ದೇಶದಲ್ಲಿ ಕೊರೊನಾ ಪ್ರಕರಣಗಳು ದಾಖಲೆಯ ಹೆಚ್ಚಳ ಕಾಣುತ್ತಿದೆ. ತೀವ್ರ ಆಮ್ಲಜನಕದ ಬಿಕ್ಕಟ್ಟಿಗೆ ದೇಶ ಒಳಗಾಗಿದೆ. ಇವುಗಳಿಗೆ ಪರಿಹಾರ ಒದಗಿಸಲು ವ್ಯವಸ್ಥೆಯು ವಿಫಲವಾಗಿರುವ ಕಾರಣ ರಾಜಕೀಯ ಕೆಲಸ ಬಿಟ್ಟು ಸಾರ್ವಜನಿಕರಿಗೆ ಸಹಾಯ ಮಾಡುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತರು, ಮುಖಂಡರಲ್ಲಿ ಮನವಿ ಮಾಡಿದ್ದಾರೆ.
ತಮ್ಮ ಟ್ವಿಟರ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ರಾಹುಲ್ ಗಾಂಧಿ, ’ವ್ಯವಸ್ಥೆಯು ವಿಫಲವಾಗಿದೆ, ಆದ್ದರಿಂದ ಜನ್ ಕಿ ಬಾತ್ ಮಾಡುವುದು ಮುಖ್ಯವಾಗಿದೆ” ಎಂದು, ಪ್ರಧಾನಿಯವರ ಮನ್ ಕಿ ಬಾತ್ ಅನ್ನು ಟೀಕಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,767 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ದಾಖಲೆಯ 3,49,691 ಹೊಸ ಕೊರೊನಾ ಸೋಂಕು ಪ್ರಕರಣಗಳನ್ನು ದಾಖಲಿಸಿದೆ.
ಇದನ್ನೂ ಓದಿ: ಸಾಂಕ್ರಾಮಿಕ ದುರಂತದ ಸಮಯದಲ್ಲಿ ಐಪಿಎಲ್ ಕವರೇಜ್ ಮಾಡುವುದಿಲ್ಲವೆಂದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್!
‘System’ failed, so it’s important to do Jan ki baat:
In this crisis, the country needs responsible citizens. I request my Congress colleagues to leave all political work- just provide all help and ease the pain of our countrymen.
This is the Dharma of the Congress family.
— Rahul Gandhi (@RahulGandhi) April 25, 2021
“ವ್ಯವಸ್ಥೆ ವಿಫಲವಾಗಿದೆ. ಜನ್ ಕಿ ಬಾತ್ ಮಾಡುವುದು ಮುಖ್ಯವಾಗಿದೆ. ಈ ಬಿಕ್ಕಟ್ಟಿನಲ್ಲಿ, ದೇಶಕ್ಕೆ ಜವಾಬ್ದಾರಿಯುತ ನಾಗರಿಕರು ಬೇಕಾಗಿದ್ದಾರೆ. ಎಲ್ಲಾ ರಾಜಕೀಯ ಕೆಲಸಗಳನ್ನು ತೊರೆದು, ಸಾರ್ವಜನಿಕರಿಗೆ ಎಲ್ಲಾ ಸಹಾಯವನ್ನು ನೀಡಿ, ನಮ್ಮ ದೇಶದ ಜನರ ನೋವನ್ನು ಕಡಿಮೆ ಮಾಡಿ ಎಂದು ನನ್ನ ಕಾಂಗ್ರೆಸ್ ಸಹೋದ್ಯೋಗಿಗಳಿಗೆ ವಿನಂತಿ ಮಾಡುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
“ಇದು ಕಾಂಗ್ರೆಸ್ ಕುಟುಂಬದ ಧರ್ಮ” ತಮ್ಮ ಟ್ವೀಟ್‌ನಲ್ಲಿ ಸೇರಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಇನ್ನೂ ಮೂರು ಹಂತಗಳ ಚುನಾವಣೆ ಇರುವಾಗಲೇ ಕೊರೊನಾ ಕಾರಣದಿಂದ ಏಪ್ರಿಲ್ 18 ರಂದು, ರಾಹುಲ್ ಗಾಂಧಿ ಅವರು ಪಶ್ಚಿಮ ಬಂಗಾಳದಲ್ಲಿ ನಡೆಯಲಿದ್ದ ಎಲ್ಲಾ ಸಾರ್ವಜನಿಕ ರ್‍ಯಾಲಿಗಳನ್ನು ರದ್ದುಗೊಳಿಸಿದ್ದರು.
“ಕೊರೊನಾ ಪರಿಸ್ಥಿತಿಯ ದೃಷ್ಟಿಯಿಂದ, ನಾನು ಪಶ್ಚಿಮ ಬಂಗಾಳದಲ್ಲಿ ನನ್ನ ಎಲ್ಲಾ ಸಾರ್ವಜನಿಕ ರ್‍ಯಾಲಿಗಳನ್ನು ಸ್ಥಗಿತಗೊಳಿಸುತ್ತಿದ್ದೇನೆ. ಪ್ರಸ್ತುತ ಸಂದರ್ಭಗಳಲ್ಲಿ ದೊಡ್ಡ ಸಾರ್ವಜನಿಕ ರ್‍ಯಾಲಿಗಳನ್ನು ನಡೆಸುವ ಪರಿಣಾಮಗಳ ಬಗ್ಗೆ ಆಳವಾಗಿ ಯೋಚಿಸುವಂತೆ ನಾನು ಎಲ್ಲಾ ರಾಜಕೀಯ ಮುಖಂಡರಿಗೆ ಸಲಹೆ ನೀಡುತ್ತೇನೆ” ಎಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ ಕುರಿತ ಟ್ವೀಟ್‌ಗಳನ್ನು ಅಳಿಸುವಂತೆ ಮೋದಿ ಸರ್ಕಾರದ ಒತ್ತಡ!


