಮುಂದಿರುವ ಸವಾಲು ಹೌದು! ಬ್ಯಾಲೆನ್ಸ್ ಜೀರೋ ಆದಾಗ ಅಕೌಂಟ್ ಕ್ಲೋಸ್ ಆಗುವುದಿಲ್ಲ. ಅದರ ಮುಂದೆ ಹಲವಾರು ಆಪ್ಶನ್‌ಗಳು ಇರುತ್ತವೆ ಎಂಬುದು ಸಹ ಸೂಚಿತವಾಗಿದೆ.

ಇನ್ನೇನು ಅಡುಗೆಯೋ ಮನೆಗೆಲಸವೋ ಮಾಡಿರಬೇಕು
ಮತ್ತೆ ಮುಟ್ಟು, ಬಸಿರು, ಚುಚ್ಚುಮಾತು
ಅದು ಹೆಂಗಸರಿಗೇನೆ ಆಗಲೂ-ಈಗಲೂ
ಬಿಡು ಅಪ್ಪನೊ, ಗಂಡನೊ ಹೇಳಿದಂತೆ

ಕೇಳಿಕೊಂಡು, ಆ ಒಡವೆಗಳೆಲ್ಲ ಹೇರಿಕೊಂಡು
ಮನೆಯಲ್ಲಿ ಬಿದ್ದಿದ್ದಾಳು ಅವಳೂ ಸಹ…

ಅದೆಲ್ಲಾ ಇಲ್ಲಕ್ಕ ಪುಸ್ತಕದಲ್ಲಿ ಎನ್ನುತ್ತಾ
ಅಕ್ಕನ ನಿಟ್ಟುಸಿರು ಅರ್ಥವಾಗದ ತಂಗಿ
ಪಿಳಿ ಪಿಳಿ ಕಣ್ಣುಬಿಟ್ಟಳು…

ಹೆಣ್ಣಿನ ಸ್ಥಿತಿಯನ್ನು ನಿಧಾನವಾಗಿ, ಸರಳವಾಗಿ ತೆರೆದಿಡುತ್ತಲೇ ಪ್ರತಿರೋಧವನ್ನು ವ್ಯಕ್ತಪಡಿಸುವ ಕವನ ’ಅಕ್ಕನ ಮೊಹೆಂಜೊದಾರೋ’. ತುಳಿಯುವ ಪ್ರಯತ್ನ ಅನಾದಿಯಿಂದಲೂ ನಡೆದುಕೊಂಡೇ ಬಂದಿರುವ ವ್ಯವಸ್ಥೆಯಲ್ಲಿ ಟೀಕಿಸಲು ಹಕ್ಕಿಲ್ಲ ಅಥವಾ ತನ್ನ ಹತಾಶೆಯನ್ನು ತೋರ್ಪಡಿಸಲು ದಾರಿಗಳೆಲ್ಲಿವೆ ಎಂಬ ಪ್ರಶ್ನೆಯನ್ನು ತಲತಲಾಂತರಗಳಿಂದ ಪ್ರಶ್ನಿಸಿಕೊಳ್ಳದ ಅಥವಾ ಪ್ರಶ್ನಿಸಿಕೊಳ್ಳುತ್ತಲೇ ಸುಮ್ಮನಿದ್ದುಬಿಡುವ ಸ್ತ್ರೀ ಸಂಕುಲಕ್ಕೆ ಬಿಡುಗಡೆಯ ದಾರಿಗಳು ಎಲ್ಲಿವೆ ಹಾಗಾದರೆ.. ಎನ್ನುತ್ತಲೇ ಸೂಕ್ಷ್ಮವಾಗಿ ಪ್ರಶ್ನಿಸುವ ಕವನಗಳನ್ನು ಸ್ತ್ರೀ ಸಂವೇದನೆಯ ಹಿನ್ನೆಲೆಯಲ್ಲಿ ಓದಬೇಕಾಗುತ್ತದೆ.

ಮಂಜುಳಾ ಹಿರೇಮಠರವರ ’ಗಾಯಗೊಂಡವರಿಗೆ’ ಕವನ ಸಂಕಲನ ಆತ್ಮ ನಿವೇದನೆಯ ರೂಪವನ್ನು ಹೊತ್ತುಬಂದಿರುವುದರ ಜೊತೆಗೆ ಖಾಸಗಿತನವನ್ನು ಎಳೆಯಾಗಿ ಅನಾವರಣಗೊಳಿಸುವ ಜಾಡುಹಿಡಿದು, ಹೊಸದಾದ ಧಾಟಿಯನ್ನು ಕಂಡುಕೊಳ್ಳುವಲ್ಲಿ ಸಫಲವಾಗಿದೆ. ಮೃದುವಾದ, ಸಹಜವಾದ ರೀತಿಯಲ್ಲಿ ಕಾವ್ಯವನ್ನು ಮಂಜುಳಾ ಕಟ್ಟಿಕೊಡುವ ರೀತಿ ’ಗಾಯಗೊಂಡವರಿಗೆ’ ಹೊಸದಾದ ಬ್ಯಾಂಡೇಜ್ ಹಾಕಿದಂತಿದೆ.

ಯುಗಯುಗಗಳಿಂದ
ಆಕೆಯನ್ನು ಕತ್ತಲ
ಕೋಣೆಯೊಳಗೆ
ಕೂಡಿ ಹಾಕಿ
ಬಳಿಕ ಆ ಕೋಣೆಗೆ
ಬೆಳಕನ್ನು ಹಾಯಿಸಬೇಡಿ

ಎನ್ನುವ ಸಾಲುಗಳು ’ಅವಳ’ ಕುರಿತು ಮಾತನಾಡುತ್ತವೆ. ಮಂಜುಳಾ ಹಿರೇಮಠರವರ ಕವಿತೆಗಳಲ್ಲಿಯೂ ಸ್ತ್ರೀ ಸಂವೇದನೆಯು ’ಕತ್ತಲ ಕೋಣೆಯಲ್ಲಿ’ನ ಬೆಳಕಿನ ಕಿಂಡಿಯ ಹಾಗೆ ಇಣುಕುತ್ತವೆ. ’ಪ್ರತಿಮೆಯಾಗೋಣ ಬಾ’ ಕವಿತೆ ಕ್ಷಮಿಸುವ ಔದಾರ್ಯತೆ ಇದೆ ಎನ್ನುವುದನ್ನು ಕವಯತ್ರಿಯ ಭಾವಲಹರಿಯಲ್ಲಿ ತಿಳಿಯುವಂತದ್ದು. ನನ್ನದೇ ಪದಗಳನ್ನು, ಅನುಭವಗಳನ್ನು ಈ ಕವಯತ್ರಿಯರಿಬ್ಬರೂ ನಿನ್ನೆ ರಾತ್ರಿ ಕಡ ತೆಗೆದುಕೊಂಡು ಹೋಗಿರುವವರೇ ಎನ್ನುವ ಭಾವನೆ ಪ್ರತಿಯೊಬ್ಬಳಿಗೂ ಈ ಕವನದಲ್ಲಿ ಝಳಪಿಸುತ್ತದೆ.

ಯಾರಿಗೂ ಕಾಣದಂಥ
ಆದರೆ ನಿಮಗೆ ಮಾತ್ರ ಕಾಣಬಹುದಾದ
ಗಾಯಗಳಿಗೆ ಮದ್ದು ಹಚ್ಚಿ ಕಟ್ಟಬಾರದು
ಬೀಸುಗಾಳಿಗೆ ಒಡ್ಡಿ ಒಣಗಿಸಬಾರದು
ಕಂಡಕಂಡವರಲ್ಲಿ ಅರುಹಿಕೊಂಡು
ಸ್ವತಃ ಸಾಂತ್ವನಗೊಳ್ಳಬಾರದು

ಗಾಯಗೊಂಡವರಿಗೆ ಕವನದಲ್ಲಿ ನೋವಿದೆ. ಆದರೆ ನೋವಿನಿಂದ ಬಿಡುಗಡೆ ಬಯಸುವ ನಿರೀಕ್ಷೆ ಇದೆಯಲ್ಲ ಅದೇ ಜೀವನ ಪ್ರಿತಿ. ಹಾಗಾದರೆ ಗಾಯ ಮಾಡಿದವರ ಕುರಿತು ಒಂದು ಕವಿತೆಯಂತೂ ಬರಬೇಕಲ್ಲವೇ?
ಜೀವನೋತ್ಸಾಹವಿದ್ದಾಗ ಮಾತ್ರವೇ ಅದೆಷ್ಟು ದಾಳಿಗಳಾದರೂ ಮತ್ತೆ ಮತ್ತೆ ಚಿಗುರುವ ಬದುಕುವ ಹಂಬಲವಿದ್ದೇ ಇರುತ್ತದೆ. ಇದೇ ಪ್ರಕೃತಿಯ ಗುಟ್ಟು. ಹೆಣ್ಣು ಸಹ ಪ್ರಕೃತಿಯಂತೆ; ಹೊರತಾಗಿಲ್ಲ. ಮನುಷ್ಯ ಸಾವಿಗೆ ಮೊರೆ ಹೋಗುವ ಅಗತ್ಯವಿಲ್ಲ. ಬದುಕಲು ನೂರಾರು ದಾರಿಗಳಿವೆ. ಗಾಯಗಳು ಎಲ್ಲರಿಗೂ ಕಾಣುವಂತಾದರೂ ಕಷ್ಟ! ಈ ಜಗದ ತುಂಬಾ ಮುಲಾಮು ಹಚ್ಚುವ ಕಾವಲುಗಾರರಿದ್ದಾರೆ. ಆದರೆ ಬೇಲಿಯೇ ಎದ್ದು ಹೊಲ ಮೇಯುವ ಸಾಧ್ಯತೆಗಳು ಹೆಚ್ಚಿವೆ. ಹಾಗಾಗಿ

ನಿಮಗೆ ಮಾತ್ರ ಕಾಣಬಹುದಾದ ಕಡೆಯಲ್ಲಿ
ತಣ್ಣಗೆ ಕೂತು ಅದನ್ನು ಬಿಡಿಸಿಡಿ

’ಗಾಯಗೊಂಡವರಿಗೆ’ ಕವನಸಂಕಲದಲ್ಲಿನ ಪ್ರತಿರೋಧ ತಣ್ಣನೆಯ ಮಂಜುಗಡ್ಡೆಯನ್ನು ಅಂಗಿಯೊಳಗೆ ಹಾಕಿದಂತಹ ಅನುಭವ ನೀಡುವಂತದ್ದು. ಪ್ರತಿರೋಧದ ಅಲೆ ಪ್ರತಿ ಹೆಣ್ಣಿನ ಆಳದಲ್ಲಿ ಇದ್ದೇ ಇರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ ಆದರೆ ಅದರ ಸ್ವರೂಪ ಹಾಗೂ ಸ್ಫೋಟಗೊಳ್ಳುವ ಪರಿಗಾಗಿ ಕಾಯಬೇಕಾಗುತ್ತದೆ ಹಾಗೂ ಸಿದ್ಧಗೊಳ್ಳಬೇಕಾಗುತ್ತದೆ.

ಶತಮಾನಗಳಿಂದ ವಿದ್ಯೆಯಿಂದ ವಂಚಿತಳಾಗಿ, ಲಿಂಗ ತಾರತಮ್ಯಕ್ಕೆ ಒಳಗಾಗಿದುದರ ಫಲವಾಗಿ ಮುಖ್ಯವಾಹಿನಿಗೆ ಬರುವಲ್ಲಿ ವಿಳಂಬವಾದ ಕಾರಣವೂ ಸೇರಿದಂತೆ, ಮಹಿಳೆ ಅಭಿವ್ಯಕ್ತಿಯಲ್ಲಿ ಇನ್ನೂ ಮುಂದೆ ಬರಬೇಕಾಗಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ; ನೆರೆಯ ಮರಾಠಿ ಹಾಗೂ ಮಲಯಾಳ ಸಾಹಿತ್ಯವನ್ನು ಅವಲೋಕಿಸಿದಾಗ ಕಂಡುಬರುವ ಮುಕ್ತತೆ, ಸ್ವಾತಂತ್ರ್ಯ ಇನ್ನೂ ದಕ್ಕಿಸಿಕೊಳ್ಳಬೇಕಾಗಿದೆ.

ಬಿ. ಆರ್. ಶೃತಿ ಮತ್ತು ಮಂಜುಳಾ ಹಿರೇಮಠರವರ ಕವನ ಸಂಕಲನಗಳ ಹೆಸರು ’ಜೀರೋ ಬ್ಯಾಲೆನ್ಸ್’ ಹಾಗೂ ’ಗಾಯಗೊಂಡವರಿಗೆ’ ತತ್‌ಕ್ಷಣಕ್ಕೆ ನೆಗೆಟಿವ್ ಶೀರ್ಷಿಕೆಗಳೆಂದೆನಿಸಿದರೂ ಕವನಗಳ ಓದು ಆಶಾವಾದದ ಸಂದೇಶಗಳನ್ನು ನೀಡುತ್ತವೆ ಎನ್ನುವುದರಲ್ಲಿ ಸಂದೇಹವಿಲ್ಲ. ಇಲ್ಲಿನ ಕವಯತ್ರಿಯರ ಭಾವಗಳನ್ನು ಓದುಗ ತನ್ನದೇ ಎನ್ನುವಷ್ಟರಮಟ್ಟಿಗೆ ಆವಾಹಿಸಿಕೊಂಡು ಆಪ್ತತೆಯನ್ನು ಪಡೆಯುವಷ್ಟು ಸಶಕ್ತವಾಗಿವೆ. ವಿಶೇಷ ಏನೆಂದರೆ ಶತಮಾನಗಳಿಂದ ’ಗಾಯಗೊಂಡವರಿಗೆ’ಲ್ಲ ಅಂತರಂಗದ ನೋವನ್ನು ’ಜೀರೋ ಬ್ಯಾಲೆನ್ಸ್’ ಮಾಡುವ ಸಂದರ್ಭ ಬರುತ್ತಿದೆ ಎನ್ನುತ್ತಿವೆ ಪ್ರಸ್ತುತ ಕವನ ಸಂಕಲನಗಳು.

ಶೋಭಾ ನಾಯಕ್

ಶೋಭಾ ನಾಯಕ್
ಶೋಭಾ ನಾಯಕ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. 6 ಸುವರ್ಣ ಪದಕಗಳೊಂದಿಗೆ ಕರ್ನಾಟಕ ವಿ.ವಿ ಸ್ನಾತಕೋತ್ತರ ಪದವಿ ಪಡೆದರು. ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; “ಐ ಕಾಂಟ್ ಬ್ರೀದ್” ಉಸಿರುಗಟ್ಟಿಸುವ ವಾತಾವರಣದ ಸಂಕಟಗಳ ಅನಾವರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...