Homeಅಂಕಣಗಳುಸುದೀರ್ಘ ಕಾಲದ ಪರಿಸರ ಪುನಶ್ಚೇತನದ ಕಾರ್ಯಕ್ರಮಗಳಿಗೆ ಸಿದ್ಧರಾಗೋಣ

ಸುದೀರ್ಘ ಕಾಲದ ಪರಿಸರ ಪುನಶ್ಚೇತನದ ಕಾರ್ಯಕ್ರಮಗಳಿಗೆ ಸಿದ್ಧರಾಗೋಣ

- Advertisement -
- Advertisement -

ಸಂಪಾದಕೀಯ |

ಹೆದರಿಕೊಳ್ಳಬೇಕಿಲ್ಲ. ದೀರ್ಘವಾದ ಯಾವುದೇ ಕೆಲಸಕ್ಕೂ ಸಹನೆಯಿಲ್ಲದ ಮನೋಭಾವ ಇಂದಿನ ದಿನಮಾನದ್ದು. ಯಾವುದೂ ದೀರ್ಘವಾಗಬಾರದು, ಸ್ವಲ್ಪವೂ ಬೋರ್ ಎನಿಸಬಾರದು, ಎಲ್ಲವೂ ಇನ್‍ಸ್ಟಂಟ್ ಆಗಿರಬೇಕು. ಹಾಗಿರುವಾಗ ಸುದೀರ್ಘ ಕಾಲದ ಪ್ರಕ್ರಿಯೆಯೊಂದಕ್ಕೆ ಸಿದ್ಧರಾಗಲೇಬೇಕು ಎಂದುಕೊಂಡರೆ, ಓದುಗರು ಹೆದರಿಕೊಳ್ಳುವ ಸಾಧ್ಯತೆ ಇದೆ. ಇಲ್ಲ, ಹೆದರಿಕೊಳ್ಳಬೇಕಿಲ್ಲ.
ಏಕೆಂದರೆ, ಆಗಲೇ ಪರಿಸ್ಥಿತಿ ಕೈ ಮೀರಿ ಹೋಗಿದೆ. ನಾವು ಬದುಕುತ್ತಿರುವ ಭೂಮಿಯನ್ನು, ಲಕ್ಷ ಲಕ್ಷ ವರ್ಷಗಳಿಂದ ಉಳಿದುಕೊಂಡು ಬಂದಿದ್ದ ಭೂಮಿಯನ್ನು ಕೇವಲ 100 ವರ್ಷಗಳಲ್ಲಿ ಹಿಂದೆಂದೂ ಇಲ್ಲದ ಪ್ರಮಾಣದಲ್ಲಿ ಹಾಳು ಮಾಡಿದ್ದೇವೆ.
ಹಾಗಾಗಿ ತುರ್ತಾಗಿ ಏನೋ ಮಾಡಿ ಇದನ್ನು ಒಮ್ಮಿಂದೊಮ್ಮೆಗೇ ಸುಧಾರಿಸಲೂ ಸಾಧ್ಯವಿಲ್ಲ. ಮೊದಲಿಗೆ ಇನ್ನಷ್ಟು ಹಾಳುಗೆಡವುವುದನ್ನು ಕಡಿಮೆ ಮಾಡಿಕೊಳ್ಳಬೇಕು. ಭೂಮಿಗೆ ಜ್ವರ ಬರಿಸಿರುವುದರಿಂದ, ಅದರ ತಾಪವನ್ನು ತಡೆದುಕೊಳ್ಳಲೇಬೇಕು, ಬೇರೆ ದಾರಿಯಿಲ್ಲ. ಇದನ್ನು ತಂಪಾಗಿಸಲು, ಪುನಶ್ಚೇತನಗೊಳಿಸಲು ದೃಢವಾದ ದೀರ್ಘಕಾಲಿಕ ಹೆಜ್ಜೆಗಳನ್ನಿಡಬೇಕು.
ಚುನಾವಣಾ ಕಾವು ಸಹಾ ಭೂಮಿಯ ಜ್ವರವನ್ನು ಏರಿಸಿದೆಯೆಂದರೆ ಆಶ್ಚರ್ಯವಾಗಬಹುದು. ಹೌದು, ಚುನಾವಣೆಯ ಸಂದರ್ಭದಲ್ಲಿ ತೀವ್ರವಾಗಿ ಕಾಡುತ್ತಿರುವ ಬರ ಸಹಾ ಯಾರಿಗೂ (ಬರಪೀಡಿತವಾದ ಪ್ರದೇಶಗಳ ರೈತರಿಗೂ) ಒಂದು ಪ್ರಮುಖ ವಿಷಯವೆನಿಸಿಲ್ಲ. ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‍ಗಳೆರಡೂ ‘ತಾಪಮಾನ ಏರಿಕೆ’ಯ ಕುರಿತು ತಮ್ಮ ಪ್ರಣಾಳಿಕೆಗಳಲ್ಲಿ ಪ್ರಸ್ತಾಪಿಸಿವೆ. ನಿರ್ದಿಷ್ಟವಾದ ಕೆಲವು ಅಂಶಗಳೂ ಅವುಗಳಲ್ಲಿವೆ. ಕಾಂಗ್ರೆಸ್ ಪಕ್ಷವು ಬಿಜೆಪಿಗಿಂತ ಒಂದೆರಡು ಹೆಜ್ಜೆ ಮುಂದಿದ್ದು, ಮಹಾರಾಷ್ಟ್ರದ ಕಾಂಗ್ರೆಸ್ ಘಟಕವು, ಏಪ್ರಿಲ್ 8ರಂದು ಪ್ರತ್ಯೇಕ ಪರಿಸರ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದೆ.
ಆದರೆ, ಈ ಎಲ್ಲಾ ಭರವಸೆಗಳೂ ಸಹಾ ಪರಿಣಾಮಕಾರಿಯಾದ ಫಲಿತಾಂಶಗಳಾಗಿ ಮುಂದಿನ ದಿನಗಳಲ್ಲಿ ಸಾಕಾರಗೊಳ್ಳುತ್ತವೆಂಬ ನಂಬಿಕೆ ಯಾರಿಗೂ ಇಲ್ಲ. ಅಷ್ಟೇ ಅಲ್ಲದೇ, ಈ ಕ್ರಮಗಳಷ್ಟೇ ಭೂಮಿಯನ್ನು ಉಳಿಸಲು ಸಾಧ್ಯವೂ ಇಲ್ಲ.
ಜನಸಂಖ್ಯೆಯ ಬಹಳಷ್ಟು ಜನರು ತೊಡಗಿಕೊಂಡಿರುವ ಕೃಷಿಯಿಂದ ಹಿಡಿದು, ಬೆರಳೆಣಿಕೆಯ ಕುಟುಂಬಗಳಿಗೆ ಭಾರೀ ಲಾಭ ತಂದುಕೊಡುವ ಉದ್ದಿಮೆಗಳವರೆಗೆ ಎಲ್ಲವೂ ಪರಿಸರ, ಅಂತರ್ಜಲ ಮತ್ತು ಗಾಳಿಯನ್ನು ಮನುಕುಲಕ್ಕೆ ಅಪಾಯಕಾರಿಯನ್ನಾಗಿಸುತ್ತಿದೆ. ಕರ್ನಾಟಕದಂತಹ ರಾಜ್ಯವು ಕಳೆದ 19 ವರ್ಷಗಳಲ್ಲಿ 16 ವರ್ಷಗಳು, ತನ್ನ ಭೂಭಾಗದ ಅರ್ಧದಷ್ಟು ಪ್ರದೇಶದಲ್ಲಿ ಬರ ಕಂಡಿದೆ. ಹೀಗಿರುವಾಗ ನಮಗೆ ಭಾರೀ ತೊಂದರೆ ಕಾದಿದೆಯೆಂಬ ಅಪಾಯದ ಭಾವವನ್ನು ಎಲ್ಲರೂ ತಳೆಯದೇ ಇದಕ್ಕೆ ಪರಿಹಾರವೆಲ್ಲಿಯದು?
ಕನಿಷ್ಠ ಚುನಾವಣೆಯ ನಂತರವಾದರೂ, ಈ ನಿಟ್ಟಿನಲ್ಲಿ ಸಮರೋಪಾದಿ ಕೆಲಸಗಳಾಗಬೇಕು. ಈಗಾಗಲೇ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವವರ ಜೊತೆ ಕೈ ಜೋಡಿಸಬೇಕು. ಇದೇ ಮೇ 17ರಿಂದ 19ರವರೆಗೆ ತುಮಕೂರು ಜಿಲ್ಲೆಯ ಸಮತಾ ವಿದ್ಯಾಲಯದ ಆವರಣದಲ್ಲಿ ಆಸಕ್ತರಿಗೆ ಒಂದು ಕಾರ್ಯಾಗಾರವನ್ನು ಪ್ರೊ.ರವಿವರ್ಮಕುಮಾರ್ ಹಾಗೂ ಪ್ರೊ.ಯತಿರಾಜುರಂತಹ ಹಿರಿಯರು ಆಯೋಜಿಸುತ್ತಿದ್ದಾರೆ. ನೀರಿನ ತಜ್ಞ ರಾಜೇಂದ್ರ ಸಿಂಗ್ ಸಹಾ ಅಲ್ಲಿಗೆ ಬರುತ್ತಿದ್ದಾರೆ. ಇಂತಹ ಎಷ್ಟೋ ಪ್ರಯತ್ನಗಳು ಆಗುವ ಅಗತ್ಯವಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕರಿಗೌಡರು ತಮ್ಮ ವ್ಯಾಪ್ತಿಯ ಕೆರೆಗಳ ಹೂಳೆತ್ತಿಸುವುದನ್ನು ಆದ್ಯತೆಯ ವಿಷಯವನ್ನಾಗಿಸಿಕೊಂಡಿದ್ದಾರೆ. ಇಂತಹುದೇ ಕೆಲಸವನ್ನು ಮಾರುತಿ ಪ್ರಸನ್ನ ಎಂಬ ತಹಸೀಲ್ದಾರರು ಮಂಡ್ಯ ತಾಲೂಕಿನಲ್ಲಿ ಮಾಡಿದ್ದರು. ಕಲಬುರಗಿ ಜಿಲ್ಲೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ವತಿಯಿಂದ ನರೇಗಾ ಮೂಲಕವೇ ಕೆರೆಗಳನ್ನು ಸಂಪನ್ನಗೊಳಿಸುವ ಕೆಲಸವನ್ನು ಮಾಡಲಾಗಿತ್ತು. ಹೋರಾಟಗಾರ್ತಿ ಕೆ.ನೀಲಾರಂಥವರು ಅದರ ಪ್ರೇರಕ ಶಕ್ತಿಯಾಗಿದ್ದರು. ಹಾಸನದಲ್ಲಿ ರೂಪಾ ಹಾಸನ, ಅಧಿಕಾರಿ ಎಚ್.ಎಲ್.ನಾಗರಾಜು ಅವರುಗಳೂ ರಚನಾತ್ಮಕವಾದ ಈ ಕೆಲಸಗಳಲ್ಲಿ ಮುಂಚೂಣಿ ಪಾತ್ರ ವಹಿಸಿದ್ದರು. ಸರ್ಕಾರ ಮತ್ತು ಜನರು ಜೊತೆಗೂಡಬಹುದಾದ ಬಹಳ ಮುಖ್ಯವಾದ ಕ್ಷೇತ್ರ ಇದು.
ಆದರೆ, ನಮ್ಮ ಹೆಚ್ಚಿನ ಜನಪ್ರತಿನಿಧಿಗಳು ಮತ್ತು ಅಧಿಕಾರಶಾಹಿಯು ಸಾಮಾನ್ಯವಾಗಿ ಇಂಥವನ್ನು ಹಾಳುಗೆಡಹುವ ಯೋಜನೆಗಳನ್ನೇ ರೂಪಿಸುತ್ತಾರೆ. ಪ್ರಾಮಾಣಿಕರೆಂದು ಹೆಸರು ಮಾಡಿರುವವರು ರೂಲ್ ಪುಸ್ತಕವನ್ನಿಟ್ಟುಕೊಂಡು ತೊಂದರೆ ಕೊಡಲು ಸಾಧ್ಯವಿರುವುದನ್ನೆಲ್ಲಾ ಮಾಡುತ್ತಾರೆ. ಪಾರ್ಲಿಮೆಂಟ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗ್ರಾಮೀಣಾಭಿವೃದ್ಧಿ ಸಚಿವರು, ‘ಹೇಗೂ ಕರ್ನಾಟಕದ ಚುನಾವಣೆ ಮುಗಿದಿದೆ. ಬರಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲು ಜಿ.ಪಂ ಸಿಇಓಗಳ ಸಭೆ ಕರೆಯಬೇಕು’ ಎಂದರೆ ಚುನಾವಣಾ ಆಯೋಗ ಬಿಡುತ್ತಿಲ್ಲವಂತೆ.
ನಾವಿರುವ ಪರಿಸರ, ನೆಲ, ಜಲಗಳನ್ನು ಸಂರಕ್ಷಿಸುವುದು ಮುಂದಿನ ದಿನಗಳಲ್ಲಿ ಎಲ್ಲಾ ಪಂಥೀಯರ, ವರ್ಗ ಜಾತಿ ಧರ್ಮ ಲಿಂಗಗಳ ಜನರ ಆದ್ಯತೆಯಾಗದೇ ಉಳಿಗಾಲವಿಲ್ಲ. ಅದರಲ್ಲೂ ರಾಜಸ್ತಾನದ ನಂತರ ಅತ್ಯಂತ ಹೆಚ್ಚು ಬರಪೀಡಿತ ಪ್ರದೇಶವನ್ನು ಹೊಂದಿರುವ ಕರ್ನಾಟಕವು ಎಚ್ಚೆತ್ತುಕೊಳ್ಳಬೇಕಿದೆ. ಶಿರಾದಲ್ಲಿ ನಡೆಯುತ್ತಿರುವ ಶಿಬಿರವು ಚೈತನ್ಯವುಳ್ಳ ಯುವಜನರನ್ನು ಸಿದ್ಧಗೊಳಿಸಿ, ಕರ್ನಾಟಕವನ್ನು ಜಾಗೃತಿಗೊಳಿಸಲಿ ಎಂಬ ಆಶಯ ನಮ್ಮದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...