ದೆಹಲಿಗೆ ನೀಡಬೇಕಾಗಿದ್ದ ವೈದ್ಯಕೀಯ ಆಕ್ಸಿಜನ್‌ನ ಪ್ರಮಾಣವನ್ನು ಕಡಿಮೆಗೊಳಿಸಿ, ಇತರ ರಾಜ್ಯಗಳ ಕಡೆಗೆ ತಿರುಗಿಸಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಕೇಂದ್ರದ ವಿರುದ್ದ ಗಂಭೀರ ಆರೋಪ ಹೊರಿಸಿದ್ದಾರೆ. ದೆಹಲಿಗೆ ಮೀಸಲಾಗಿದ್ದ 140 ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ಇತರ ರಾಜ್ಯಗಳಿಗೆ ತಿರುಗಿಸಲಾಗಿದ್ದು, ಅದನ್ನು ಮತ್ತೇ ದೆಹಲಿಗೆ ನೀಡಬೇಕು ಎಂದು ಕೇಜ್ರಿವಾಲ್ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದಿದ್ದಾರೆ.
ದೆಹಲಿಯು ಆಕ್ಸಿಜನ್‌ನ ತೀವ್ರ ಕೊರತೆಯನ್ನು ಎದುರಿಸುತ್ತಿದ್ದು, ರಾಜ್ಯದಲ್ಲಿ ಆಕ್ಸಿಜನ್ “ತುರ್ತುಸ್ಥಿತಿ”ಯಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ ಬಿಕ್ಕಟ್ಟು ಎದುರಿಸಲು ಸೇನೆಯ ಅಗತ್ಯವಿದೆ- ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ದೆಹಲಿಯು ತೀವ್ರ ಆಕ್ಸಿಜನ್‌ನ ಕೊರತೆಯನ್ನು ಎದುರಿಸುತ್ತಿದೆ. ತೀವ್ರವಾಗಿ ಹೆಚ್ಚುತ್ತಿರುವ ಪ್ರಕರಣಗಳ ದೃಷ್ಟಿಯಿಂದ, ದೆಹಲಿಯು ಸಾಮಾನ್ಯ ಪೂರೈಕೆಗಿಂತ ಹೆಚ್ಚಿನ ಆಕ್ಸಿಜನ್ ಅನ್ನು ಬಯಸುತ್ತದೆ. ಕೇಂದ್ರವು ಆಕ್ಸಿಜನ್ ಪೂರೈಕೆಯನ್ನು ಹೆಚ್ಚಿಸುವ ಬದಲು, ನಮ್ಮ ಸಾಮಾನ್ಯ ಪೂರೈಕೆಯನ್ನು ತೀವ್ರವಾಗಿ ಕಡಿಮೆ ಮಾಡಲಾಗಿದೆ. ಅಲ್ಲದೆ ದೆಹಲಿಯ ಕೋಟಾವನ್ನು ಇತರ ರಾಜ್ಯಗಳಿಗೆ ತಿರುಗಿಸಲಾಗಿದೆ. ದೆಹಲಿಯಲ್ಲಿ ಆಕ್ಸಿಜನ್ ಎಮರ್ಜೆನ್ಸಿಯಾಗಿ ಮಾರ್ಪಟ್ಟಿದೆ” ಎಂದು ಬರೆದಿದ್ದಾರೆ.
Del facing acute shortage of oxygen. In view of sharply increasing cases, Del needs much more than normal supply. Rather than increasing supply, our normal supply has been sharply reduced and Delhi’s quota has been diverted to other states.
OXYGEN HAS BECOME AN EMERGENCY IN DEL
— Arvind Kejriwal (@ArvindKejriwal) April 18, 2021
“ನಮಗೆ ಹಾಸಿಗೆಗಳು,ಐಸಿಯು ಹಾಸಿಗೆ, ಆಕ್ಸಿಜನ್ ಬೇಕಾಗಿದೆ…ನಾವು ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದ್ದೇವೆ” ಎಂದು ಕೇಜ್ರಿವಾಲ್ ಇಂದು ಬೆಳಿಗ್ಗೆ ನಡೆದ ಕ್ಯಾಬಿನೆಟ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಹಿಂದುತ್ವದ ಉತ್ಕರ್ಷ ಮತ್ತು ಮುಸ್ಲಿಂ ಜನಪ್ರಾತಿನಿಧ್ಯಕ್ಕೆ ಹೊಡೆತ: ಇದೊಂದು ಗಂಭೀರ ಸಾಮಾಜಿಕ ದುರಂತ
ದೆಹಲಿ ಸರ್ಕಾರವು ಈಗಾಗಲೇ ಆಕ್ಸಿಜನ್‌ನ ಸಂಗ್ರಹಕ್ಕೆ ಸಹಾಯ ಮಾಡುವಂತೆ ಕೇಂದ್ರ ಸರ್ಕಾರದೊಂದಿಗೆ ಈಗಾಗಲೆ ಕೇಳಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದರು.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ಕೇಜ್ರವಾಲ್ ಪತ್ರ ಬರೆದಿದ್ದಾರೆ. ಪತ್ರದಲ್ಲಿ, “ದೆಹಲಿಯ ವಿವಿಧ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸುವ ಪ್ರಮುಖ ಪೂರೈಕೆದಾರರಲ್ಲಿ ಒಬ್ಬರಾದ ‘ಮೆಸರ್ಸ್ ಇನಾಕ್ಸ್’ನ ಉತ್ಪಾದನೆಯನ್ನು ಹೆಚ್ಚಾಗಿ ಇತರ ರಾಜ್ಯಗಳಿಗೆ ತಿರುಗಿಸಲಾಗಿದೆ. ಈ ನಿರ್ಣಾಯಕ ಹಂತದಲ್ಲಿ, ಈಗ ದೆಹಲಿಗೆ ನಿಯೋಜಿಸಲಾಗಿರುವ ಹೊಸ ಪೂರೈಕೆದಾರರೊಂದಿಗೆ ಆಸ್ಪತ್ರೆಗಳು ಒಪ್ಪಂದದ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ. ಇದು ಪ್ರಮುಖ ಆಸ್ಪತ್ರೆಗಳಲ್ಲಿ ಭಾರಿ ಕೊರತೆಯನ್ನು ಉಂಟುಮಾಡುತ್ತಿದೆ” ಎಂದು ಬರೆದಿದ್ದಾರೆ.
ಇದನ್ನೂ ಓದಿ: ಒಡಲಿನಾಳದಿಂದ ಬಂದ ಅರಿವಿನ ಆಸ್ಫೋಟವೇ; ದಲಿತ ಚಳುವಳಿ ಮತ್ತು ಅಂಬೇಡ್ಕರ್
“ಪ್ರತಿದಿನ 700 ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ನಿರಂತರವಾಗಿ ಪೂರೈಸಲು ಮತ್ತು ಬೇರೆ ರಾಜ್ಯಗಳಿಗೆ ಮುಖಮಾಡಿರುವ 140 ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ದೆಹಲಿಗೆ ನೀಡಲು ‘ಮೆಸಸ್ ಇನಾಕ್ಸ್’ ಸೂಕ್ತ ಸೂಚನೆಗಳನ್ನು ನೀಡುವಂತೆ ನಾನು ವಿನಂತಿಸುತ್ತೇನೆ” ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪಿಯೂಷ್ ಗೋಯಲ್ ಅವರು, ದೇಶವು ತನ್ನ ಸಾಮರ್ಥ್ಯದ 110% ಆಕ್ಸಿಜನ್ ಅನ್ನು ಉತ್ಪಾದಿಸುತ್ತಿದೆ ಎಂದು ಹೇಳಿದ್ದು, ಭಾನುವಾರದಂದು ಟ್ರಕ್‌ಗಳು ಲೋಡ್ ಆಗುತ್ತಿರುವ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡದಂತಹ ಹಲವಾರು ರಾಜ್ಯಗಳು ಈಗಾಗಲೇ ಆಕ್ಸಿಜನ್‌ನ ಕೊರತೆಯಿಂದ ಬಳಲುತ್ತಿವೆ. ಪಂಜಾಬ್ ಆಕ್ಸಿಜನ್ ಕೊರತೆಯತ್ತ ಸಾಗುತ್ತಿದೆ, ಹೆಚ್ಚಿನ ಆಮ್ಲಜನಕಕ್ಕೆ ವ್ಯವಸ್ಥೆ ಮಾಡುವಂತೆ ಕೇಂದ್ರವನ್ನು ಕೇಳಿಕೊಂಡಿದೆ. ಅನೇಕ ಸ್ಥಳಗಳಲ್ಲಿ, ಜನರು ಕಾಳ ಸಂತೆಯಲ್ಲಿ ಆಕ್ಸಿಜನ್ ಖರೀದಿಸಲಾಗುತ್ತಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಕೋವಿಡ್ ಕಾರಣಕ್ಕೆ ಬಂಗಾಳದ ನನ್ನ ಎಲ್ಲಾ ಚುನಾವಣಾ ರ್‍ಯಾಲಿಗಳನ್ನು ರದ್ದುಗೊಳಿಸುತ್ತೇನೆ: ರಾಹುಲ್ ಗಾಂಧಿ
ವಿಡಿಯೋ ನೋಡಿ: ಪ್ರತಾಪಗೌಡ ಪಾಟೀಲ್ ನೀವೇನು ವಿಶ್ವೇಶ್ವರಯ್ಯನವರ? ತರಾಟೆಗೆ ತೆಗೆದುಕೊಂಡ ನೀರಾವರಿ ಹೋರಾಟಗಾರರು



