Homeಕರ್ನಾಟಕ’ಬಂಗಾಳದಲ್ಲಿ ಮುಸ್ಲಿಮರ ಮೇಲೆ ಭೀಕರ ದಾಳಿ ನಡೆಯಲಿದೆ’- ಕೋಮುಗಲಭೆಗೆ ಪ್ರಚೋದನೆ ನೀಡಿದ ಪ್ರಕಾಶ್‌‌ ಬೆಳವಾಡಿ

’ಬಂಗಾಳದಲ್ಲಿ ಮುಸ್ಲಿಮರ ಮೇಲೆ ಭೀಕರ ದಾಳಿ ನಡೆಯಲಿದೆ’- ಕೋಮುಗಲಭೆಗೆ ಪ್ರಚೋದನೆ ನೀಡಿದ ಪ್ರಕಾಶ್‌‌ ಬೆಳವಾಡಿ

- Advertisement -
- Advertisement -

ಯಾವ ಆಯಾಮದಲ್ಲಿ ನೋಡಿದರೂ, ರಂಗಕರ್ಮಿ ಪ್ರಕಾಶ್ ಬೆಳವಾಡಿ ಮಾಡಿರುವ ಫೇಸ್‌ಬುಕ್ ಪೋಸ್ಟ್ ಉದ್ರೇಕಕಾರಿ ಭಾಷೆ ಹೊಂದಿದೆ, ಅದರಲ್ಲಿ ಮುಸ್ಲಿಮರು ಅನ್ಯರು ಎಂಬ ವಾಸನೆ ಇದೆ. 2002 ರ ಗುಜರಾತ್ ಹತ್ಯಾಕಾಂಡದ ಸಮರ್ಥನೆಯಿದೆ. ಗೋಧ್ರಾ ಘಟನೆ ನಂತರ ನಾನು ಊಹಿಸಿದಂತೆ ಅಲ್ಲಿ ದೊಡ್ಡ ಪ್ರತೀಕಾರ ನಡೆಯಿತು ಎಂಬ ’ಹೆಮ್ಮೆಯೂ’ ಇದೆ.

ಅವರ ಪೋಸ್ಟಿನಲ್ಲಿ ಅಲ್ಪಸಂಖ್ಯಾತರ ಮೇಲೆ ’ಸಂಘಪರಿವಾರ’ ನಡೆಸುವ ದಾಳಿಗೆ ಪರೋಕ್ಷ ಬೆಂಬಲವಿದೆ. ಮೊದಲಿನಿಂದಲೂ ಬಿಜೆಪಿ ಆರಾಧಕರೇ ಆಗಿರುವ ಅವರು, ಈ ಮಟ್ಟಿಗೆ ಭಜರಂಗದಳದ ಪುಂಡರ ಭಾಷೆ ಬಳಸುತ್ತಾರೆ, ದ್ವೇಷ ಕಕ್ಕುತ್ತಾರೆ ಎಂಬುದನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಈಗ ಅವರು ಗುಜರಾತ್ ಹತ್ಯಾಕಾಂಡ ಬಂಗಾಳದಲ್ಲಿ ನಡೆದೇ ನಡೆಯುತ್ತದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಇಂಗ್ಲಿಷ್‌ನಲ್ಲಿ ಈ ಪೋಸ್ಟ್ ಇರುವ ಕಾರಣಕ್ಕೆ ಬಲಪಂಥೀಯರು ಹಾಗೂ ಬಿಜೆಪಿ ಬೆಂಬಲಿಗರು ಇದನ್ನು ಎಲ್ಲ ರಾಜ್ಯಗಳಿಗೂ ಹರಡತೊಡಗಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ ದುರಂತ: ಆಕ್ಸಿಜನ್ ಕೊರತೆಯಿಂದ ಆಗಿದ್ದರೆ ಸರ್ಕಾರವೆ ಹೊಣೆ – ಸಿಟಿ ರವಿ

ಅವರ ಪೋಸ್ಟ್ ಮೊದಲು ಓದಿ ಬಿಡಿ:

“27 ಫೆಬ್ರುವರಿ 2002 ರ ಬೆಳಿಗ್ಗೆ, ಗೋದ್ರಾ ಬಳಿ ರೈಲಿನಲ್ಲಿ 59 ಮಂದಿ ಕರಸೇವಕರನ್ನ ಸುಟ್ಟು ಕೊಂದಾಗ, ನನ್ನ ಒಬ್ಬ ಉದಾರವಾದಿ ನಿಲುವಿನ ಲಿಬರಲ್ ಗೆಳೆಯ – ಈಗ ಅವನ ಜೊತೆ ಗೆಳೆತನ ಇಲ್ಲ- ಅಹ್ಮದಾಬಾದಿನಿಂದ ಫೋನ್ ಮಾಡಿ, `ಇದು ಸಂಘಿಗಳಿಗೆ ಸರಿಯಾದ ಪಾಠ ಕಲಿಸುತ್ತದೆ’ ಅಂತ ಏನೋ ಹೇಳಿದ್ದ. ನಾನು ಹೇಳಿದ್ದೆ, ಇದಕ್ಕೆ ನೀಡಲಿರುವ ಪ್ರತೀಕಾರ ತ್ವರಿತವಾಗಿರುತ್ತದೆ ಮತ್ತು ಭೀಕರವಾಗಿರುತ್ತದೆ ಎಂದು. ಅದು ಹಾಗೇ ಆಯ್ತು.

ಹೌದು, ಗುಜರಾತಿನಲ್ಲಿ ಮುಸ್ಲಿಂ ಜನಸಂಖ್ಯೆ ಕೇವಲ 8% ಇರುವ ಕಾರಣ ಆ ಗಲಭೆ ಏಕಪಕ್ಷೀಯವಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಬೇರೆ ಸನ್ನಿವೇಶವಿದೆ. ಮುಸ್ಲಿಮರು 30% ಇದ್ದಾರೆ. ಹೀಗಾಗಿ, ಪ್ರತೀಕಾರ ಅಷ್ಟೊಂದು ತ್ವರಿತವಾಗಿರುವುದಿಲ್ಲ. ಆದರೆ ತಪ್ಪು ತಿಳಿದುಕೊಳ್ಳಬೇಡಿ, ಅದು ಆಗಿಯೇ ಆಗುತ್ತದೆ. ಸಮಯ ಆದ ಹಾಗೆ ಹಿಂದು-ಮುಸ್ಲಿಂ ಗಲಭೆ ಏಳಲಿದೆ. ಅದು ಆದಾಗ, ಅದು ಬಹಳ ದುರಂತಮಯವಾಗಲಿದೆ, ಕ್ರೂರವಾಗಿರಲಿದೆ ಮತ್ತು ಸಂಘಟಿತವಾಗಿ ನಡೆಯಲಿದೆ.

ಈಗ ಬಹಳ ಶಾಂತ ರೀತಿಯಿಂದ ವರ್ತಿಸುವ ರಾಜ್ಯ ಸರ್ಕಾರ ಮತ್ತು ಲಿಬರಲ್‌ಗಳು, ’ಸಂಘಿಗಳಿಗೆ ಹಾಗೆ ಆಗಬೇಕು’ ಎಂತ ತಿಳಿದುಕೊಂಡಿದ್ದಾರೆ… ನಂತರ ಇವರೆಲ್ಲ ಲೆಕ್ಕಾಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗುತದೆ. ಈಗಾಗಲೇ ಇದನ್ನ ತಡೆಯಲು ಬಹಳ ತಡವಾಗಿದೆ” ಎಂದು ಪ್ರಕಾಶ್‌ ಬೆಳವಾಡಿ ಹೇಳಿದ್ದಾರೆ.

ಇದನ್ನೂ ಓದಿ: ಜನರ ಗಮನ ಬೇರೆಡೆ ಸೆಳೆಯಲು ರೋಮ್‌ ಚಕ್ರವರ್ತಿಗಳು ಗ್ಲಾಡಿಯೇಟರ್‌‌ಗಳನ್ನು ಆಡಿಸುತ್ತಿದ್ದರು, ನಮಗೆ ಐಪಿಎಲ್ ಇದೆ!

ಸರ್ಕಾರದ ಒಂದು ಕೋಟಿ ರೂ. ಅನುದಾನದಲ್ಲಿ ಭೈರಪ್ಪನವರ ’ಪರ್ವ’ ಕೃತಿಯನ್ನು ನಾಟಕವಾಗಿ ರೂಪಾಂತರಿಸುವ ಕೆಲಸದಲ್ಲಿರುವ ಪ್ರಕಾಶ್ ಅವರಿಗೆ, ಬಂಗಾಳ ಚುನಾವಣೆಯಲ್ಲಿ ಬಿಜೆಪಿಗಾದ ಹೀನಾಯ ಸೋಲು ತೀವ್ರವಾಗಿ ತಾಕಿದಂತಿದೆ.

ಚುನಾವಣಾ ಫಲಿತಾಂಶದ ನಂತರ ನೆಡೆಯುವ ಗಲಾಟೆಗಳನ್ನು ದೊಡ್ಡದು ಮಾಡಿ, ಹಳೆಯ ವಿಡಿಯೋಗಳನ್ನು ಹಾಕಿ, ’ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಿ’ ಎಂದು ಅಭಿಯಾನ ಮಾಡುತ್ತಿರುವ ಬಿಜೆಪಿಯ ಐಟಿ ಸೆಲ್ ಮತ್ತು ಅದರ ಬೆಂಬಲಿಗರ ಜಾಯಮಾನದಲ್ಲೇ ಪ್ರಕಾಶ ಬೆಳವಾಡಿಯವರ ಪೋಸ್ಟ್ ಕೂಡ ಇದೆ.

ಈ ಕುರಿತು ಫೇಸ್‌ಬುಕ್ ಮತ್ತು ಇತರ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಶರತ್‌ಚಂದ್ರ ಎನ್ನುವವರು, ’ಹಿಂದೆಯೂ ಎಫ್‌ಬಿಯಲ್ಲಿ ಅವರ ಪೋಸ್ಟ್ ಹೀಗೇ ಇದ್ದವಾದರೂ ನೇರವಾಗಿ ಸಂಘಪರಿವಾರದವರಂತೆ ಬರೆಯುತ್ತಿರಲಿಲ್ಲ. ಈಗ ತನ್ನ ನಿಜ ಮುಖದ ದರ್ಶನ ಮಾಡಿದ್ದಾರೆ ಈ ಬೆಳವಾಡಿ. ಈಗ ತನ್ನ ಪ್ರೊಫೈಲ್ ಅನ್ನೂ ಡಿ-ಆಕ್ಟಿವೇಟ್ ಮಾಡಿಕೊಂಡಿದ್ದಾರೆ’ ಎಂದು ಬರೆದಿದ್ದಾರೆ. ಈ ಪೋಸ್ಟ್‌ಗೆ ಬಂದ ಪ್ರತಿಕ್ರಿಯೆಗಳಲ್ಲಿ ಬೆಳವಾಡಿ ಅವರ ’ಸಂಘಪರಿವಾರ’ದ ಮನಸ್ಥಿತಿಯನ್ನು ಟೀಕಿಸಲಾಗಿದೆ.

ಇದನ್ನೂ ಓದಿ: ಸಂಸ್ಕಾರಕ್ಕೆ ಬರುವವರಿಗೆ ಉಚಿತ ಟಿ,ಕಾಫಿ ನೀಡುತ್ತೇವೆಂದು ನಗುಮುಖದ ಫ್ಲೆಕ್ಸ್‌; ಕನಿಷ್ಠ ಸಂವೇದನೆ ಮರೆತ BJP

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ನಟ ಅಹಿಂಸಾ ಚೇತನ್, `ನಾನು ಆ ಪೋಸ್ಟ್ ಓದಿಲ್ಲ. ಸಾರಾಂಶ ಕೇಳಿದ್ದೇನೆ. ಬೆಳವಾಡಿಯವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಲಾರೆ. ಅವರು ವೈಚಾರಿಕವಾಗಿ ಶೂನ್ಯರು, ಸಮಾಜ ನೋಡುವ ದೃಷ್ಟಿಕೋನವೆ ಅವರಲಿಲ್ಲ. ಈ ಕೋವಿಡ್ ಸಂದರ್ಭದಲ್ಲಿ ಇದೆಲ್ಲ ಬೇಕಿತ್ತ? ಲಕ್ಷಾಂತರ ಜನ ಹಾಸಿಗೆ, ಆಕ್ಸಿಜನ್ ಇಲ್ಲದೇ ಸಾಯುತ್ತಿರುವಾಗ ಕೋಮುಗಲಭೆ ಪ್ರಚೋದಿಸುವ ಪೋಸ್ಟ್‌ಗಳನ್ನು ನಿರ್ಲಕ್ಷ್ಯ ಮಾಡುವುದೇ ಒಳ್ಳೆಯದು. ಅವು ಮತ್ತೆ ಮುನ್ನೆಲೆಗೆ ಬರದಂತೆ ಮಾಡಬೇಕಾಗಿದೆ. ಈಗ ನಮ್ಮ ಕಾಳಜಿ ಕೋವಿಡ್ ಬಿಕ್ಕಟ್ಟನ್ನು ಪರಿಹರಿಸುವತ್ತ ಇರಬೇಕು…’ ಎಂದು ಹೇಳಿದರು.

ಕತೆಗಾರ, ನಾಟಕಕಾರ ಹನುಮಂತ ಹಾಲಿಗೇರಿ, ‘ಸಾಹಿತ್ಯ, ರಂಗಭೂಮಿ, ಕಲೆ ಇವು ಮನುಷ್ಯನ ಯೋಚನಾ ಲಹರಿಯನ್ನು ಹದ ಮಾಡಿ, ಮಾನವೀಯತೆ ಅಂಶ ಬೆಳೆಸುತ್ತವೆ. ಆದರೆ ರಂಗಭೂಮಿಯ ಹಿನ್ನೆಲೆಯ ಪ್ರಕಾಶ್ ಬೆಳವಾಡಿಯವರು ವಯಸ್ಸಾದಂತೆಲ್ಲ ಹೆಚ್ಚೆಚ್ಚು ಮಾನವೀಯರಾಗುವ ಬದಲು ಕ್ರೂರ ಮತ್ತು ಕೋಮುವಾದಿ ಸಂದೇಶಗಳನ್ನು ಹರಡುತ್ತಿರುವುದು ವಿಷಾದನೀಯ.

ಸರ್ಕಾರ ಅವರ ‘ಪರ್ವ’ ನಾಟಕ ಪ್ರದರ್ಶನಗಳಿಗೆ ಒಂದು ಕೋಟಿ ರೂ. ಅನುದಾನ ನೀಡಿದೆ. ಭೈರಪ್ಪನವರು ಆರಂಭದಲ್ಲಿ ಬರೆದ ಈ ಕಾದಂಬರಿಯಲ್ಲಿ ಕೋಮುವಾದಿ, ಜಾತಿವಾದಿ ಅಂಶಗಳಿಲ್ಲ. ಆದರೆ ಬೆಳವಾಡಿ ಅವರು ಈ ಕೃತಿ ಆಧರಿತ ನಾಟಕದಲ್ಲಿ ಕೋಮುವಿಷ ಬೆರೆಸುತ್ತಾರೇನೋ ಎಂಬ ಸಂಶಯ ಶುರುವಾಗಿದೆ’ ಎಂದು ನಾನುಗೌರಿ.ಕಾಂಗೆ ಹೇಳಿದರು.

ಇದನ್ನೂ ಓದಿ: ಟಿಎಂಸಿಯಿಂದ ಹಾರಿದ 148 ಜನರಿಗೆ BJP ಟಿಕೆಟ್, ಗೆದ್ದವರು 6 ಜನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಪ್ರಕಾಶ್ ಬೆಳವಾಡಿಯ ಹೇಳಿಕೆ ಕಂಡನಾರ್ಹ ಹಾಗೂ ಈ ಕಲಾವಿದ “ಮಾರಿಕೊಂಡವರು” ಗುಂಪನ್ನು ಸೇರಿದ್ದು ನೋವಿನ ಸಂಗತಿ.

  2. ಕೂಡಲೇ ಈತನ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಇವನ ಮೇಲೆ ದೇಶದ್ರೋಹದ ಪ್ರಕರಣ ಹಾಕಿ ನೇಣುಗಂಬಕ್ಕೆ ಏರಿಸಿ. ಮುಂದಾಗುವ ಮತಿಯ ಘರ್ಷಣೆ ತಡೆಯಲು ಇವನ ಬಂಧನ ಹಾಗೂ ಮರಣದಂಡನೆ ಒಂದೇ ಮಾರ್ಗ.

LEAVE A REPLY

Please enter your comment!
Please enter your name here

- Advertisment -

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...

ಗುರುಗ್ರಾಮ ಮತ್ತು ಚಂಡೀಗಢದ ಶಾಲೆಗಳಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ: ವಿದ್ಯಾರ್ಥಿಗಳ ಸ್ಥಳಾಂತರ

ಗುರುಗ್ರಾಮ್‌ನ ಕನಿಷ್ಠ ಆರು ಖಾಸಗಿ ಶಾಲೆಗಳಿಗೆ ಬುಧವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ದೊಡ್ಡ ಪ್ರಮಾಣದ ಸ್ಥಳಾಂತರ ಮತ್ತು ಭದ್ರತಾ ತಪಾಸಣೆಗಳನ್ನು ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಬೆಳಿಗ್ಗೆ 7:10 ರ ಸುಮಾರಿಗೆ...

ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ಮಹಾರಾಷ್ಟ್ರ ಡಿಸಿಎಂ ಆಗುವವರೆಗೆ: ಅಜಿತ್ ಪವಾರ್ ರಾಜಕೀಯ ಹೆಜ್ಜೆಗಳು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ಬಾರಾಮತಿಯಲ್ಲಿ ಲ್ಯಾಂಡ್‌ ಆಗಲು ಪ್ರಯತ್ನಿಸುವಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗಿ ನಿಧನರಾದರು. ಈ ಅಪಘಾತ ಮೂಲಕ, ಮಹಾರಾಷ್ಟ್ರದ ಅತ್ಯಂತ ಪ್ರಭಾವಶಾಲಿ ಮತ್ತು ಶಾಶ್ವತ ರಾಜಕೀಯ ವ್ಯಕ್ತಿಗಳಲ್ಲಿ...