HomeಮುಖಪುಟTik tok : ಮತ್ತೆ ಬಂದ ಟಿಕ್ ಟಾಕ್ ಆಪ್ ಸುತ್ತಾ ನಾವು ತಿಳಿದಿರಬೇಕಾದ ಸಂಗತಿಗಳು....

Tik tok : ಮತ್ತೆ ಬಂದ ಟಿಕ್ ಟಾಕ್ ಆಪ್ ಸುತ್ತಾ ನಾವು ತಿಳಿದಿರಬೇಕಾದ ಸಂಗತಿಗಳು….

- Advertisement -
- Advertisement -

| ನಾನುಗೌರಿ ಡೆಸ್ಕ್ |

ಬಹಳಷ್ಟು ಯುವಕ ಯುವತಿಯರಿಗೆ ಚಿಕ್ಕಂದಿನಿಂದಲೂ ತಾವು ಸಿನೆಮಾ ನಟ ನಟಿಯರಾಗಬೇಕು, ಟಿವಿಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಹಂಬಲ, ಕನಸು ಇದ್ದೇ ಇರುತ್ತದೆ. ಆದರೆ ಸಾವಿರಕ್ಕೆ ಅಥವಾ ಲಕ್ಷಕ್ಕೆ ಒಬ್ಬರು ಮಾತ್ರ ಆ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗುವುದು ವಾಸ್ತವದ ಸಂಗತಿ. ಇನ್ನುಳಿದವರ ಕೊರಗು ನಿವಾರಿಸಲು ಒಂದು ಮಟ್ಟಿಗೆ ಸಹಾಯ ಮಾಡಿದ್ದು ಫೇಸ್‍ಬುಕ್ ಮತ್ತು ವಾಟ್ಸಾಪ್. ತಮಗನ್ನಿಸಿದ್ದನ್ನು ಬರೆಯುವ, ವಿಡಿಯೊ ಮಾಡಿ ಅಪ್ ಲೋಡ್ ಮಾಡಲು ಅವಕಾಶ ಇದರಿಂದ ಸಿಕ್ಕಿತ್ತು. ಆದರೆ ಯಾವಾಗ ಟಿಕ್ ಟಾಪ್ ಆಪ್ ಬಂದಿತ್ತೋ ಹಲವಾರು ಜನ ತಮ್ಮ ಕನಸನ್ನು ನನಸು ಮಾಡಿಕೊಂಡರು. ಈ ಆಪ್ ಮೂಲಕ ಅಭಿನಯಿಸಿ, ನೃತ್ಯ ಮಾಡಿ ಅದನ್ನು ಸಾವಿರಾರು ಜನಕ್ಕೆ ತೋರಿಸಿ ಸಂತೃಪ್ತಿಪಟ್ಟುಕೊಂಡರು. ಅಂತಹ ಆಪ್ ಅನ್ನು ನಿಷೇಧಿಸಬೇಕೆನ್ನುವ ಮೂಲಕ ಸಾವಿರಾರು ಯುವನಜನರಿಗೆ ದಿಢೀರ್ ಶಾಕ್ ನೀಡಲಾಗಿತ್ತು.

20ಕೋಟಿಗೂ ಹೆಚ್ಚು ಜನ ಬಳಸುವ ಟಿಕ್ ಟಾಕ್ ಎಂಬ ಮನರಂಜನಾ ಆಪ್ ಬ್ಯಾನ್ ಆಗಿದೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಹರಿದಾಡುತ್ತಿತ್ತು. ಆಪಲ್ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇಸ್ಟೋರ್‍ನಲ್ಲಿ ರದ್ದಾಗಿ ಡೌನ್‍ಲೋಡ್ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈಗ ಈ ಆಪ್ ಮತ್ತೆ ಗೂಗಲ್ ಪ್ಲೇಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‍ನಲ್ಲಿ ಕಾಣಿಸಿಕೊಂಡಿದ್ದು ಡೌನ್‍ಲೋಡ್‍ಗೆ ಲಭ್ಯವಾಗಿದೆ.

ಆರಂಭದಲ್ಲಿ ಡಬ್‍ಸ್ಮ್ಯಾಷ್ ಎಂದು ಕರೆಯಲ್ಪಡುತ್ತಿದ್ದ ಈ ಆಪ್ ನಂತರ ಮ್ಯುಸಿಕಲಿ ಎಂದಾಗಿತ್ತು. ಕೊನೆಗೆ ಟಿಕ್ ಟಾಕ್ ಎಂದು ಬದಲಿಸಕೊಂಡಮೇಲೆ ಸಾಕಷ್ಟು ಜನಪ್ರಿಯತೆಯ ಜೊತೆಗೆ ಕೋಟ್ಯಾಂತರ ಜನರು ಡೌನ್‍ಲೋಡ್ ಮಾಡಿಕೊಂಡು ಬಳಸಲು ಆರಂಭಿಸಿದ್ದರು. ಮಿಮಿಕ್ರಿಯಿಂದ ಆರಂಭವಾದು ಇದು ದೊಡ್ಡ ಸ್ಟಾರ್ ನಟನನ್ನು ಅನುಸರಿಲು ಬಳುಸತ್ತಿದ್ದರು. ಡಬ್‍ಸ್ಮ್ಯಾಷ್ ಮಾಡುವ ಮೂಲಕ ಇಷ್ಟ ಪಟ್ಟ ನಟನ ಅಭಿನಯವನ್ನು ನಕಲು ಮಾಡುವುದು, ಅವರ ಧ್ವನಿಗೆ ಇವರು ಅಭಿನಯಿಸಲು ಶುರು ಮಾಡಿದಾಗ ಇದು ಹೊಸ ರೀತಿಯ ಅಲೆಯನ್ನು ಮೂಡಿಸಿತ್ತು. ಈಗ ಅದೇ ರೀತಿಯ ಹಲವಾರು ಆಪ್ ಬಂದಿದ್ದು ಅದರಲ್ಲಿ ಟಿಕ್ ಟಾಕ್ ಮೇಲುಗೈ ಸಾಧಿಸಿದೆ.

ಮುಖ್ಯವಾಗಿ ಯುವಜನರು ಮತ್ತು ಸ್ಥಳೀಯ ಭಾಷಿಕರ ಮನಸ್ಥಿತಿಯನ್ನು ಅಧ್ಯಯನ ಮಾಡಿ ಆಪ್ ಡೆವಲಪ್ ಮಾಡಿದಂತಿದೆ. ಹಲವು ಸಿನಿಮಾದ ಸಣ್ಣ ದೃಶ್ಯಗಳ ವಾಯ್ಸ್‍ಗೆ ತಮ್ಮ ಅಭಿನಯ ಸೇರಿಸಿ ಚಿಕ್ಕ ವಿಡಿಯೋಗಳನ್ನು ತಯಾರಿಸಿ ಹರಿಯಬಿಡುವುದು, ತಾವೇ ಖುದ್ದಾಗಿ ತಮಾಷೆಯ ಪ್ರಸಂಗಗಳನ್ನು ಅಭಿನಯಿಸಿ ರೆಕಾರ್ಡ್ ಮಾಡುವುದು, ಡ್ಯಾನ್ಸ್‍ಗಳನ್ನು ಮಾಡುವುದು, ಟ್ರೋಲ್ ಮಾಡುವುದು ಸೇರಿದಂತೆ ಹತ್ತು ಹಲವು ಸಣ್ಣ ವಿಡಿಯೋಗಳು ಟಿಕ್ ಟಾಕ್‍ನಲ್ಲಿ ಹರಿದಾಡಿದ್ದವು. ಕಾಲಕ್ಕೆ ತಕ್ಕಂತೆ ಒಂದು ವಿಡಿಯೋ ನೀಡಿ ಅದೇ ಮಾದರಿಯ ವಿಡಿಯೋ ಮಾಡಿ ಕಳಿಸುವಂತೆ ಚಾಲೆಂಜ್ ನೀಡಿ ಈ ಆಪ್‍ನ ಪ್ರಿಯರು ಇದರಲ್ಲೇ ಗಿರಕಿ ಹೊಡೆಯುವ ಹಾಗೆ ನೋಡಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಒಬ್ಬ ಯುವಕ ಚಾಕುವಿನಿಂದ ಕತ್ತು ಕುಯ್ದುಕೊಳ್ಳುವಂತೆ ಅಭಿನಯಿಸಲು ಹೋಗಿ ನಿಜವಾಗಿಯೂ ಕತ್ತು ಕುಯ್ದುಕೊಂಡುಬಿಟ್ಟ ವಿಡಿಯೋ ವೈರಲ್ ಆಗಿತ್ತು. ಇಂತಹ ಅತಿರೇಕವಾದಂತಹ ವ್ಯಕ್ತಿಗಳಿಂದಲೇ ಟಿಕ್ ಟಾಕ್ ಬ್ಯಾನ್ ಆಗುವ ಹಂತಕ್ಕೆ ತಲುಪಿತ್ತು.

ಎಲ್ಲಾ ವಯೋಮಾನದವರು ಸಹ ಬೇಸರ ಕಳೆಯಲು, ಟೈಮ್ ಪಾಸ್ ಮಾಡಲು ಟಕ್ ಟಾಕ್ ಬಳಸಿದರೆ ಬಹುಪಾಲು ಯುವ ಜನಾಂಗ ಇದರ ದಾಸರಂದತ್ತಿದೆ. ‘ಯಾವಾಗ ನೋಡಿದರೂ ಟಿಕ್ ಟಾಕ್‍ನಲ್ಲೇ ಮುಳುಗಿರುತ್ತೀಯಲ್ಲ’ ಎಂಬ ಟೀಕೆ ಎಲ್ಲಾ ಕಡೆ ಸಹಜವಾಗಿ ಕೇಳಿ ಬರುತ್ತಿದೆ. ಈ ಆಪ್ ಜನರಿಗೆ ಅತಿ ಹೆಚ್ಚು ಮನರಂಜನೆ ನೀಡಿದ್ದು ಎಷ್ಟು ನಿಜವೋ, ಅಷ್ಟೇ ಪ್ರಮಾಣದಲ್ಲಿ ಅವರನ್ನು ಸೋಮಾರಿಗಳನ್ನಾಗಿಯೂ ಮಾಡಿತ್ತು.
ಈ ಆಪ್‍ನ ಅನುಕೂಲ ಮತ್ತು ಅನಾನುಕೂಲಗಳನ್ನು ನೋಡಿದರೆ, ಮೊದಲನೇಯದಾಗಿ ಆ ಆಪ್ ಬಳಸಿ ಸಾವಿರಾರು ಜನ ತಮ್ಮ ಸೃಜನಶೀಲತೆಯನ್ನು ಬಹಿರಂಗಪಡಿಸಿದ್ದರು. ಅದರಲ್ಲಿನ ಒಂದೊಂದು ಚಿಕ್ಕ ವಿಡಿಯೋ ಸಹ ವಾವ್ ಅನ್ನಿಸುವಷ್ಟರ ಮಟ್ಟಿಗೆ ಹೊಸತನದಿಂದ ಕೂಡಿ ಎಲ್ಲರನ್ನು ನಗಿಸುತ್ತಿದ್ದವು. ಇದರ ಮೂಲಕ ತಮ್ಮ ಸಾಮಥ್ರ್ಯದ ಅರಿವು ಪಡೆಯುತ್ತಿದ್ದ ಬಹಳಷ್ಟು ಜನ ನಾವು ಏನಾದರೂ ಸಾಧಿಸಬಹುದೆಂಬ ಪ್ರೇರಣೆ ಪಡೆದುದ್ದು ನಿಜ. ಆದರೆ ಇದು ಸ್ವಂತಿಕೆಯನ್ನು ಹಾಳು ಮಾಡುತ್ತಿದೆ, ಗೀಳು ಹುಟ್ಟಿಸಿತ್ತಿದೆ, ಕೆಟ್ಟ ಸಂದೇಶ, ಅತಿರೇಕದ ಸಂದೇಶಗಳು ನುಸುಳುತ್ತಿವೆ ಎಂಬ ಅಪವಾದಗಳು ಇದಕ್ಕಿದ್ದವು.

ಮಧುರೈನ ವಕೀಲ ಮುತ್ತುಕುಮಾರ್‍ರವರು ಈ ಆಪ್‍ನಿಂದ ಅಶ್ಲೀಲತೆ ಮತ್ತು ಅವಘಡ ಸಂಭವಿಸುತ್ತಿದೆ ಎಂದು ಆರೋಪಿಸಿ ಮದ್ರಾಸ್ ಹೈಕೋರ್ಟ್‍ನಲ್ಲಿ ದಾವೆ ಹೂಡಿದ್ದರು. ಕೋರ್ಟ್ ಆಪ್‍ಗೆ ತಡೆನೀಡಿತು. ತದನಂತರ ಟಿಕ್ ಟಾಕ್ ನಿರ್ವಹಿಸುವ ಚೀನಾ ಮೂಲದ ಬೈಟ್‍ಡ್ಯಾನ್ಸ್ ಕಂಪನಿ ಸುಪ್ರೀಂ ಕೋರ್ಟ್ ಮೆಟ್ಟೆಲೇರಿದರೂ ಫಲ ಸಿಗದೇ ಅನಿವಾರ್ಯವಾಗಿ ಆಪಲ್ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇಸ್ಟೋರ್‍ನಿಂದ ಈ ಆಪ್‍ಅನ್ನು ತೆಗೆಯಬೇಕಾಗಿತ್ತು. ಆಗಲೂ ಡೌನ್‍ಲೋಡ್ ಮಾಡಿಕೊಳ್ಳಲು ಆಗುತ್ತಿರಲಿಲ್ಲವಾದರೂ ಅಷ್ಟರಲ್ಲಾಗಲೇ ಡೌನ್‍ಲೋಡ್ ಮಾಡಿರುವವರು ಬಳಸಬಹುದಿತ್ತು ಮಾತ್ರವಲ್ಲ ಶೇರ್‍ಇಟ್ ಮತ್ತಿತ್ತರ ಆಪ್‍ಗಳ ಮೂಲಕ ಪರಸ್ಪರ ಕಳಿಸಿಕೊಳ್ಳಬಹುದಿತ್ತು.

ಆದರೆ ಈಗ ಕಂಪನಿಯು ಮದ್ರಾಸ್ ಹೈಕೋರ್ಟ್‍ನಲ್ಲಿ ಇದರಿಂದ ಸಾಮಾಜಿಕ ವಾತಾವರಣ ಹಾಳಾಗುತ್ತಿಲ್ಲವೆಂದು ಮನವರಿಕೆ ಮಾಡಿಕೊಟ್ಟ ಪರಿಣಾಮ ಮದ್ರಾಸ್ ಹೈಕೋರ್ಟ್ ನಿಷೇಧ ತೆರವುಗೊಳಿಸಿದೆ. ಇದರಿಂದ ಈ ಆಪ್ ಮತ್ತೆ ಗೂಗಲ್ ಪ್ಲೇಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‍ಗೆ ಲಗ್ಗೆ ಇಟ್ಟಿದೆ.

ಆಳುವ ಸರ್ಕಾರಗಳ ಬಳಿ ಇಂತಹ ಆಪ್ ಗಳು ಹೊಂದಿರಬೇಕಾದ ಮಾನದಂಡಗಳು ಕುರಿತು ಸ್ಪಷ್ಟ ನೀತಿ ಇಲ್ಲ. ಈ ಕುರಿತು ಗಂಭೀರವಾಗಿ ಯೋಚಿಸಿ ತಜ್ಞರನ್ನು ಒಳಗೊಂಡು ನೀತಿಗಳನ್ನು ರೂಪಿಸಬೇಕಿದೆ. ಅದೇ ರೀತಿ ಈ ಥರದ ಕಂಪನಿಗಳು ಸಹ ಅತಿರೇಕ ಮೀರದ ಹಾಗೆ ತಾವೇ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆಯೂ ಇದೆ.

2014ರಲ್ಲಿ ಆರಂಭಗೊಂಡಿದ್ದ ಈ ಕಂಪನಿ 5 ವರ್ಷಗಳಲ್ಲಿ ಬಹಳ ದೊಡ್ಡ ಮಟ್ಟಕ್ಕೆ ಬೆಳೆದಿದೆ. ಈ ಆಪ್ ಬಳಸಿ ತಮ್ಮ ಸೃಜನಶೀಲತೆ ಬಳಸಿ ವಿಡಿಯೋ ಮಾಡಿದ ಹಲವಾರು ಯುವಕ ಯುವತಿಯರು ರಾತ್ರೋ ರಾತ್ರಿ ಸ್ಟಾರ್‍ಗಳಾಗಿದ್ದಾರೆ. ಸೆಲೆಬ್ರಿಟಿಗಳಂತೆ ಹಲವು ಕಾರ್ಯಕ್ರಮಗಳಿಗೆ ಈಗಾಗಲೇ ಅತಿಥಿಗಳು ಆಗಿದ್ದಾರೆ. ಸಾಮಾಜಿಕ ಜಾಗೃತಿ ಮೂಡಿಸಲು ಸಹ ಕೆಲವು ಜನ ಈ ಆಪ್ ಬಳಸಿದ್ದಾರೆ. ಇನ್ನು ಮುಂದೆಯು ಯುವಜನರು ಇದನ್ನು ಹೆಚ್ಚು ಹೆಚ್ಚು ಸಮಾಜಮುಖಿ ಚಟುವಟಿಕೆಗಳಿಗೆ ಇದನ್ನು ಬಳಸಿದರೆ ಒಳ್ಳೇಯದು. ಅದರ ಜೊತೆಗೇ ಇದರಲ್ಲೇ ಮುಳುಗಿ ಹೋಗದೆ, ಇದರಿಂದ ಒಂದಷ್ಟು ರಿಲ್ಯಾಕ್ಸ್ ಪಡೆಯುವುದರ ಜೊತೆಗೆ ತಮ್ಮ ಭವಿಷ್ಯವನ್ನು ಉತ್ತಮಪಡಿಸಿಕೊಳ್ಳುವ ಕಡೆ ಗಮನ ನೀಡಬೇಕೆಂದು ನಾವು ಆಶಿಸುತ್ತೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...