Homeಮುಖಪುಟಕೊರೊನಾ ಒಂದು ಜೀವಿ, ಅದಕ್ಕೂ ನಮ್ಮಂತೆ ಬದುಕುವ ಹಕ್ಕಿದೆ ಎಂದ ಬಿಜೆಪಿ ಮುಖಂಡ!

ಕೊರೊನಾ ಒಂದು ಜೀವಿ, ಅದಕ್ಕೂ ನಮ್ಮಂತೆ ಬದುಕುವ ಹಕ್ಕಿದೆ ಎಂದ ಬಿಜೆಪಿ ಮುಖಂಡ!

- Advertisement -
- Advertisement -

ಕೊರೊನಾ ವೈರಸ್ ಒಂದು ಜೀವಂತ ಜೀವಿ, ನಮ್ಮಂತೆ ಅದಕ್ಕೂ ಬದುಕುವ ಹಕ್ಕು ಇದೆ ಎಂದು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ. ಇವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯಕ್ಕೆ ಗುರಿಯಾಗಿದೆ.

“ಒಂದು ತಾತ್ವಿಕ ಕೋನದಿಂದ ನೋಡಿದರೆ, ಕೊರೊನಾ ವೈರಸ್ ಸಹ ಜೀವವಿರುವ ಜೀವಿ. ಇದು ನಮ್ಮಂತೆ, ಉಳಿದವರಂತೆ ಬದುಕುವ ಹಕ್ಕನ್ನು ಹೊಂದಿದೆ. ಆದರೆ ನಾವು (ಮಾನವರು) ನಮ್ಮನ್ನು ಅತ್ಯಂತ ಬುದ್ಧಿವಂತರೆಂದು ಭಾವಿಸಿ, ಅದನ್ನು ನಾಶಮಾಡಲು ಹೊರಟಿದ್ದೇವೆ. ಆದ್ದರಿಂದ ಅದು ನಿರಂತರವಾಗಿ ರೂಪಾಂತರಗೊಳ್ಳುತ್ತಿದೆ” ಎಂದು ತ್ರಿವೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ.

ಆದರೂ, ಸದ್ಯಕ್ಕೆ ಮನುಷ್ಯ ಸುರಕ್ಷಿತವಾಗಿರಲು ಈ ವೈರಸ್ ಅನ್ನು ಅಂತ್ಯಗೊಳಿಸುವ ಅಗತ್ಯವಿದೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ಇದನ್ನೂ ಓದಿ: ಯಜ್ಞ ಮಾಡಿದರೆ ಕೊರೊನಾ 3ನೇ ಅಲೆ ಭಾರತವನ್ನು ಟಚ್ ಮಾಡಲ್ಲ ಎಂದ ಬಿಜೆಪಿ ಸಚಿವೆ!

ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಒಳಗಾಗಿದೆ. ಇಡೀ ದೇಶವು ಕೊರೊನಾ ಎರಡನೇ ಅಲೆಯಲ್ಲಿ ತತ್ತರಿಸುತ್ತಿರುವಾಗ ಈ ಹೇಳಿಕೆ ನಿಡಿರುವ ಬಗ್ಗೆ ವ್ಯಾಪಕ ಆಹ್ರೊಶ ಕೂಡ ವ್ಯಕ್ತವಾಗಿದೆ.

ಟ್ವಿಟ್ಟರ್ ಬಳಕೆದಾರರೊಬ್ಬರು ಹೇಳಿಕೆಗೆ ವ್ಯಂಗ್ಯವಾಗಿ, “ಈ ಜೀವಂತ ವೈರಸ್‌ಗೆ ಸೆಂಟ್ರಲ್ ವಿಸ್ತಾದಲ್ಲಿ ಆಶ್ರಯ ನೀಡಬೇಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ನ್ಯಾಯಾಧೀಶರು ಸರ್ವಜ್ಞರಲ್ಲ ಎಂಬ ಸಿಟಿ ರವಿ ಹೇಳಿಕೆಗೆ ವ್ಯಾಪಕ ಆಕ್ರೋಶ: ಮತ್ತೆ ಹೇಳಿಕೆ ಸಮರ್ಥಿಸಿಕೊಂಡ ಮಾಜಿ ಸಚಿವ!

ಕೊರೊನಾ ವೈರಸ್ ಒಂದು ಜೀವಿಯಾಗಿದ್ದು, ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ ”ಎಂದು ಬಿಜೆಪಿ ಮುಖಂಡ ಮತ್ತು ಮಾಜಿ ಉತ್ತರಾಖಂಡದ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಹೇಳುತ್ತಾರೆ. ಇಂತಹ ಜನರು ಅಧಿಕಾರದ ಚುಕ್ಕಾಣಿ ಹಿಡಿದಿರುವಾಗ, ನಮ್ಮ ದೇಶವು ಇಂದು ವಿಶ್ವದ ಅತ್ಯಂತ ಕೆಟ್ಟ ಮಾನವ ದುರಂತವನ್ನು ಎದುರಿಸುತ್ತಿದೆ ಎಂಬುದರ ಬಗ್ಗೆ ಆಶ್ಚರ್ಯಪಡಬೇಕಾಗಿಲ್ಲ” ಎಂದು ಟ್ವಿಟರ್‌ ಬಳಕೆದಾರರು ಎಂದಿದ್ದಾರೆ.


ಇದನ್ನೂ ಓದಿ: ಸೆಂಟ್ರಲ್ ವಿಸ್ತಾ ಯೋಜನೆಗೆ ವ್ಯಾಪಕ ವಿರೋಧ: ಪೋಟೋ, ವಿಡಿಯೊ ನಿಷೇಧಿಸಿದ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಹ್ಯಾಲೊ ಬಿಜೆಪಿ ಕರೋನಾ ವೈರಸನ್ನು ನಿಮ್ಮಾ ಮನೆಗೆ ಕಾರ್ಕೊಡು ಹೊಗಿ ಕಟ್ಟಿ ಅಕೂ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕುವಂತೆ...

0
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರಿ ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ " ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ...