HomeಮುಖಪುಟWatch : ನಾಮಪತ್ರ ತಿರಸ್ಕೃತಗೊಂಡ ನಂತರ ಮಾಜಿ ಯೋಧ ತೇಜ್ ಬಹದ್ದೂರ್ ಆಕ್ರೋಶದ ನುಡಿ...

Watch : ನಾಮಪತ್ರ ತಿರಸ್ಕೃತಗೊಂಡ ನಂತರ ಮಾಜಿ ಯೋಧ ತೇಜ್ ಬಹದ್ದೂರ್ ಆಕ್ರೋಶದ ನುಡಿ…

- Advertisement -
ಜೈ ಹಿಂದ್
ದೇಶದ ನಿವಾಸಿಗಳೆ,
ನಿನ್ನೆ ನೀವೆಲ್ಲರೂ ನೋಡಿರಬಹುದು, ಯಾವ ರೀತಿ ನನ್ನ ನಾಮಪತ್ರ ತಿರಸ್ಕರಿಸಲು ಷಡ್ಯಂತ್ರ ರೂಪಿಸಲಾಗಿದೆ. ಒಂದು ನೋಟಿಸ್ ಮಧ್ಯಾಹ್ನ 3.00 ಗಂಟೆಗೆ ನೀಡಲಾಗುತ್ತದೆ. ಆ ನೋಟಿಸಗೆ ವಕೀಲರನ್ನು ಭೇಟಿಯಾಗಿ ಉತ್ತರ ನೀಡಲು ಬಯಸುತ್ತೇವೆ. ನೋಡಿ‌ ಇಲ್ಲಿಯ ಜಿಲ್ಲಾ ದಂಡಾಧಿಕಾರಿಗಳು/ಜಿಲ್ಲಾ ಚುನಾವಣಾಧಿಕಾರಿಗಳು ನಿಯಮಗಳನ್ನೇ ಬದಲಿಸಿಡುತ್ತಾರೆ. ಅಂದೇ ಸಾಯಂಕಾಲ 6.15 ಗಂಟೆಗೆ ಎರಡನೇಯ ನೋಟಿಸ್ ನೀಡಲಾಗುತ್ತದೆ. ನೋಟಿಸ್ ಮೂಲಕ ತಾವು ಚುನಾವಣಾ ಆಯೋಗ ದೆಹಲಿಗೆ ಹೋಗಿ ಅಲ್ಲಿಂದ ನಾಳೆ ಬೆಳಿಗ್ಗೆ 11.00 ಗಂಟೆಯೊಳಗೆ ನಾನು ಚುನಾವಣೆಗೆ ಸ್ಪರ್ಧಿಸಲು ಅರ್ಹನಿದ್ದೆನೆಯೋ ಇಲ್ಲವೋ ಎಂದು ಬರೆಸಿಕೊಂಡು ಬರಬೇಕು ಎಂದು ಹೇಳುತ್ತದೆ.
ದೇಶದ ನಾಗರಿಕರೆ, ತಾವು ನನಗೆ ಇದನ್ನು ತಿಳಿಸಿ. ಕಾನೂನು ಪ್ರಕಾರ ನಾನು ಪ್ರಮಾಣ ಪತ್ರವನ್ನು ಸಲ್ಲಿಸಿದ್ದೇನೆ, ಎಲ್ಲಾ ದಾಖಲೆಗಳನ್ನು ನೀಡಲಾಗಿದೆ. 24 ಎಪ್ರಿಲ್ ರಂದು ನಾಮಪತ್ರ ಸಲ್ಲಿಸಿದ್ದೇನೆ, ಅಂದು ನನ್ನ ಎಲ್ಲಾ ದಾಖಲೆ ಸರಿಯಿದೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿರುತ್ತಾರೆ. ಮತ್ತೆ 29 ನೇ ಎಪ್ರಿಲ್‌ ರಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸಿದಾಗ ಅಂದು ಸಹ ನನಗೆ ಚುನಾವಣಾ ಆಯೋಗದಿಂದ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ.
30ನೇ ಎಪ್ರಿಲ್ ರಂದು ನರೇಂದ್ರ ಮೋದಿಯವರ ಚಮಚಾಗಳು ವಿಶೇಷ ವಿಮಾನದಲ್ಲಿ ವಾರಣಾಸಿಗೆ ಬಂದು ಅಧಿಕಾರಿಗಳ ಮೇಲೆ ಒತ್ತಡವನ್ನು ಹೇರಿ ತೇಜ್ ಬಹುದ್ದೂರು ಅವರ ನಾಮಪತ್ರ ಯಾವುದೇ ಕಾರಣಕ್ಕೂ ಅಂಗೀಕಾರವಾಗಬಾರದು ಬದಲಿಗೆ ತಿರಸ್ಕಾರವಾಗಬೇಕೆಂದು ಹೇಳುತ್ತಾರೆ. ಜಿಲ್ಲಾ ಚುನಾವಣಾ ಅಧಿಕಾರಿ ಒತ್ತಡಕ್ಕೆ ಒಳಗಾಗಿ ಈ ರೀತಿ ನಡೆದುಕೊಂಡಿದ್ದಾರೆ.
ದೇಶದ ನಾಗರೀಕರಲ್ಲಿ ನನ್ನ ವಿನಂತಿ ಇದೆ, ಈಗ ತಾವು ಧ್ವನಿ ಎತ್ತದೆ ಇದ್ದರೆ ಪ್ರಜಾಪ್ರಭುತ್ವದ ಹತ್ಯೆಯಾಗುತ್ತದೆ. ಇವತ್ತು ಒಂದು ಅವಕಾಶವಿದೆ, ತಾವೆಲ್ಲರೂ ರಸ್ತೆಯ ಮೇಲೆ ಬನ್ನಿ ನನ್ನ ಪರವಾಗಿ ಪ್ರತಿಭಟನೆ ಮಾಡಿ. ಯಾಕೆಂದರೆ ಇದು ಸತ್ಯ ಮತ್ತು ಸುಳ್ಳಿನ ಹೋರಾಟವಾಗಿದೆ, ಇದೊಂದು ಶಡ್ಯಂತ್ರ ರಚಿಸಲಾಗಿದೆ. ದೇಶದ ನಿವಾಸಿಗಳೇ, ನೀವು ಎಲ್ಲೆ ಇರಿ, ಪ್ರತಿಭಟನೆ ದಾಖಲು ಮಾಡಿ, ಫೇಸ್‌ಬುಕ್‌, ವಾಟ್ಸ್-ಆಪ್, ಟ್ವಿಟರ್ ಮೂಲಕ ಬರೆಯಿರಿ. ಪ್ರಶ್ನೆ ಮಾಡಿ, ತೇಜ ಬಹುದ್ದೂರ ಅವರ ನಾಮಪತ್ರ ತಿರಸ್ಕರಿಸುವ ಅಧಿಕಾರ ನಿಮಗೆ ಯಾರು ನೀಡಿದ್ದಾರೆ ಎಂದು ಕೇಳಿ, ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.
- Advertisement -

ವಿಡಿಯೋ ನೋಡಿ

ನಾಮಪತ್ರ ತಿರಸ್ಕೃತಗೊಂಡ ನಂತರ ಮಾಜಿ ಯೋಧನ ಆಕ್ರೋಶದ ಮಾತುಗಳನ್ನು ಕೇಳಿ.

Naanu Gauri यांनी वर पोस्ट केले गुरुवार, २ मे, २०१९

ಈ ವಿಡಿಯೋ ಯಾರು ನೋಡುತ್ತಿದ್ದಿರೋ ಒಂದು ಗಂಟೆಯೊಳಗೆ ಪ್ರತಿಯೊಬ್ಬರು ಬಿಜೆಪಿ ಸರಕಾರವನ್ನು ಅಳ್ಳಾಡಿಸಿ. ಇದೇ ನನ್ನ ವಿನಂತಿಯಿದೆ. ಈಗ ನನಗೆ ನಿಮ್ಮ ಸಹಕಾರ ಬೇಕಿದೆ. ತೇಜ ಬಹದ್ದೂರ್ ಟ್ವಿಟರ್ ನಲ್ಲಿ ಟಾಪ್ ಟೆನ್ ನಲ್ಲಿ ಹೋಗುತ್ತಿದ್ದಾನೆ ಎಂದು ಇವರಿಗೆ ಅನಿಸಿತೋ ಅವಾಗ ಇವರ ತಂಡ ನನ್ನ ವಿರುದ್ದ ಷಡ್ಯಂತ್ರ ರಚಿಸಿದ್ದಾರೆ. ಇಲ್ಲಿ ಯೋಗಿ ಮತ್ತು ಮೋದಿ ರಾತ್ರಿ ಎರಡು ಗಂಟೆಗೆ ಅಧಿಕಾರಿಗಳ ಸಭೆ ಮಾಡುತ್ತಾರೆ. ಅರೇ ಹರಾಮಕೋರೋ ನಿಮಗೆ ಇಷ್ಟು ಹೆದರಿಕೆ ಇದ್ದರೆ, ಬನ್ನಿ ಎದುರಿಗೆ ಬಂದು ರನ್ನನ ನೇರವಾಗಿ ಏದುರಿಸಿ. ನನ್ನ ಬೆನ್ನಿನ ಹಿಂದೆ ಯಾಕೆ ಯುದ್ದ ಮಾಡುತ್ತೀರ? ನಾನು ಚಾಲೆಂಜ್ ಮಾಡುತ್ತೇನೆ ಬನ್ನಿ ನನಗೆ ನೇರವಾಗಿ ಕಣದಲ್ಲಿ ಏದುರಿಸಿ.
– ತೇಜ್ ಬಹದ್ದೂರ್ ಯಾದವ್
ಕನ್ನಡಕ್ಕೆ: ರಜಾಕ್ ಉಸ್ತಾದ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...