Homeಚಳವಳಿಬೇಗುಸರಾಯ್‍ನಲ್ಲಿ ಸಿಪಿಐನ ಕನ್ನಯ್ಯ ಕುಮಾರ್‍ಗೆ ಅಡ್ವಾಂಟೇಜು. ಏಕೆಂದರೆ..

ಬೇಗುಸರಾಯ್‍ನಲ್ಲಿ ಸಿಪಿಐನ ಕನ್ನಯ್ಯ ಕುಮಾರ್‍ಗೆ ಅಡ್ವಾಂಟೇಜು. ಏಕೆಂದರೆ..

- Advertisement -
- Advertisement -

| ರಾಹುಲ್ ವತ್ಸ್ |
ಅನುವಾದ: ಮಲ್ಲನಗೌಡರ್ ಪಿ.ಕೆ
ಇವತ್ತು ಏಪ್ರಿಲ್ 29, ವಿಶಿಷ್ಟ ಕಾರಣಗಳಿಗಾಗಿ ದೇಶದ ಗಮನ ಸೆಳೆದ ಬಿಹಾರಿನ ಬೇಗುಸ್‍ರಾಯ್ ಕ್ಷೇತ್ರದಲ್ಲಿ ಇಂದು ಮತದಾನ ಮುಗಿದಿದೆ. ಕೇವಲ ಜಾತಿ ಮತ್ತು ಧರ್ಮದ ದೃಷ್ಟಿಯಲ್ಲಿ ಈ ಕ್ಷೇತ್ರದ ಚುನಾವಣೆಯನ್ನು ನೋಡಿದವರಿಗೆ ನಿಜ ವಾಸ್ತವ ಅರ್ಥವಾಗಲಿಕ್ಕಿಲ್ಲ. ಇಲ್ಲಿ ಮೊದಲಿಂದಲೂ ಸಿದ್ದಾಂತ-ಐಡಿಯಾಲಜಿ ಒಂದು ಪ್ರಮುಖ ಅಂಶವಾಗಿದ್ದು, ಅದರ ಫ್ಯಾಕ್ಟರ್ ಈಗಲೂ ಹಾಗೇ ಇದೆ….

ಬೇಗುಸರಾಯ್ ಎಂಪಿ ಕ್ಷೇತ್ರಕ್ಕೆ ಬಿಹಾರ್ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಒಂದು ವಿಶಿಷ್ಟ ಮತ್ತು ಮಹತ್ವದ ಸ್ಥಾನವಿದೆ. ಇಲ್ಲಿ ಬಹುಪಾಲು ಸಲ ಐಡೆಂಟಿಟಿ ಬದಲು ಸಿದ್ದಾಂತದ ಮೇಲೆಯೇ ಆರೋಗ್ಯಕರ ಚುನಾವಣೆಗಳು ನಡೆದಿವೆ. ಸ್ವಾತಂತ್ರ್ಯಾ ನಂತರ ಈ ಕ್ಷೇತ್ರದಲ್ಲಿ ಕಮ್ಯುನಿಸಂ ಮತ್ತು ರಾಷ್ಟ್ರೀಯತೆ-ಈ ಎರಡೂ ಸಿದ್ದಾಂತಗಳಿಗೂ ಎಲ್ಲ ಜಾತಿ, ಧರ್ಮ ಮತ್ತು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಪೋರ್ಟ್ ಬೇಸ್ ಇದೆ. ಕಮ್ಯುನಿಸಂ ಅನ್ನು ಆರಂಭದಲ್ಲಿ ಸಿಪಿಐ, ನಂತರ ಸಿಪಿಎಂ, ಮತ್ತೆ ಸಿಪಿಐ ಪ್ರತಿನಿಧಿಸುತ್ತಿದ್ದರೆ, ಕಾಂಗ್ರೆಸ್ ರಾಷ್ಟ್ರೀಯತೆಯನ್ನು ಪ್ರತಿನಿಧಿಸುತ್ತಿತ್ತು. 1999ರಲ್ಲಿ ಬಿಹಾರದಲ್ಲಿ ಕಾಂಗ್ರೆಸ್ ಮಹತ್ವ ಕಳೆದುಕೊಂಡ ಮೇಲೆ, ಆ ಜಾಗವನ್ನು ಬಿಜೆಪಿ ಆಕ್ರಮಿಸಿತು.

ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಬೆಂಬಲಿಸುತ್ತಿದ್ದ, ಸಿಪಿಐ ಅಥವಾ ಬಿಜೆಪಿ ಜೊತೆ ನಿಲ್ಲಲೂ ಒಲ್ಲದ ಮುಸ್ಲಿಮರು ಆರ್‍ಜೆಡಿ, ಜೆಡಿಯು, ಎಲ್‍ಜೆಪಿ ಪಕ್ಷಗಳು ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ದಾರಿ ಮಾಡಿದರು. ನಂತರ ಈ ಕ್ಷೇತ್ರದಲ್ಲೂ ಜಾತಿ, ಧರ್ಮದ ರಾಜಕೀಯ ಬಂದರೂ, ಚುನಾವಣೆಯಲ್ಲಿ ಎಂದಿನಂತೆ ಕಮ್ಯುನಿಸಂ ಮತ್ತು ರಾಷ್ಟ್ರೀಯತೆಗಳೇ ಪ್ರಮುಖ ನಿರ್ಧಾರಕ ಅಂಶಗಳಾಗಿವೆ.

ಜಾತಿ ಸಂಖ್ಯೆಗೆ ಬಂದರೆ ಮೇಲ್ಜಾತಿಯ ಭೂಮಿಹಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ದೂರದ ಎರಡನೇ ಸ್ಥಾನದಲ್ಲಿ ಮುಸ್ಲಿಮರಿದ್ದಾರೆ. ನಂತರದಲ್ಲಿ ಯಾದವರು, ಕುರ್ಮಿಗಳು, ಕುಶ್ವಾಹಾ, ಮಲ್ಲಹಾಗಳು, ಬ್ರಾಹ್ಮಣರು, ಎಸ್‍ಸಿ ಜಾತಿಯವರಿದ್ದಾರೆ. ಭೂಮಿಹಾರರು ರಾಜಕೀಯವಾಗಿ ಪ್ರಬಲರಾಗಿದ್ದು, ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಇಲ್ಲಿಂದ ಎಂಪಿಯಾದವರೆಲ್ಲ ಭೂಮಿಹಾರರೇ.

ಬಲಿಯಾ ಕ್ಷೇತ್ರ, ಪುನರ್ವಿಂಗಡಣೆ…..
ಈ ಕ್ಷೇತ್ರದ ಬಗ್ಗೆ ಅರ್ಥ ಮಾಡಿಕೊಳ್ಳಲು ಮೊದಲಿಗೆ ಇದ್ದ ಬಲಿಯಾ ಕ್ಷೇತ್ರದ ಚುನಾವಣಾ ಫಲಿತಾಂಶಗಳನ್ನು ಅಧ್ಯಯನ ಮಾಡಬೇಕು. 2008ರಲ್ಲಿ ಪುನರ್ವಿಂಡಣೆ ನಂತರವಷ್ಟೇ ಬಲಿಯಾದ ಹಲವು ವಿಧಾನಸಭಾ ಕ್ಷೇತ್ರಗಳನ್ನು ಬೇಗುಸರಾಯ್ ಜಿಲ್ಲೆಗೆ ಸೇರಿಸಿ ಬೇಗುಸರಾಯ್ ಕ್ಷೇತ್ರಕ್ಕೆ ಹೊಸ ಸ್ವರೂಪ ನೀಡಲಾಗಿತು. ಹಾಗಾಗಿ ಹಿಂದಿನ ಬಲಿಯಾ ಕ್ಷೇತ್ರದ ಚುನಾವಣಾ ಫಲಿತಾಂಶಗಳತ್ತ ಗಮನ ಹರಿಸೋಣ. 1977ರಲ್ಲಿ ಸೃಷ್ಟಿಯಾದ ಬಲಿಯಾ ಸಂಸತ್ ಕ್ಷೇತ್ರದಲ್ಲಿ 2008ರವೆರೆಗೆ ಒಟ್ಟು 9 ಚುನಾವಣೆ ನಡೆದಿದ್ದು ಅದರಲ್ಲಿ ಸಿಪಿಐ ನಾಲ್ಕು ಸಲ ಗೆದ್ದಿದೆ. ಉಳಿದ ಐದರಲ್ಲಿ ಪ್ರತಿ ಸಲ ಬೇರೆ ಪಕ್ಷ ಗೆದ್ದಿದ್ದು, ಹೆಚ್ಚೂ ಕಡಿಮೆ ಈ ಐದರಲ್ಲಿ ಸಿಪಿಐ ಎರಡನೇ ಸ್ಥಾನದಲ್ಲಿದೆ.

ಹಿಂದಿನ ಬೇಗುಸರಾಯ್ ಕ್ಷೇತ್ರ (2008ರ ಪುನರ್ವಿಗಡಣೆಗೂ ಮೊದಲು)ದಲ್ಲಿ 1998ರವರೆಗೂ ಕಾಂಗ್ರೆಸ್ ಪ್ರಾಬಲ್ಯ ಹೊಂದಿತ್ತು. ಅಲ್ಲಿವರೆಗಿನ 12 ಚುನಾವಣೆಗಳಲ್ಲಿ ಅದು 8 ಸಲ ಗೆದ್ದಿತ್ತು. ದೇಶದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇದ್ದಾಗ ಮಾತ್ರ ಅದು ಅಲ್ಲಿ ಸೋತಿತ್ತು. ಹಿಂದೆ ಕಾಂಗ್ರೆಸ್‍ಗೆ ಭರ್ಜರಿ ಲೀಡ್ ಕೊಡುತ್ತಿದ್ದ ಅಸೆಂಬ್ಲಿ ಕ್ಷೇತ್ರಗಳು ಈಗಿನ ( 2008ರ ನಂತರದ) ಬೇಗುಸರಾಯ್ ಕ್ಷೇತ್ರದಲ್ಲಿ ಇಲ್ಲ.
ಹೀಗಾಗಿ, ಈಗಿನ ಬೇಗುಸ್‍ರಾಯ್ ಸಂಸತ್ ಕ್ಷೇತ್ರದಲ್ಲಿ ಬಲಾಢ್ಯ ಕೇಡರ್ ಬೇಸ್ ಇರುವುದು ಸಿಪಿಐಗೆ. ಅದಕ್ಕಾಗೇ ಇದನ್ನು ಲೆನಿನ್‍ಗಾರ್ಡ್ ಎನ್ನಲಾಗುತ್ತದೆ.

2009, 2014 ರಲ್ಲಿ ಏನಾಯ್ತು?
ಪುನರ್ವಿಂಗಡಣೆ ನಂತರ ಬೇಗುಸರಾಯ್‍ನಲ್ಲಿ ಎರಡು ಸಂಸತ್ ಚುನಾವಣೆಗಳು ನಡೆದಿವೆ. 2009ರಲ್ಲಿ ಎನ್‍ಡಿಎ ಅಭ್ಯರ್ಥಿಯಾಗಿದ್ದ ಜೆಡಿಯುನ ಮೊನಜೀರ್ ಹಸನ್ 45 ಸಾವಿರ ಮತಗಳ ಅಂತರದಿಂದ ಗೆದ್ದರು. ಮತದಾನ ಪ್ರಮಾಣವೂ ಕಡಿಮೆ (ಶೇ. 48)ಆಗಿತ್ತು. ಎರಡನೇ ಸ್ಥಾನದಲ್ಲಿ ಸಿಪಿಐ ಇತ್ತು. ವಿಜೇತ ಹಸನ್ ಬಿಟ್ಟು ಉಳಿದೆಲ್ಲ ಪಕ್ಷಗಳ ಅಭ್ಯರ್ಥಿಗಳು ಭೂಮಿಹಾರರೇ ಆಗಿದ್ದರು.
2014ರಲ್ಲಿ ಜೆಡಿಯು ಎನ್‍ಡಿಎ ಭಾಗವಾಗಿರಲಿಲ್ಲ. ಅದು ಸಿಪಿಐಗೆ ಬೆಂಬಲಿಸಿತ್ತು. ಯುಪಿಎ ವಿರುದ್ಧ ಆಡಳಿತ ವಿರೋಧಿ ಅಲೆಯಿತ್ತು. ಬಿಜೆಪಿ ಹಿಂದೂ ಮತಗಳನ್ನು ಒಟ್ಟಾಗಿಸುವಲ್ಲಿ ಒಂದಿಷ್ಟು ಯಶ ಕಂಡು ಗೆದ್ದಿತ್ತು. ಸಿಪಿಐ ಮೂರನೇ ಸ್ಥಾನಕ್ಕೆ, ಆರ್‍ಜೆಡಿಯ ತನ್ವೀರ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

2019- ಪ್ರಮುಖ ನಿರ್ಣಾಯಕ ಅಂಶಗಳೇನು?
ಈಗ ಇಲ್ಲಿ ದೇಶದ ಯೂಥ್ ಐಕಾನ್ ಕನ್ನಯ್ಯಕುಮಾರ್ ಸಿಪಿಐ ಅಭ್ಯರ್ಥಿಯಾಗಿದ್ದು ಅವರು ಕೇಡರ್‍ಗಳಲ್ಲಿ ಹೊಸ ಉತ್ಸಾಹ ತುಂಬಿ, ಕ್ಷೇತ್ರದಾದ್ಯಂತ ಪರಿಣಾಮಕಾರಿ ಪ್ರಚಾರ ನಡೆಸಿದ್ದಾರೆ. ಗುಜರಾತ್ ನ ಯುವ ಶಾಸಕ ಜಿಗ್ನೇಶ್ ಮೇವಾನಿ, ಯುವ ತಾರೆ ಶೆಹ್ಲಾ ರಶೀದ್, ಜನಪರ ಚಿತ್ರನಟ ಮತ್ತು ಬೆಂಗಳೂರು ಕೇಂದ್ರ ಸ್ವತಂತ್ರ ಅಭ್ಯರ್ಥಿ ಪ್ರಕಾಶ್ ರಾಜ್ ಮುತಾಂದವರು ಕನ್ನಯ್ಯ ಪರ ಸತತ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಬಿಜೆಪಿ ಮತ್ತು ಆರ್‍ಜೆಡಿಗಳು 2009, 2014ರ ತಂತ್ರಕ್ಕೇ ಮೊರೆ ಹೋದವು. ಗಿರಿರಾಜ್ ಸಿಂಗ್‍ರನ್ನು ಕಣಕ್ಕಿಳಿಸಿದ ಬಿಜೆಪಿ ಹಿಂದುತ್ವದ ಆಧಾರದ ಮೇಲೆ ಭೂಮಿಹಾರರು, ಕುರ್ಮಿಗಳು, ಆರ್ಥಿಕವಾಗಿ ಹಿಂದುಳಿದವರು ಮತ್ತು ಎಸ್‍ಸಿ ಸಮುದಾಯದವರನ್ನು ‘ರಾಷ್ಟ್ರೀಯತೆ’ಯ ಆಧಾರದಲ್ಲಿ ತನ್ನ ಕಡೆ ವಾಲಿಸಿಕೊಳ್ಳಲು ಯತ್ನಿಸಿತು. ಜೊತೆಗೆ ಮೋದಿ, ನಿತೀಶ್, ಪಾಸ್ವಾನರವರ ಹೆಸರಲ್ಲೂ ಮತ ಯಾಚಿಸಿತು.

ಕಳೆದ ಸಲದಂತೆ ಈ ಸಲವೂ ಆರ್‍ಜೆಡಿ ಮತ್ತೆ ತನ್ವೀರ್ ಹಸನ್ ಅವರನ್ನು ಅಭ್ಯರ್ಥಿ ಮಾಡಿ, ಯಾದವ-ಮುಸ್ಲಿಂ ಮತಗಳ ಜೊತೆಗೆ ಇತರ ಸಣ್ಣ ಸಮುದಾಯಗಳ ಓಟು ಪಡೆಯಲು ಯತ್ನಿಸಿತು. ಕನ್ನಯ್ಯ ಮತ್ತು ಗಿರಿರಾಜ್ ಸಿಂಗ್ ಇಬ್ಬರೂ ಭೂಮಿಹಾರ್ ಆಗಿರುವುದರಿಂದ ಭೂಮಿಹಾರ್ ಮತಗಳ ವಿಭಜನೆಯಾಗಿ ತನಗೆ ಲಾಭ ಆಗಲಿದೆ ಎಂಬುದು ಆರ್‍ಜೆಡಿ ಲೆಕ್ಕಾಚಾರ.

ಆದರೆ, ತಳಮಟ್ಟದಲ್ಲಿ 2009, 2014ರ ವಾತಾವರಣವಿಲ್ಲ. 2009ರಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಮಿಹಾರ್ ಮತಗಳು ವಿಭಜನೆಯಾಗಿದ್ದವು. ಈ ಸಲ ಅಷ್ಟಾಗುವುದಿಲ್ಲ. ಬಿಜೆಪಿಗೆ ಮೇಲ್ಜಾತಿ ಸಮುದಾಯಗಳಲ್ಲಿ ಗಟ್ಟಿ ಬೇಸ್ ಇದ್ದು, ಅದು ಜಡಿಯು ಮತ್ತು ಎಲ್‍ಜೆಪಿ ನೆರವಿನಿಂದ ಭೂಮಿಹಾರರ ಗರಿಷ್ಠ ಮತಗಳನ್ನು ಪಡೆಯುವ ಉಮೇದಿನಲ್ಲಿದೆ.

2009, 2014ಕ್ಕೆ ಹೋಲಿಸಿದಾಗ ಭೂಮಿಹಾರ್ ಸಮುದಾಯದಲ್ಲಿ ಸಿಪಿಐ ತನ್ನ ಬೇಸ್ ಅನ್ನು ಗಟ್ಟಿಗೊಳಿಸಿದೆ. 2014ರಲ್ಲಂತೆ ಮುಸ್ಲಿಮರು ಆರ್‍ಜೆಡಿ ಪರ ಗಟ್ಟಿಯಾಗೇನೂ ನಿಂತಿಲ್ಲ. ಬಿಜೆಪಿ ಸೋಲಿಸಬಲ್ಲ ಕನ್ನಯ್ಯನ ಕಡೆ ಮುಸ್ಲಿಮ್ ಯುವಕರು ನಿಂತಿದ್ದಾರೆ. 2014ರಲ್ಲಿ ಕೋಮು ಆಧಾರದಲ್ಲಿ ಬಿಜೆಪಿ ಮತ್ತು ಆರ್‍ಜೆಡಿ ನಡುವೆ ಹಂಚಿದ್ದ ಮತಗಳನ್ನು ಕೇಂದ್ರಿಕರಿಸಿ ಅವನ್ನು ಸಿಪಿಐ ಕಡೆ ತಿರುಗಿಸುವಲ್ಲೂ ಕನ್ನಯ್ಯ ಯಶಸ್ವಿಯಾಗಿದ್ದಾರೆ.

ಕನ್ನಯ್ಯ ಸ್ಪರ್ಧೆಯಲ್ಲೇ ಇಲ್ಲ ಎಂದು ಬಹಿರಂಗವಾಗಿ ಹೇಳುತ್ತ ಬಂದ ಗಿರಿರಾಜ್ ಮತ್ತು ತನ್ವೀರ್ ತಮ್ಮ ತಮ್ಮ ಸಮುದಾಯಗಳ ಜೊತೆಗೆ ಮಾತಾಡುವಾಗ ಕನ್ನಯ್ಯನ ವಿರುದ್ಧವೇ ಸ್ಪರ್ಧೆ ಎಂಬಂತೆ ಕನ್ನಯ್ಯರನ್ನೇ ಹೆಚ್ಚು ಟೀಕಿಸಿದರು. ಕನ್ನಯ್ಯನಿಗೆ ಮತ ಹಾಕಿದರೆ ತನ್ವೀರ್‍ಗೆ ಲಾಭ ಎಂದು ಭೂಮಿಹಾರರಿಗೆ ಗಿರಿರಾಜ್ ಹೇಳಿದರೆ, ಕನ್ನಯ್ಯನಿಗೆ ಮತ ಹಾಕಿದರೆ ಬಿಜೆಪಿಗೆ ಲಾಭ ಎಂದು ಮುಸ್ಲಿಮರಿಗೆ ತನ್ವೀರ್ ಹೇಳುತ್ತಾ ಬಂದರು.

ತನ್ನ ಪ್ರಾಮಾಣಿಕತೆ ಮತ್ತು ಬಡತನದ ಹಿನ್ನೆಲೆಯ ಕಾರಣದಿಂದ ಕನ್ನಯ್ಯ ಜನರೊಂದಿಗೆ ಮುಕ್ತವಾಗಿ ಬೆರೆಯಲು ಸಾಧ್ಯವಾಯಿತು. ಎಲ್ಲರೂ ಹೇಳುವಂತೆ ಇಲ್ಲಿ ತ್ರಿಕೋನ ಸ್ಪರ್ಧೆಯಿದೆ, ಅಂದರೆ ಈ ಸ್ಪರ್ಧೆ ಜಾತಿ, ಧರ್ಮಗಳನ್ನು ಮೀರಿದ್ದಾಗಲಿದೆ.
ಕೇವಲ ಜಾತಿ, ಧರ್ಮಗಳ ಲೆಕ್ಕದಲ್ಲಿ ನೋಡಿ ಕನ್ನಯ್ಯನಿಗೆ ಕಷ್ಟ ಎನ್ನಲು ಬರುವುದಿಲ್ಲ. ಇಲ್ಲಿ ಜಾತಿ, ಧರ್ಮಗಳನ್ನು ಮೀರಿ, ಸಿದ್ದಾಂತವು ಒಂದು ದೊಡ್ಡ ಫ್ಯಾಕ್ಟರ್ ಆಗಿದೆ. ಈ ಅಂಶವೇ ಕನ್ನಯ್ಯನ ನೆರವಿಗೆ ಬರಬಹುದು. ಈ ದೃಷ್ಟಿಯಲ್ಲಿ ಯಾರೇ ಸೋಲಲಿ, ಗೆಲ್ಲಲಿ, ಅದು ಡೆಮಾಕ್ರಸಿಯ ಗೆಲುವಂತೂ ಆಗಿರಲಿದೆ…

(ಕೃಪೆ: ದಿ ವೈರ್, ಲೇಖಕರು ಬಿಹಾರದ ಐಟಿ ವೃತ್ತಿಪರ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಂದೇ ಮಾತರಂ ಗೀತೆಯ 6 ಚರಣಕ್ಕೆ ಕರ್ನಾಟಕ ಸರ್ಕಾರದ ಬ್ರೇಕ್

ವಂದೇ ಮಾತರಂ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಕಡ್ಡಾಯ ನೀತಿಗೆ ಕರ್ನಾಟಕ ಸರ್ಕಾರ ನೇರವಾಗಿ ಸೆಡ್ಡು ಹೊಡೆದಿದೆ. ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ...

ಸಿಜೆಪಿ ಪ್ರತಿಭಟನೆಯಲ್ಲಿ ಬಾಲಕಿ ನಿಶು ಆಜಾದ್‌ಗೆ ಬೆದರಿಕೆ; ಕ್ರಮಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ನಿಶು ಆಜಾದ್‌ಗೆ ಕಿಡಿಗೇಡಿಗಳು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಹಾಗೂ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ...

ಜಾದವ್‌ಪುರ ವಿವಿ ವಿರುದ್ಧ ಸುವೇಂದು ಅಧಿಕಾರಿಯ ‘ಕೇಸರಿ ಯಾತ್ರೆ’: ‘ಆಜಾದಿ’, ‘ಲಾಲ್ ಸಲಾಂ’ ಕೂಗುವವರನ್ನು ಬೇರುಸಹಿತ ಕಿತ್ತುಹಾಕುತ್ತೇನೆ ಎಂದು ಬೆದರಿಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಹಾಗೂ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದತ್ತ ನಡೆದ ‘ಗೆರುವಾ ಸಮ್ಮಾನ್ ಯಾತ್ರೆ’ (ಕೇಸರಿ ಗೌರವ ಮೆರವಣಿಗೆ) ಇದೀಗ ರಾಜ್ಯದ ರಾಜಕೀಯ ವಲಯದಲ್ಲಿ...

SIR : ಒಂದೇ ಮತಗಟ್ಟೆಯ 729 ಮತದಾರರಲ್ಲಿ 728 ಮಂದಿಯ ಹೆಸರು ಡಿಲೀಟ್!

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮುನ್ನ, ಯಮುನಾ ನದಿ ಪಾತ್ರದ ಕೊಳಗೇರಿ ಪ್ರದೇಶವಾದ ಬೇಲಾ ಎಸ್ಟೇಟ್‌ನ ಭಾಗವೊಂದನ್ನು ಒಳಗೊಂಡಿರುವ ಮತಗಟ್ಟೆಯಲ್ಲಿ 729 ನೋಂದಾಯಿತ ಮತದಾರರಿದ್ದರು. ಆದರೆ, ಆಗಸ್ಟ್‌ನಲ್ಲಿ ಕರಡು...

ಬಂಗಾಳದ ನಾನ್‌ವೆಜ್ ವಿವಾದ: ಬಾಗೇಶ್ವರ್ ಬಾಬಾ ಹೇಳಿಕೆಗೆ ಹಿಂದೂ ವಲಯದಲ್ಲೇ ವಿರೋಧ; ‘ಹಿಂದೂ ಧರ್ಮ ಆಹಾರದ ಕೋಡ್ ಅಲ್ಲ!

ದುರ್ಗಾ ಪೂಜೆಯ ಸಂದರ್ಭದಲ್ಲಿ ಮೀನು, ಮಾಂಸ ಸೇವನೆ ಹಾಗೂ ಮಾರಾಟದ ವಿರುದ್ಧ ಬಾಗೇಶ್ವರ್ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿದ್ದ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ, ಇದೀಗ...

SIR: ಪಂಜಾಬ್‌ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದ್ದ ರಾಘವ್ ಚಡ್ಡಾ ಹೆಸರು ದೆಹಲಿಯಲ್ಲಿ ಎಂಟ್ರಿ!

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರು ಪಂಜಾಬ್‌ನ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಕೆಲವೇ ದಿನಗಳಲ್ಲಿ, ದೆಹಲಿಯ ಮತದಾರರ ಪಟ್ಟಿಯಲ್ಲಿ ದಿಢೀರನೆ ಪ್ರತ್ಯಕ್ಷವಾಗಿರುವುದು ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ...

ರಾಜ್ಯ ಕಾಂಗ್ರೆಸ್‌ಗೆ 35 ನೂತನ ಜಿಲ್ಲಾಧ್ಯಕ್ಷರ ನೇಮಕ; ಹೈಕಮಾಂಡ್ ಪಟ್ಟಿಯಲ್ಲಿ ಮಹಿಳೆಯರಿಗಿಲ್ಲ ಪ್ರಾತಿನಿಧ್ಯ!

ಕರ್ನಾಟಕ ಕಾಂಗ್ರೆಸ್‌ನ ಬಹುನಿರೀಕ್ಷಿತ ಜಿಲ್ಲಾ ಪುನರ್‌ರಚನೆಗೆ ಕೊನೆಗೂ ಚಾಲನೆ ದೊರೆತಿದ್ದು, ರಾಜ್ಯದ 35 ಸಾಂಸ್ಥಿಕ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ (DCC) ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ....

ತ್ರಿಪುರ| ಬಿಜೆಪಿ ಬೇಡಿಕೆಗೆ ಸ್ಪಂದಿಸಿದ ಇಸಿಐ; ಗ್ರಾಮ ಸಮಿತಿ ಚುನಾವಣೆ ಹಿನ್ನೆಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಂದೂಡಿಕೆ

ಆಡಳಿತರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಬೇಡಿಕೆಗೆ ಸ್ಪಂದಿಸಿರುವ ಭಾರತೀಯ ಚುನಾವಣಾ ಆಯೋಗ (ಇಸಿಐ), ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ ಸೆಪ್ಟೆಂಬರ್ 28 ರಂದು ನಡೆಯಲಿರುವ ಗ್ರಾಮ ಸಮಿತಿ...

SIR: ಸ್ವತಃ BLO ಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ತಾಂತ್ರಿಕ ಎಡವಟ್ಟುಗಳು ಮತ್ತು ಗೊಂದಲಗಳು ಪ್ರತಿದಿನವೂ ಒಂದಲ್ಲ ಒಂದು ವಿಲಕ್ಷಣ ಘಟನೆಗಳಿಗೆ ಕಾರಣವಾಗುತ್ತಿದ್ದು, ಇದೀಗ ಸ್ವತಃ ಮತದಾರರ ಪಟ್ಟಿ ಪರಿಷ್ಕರಣೆ...

‘ಎಸ್‌ಐಆರ್ ಪ್ರಜಾಪ್ರಭುತ್ವಕ್ಕೆ ವಂಚನೆ’: 2025ಕ್ಕೆ ಹೋಲಿಸಿದರೆ ದೆಹಲಿಯ 58.60 ಲಕ್ಷ ಮತದಾರರ ಹೆಸರುಗಳು ಮಾಯ: ನಾಗರೀಕ ಸಂಘಟನೆಗಳ ಆಕ್ರೋಶ

ನವದೆಹಲಿ: ದೆಹಲಿಯಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತದಾರರ ಪಟ್ಟಿಯ ಶುದ್ಧೀಕರಣದ ಸಾಮಾನ್ಯ ಆಡಳಿತಾತ್ಮಕ ಕ್ರಮವಲ್ಲ, ಬದಲಾಗಿ ನಾಗರಿಕರ ಮತದಾನದ ಹಕ್ಕಿನ ಮೇಲೆ ಗಂಭೀರ ಪರಿಣಾಮ ಬೀರುವ...