Homeಮುಖಪುಟಹಲವು ಧ್ವನಿಗಳಲ್ಲಿ ಅಂಬೇಡ್ಕರ್ ವಿಚಾರಗಳನ್ನು ಹಿಡಿದಿಡುತ್ತಿರುವ ಓದು ಅಭಿಯಾನ

ಹಲವು ಧ್ವನಿಗಳಲ್ಲಿ ಅಂಬೇಡ್ಕರ್ ವಿಚಾರಗಳನ್ನು ಹಿಡಿದಿಡುತ್ತಿರುವ ಓದು ಅಭಿಯಾನ

- Advertisement -
- Advertisement -

ಕನ್ನಡ ಕಿರುತೆರೆಯಲ್ಲಿ ಭಾರಿ ಜನಪ್ರಿಯತೆ ಗಳಿಸಿ ಹೊಸ ಅಲೆಯನ್ನೇ ಸೃಷ್ಟಿಸಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಆಧಾರಿತ ಧಾರಾವಾಹಿ ಮಹಾನಾಯಕ. (ಹಿಂದಿಯ ಏಕ್ ಮಹಾನಾಯಕ್ ಧಾರಾವಾಹಿಯ ಡಬ್ಬಿಂಗ್). ಈ ಧಾರಾವಾಹಿ ಅಂಬೇಡ್ಕರ್ ಬದುಕಿನ ಹಲವು ಘಟ್ಟಗಳನ್ನು ಕನ್ನಡಿಗರಿಗೆ ತಿಳಿಸಲು ಸಹಕಾರಿಯಾಗಿತ್ತು. ನಗರ-ಗ್ರಾಮೀಣ ಪ್ರದೇಶಗಳಲ್ಲಿ ಈ ಧಾರಾವಾಹಿ ಬೀರಿದ ಪ್ರಭಾವ ಹಲವು ಬಗೆಯದ್ದು. ಇಂದಿಗೂ ಗ್ರಾಮಗಳ ಹೆಬ್ಬಾಗಿಲುಗಳಲ್ಲಿ ಈ ಧಾರಾವಾಹಿಯ ದೊಡ್ಡ ಭಿತ್ತಿಚಿತ್ರಗಳು ಕಾಣಿಸುತ್ತವೆ. ಇದರಿಂದ ಪ್ರೇರಣೆಗೊಂಡು ಅಂಬೇಡ್ಕರ್ ವಿಚಾರಗಳನ್ನು ಕನ್ನಡಿಗರ ಕಿವಿಗೆ ಅಪ್ಪಳಿಸುವಂತೆ ಮಾಡಲು ಅಂಬೇಡ್ಕರ್ ಓದು ಅಭಿಯಾನ ಆರಂಭಿಸಿದವರು ಅರುಣ್ ಜೋಳದಕೂಡ್ಲಿಗಿ.

ಮಹಾನಾಯಕ ಧಾರಾವಾಹಿ ಪ್ರಸಾರ ಆರಂಭಿಸಿದಂತೆ ಜನರು ಅಂತರ್ಜಾಲದಲ್ಲಿ ಹೆಚ್ಚಾಗಿ ಅಂಬೇಡ್ಕರ್ ಬರಹ ಭಾಷಣಗಳ ಹುಡುಕಾಟ ಶುರುಮಾಡಿದ್ದರು. ಇದರಲ್ಲಿ ಯೂಟ್ಯೂಬ್‌ನಲ್ಲಿ ಹುಡುಕಾಟ ಮಾಡುವವರ ಸಂಖ್ಯೆ ದೊಡ್ಡದು. ಆದರೆ ಕನ್ನಡದಲ್ಲಿ ಅಂಬೇಡ್ಕರ್ ವಿಚಾರಗಳನ್ನು ಪ್ರಸ್ತುತ ಪಡಿಸುವ ವಿಡಿಯೋ, ಆಡಿಯೋಗಳು ಬಹಳ ಕಡಿಮೆ. ಹೀಗಾಗಿ ಅಂಬೇಡ್ಕರ್ ವಿಚಾರ, ಚಿಂತನೆ, ಭಾಷಣಗಳನ್ನು ಸಾಮಾನ್ಯ ಜನರಿಗೆ ತಿಳಿಸುವ ಉದ್ದೇಶ ಈ ಓದು ಅಭಿಯಾನ ಸರಣಿಯದ್ದು.

ಅಂಬೇಡ್ಕರ್ ವೈಚಾರಿಕತೆ – ಚಿಂತನೆಯಲ್ಲಿ ನಂಬಿಕೆ ಇಟ್ಟವರಿಂದ ಅಂಬೇಡ್ಕರ್ ಬರಹ-ಭಾಷಣಗಳ ಆಯ್ದ ಭಾಗಗಳನ್ನು ಓದಿಸಿ ಈ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಕಲಾಗುತ್ತಿದೆ. ಅಂಬೇಡ್ಕರ್ ಚಿಂತನೆಯನ್ನು ಸಾಧ್ಯವಾದಷ್ಟು ಸಾಮಾನ್ಯ ಜನರಿಗೆ ವಿಸ್ತರಿಸುವ ಕನಸು ಈ ಸರಣಿಯ ಹಿಂದಿದೆ. ಅಂತೆಯೇ ಬಾಬಾಸಾಹೇಬರ ಚಿಂತನೆಯ ಆಡಿಯೋ ರೂಪದ ಆರ್ಕೈವ್ ರೂಪಿಸುವ ಉದ್ದೇಶ ಅರುಣ್ ಜೋಳದಕೂಡ್ಲಿಗಿ ಅವರಿಗಿದೆ.

“ಅಂಬೇಡ್ಕರ್ ಕುರಿತ ಧಾರಾವಾಹಿ ಮಹಾನಾಯಕ ಪ್ರಸಾರವಾದಾಗ ಇಂಟರ್‌ನೆಟ್‌ನಲ್ಲಿ ಹೆಚ್ಚಾಗಿ ಜನ ಅಂಬೇಡ್ಕರ್ ಬಗ್ಗೆ ಹುಡುಕಾಡಿದ್ದಾರೆ. ಈ ಧಾರವಾಹಿ ಮೂಲಕ ಜನಪ್ರಿಯ ವಲಯದಲ್ಲಿ ಅಂಬೇಡ್ಕರ್ ಬಗ್ಗೆ ತಿಳಿಯುವ ಕುತೂಹಲ ಹೆಚ್ಚಾಯಿತು. ಹಾಗಾಗಿ ಹೆಚ್ಚು ಜನ ಹುಡುಕಾಡಿದ್ದಾರೆ. ನಾನುಗೌರಿ.ಕಾಂ ಕೂಡ ಈ ಬಗ್ಗೆ ಲೇಖನ ಮಾಡಿತ್ತು. ಅದನ್ನು ಓದಿದ ನಂತರ ನಾನು ಕೂಡ ಹುಡುಕಾಡಿದೆ. ಆದರೆ ಎಂಟತ್ತು ಭಾಷಣಗಳು ಹಾಗೂ ಕೆಲವು ಹಾಡುಗಳು ಮಾತ್ರ ಸಿಗುತ್ತಿತ್ತು. ಕನ್ನಡದಲ್ಲಿ ಅಂಬೇಡ್ಕರ್ ಅವರ ಚಿಂತನೆಗಳ ವಿಡಿಯೋ, ಆಡಿಯೋ ಅಷ್ಟಾಗಿ ಇಲ್ಲ ಎಂಬುದು ತಿಳಿಯಿತು. ಹಾಗಾಗಿ ಈ ಪ್ರಯತ್ನಕ್ಕೆ ಕೈಹಾಕಿದ್ದೇನೆ” ಎನ್ನುತ್ತಾರೆ ಅರುಣ್.

ಅರುಣ್ ಜೋಳದಕೂಡ್ಲಿಗಿ

ಪ್ರಸ್ತುತ ಜಾನಪದ ವಿಶ್ವವಿದ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಅರುಣ್ ಈ ಅಭಿಯಾನದ ಬಗ್ಗೆ ಹೇಳಿದ್ದು ಹೀಗೆ: “ಅಂಬೇಡ್ಕರ್ ವಿಚಾರಗಳನ್ನು ಸಂಪುಟಗಳಲ್ಲಿ ಕೊಟ್ಟರೆ ಅದು ಹಾಗೆ ಮನೆಯ ಕಪಾಟುಗಳಲ್ಲಿ ಉಳಿದುಬಿಡುವ ಸಾಧ್ಯತೆ ಇದೆ. ಜನ ಅದನ್ನು ಮತ್ತೆ ತೆರೆದು ನೋಡುವುದು ಕಡಿಮೆ. ಬೇಸಿಕ್ ವಿಚಾರಗಳನ್ನು ಜನರಿಗೆ ಹಂಚುವ ಉದ್ದೇಶದಿಂದ ಮೊದಲು ಸುಮಾರು 300 ಜನರಿಗೆ ನನ್ನ ವಿಚಾರ ತಿಳಿಸಿದೆ. ಆದರೆ ಅಂತಹ ಸ್ಪಂದನೆ ಸಿಗಲಿಲ್ಲ. ಆಮೇಲೆ ನಾನು ವೈಯಕ್ತಿಕವಾಗಿ ಕರೆ ಮಾಡಿ ಕೇಳಿಕೊಂಡ ನಂತರ ಕೆಲವರು ಒಪ್ಪಿದರು” ಎನ್ನುತ್ತಾರೆ.

“ಮೊದಲು ನನಗೆ ಆಡಿಯೋ ಕಳಿಸಿದ್ದು ಲೇಖಕಿ ಎಚ್.ಎಸ್.ಅನುಪಮಾ ಅವರು. ಹಾಗಾಗಿ ಅವರದ್ದೇ ಆಡಿಯೋವನ್ನು 7 ಸೆಪ್ಟಂಬರ್ 2020ರಂದು ಮೊದಲ ಸಂಚಿಕೆಯಾಗಿ ಪ್ರಸಾರ ಮಾಡಿದೆ. ಈ ಅಭಿಯಾನದಲ್ಲಿ ಇಂತವರೇ ಓದಬೇಕು ಅನ್ನುವ ನಿಯಮಗಳಿಲ್ಲ. ಎಲ್ಲರೂ ಓದಬಹುದು. ಕನಿಷ್ಠ 10 ರಿಂದ 15 ನಿಮಿಷಗಳ ಆಡಿಯೋ ಮಾಡಿ ಕಳುಹಿಸಬಹುದು”.

“ಪ್ರತಿದಿನ ಹಾಕುವ ಈ ಆಡಿಯೋಗಳು ಎಷ್ಟು ಜನಕ್ಕೆ ತಲುಪುತ್ತದೋ ಗೊತ್ತಿಲ್ಲ. ಆದರೆ, ಒಳ್ಳೆಯ ಸ್ಪಂದನೆ ಸಿಗುತ್ತಿದೆ. ಹೆಚ್ಚು ಶೇರ್ ಆಗುತ್ತಿದೆ. ಒಟ್ಟು 100 ಗಂಟೆಗಳ ಆಡಿಯೋ ಮಾಡುವುದು ನನ್ನ ಉದ್ದೇಶ. ಇಲ್ಲಿಯವರೆಗೆ 160 ಆಡಿಯೋಗಳನ್ನು ಅಪ್ಲೋಡ್ ಮಾಡಲಾಗಿದೆ. ಮುಂದಕ್ಕೆ ಸುಮಾರು 700ಕ್ಕೂ ಹೆಚ್ಚು ಆಡಿಯೋ ಕ್ಲಿಪ್‌ಗಳು ಆಗಬಹುದು. ಒಟ್ಟಾರೆ ಕನ್ನಡದಲ್ಲಿ ಅಂಬೇಡ್ಕರ್ ವಿಚಾರಗಳು, ಅವರ ಭಾಷಣಗಳು ಜನರಿಗೆ ಸುಲಭವಾಗಿ ಸಿಗಬೇಕು. ಅದಕ್ಕೊಂದು ಆರ್ಕೈವ್ ಬೇಕು. ಅದನ್ನೂ ಮಾಡುವ ಕೆಲಸ ಮಾಡುತ್ತಿದ್ದೇನೆ” ಎನ್ನುತ್ತಾರೆ.

ಬೇರೆ ಭಾಷೆಗಳಲ್ಲಿ ಇಂತಹ ಒಂದು ಪ್ರಯತ್ನ ನಡೆದಿಲ್ಲ. ಹಾಗಾಗಿ ಕನ್ನಡ ಒಂದು ಮಾದರಿಯಾಗಲಿದೆ. ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಅಂಬೇಡ್ಕರ್ ಕೇಂದ್ರಗಳಿವೆ. ಕೋಟ್ಯಂತರ ರೂಪಾಯಿ ಅನುದಾನ ಬರುತ್ತೆ. ಆದರೆ, ವರ್ಷಕ್ಕೆ ಸುಮಾರು 3-4 ಲಕ್ಷ ಖರ್ಚು ಮಾಡಿ ಒಂದು ಕಾರ್ಯಕ್ರಮ ಮಾಡಿ ಸುಮ್ಮನಾಗುತ್ತಾರೆ. ಆದರೆ ಈ ಮೂಲಕ ಅಂಬೇಡ್ಕರ್ ಜನಸಾಮಾನ್ಯರಿಗೆ ದಕ್ಕುವುದಿಲ್ಲ. ಹಾಗಾಗಿ ಅವರನ್ನು ಬೈಯುತ್ತಾ, ವಿಮರ್ಶೆ ಮಾಡಿಕೊಂಡು ಕುಳಿತುಕೊಳ್ಳುವ ಬದಲು ನಾವೇ ಏನಾದರೂ ಮಾಡಬೇಕು ಅಲ್ಲವೇ ಎಂದು ಪ್ರಶ್ನಿಸುತ್ತಾರೆ ಅರುಣ್.

“ಬಿ.ಸುರೇಶ್, ಎಚ್.ಎಸ್.ಅನುಪಮಾ, ಎಚ್.ಎಸ್.ರಾಘವೇಂದ್ರ ರಾವ್, ದೇವನೂರು ಮಹಾದೇವ, ಮಂಜಮ್ಮ ಜೋಗತಿ ಹೀಗೆ ಹಲವು ಪ್ರಸಿದ್ಧರು ಓದು ಅಭಿಯಾನದ ಭಾಗವಾಗಿದ್ದಾರೆ. ಈಗಾಗಲೇ 160 ಸಂಚಿಕೆಗಳಾಗಿವೆ. 2ನೇ ಸರಣಿ ಆರಂಭವಾದಾಗ ಹೆಚ್ಚು ಜನ ಸಕ್ರಿಯರಾಗಿದ್ದಾರೆ. ತುಂಬಾ ಜನ ತಾವೇ ಮುಂದಾಗಿ ಓದು ಅಭಿಯಾನದ ಭಾಗವಾಗಲು ಬರುತ್ತಿದ್ದಾರೆ. ಅಂತಹವರನ್ನು ನಾವು ಪ್ರೋತ್ಸಾಹಿಸುತ್ತಿದ್ದೇವೆ. ಹೆಣ್ಣು ಮಕ್ಕಳಿಗೆ ಹೆಚ್ಚು ಪ್ರಾಮುಖ್ಯತೆಯಿದೆ. ಹೊಸ ಹೊಸ ವಿಚಾರಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ನಾನೇ ಸಂಪುಟಗಳಿಂದ ಪಠ್ಯವನ್ನು ಆರಿಸಿಕೊಡುತ್ತಿದ್ದೇನೆ” ಎಂದು ಅರುಣ್ ತಿಳಿಸುತ್ತಾರೆ.

“ಅಂಬೇಡ್ಕರ್ ಅವರ ಚಿಂತನೆಗಳು ಕೇವಲ ಜಾತಿ, ತಾರತಮ್ಯದ ವಿರುದ್ಧದ ಹೋರಾಟಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ವಿಜ್ಞಾನ, ತಂತ್ರಜ್ಞಾನದ ಕುರಿತು ಮಾತನಾಡಿದ್ದಾರೆ. ಹಲವು ವಿಚಾರಗಳನ್ನು ತಮ್ಮ ಭಾಷಣಗಳಲ್ಲಿ, ಬರಹಗಳಲ್ಲಿ ತಿಳಿಸಿದ್ದಾರೆ. ಹಾಗಾಗಿ ಇವುಗಳ ಮೂಲಕವೂ ಅಂಬೇಡ್ಕರ್ ಅವರ ಮಾತುಗಳನ್ನು ಜನರ ಕಿವಿಗೆ ತಲುಪಿಸುವ ಕೆಲಸವಾಗುತ್ತಿದೆ” ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಓದು ಸರಣಿಯಲ್ಲಿ ಪಾಲ್ಗೊಂಡಿರುವ ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತ ಹರ್ಷ ಕುಗ್ವೆ “ಇದೊಂದು ಉತ್ತಮ ಕೆಲಸ. ಭಾರತದಲ್ಲಿ ಯಾವ ಭಾಷೆಯಲ್ಲಿಯೂ ಅಂಬೇಡ್ಕರ್ ಅವರನ್ನು ಹೀಗೆ ಕಟ್ಟಿಕೊಡುವ ಕೆಲಸವಾಗಿಲ್ಲ. ಅರುಣ್ ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅಂಬೇಡ್ಕರ್ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಈ ಕೆಲಸ ಬೇಕಾಗಿತ್ತು. ನಾನು ದೀರ್ಘವಾಗಿ ಒಂದು ಗಂಟೆ ಕಾಲ ಅಂಬೇಡ್ಕರ್ ವಿಚಾರಗಳನ್ನು ಓದಿದ್ದೇನೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆ ಒಂದು ಕಿರುತೆರೆಯ ಧಾರಾವಾಹಿ ಕೂಡ ಜನರ ಮೇಲೆ ಪ್ರಭಾವ ಬೀರಬಲ್ಲದು. ಕೇವಲ ಅತ್ತೆ ಸೊಸೆ ಜಗಳ, ಗಂಡಿಗಾಗಿ ಅಕ್ಕ-ತಂಗಿ ಜಗಳ ಮಾತ್ರವಲ್ಲದೆ, ಕೆಲವು ಧಾರಾವಾಹಿಗಳು ಉತ್ತಮ ಕೆಲಸಗಳಿಗೆ ಕಾರಣವಾಗುತ್ತದೆ ಎಂಬುದನ್ನು ಮಹಾನಾಯಕ ತಿಳಿಸಿಕೊಟ್ಟಿದೆ.


ಇದನ್ನೂ ಓದಿ: ಬಹುಜನ ಭಾರತ: ಕಲ್ಲನಾಗರಕೆ ಹಾಲೆರೆವವರ ಡಾಂಭಿಕತನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...