Homeಕರ್ನಾಟಕಬರಮುಕ್ತ ಕರ್ನಾಟಕಕ್ಕಾಗಿ ರಾಜ್ಯಮಟ್ಟದ ಜಲಕಾರ್ಯಕರ್ತರ ತರಬೇತಿ ಸಮಾವೇಶ

ಬರಮುಕ್ತ ಕರ್ನಾಟಕಕ್ಕಾಗಿ ರಾಜ್ಯಮಟ್ಟದ ಜಲಕಾರ್ಯಕರ್ತರ ತರಬೇತಿ ಸಮಾವೇಶ

- Advertisement -
- Advertisement -

ವಿಕೇಂದ್ರಿಕೃತವಾಗಿ ಜನ ಸಹಭಾಗಿತ್ವದಲ್ಲಿ ಸಮಗ್ರ ಜಲಸಂರಕ್ಷಣೆ ಮತ್ತು ಜನ ನಿರ್ವಹಣೆ ಮಾಡುವ ಮೂಲಕ ಭಾರತವನ್ನು ಬರಮುಕ್ತಗೊಳಿಸುವ ಮಹತ್ವದ ಆಶಯದೊಂದಿಗೆ ಮೇ 17, 18, 19 ರಂದು ರಾಜ್ಯಮಟ್ಟದ ಜಲಕಾರ್ಯಕರ್ತರ ತರಬೇತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ತುಮಕೂರು ಜಿಲ್ಲೆಯ ಶಿರಾ ಪಟ್ಟಣದ ಹೊರವಲಯದಲ್ಲಿರುವ ‘ಸಮತಾ ವಿದ್ಯಾಲಯದಲ್ಲಿ’ ಸಮಾವೇಶ ನಡೆಯಲಿದ್ದು ತರುಣ್ ಭಾರತ್ ಸಂಘ್‍ನ ಮುಖಂಡರೂ, ಪ್ರಖ್ಯಾತ ಜಲತಜ್ಞರು ಆದ ಡಾ.ರಾಜೇಂದ್ರ ಸಿಂಗ್‍ರವರು ತರಬೇತಿ ನಡೆಸಿಕೊಡಲಿದ್ದಾರೆ.

ಈ ಸಮಾವೇಶದಲ್ಲಿ ತರಬೇತಿಗೊಂಡ ಕಾರ್ಯಕರ್ತರು ಸ್ಥಳೀಯವಾಗಿ ತಮ್ಮ ಶಕ್ತಿ ಸಾಮಥ್ರ್ಯ, ಸಂಪನ್ಮೂಲ ಮತ್ತು ಜನಸಹಕಾರದೊಂದಿಗೆ ಜನಸಂರಕ್ಷಣೆ ಮತ್ತು ಜನ ನಿರ್ವಹಣೆಯ ವಿನೂತನ, ವಿಶಿಷ್ಟ ಮಾದರಿಗಳನ್ನು ರೂಪಿಸುವ ಪ್ರಯತ್ನದಲ್ಲಿ ತೊಡಗುವಂತಾಗಬೇಕೆಂಬುದು ಈ ಸಮಾವೇಶದ ಉದ್ದೇಶವಾಗಿದೆ.
ಈ ಹಿಂದೆ ಡಾ.ರಾಜೇಂದ್ರ ಸಿಂಗ್‍ರವರ ತರುಣ್ ಭಾರತ್ ಸಂಘ ಮತ್ತು ರಾಷ್ಟ್ರೀಯ ಜಲ್ ಬಿರಾದಾರಿ ಹಾಗೂ ಇತರ ಸಮಾನ ಮನಸ್ಕ ಸಂಘಟನೆಗಳು, ಜಲತಜ್ಞರು, ಸಮುದಾಯ ಸಂಘಟನೆಗಳ ಮುಖಂಡರುಗಳು, ಜಲಕಾರ್ಯಕರ್ತರು ಸೇರಿಕೊಂಡು 2017ರಲ್ಲಿ ರಾಷ್ಟ್ರವ್ಯಾಪಿ 2 ಜಲಸಾಕ್ಷರತಾ ಯಾತ್ರೆಗಳನ್ನು ಕೈಗೊಂಡು ದೇಶಾದ್ಯಂತ ಜಲಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿತ್ತು.
ಅದೇ ರೀತಿ 2017ರ ಆಗಸ್ಟ್ ನಲ್ಲಿ ಕರ್ನಾಟಕದ ವಿಜಯಪುರದಲ್ಲಿ ಮೂರು ದಿನಗಳ ಕಾಲ ‘ಬರಮುಕ್ತ ಭಾರತ ನಿರ್ಮಾಣಕ್ಕಾಗಿ ರಾಷ್ಟ್ರೀಯ ಜಲಸಮಾವೇಶ’ವೊಂದನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಅಲ್ಲಿ ವಿಜಯಪುರ ಘೋಷಣೆಯನ್ನು ಸಹ ಹೊರತರಲಾಗಿತ್ತು. ಇಂದು ಬರ ನಿರ್ವಹಣೆ ಮತ್ತು ಜಲಸಾಕ್ಷರತೆಯ ಕುರಿತು ಹಲವಾರು ಪ್ರಯತ್ನಗಳು ನಡೆಯುತ್ತಿದ್ದು ಅವುಗಳನ್ನು ಹೆಚ್ಚು ಸಂಘಟಿತವಾಗಿ, ವ್ಯಾಪಕವಾಗಿ ಮತ್ತು ಪರಿಣಾಮಕಾರಿಯಾಗಿ ಒಂದೆಡೆ ತರುವ ಪ್ರಯತ್ನದ ಭಾಗವಾಗಿ ಈ ವರ್ಷ ತರಬೇತಿ ಸಮಾವೇಶ ನಡೆಯಲಿದೆ.
ಹಿರಿಯ ನ್ಯಾಯವಾದಿಗಳಾದ ಪ್ರೊ. ರವಿವರ್ಮಕುಮಾರ್ ಹಾಗೂ ವಿಜ್ಞಾನ ಚಳವಳಿ ಮತ್ತು ಪರಿಸರ ಹೋರಾಟಗಾರರಾದ ಸಿ.ಯತಿರಾಜುರವರು ಈ ತರಬೇತಿ ಸಮಾವೇಶದ ಸಂಘಟನೆಯ ನೇತೃತ್ವವನ್ನು ವಹಿಸಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಹಲವಾರು ವರ್ಷಗಳಿಂದ ಜಲಜಾಗೃತಿ, ಜಲಸಂರಕ್ಷಣೆ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸುತ್ತಿರುವ ಹಾಗೂ ಮುಂದಿನ ದಿನಗಳಲ್ಲಿ ಈ ದಿಸೆಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಸಂಘಟನೆಗಳನ್ನು, ಕಾರ್ಯಕರ್ತರನ್ನು, ಆಡಳಿತಗಾರರನ್ನು, ಜಲತಜ್ಞರನ್ನು ಮುಂತಾದವರನ್ನು ಈ ಜಲ ಜನಾಂದೋಲನ ರೂಪಿಸಲು ಆಹ್ವಾನಿಸಿದ್ದಾರೆ.
ವೈಯಕ್ತಿಕವಾಗಿಯಾಗಲಿ, ಅಥವಾ ಸಂಘಟನೆ ಗುಂಪುಗಳ ಪರವಾಗಿಯಾಗಲಿ ಭಾಗವಹಿಸುವ ಆಸಕ್ತಿವುಳ್ಳವರು ಮೇ 10ರೊಳಗೆ ದೂರವಾಣಿ ಕರೆ, ಮೇಲ್ ಮೂಲಕ ಖಚಿತಪಡಿಸಲು ಕೋರಿದೆ. 9481677607 / 9741889987 ಹಾಗೂ [email protected] ಮೂಲಕ ಸಂಪರ್ಕಿಸಬಹುದಾಗಿದೆ.
ನೀರಿಗಾಗಿ ಹಾಹಕಾರ ಮತ್ತು ಹವಾಮಾನ ವೈಪರಿತ್ಯಗಳು ಪ್ರತಿದಿನದ ವಿದ್ಯಮಾನಗಳಾಗಿರುವ ಈ ಕಾಲದಲ್ಲಿ ಇಂತಹ ಮಹತ್ವದ ಹೋರಾಟವನ್ನು naanugauri.com ಪತ್ರಿಕೆಯು ಬೆಂಬಲಿಸಿ ಅದರ ಭಾಗವಾಗುತ್ತಿದೆ. ಜಲಸಂರಕ್ಷಣೆಯ ವಿಚಾರದ ಕುರಿತ ಮಹತ್ವದ ಲೇಖನಗಳು, ಜಾಗೃತಿ ಬರಹಗಳು, ಯಶಸ್ವಿ ಪ್ರಯೋಗಗಳು ಇತ್ಯಾದಿಗಳ ಕುರಿತ ಬರಹ, ಪೋಸ್ಟರ್ ಅಥವಾ ವಿಡಿಯೋಗಳನ್ನು ನೀವು ನಮಗೆ ಕಳಿಸಬಹುದು. ಅವುಗಳನ್ನು ಪ್ರಕಟಿಸಿ ಹೆಚ್ಚು ಜನರಿಗೆ ತಲುಪಲು ನಾವು ನೆರವಾಗುತ್ತೇವೆ. 7353770202 ವಾಟ್ಸಾಪ್ ನಂಬರ್ ಅಥವಾ [email protected] ಗೆ ಕಳಿಸಿ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...