ಪೂರ್ವ ಜೆರುಸಲೆಮ್‌ನ ಶೇಕ್ ಜರ್‍ರಾಹ್ ಪ್ರದೇಶದಲ್ಲಿ ಹಲವಾರು ಪ್ಯಾಲೇಸ್ತೀನಿ ಕುಟುಂಬಗಳನ್ನು ಗಡಿಪಾರು ಮಾಡಲು ಜೆರುಸಲೆಮ್ ಜಿಲ್ಲಾ ನ್ಯಾಯಾಲಯ ತೀರ್ಪಿತ್ತ ನಂತರ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು. ಇದೀಗ ಅಲ್ಲಿ ಇಸ್ರೇಲ್ ಸೇನೆಗೆ ಹಿನ್ನಡೆಯಾಗಿದೆ ಎಂದು ವರದಿಯಾಗಿದ್ದು, ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿಕೊಂಡಿದೆ. “ಸೋಮವಾರ (ಮೇ 10) ಗಾಝಾದಲ್ಲಿ ಕನಿಷ್ಠ 136 ಜನರು ಸಾವನ್ನಪ್ಪಿದ್ದಾರೆ. 34 ಮಕ್ಕಳು ಮತ್ತು 21 ಮಹಿಳೆಯರು ಸೇರಿದಂತೆ 950 ಜನರು ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ತೀನಿ ವೈದ್ಯರು ಹೇಳಿದ್ದಾರೆ” ಎಂದು ರಾಯಿಟರ್ಸ್ ವರದಿ ಮಾಡಿತ್ತು.
ಭಾರತದಲ್ಲಿ ಇಸ್ರೇಲ್‌ನ ಕೃತ್ಯವನ್ನು ಬೆಂಬಲಿಸುವ ಕೆಲ ಬಲಪಂಥೀಯರು, ಮಕ್ಕಳ ಮುಖಕ್ಕೆ ಕೆಂಪು ಬಣ್ಣವನ್ನು ಹಚ್ಚುವ ವಿಡಿಯೊವೊಂದನ್ನು ವೈರಲ್ ಮಾಡಿದ್ದಾರೆ. ಅದರಲ್ಲಿ, “ಜಾಗತಿಕ ಸಹಾನುಭೂತಿ ಪಡೆಯಲು ಮತ್ತು ಇಸ್ರೇಲನ್ನು ಕೆಟ್ಟದಾಗಿ ಬಿಂಬಿಸಲು, ಗಾಝಾದ ಪ್ಯಾಲೆಸ್ತೀನಿಯರು ಮಕ್ಕಳ ಮುಖದ ಮೇಲೆ ನಕಲಿ ರಕ್ತವನ್ನು ಮತ್ತು ನಕಲಿ ಗಾಯಗಳನ್ನು ಮಾಡಿ ಚಿತ್ರಿಸುತ್ತಿದ್ದಾರೆ” ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದ್ದಾರೆ.
Palestinians in Gaza daub fake blood and paint fake wounds on children to gain global sympathy and make Israel look evil. US-backed terrorist groups, including ISIS, did the exact same thing in Syria to make the Assad Govt look bad. This will be seen in Kashmir too one day. pic.twitter.com/hAq9XHWEZs
— Rakesh Thiyyan (@ByRakeshSimha) May 14, 2021
ಇದನ್ನೂ ಓದಿ: ಸುಳ್ಳು ಸುದ್ದಿ ಪ್ರಸಾರ: ಬಲಪಂಥೀಯ ಮಹಿಳೆ ಮೇಲೆ ಕ್ರಮಕ್ಕೆ ಮುಂದಾದ ಕೋಲ್ಕತ್ತ ಪೊಲೀಸ್!
ಬಿಜೆಪಿ ಒಬಿಸಿ ಮೋರ್ಚಾ ಹರಿಯಾಣ ರಾಜ್ಯ ಉಪಾಧ್ಯಕ್ಷೆ ಎಂದು ಗುರುತಿಸಿಕೊಂಡಿರುವ ಮಾಯಾ ಯಾದವ್ ಕೂಡ ವಿಡಿಯೋ ಹಂಚಿಕೊಂಡಿದ್ದಾರೆ.
लो जी,अब जिहादियों और आतंकियों का मेक अप और नौटंकी जिहाद।??
दोगुले सांप। #IndiaStandsWithIsrael #IStandWithIsrael ???? pic.twitter.com/7ezDQiw9Jl— माया यादव ? (@Mayayadavbjp) May 14, 2021
PM झालावाडी (@ PMPATEl1969) ಮತ್ತು ಜನ್ಮಜಿತ್ ಸಿನ್ಹಾ (@ Impregnable007) ಸೇರಿದಂತೆ ಹಲವಾರು ಜನರು ಇದನ್ನು ಟ್ವಿಟರ್‌ನಲ್ಲಿ ಹಂಚಿದ್ದಾರೆ.
So, basically, these animals are the same everywhere and they have a copyright ©️ in playing #VictimCard! ?#IndiaWithIsreal❤ pic.twitter.com/khso8Nl5NB
— Janmajit Sinha (@Impregnable007) May 14, 2021
ಈ ವಿಡಿಯೋವನ್ನು ಬಲಪಂಥೀಯರು ಫೇಸ್‌ಬುಕ್‌ನಲ್ಲಿ ಕೂಡಾ ವೈರಲ್ ಮಾಡಿದ್ದಾರೆ. ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ ಎಂಬವರು ಹಾಕಿರುವ ಈ ವಿಡಿಯೊ ಇದುವರೆಗೂ 193 ಶೇರ್ ಆಗಿದೆ. ಅದರ ಆರ್ಕೈವ್ ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್
ವಾಸ್ತವದಲ್ಲಿ ಇದು ಹಳೆಯ ವೀಡಿಯೊವಾಗಿದ್ದು, ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ವಿಡಿಯೊವನ್ನು ಫ್ಯಾಕ್ಟ್‌ಚೆಕ್ ವೆಬ್‌ಸೈಟ್ ಆಲ್ಟ್ ನ್ಯೂಸ್ ಹುಡುಕಾಡಿದೆ. ಗೂಗಲ್‌ನಲ್ಲಿ ಈ ವಿಡಿಯೊ ಬಗ್ಗೆ 2018 ರಲ್ಲಿ ಫ್ರಾನ್ಸ್ 24 ಮತ್ತು ಸ್ನೋಪ್ಸ್ ಪ್ರಕಟಿಸಿದ ಫ್ಯಾಕ್ಟ್-ಚೆಕ್ ವರದಿಗಳು ಕಂಡುಬಂದಿದೆ. ದೀರ್ಘ ವೀಡಿಯೊವನ್ನು ಕ್ಲಿಪ್ ಅನ್ನು ಕಟ್ ಮಾಡಿ ಇಸ್ರೇಲಿ ಮತ್ತು ಸಿರಿಯನ್ ಪಡೆಗಳ ದೌರ್ಜನ್ಯ ಎಂದು ಹಂಚಿಕೊಳ್ಳಲಾಗಿತ್ತು.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಇದು ಮೋದಿ ಯೋಗ ಮಾಡುತ್ತಿರುವ ವಿಡಿಯೋ! ಬಿಜೆಪಿಗರು ಹೇಳುತ್ತಿರುವುದು ನಿಜವೆ?
ಪ್ಯಾಲೇಸ್ಟಿನಿಯನ್ ವೆಬ್‌ಸೈಟ್ ‘ದಿ ಗಾಝಾ ಪೋಸ್ಟ್’ನ ಸುದ್ದಿ ವರದಿಯಿಂದ ಈ ವೀಡಿಯೊ ಕ್ಲಿಪ್ ಪಡೆಯಲಾಗಿದೆ. “ಮೇಕಪ್ ಕಲಾವಿದೆ ಮರಿಯಮ್ ಸಲಾಹ್ ಅವರು ಪ್ಯಾಲೇಸ್ತೀನಿಯನ್ ಸಿನೆಮಾ ಸ್ಪೆಷಲ್ ಎಫೆಕ್ಟ್ಸ್ ಉದ್ಯಮದಲ್ಲಿ ಮಾಡಿದ ಕೆಲಸಗಳ ಬಗ್ಗೆ” ಈ ವಿಡಿಯೊ ವರದಿಯನ್ನು ಮಾಡಲಾಗಿದೆ ಎಂದು ಸ್ನೋಪ್ಸ್ ವರದಿ ಮಾಡಿದೆ.
ಆದರೆ ವೈರಲ್ ಆಗುತ್ತಿರುವ ಈ ವಿಡಿಯೊವನ್ನು ಎಡಿಟ್ ಮಾಡಿ, ಮುಖಕ್ಕೆ ಗಾಯದ ಮೇಕಪ್ ಮಾಡುವುದನ್ನು ಮಾತ್ರ ತೋರಿಸಲಾಗಿದೆ. ಜೊತೆಗೆ ಇತರ ವಿವರಗಳ ದೃಶ್ಯಗಳನ್ನು ಕೂಡಾ ಕತ್ತರಿಸಲಾಗಿದೆ. ಆ ವಿಡಿಯೊ ಏನೆಂದು ತಿಳಿಸುವ ಅರೇಬಿಕ್ ವಿಶ್ಲೇಷಣೆಯನ್ನು ಕೂಡಾ ಮ್ಯೂಟ್ ಮಾಡಿ, ಅದರಲ್ಲಿ ತಪ್ಪಾಗಿ ಅರ್ಥೈಸುವಂತೆ ಇಂಗ್ಲಿಷ್ ಸಬ್‌ಟೈಟಲ್ ನೀಡಲಾಗಿದೆ.
ಈ ವಿಡಿಯೊವನ್ನು ವೀಕ್ಷಿಸುವಾಗ ಸುಮಾರು 20 ಸೆಕೆಂಡುಗಳಲ್ಲಿ, ಒಬ್ಬ ವ್ಯಕ್ತಿಯ ಬೆನ್ನ ಹಿಂದೆ ಶರ್ಟಿನಲ್ಲಿ ‘ಸ್ಪೆಷಲ್ ಎಫೆಕ್ಟ್ ಮೇಕಪ್’ ಎಂದು ಬರೆದ ಬರಹವನ್ನು ಕೂಡಾ ಗುರುತಿಸಬಹುದು.

ಸಾಂಪ್ರದಾಯಿಕವಾಗಿ ಪುರುಷರು ನಡೆಸುತ್ತಿರುವ ಪ್ಯಾಲೇಸ್ತೀನಿಯನ್ ಚಲನಚಿತ್ರೋದ್ಯಮಕ್ಕೆ ಮರಿಯಮ್ ಸಲಾಹ್ ಪ್ರವೇಶಿಸುವ ಬಗ್ಗೆ ‘ಟಿಆರ್‌ಟಿ ವರ್ಲ್ಡ್’ ಚಾನೆಲ್ ಕೂಡಾ ವೀಡಿಯೊ ವರದಿಯನ್ನು ಪ್ರಸಾರ ಮಾಡಿದೆ. ಈ ವರದಿಯಲ್ಲಿ ಕೂಡಾ ವೈರಲ್ ಆಗಿರುವ ಅದೇ ತುಣುಕುಗಳನ್ನು ಕಾಣಬಹುದು.
ಇದನ್ನೂ ಓದಿ: ಪ್ರಧಾನಿ ಬಿಜೆಪಿ ಕಾರ್ಯಕರ್ತರ ಭೇಟಿ ಮಾಡಿದ್ದನ್ನು, ರೈತರೊಂದಿಗಿನ ಭೇಟಿಯೆಂದ ಮಾಧ್ಯಮಗಳು!
“ಗಾಜಾ ಪಟ್ಟಿಯ ಫಿಲ್ಮ್‌ಸೆಟ್‌ನಲ್ಲಿ, ಮೇಕಪ್ ಕಲಾವಿದೆ ಮರಿಯಮ್ ಸಲಾಹ್ ಅವರು ಫ್ರೆಂಚ್ ಚಾರಿಟಿ ಡಾಕ್ಟರ್ಸ್ ಆಫ್ ದಿ ವರ್ಲ್ಡ್ ಯೋಜನೆಯ ಅಡಿಯಲ್ಲಿ ಪಾಲ್ಗೊಳ್ಳುವ ನಟರ ಮೇಲೆ ಭೀಕರವಾಗಿ ಕಾಣುವ ಗಾಯಗಳನ್ನು ಸೃಷ್ಟಿಸುತ್ತಿದ್ದಾರೆ. ಗಾಜಾ ನಿವಾಸಿಗಳು ಎದುರಿಸುತ್ತಿರುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲು ಅವರು ಆಶಿಸಿದ್ದಾರೆ” ಎಂದು ಟಿಆರ್‌ಟಿ ವಲ್ಡ್ ನಿರೂಪಕಿ ಹೇಳುತ್ತಾರೆ.
ಚಲನಚಿತ್ರ ಯೋಜನೆಗಾಗಿ ನಟರ ಮೇಲೆ ಗಾಯಗಳನ್ನು ಕೃತಕವಾಗಿ ಮೇಕಪ್ ಮೂಲಕ ಮಾಡಿರುವ ಫ್ಯಾಲೆಸ್ತೀನಿ ಮೇಕಪ್ ಕಲಾವಿದೆಯ ಮೂರು ವರ್ಷಗಳ ಹಿಂದಿನ ವೀಡಿಯೊವನ್ನು, “ಗಾಜಾ ನಿವಾಸಿಗಳು ಜಗತ್ತಿನ ಅನುಕಂಪ ಗಿಟ್ಟಿಸಲು ಬೇಕಾಗಿ ಮತ್ತು ಇಸ್ರೇಲ್ ಅನ್ನು ಕೆಟ್ಟದಾಗಿ ಬಿಂಬಿಸಲು ಬೇಕಾಗಿ ನಕಲಿ ಗಾಯಗಳನ್ನು ಮಾಡುತ್ತಿದ್ದಾರೆ” ಎಂಬ ಸುಳ್ಳು ಹೇಳಿಕೆಯನ್ನು ಮತ್ತೆ ಹರಿಯಬಿಡಲಾಗಿದೆ.
ಗಾಜಾ ನಿವಾಸಿಗಳು ಸಹಾನುಭೂತಿ ಪಡೆಯಲು “ನಕಲಿ ಅಂತ್ಯಕ್ರಿಯೆ” ನಡೆಸುತ್ತಿದ್ದಾರೆ ಎಂಬ ಸುಳ್ಳು ಹೇಳಿಕೆಯೊಂದರ ಸತ್ಯಾಸತ್ಯತೆಯನ್ನು ಆಲ್ಟ್‌ನ್ಯೂಸ್ ಈ ಹಿಂದೆ ಬಿಡುಗಡೆ ಮಾಡಿತ್ತು.
ಕೃಪೆ: ಆಲ್ಟ್‌ನ್ಯೂಸ್


