Homeಕರೋನಾ ತಲ್ಲಣಪಶ್ಚಿಮ ಬಂಗಾಳ: ಕೊರೊನಾ ಸೋಂಕಿತರ ಅಂತ್ಯಕ್ರಿಯೆಯ ಸಿಬ್ಬಂದಿ ನೇಮಕಾತಿಯಲ್ಲೂ ಜಾತಿ ತಾರತಮ್ಯ

ಪಶ್ಚಿಮ ಬಂಗಾಳ: ಕೊರೊನಾ ಸೋಂಕಿತರ ಅಂತ್ಯಕ್ರಿಯೆಯ ಸಿಬ್ಬಂದಿ ನೇಮಕಾತಿಯಲ್ಲೂ ಜಾತಿ ತಾರತಮ್ಯ

ಜಾತಿ ತಾರತಮ್ಯದ ವಿರುದ್ಧ ದಲಿತ ಸಮುದಾಯ ಶತಮಾನಗಳಿಂದ ಹೋರಾಟ ನಡೆಸುತ್ತಿದೆ. ಆದರೆ ಸರ್ಕಾರಗಳು ಜಾತಿ ಆಧಾರಿತ ಕಾರ್ಮಿಕ ವಿಭಜನೆಯನ್ನು ಪುನರಾವರ್ತಿಸುತ್ತಿರುವುದು ಶೋಚನೀಯ.

- Advertisement -
- Advertisement -

ಪಶ್ಚಿಮ ಬಂಗಾಳದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರಣಿ ಆದೇಶಗಳ ಮೂಲಕ ಡೊಂಬ ಸಮುದಾಯಕ್ಕೆ ಸೇರಿದ ಜನರನ್ನು ಮಾತ್ರ ಕೋವಿಡ್ ಸೋಂಕಿತರ ಅಂತ್ಯಕ್ರಿಯೆಗೆ ನೇಮಾಕಾತಿ ಮಾಡಿಕೊಳ್ಳುತ್ತಿದೆ. ಈ ಆದೇಶಗಳು ಮೇಲ್ನೋಟದಲ್ಲಿಯೇ ಜಾತಿ ಆಧಾರಿತ ಶೋಷಣೆಗೆ ಕಾರಣವಾಗಿರುವುದು ಕಂಡುಬರುತ್ತದೆ. ಜಾತಿ ಆಧಾರಿತ ವ್ಯವಸ್ಥೆಯನ್ನು ಎತ್ತಿಹಿಡಿಯುವ ಪಶ್ಚಿಮ ಬಂಗಾಳ ಸರ್ಕಾರದ ಈ ಆದೇಶಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿವೆ.

ಡಿಸೆಂಬರ್ 26, 2019 ರಿಂದ ಇತ್ತೀಚೆಗೆ ಎಂದರೆ ಮೇ 07, 2021 ರ ವರೆಗೆ ಅನೇಕ ಸುತ್ತೋಲೆಗಳ ಮೂಲಕ ಪಶ್ಚಿಮ ಬಂಗಾಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ಮತ್ತು ದೇಹಗಳ ವಿಲೇವಾರಿಗೆ ಅನೇಕ ನೇಮಕಾತಿ ಆದೇಶಗಳನ್ನು ಹೊರಡಿಸಿದೆ. ಸರ್ಕಾರವು ಅಧಿಕೃತವಾಗಿ ಡೊಂಬ ಅಥವಾ ಡೊಮ್ ಸಮುದಾಯದ ವ್ಯಕ್ತಿಗಳನ್ನೇ ಈ ಕೆಲಸಕ್ಕೆ ನೇಮಿಸಿಕೊಳ್ಳಲು ಸೂಚಿಸಿದೆ.

ಈ ಉದ್ಯೋಗಗಳು ರಾಜ್ಯದ ಇತರ ಜಿಲ್ಲೆಗಳು ಮತ್ತು ಕೊಲ್ಕತ್ತಾದ ಆಸ್ಪತ್ರೆಗಳ ಶವಾಗಾರದಿಂದ ಕೋವಿಡ್ ಸೋಂಕಿನಿಂದ ಮೃತಪಟ್ಟವರ ದೇಹಗಳ ವಿಲೇವಾರಿಯನ್ನೂ ಒಳಗೊಂಡಿರುತ್ತವೆ. ಈ ಕೆಲಸಗಳಿಗೆ ನೇಮಕಗೊಂಡ ಉದ್ಯೋಗಿಗಳಿಗೆ ತಿಂಗಳಿಗೆ ₹ 10,000 ದಷ್ಟು ಸಂಬಳವನ್ನು ನೀಡಲಾಗುತ್ತಿದೆ. ಕೆಲವು ಆದೇಶಗಳ ಮೂಲಕ ಡೊಮ್ ಸಮುದಾಯಕ್ಕೆ ಸೇರಿದ ವ್ಯಕ್ತಿಗಳ ಮರು ನೇಮಕಾತಿಯನ್ನು ಮಾಡಲಾಗಿದೆ. ಶವಾಗಾರದ ಪಕ್ಕದಲ್ಲಿ ಡೊಮ್ ಸಮುದಾಯದ ಉದ್ಯೋಗಿಗಳಿಗಾಗಿ ಪ್ರತ್ಯೇಕ ಕೋಣೆಗಳನ್ನು ನಿರ್ಮಿಸಲಾಗಿದ್ದು ಅದನ್ನು ಡೊಮ್ ರೂಮ್ ಎಂದು ಕರೆಯಲಾಗುತ್ತಿದೆ.

ಇದನ್ನೂ ಓದಿ: ಸುದ್ದಿಯೇನೇ ಮನೋಲ್ಲಾಸಿನಿ: ಭನವಾರಿ ದೇವಿ ಮತ್ತು ಅತ್ಯಾಚಾರದ ಕಾನೂನುಗಳು

ಡೊಮ್ ಸಮುದಾಯವು ಭಾರತದಲ್ಲೇ ಅತ್ಯಂತ ಹಿಂದುಳಿದ ಮತ್ತು ಅಸ್ಪ್ರಶ್ಯ ಜಾತಿಗಳಲ್ಲಿ ಒಂದು. ದಲಿತರಲ್ಲೇ ಅತ್ಯಂತ ಶೋಷಣೆಗೆ ಒಳಗಾಗುತ್ತಿರುವ ಈ ಸಮುದಾಯ ಅಪಾರ ತಾರತಮ್ಯ, ಸಾಮಾಜಿಕ ಕಿರುಕುಳ ಮತ್ತು ಬಹಿಷ್ಕಾರಕ್ಕೆ ಗುರಿಯಾಗುತ್ತಲೇ ಬರುತ್ತಿದೆ. ಜಾತಿ ವ್ಯವಸ್ಥೆಯು ಡೊಮ್ ಜಾತಿಗೆ ಸೇರಿದ ಜನರನ್ನು ಚರಂಡಿಗಳನ್ನು ತೊಳಯುವ, ಕಸಗುಡಿಸುವ, ಹೆಣಗಳನ್ನು ಸುಡುವ ಕೆಲಸಗಳಿಗೆ ಮಾತ್ರ ಸೀಮಿತಗೊಳಿಸಿದೆ. ಇವರ ಜೀವನವನ್ನು ಉತ್ತಮಗೊಳಿಸಲು ಡೊಮ್ ಜಾತಿಯನ್ನು ಭಾರತ ಸಂವಿಧಾನದಡಿಯಲ್ಲಿ ಬರುವ ಪರಿಶಿಷ್ಟ ಜಾತಿಗಳ ಗುಂಪಿಗೆ ಸೇರಿಸಲಾಗಿದ್ದರೂ ಸಮುದಾಯದ ಜನರಿಗೆ ತಾರತಮ್ಯ ಮತ್ತು ಅಸ್ಪ್ರಶ್ಯತೆಯ ನೆರಳುಗಳಿಂದ ಇಂದಿಗೂ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದಕ್ಕೆ ಜೀವಂತ ನಿದರ್ಶನವೆಂಬಂತೆ ಪಶ್ಚಿಮ ಬಂಗಾಳದಲ್ಲಿ ನಿತ್ಯ ನೂರಾರು ಕೋವಿಡ್ ಸೋಂಕಿತರ ಹೆಣವನ್ನು ಸುಡುವ ಕಾರ್ಯದಲ್ಲಿ ಡೊಮ್ ಸಮುದಾಯದ ಜನರನ್ನು ಬಳಸಿಕೊಳ್ಳಲಾಗುತ್ತಿದೆ.

ಭಾರತ ಸಂವಿಧಾನವು ಅನುಚ್ಛೇದ 14 16, 17, 21 ರ ಮೂಲಕ ಶೋಷಿತ ಸಮುದಾಯಗಳನ್ನು ಜಾತಿ ವ್ಯವಸ್ಥೆಯ ಪಿಡುಗಿನಿಂದ ರಕ್ಷಿಸುತ್ತದೆ ಮತ್ತು ಸಮಾನಗೌರವ ಮತ್ತು ಸಮಾನ ಘನತೆಯ ಹಕ್ಕನ್ನು ಖಾತರಿಪಡಿಸುತ್ತದೆ. ಆದರೆ ಪಶ್ಚಿಮ ಬಂಗಾಳ ಸರ್ಕಾರ ಮಾತ್ರ ಸಂವಿಧಾನದ ಮೂಲ ಆಶಯ ಸಮಾನತೆಯನ್ನೇ ಗಾಳಿಗೆ ತೂರಿ ಡಾಮ್ ಜಾತಿಯನ್ನು ತಾರತಮ್ಯಕ್ಕೆ ಗುರಿಮಾಡುತ್ತಿದೆ. ಕೋವಿಡ್ ಸೋಂಕಿತ ದೇಹಗಳನ್ನು ವಿಲೇವಾರಿ ಮಾಡುವಂತಹ ಅತ್ಯಂತ ಅಪಾಯಕಾರಿ ಕೆಲಸಕ್ಕೆ ಯಾವುದೇ ಸುರಕ್ಷತೆಯ ಖಾತರಿಯಿಲ್ಲದೇ ಅತ್ಯಂತ ಕಡಿಮೆ ಸಂಬಳಕ್ಕೆ ಒಂದು ಸಮುದಾಯವನ್ನೇ ನಿರ್ದಿಷ್ಟವಾಗಿ ಆಯ್ಕೆ ಮಾಡಿಕೊಳ್ಳುತ್ತಿರುವುದು ಅತ್ಯಂತ ಅಮಾನವೀಯ.

ಸರ್ಕಾರದ ಆದೇಶಗಳು ಜಾತಿ ಆಧಾರಿತ ಉದ್ಯೋಗ ಪದ್ಧತಿಯನ್ನು ಪ್ರತಿಬಿಂಬಿಸುತ್ತಿವೆ. ಯಾವ ವ್ಯವಸ್ಥೆಯ ವಿರುದ್ಧ ದಲಿತರು ಹೋರಾಟವನ್ನು ಮಾಡುತ್ತ, ತಮ್ಮ ಜೀವನವನ್ನು ಬಲಿಕೊಡುತ್ತ ಬಂದಿದ್ದರೋ ಅದೇ ವ್ಯವಸ್ಥೆಗೆ ಸರ್ಕಾರ ಮತ್ತೆ ಅವರನ್ನು ದೂಡುತ್ತಿದೆ.

1936 ರಲ್ಲಿ ಡಾ. ಬಿ ಆರ್ ಅಂಬೇಡ್ಕರ್ ತಮ್ಮ ‘ಅನಿಹೇಲಿನೇಶನ್ ಆಫ್ ಕಾಸ್ಟ್’ ಕೃತಿಯಲ್ಲಿ ಬರೆಯುತ್ತಾರೆ.
“ಜಾತಿಪದ್ಧತಿಯೆಂಬುದು ಕೇವಲ ಶ್ರಮದ ವಿಭಜನೆಯಲ್ಲ. ಇದೊಂದು ಶ್ರಮಿಕರನ್ನೇ ವಿಭಜಿಸುವ ವ್ಯವಸ್ಥೆ. ಯಾವುದೇ ನಾಗರಿಕ ಸಮುದಾಯ ಒಂದು ವರ್ಗವನ್ನು ಸಂಪೂರ್ಣವಾಗಿ ತಳಕ್ಕೆ ತಳ್ಳುವ ಇಂತಹ ಅಸ್ವಾಭಿವಿಕ ವಿಭಜನೆಗಳನ್ನು ಹೊಂದಿರಬಾರದು”

ಇದನ್ನೂ ಓದಿ: ಗೌರಿ ಕಾರ್ನರ್; ಲಿವ್ ಅಂಡ್ ಬಿಕಮ್ ಸಿನಿಮ: ಪ್ರೀತಿಗಿರುವಷ್ಟು ಶಕ್ತಿ ಇನ್ಯಾವುದಕ್ಕಿದೆ?

ಕೋವಿಡ್ ಮೃತರ ದೇಹಗಳ ವಿಲೇವಾರಿಗೆ ಡಾಮ್ ಜಾತಿಯ ಜನರ ನಿರ್ದಿಷ್ಟ ನೇಮಕಾತಿ ಅಂಬೇಡ್ಕರ್ ಹೇಳಿದ ಈ ಜಾತಿ ಮನಸ್ಥಿತಿ ಮತ್ತು ಜಾತಿ ಪದ್ಧತಿಯನ್ನು ಜೀವಂತ ವಿಡುವ ಪ್ರಯತ್ನವನ್ನು ಎತ್ತಿ ತೋರಿಸುತ್ತದೆ. ಪಶ್ಚಿಮ ಬಂಗಾಳ ಸರ್ಕಾರವು ಡಾಮ್ ಸಮುದಾಯವನ್ನು ಹೆಣ ಸುಡುವ ಕೆಲಸಕ್ಕೆ ಸೀಮಿತವೆಂದು ನಡೆಸಿಕೊಳ್ಳುತ್ತಿದೆ. ಇನ್ನು ಸರಳವಾಗಿ ಹೇಳಬೇಕೆಂದರೆ ಹೆಣ ಸುಡುವುದು ಡಾಮ್ ಜಾತಿಯ ಅಧಿಕೃತ ಕೆಲಸ ಎಂದು ಹೇಳುವ ಮೂಲಕ ಜಾತಿ ಪದ್ಧತಿಯನ್ನು ಕಾನೂನು ಬದ್ಧಗೊಳಿಸುತ್ತಿದೆ.

ನವತೇಜ್ ಸಿಂಗ್ ಜೋಹರ್ vs ಭಾರತ ಸರ್ಕಾರ ಪ್ರಕರಣದಲ್ಲಿ 2018 ರಲ್ಲಿ ಭಾರತ ಸರ್ವೋಚ್ಛ ನ್ಯಾಯಾಲಯವು ಸಾಮಾಜಿಕ ಕಳಂಕದ ಆಧಾರದಲ್ಲಿ ಕಡ್ಡಾಯವಾಗಿ ಸಮುದಾಯವನ್ನು ಸಮಾಜದಿಂದ ದೂರಮಾಡುವುದು, ನಿರ್ದಿಷ್ಟ ವೃತ್ತಿಗೆ ಸೀಮಿತ ಗೊಳಿಸುವುದು ಸಂವಿಧಾನದ ಮೂಲಭೂತ ಸಿದ್ಧಾಂತವಾದ ಸ್ವಾತಂತ್ರ್ಯಕ್ಕೆ ವಿರುದ್ಧವಾದ ಪ್ರಕ್ರಿಯೆ ಎಂದು ಹೇಳಿದೆ. ಈ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು ಶೋಷಿತ ಸಮುದಾಯಗಳನ್ನು ಯಾವುದೇ ಜಾತೀಯ ಪೂರ್ವಾಗ್ರಹಗಳಿಲ್ಲದೇ ಸಾಮಾನ್ಯ ಮನುಷ್ಯರನ್ನಾಗಿ ನೋಡಬೇಕು. ಸಮಾನ ಗೌರವ ನೀಡಬೇಕು ಎಂದು ಆದೇಶ ವಿತ್ತಿದೆ.‌ಆದರೆ ಪಶ್ಚಿಮ ಬಂಗಾಳ ಸರ್ಕಾರವು ಜಾತಿ ಪದ್ಧತಿಯನ್ನು ಮರುಸ್ಥಾಪಿಸುತ್ತ ಶೋಷಿತ ಡಾಮ್ ಸಮುದಾಯಕ್ಕೆ ಘನತೆಯ ಬದುಕಿನ ಮೂಲಭೂತ ಹಕ್ಕನ್ನೇ
ನಿರಾಕರಿಸುತ್ತಿದೆ. ಆ ಮೂಲಕ ಘನತೆಯೊಂದಿಗೆ ಅಂತರ್ಗತವಾದ ಅನುಚ್ಛೇಧ 21 ರ ಮೂಲಕ ಭಾರತ ಸಂವಿಧಾನ ಖಾತರಿಪಡಿಸಿದ ಬದುಕುವ ಹಕ್ಕನ್ನು ನಿರಾಕರಿಸಲು ಹೊರಟಿದೆ.

ಭಾರತ ಸಂವಿಧಾನವು ಕಠಿಣ ಶಬ್ಧಗಳಲ್ಲಿ ಪವಿತ್ರ ಮತ್ತು ಮಲೀನ ಜಾತಿಗಳೆಂಬ ವ್ಯವಸ್ಥೆಯನ್ನು ದೇಶದಲ್ಲಿ‌ ನಿರ್ಬಂಧಿಸಿದೆ. ಶಬರಿ ಮಲೆ ಪ್ರಕರಣದಲ್ಲಿ ಜಸ್ಟಿಸ್ ಡಿ ವೈ ಚಂದ್ರಚೂಡ್ ಅವರು ‘ಪವಿತ್ರ’ ಮತ್ತು ‘ಮಲೀನ’ ಎಂಬ ಸಾಮಾಜಿಕ ಪೂರ್ವಾಗ್ರಹದಿಂದ ಕೂಡಿದ ವರ್ಗೀಕರಣಕ್ಕೆ ಸಂವಿಧಾನ ವ್ಯವಸ್ಥೆಯಲ್ಲಿ ಯಾವುದೇ ಸ್ಥಳವಿಲ್ಲವೆಂದು ಪುನರುಚ್ಛರಿಸುತ್ತಾರೆ. ಇದಕ್ಕೆ ವಿರುದ್ಧವಾಗಿ ಸರ್ಕಾರಗಳು ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಸರ್ಕಾರಗಳು ನಡೆಸುತ್ತಿರುವ ಶವಾಗಾರದ ಸಿಬ್ಬಂದಿ, ಅಂತ್ಯಕ್ರಿಯೆಯ ಸಿಬ್ಬಂದಿಗಳ ನೇಮಾಕಾತಿಯೂ ಸಂಪೂರ್ಣ ಜಾತಿ ಆಧಾರಿತವಾಗಿದೆ, ಹೆಣ ಸುಡುವ ಕೆಲಸವನ್ನು ಅತ್ಯಂತ ಹೀನಾಯ ಎಂದು ಪರಿಗಣಿಸಿ ಅಸ್ಪ್ರಶ್ಯ ಎಂದು ಗುರುತಿಸುವ ಸಮುದಾಯದವರನ್ನೇ ಆ ಕೆಲಸಕ್ಕೆ ನೇಮಿಸಲಾಗುತ್ತಿದೆ ಎಂಬುದನ್ನು ವೈಸ್ ಮೀಡಿಯಾ ವೆಬ್ ಸೈಟ್ ದಾಖಲೆಯ ಮೂಲಕ ತೋರಿಸಿದೆ.

ಆದರೆ ಡಾಮ್ ಸಮುದಾಯಕ್ಕೆ ಸೇರಿದ ಜನರಿಗೆ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್ ಮುಂತಾದ ಯಾವುದೇ ಸುರಕ್ಷತೆಯನ್ನು ನೀಡದೇ, ಕನಿಷ್ಠ ವೇತನಕ್ಕೆ ಕೋವಿಡ್ ಮೃತದೇಹಗಳ ವಿಲೇವಾರಿಗೆ ನೇಮಿಸಿಕೊಳ್ಳಲಾಗಿದೆ. ವಿಚಿತ್ರವೆಂದರೆ 1989 ರ ಪರಿಶಿಷ್ಟ ಜಾತಿ ವರ್ಗಗಳ ರಕ್ಷಣೆಯ ಕಾಯ್ದೆಯು ಯಾವುದೇ ಪರಿಶಿಷ್ಟ ಜಾತಿ ವರ್ಗಗಳ ಜನರನ್ನು ಮನುಷ್ಯ, ಪ್ರಾಣಿಗಳ ದೇಹಗಳನ್ನು ಹೊರುವ ವಿಲೇವಾರಿ ಮಾಡುವ ಅಥವಾ ಸ್ಮಶಾಣದ ಗುಂಡಿಗಳನ್ನು ತೋಡುವಂತೆ ಒತ್ತಾಯಿಸುವುದು ಕಾನೂನು ಬಾಹಿರವೆಂದು ಹೇಳುತ್ತದೆ.

ಇದನ್ನೂ ಓದಿ: ಪುಸ್ತಕ ವಿಮರ್ಶೆ; ನಡೆ-ನುಡಿಗಳಲ್ಲಿ ಪ್ರಖರ ಬದ್ಧತೆ ತೋರಿದ ಹೋರಾಟಗಾರನ ಸಾಂಸ್ಕೃತಿಕ ಕಥನ

ಇದರ ಹೊರತಾಗಿ ಪಶ್ಚಿಮ ಬಂಗಾಳದ ಆಸ್ಪತ್ರೆಗಳಲ್ಲಿ ಡಾಮ್ ಜಾತಿಯ ಉದ್ಯೋಗಿಗಳಿಗಾಗಿ ಶವಾಗಾರಕ್ಕೆ ಹೊಂದಿಕೊಂಡಂತೆ ಪ್ರತ್ಯೇಕ ಡಾಮ್ ರೂಮ್‌ಗಳ ವ್ಯವಸ್ಥೆಯನ್ನು ಮಾಡಿರುವುದು ಅಸ್ಪ್ರಶ್ಯತೆ ಆಚರಣೆಯ ಇನ್ನೊಂದು ಕರಾಳ ಮುಖದ ಅನಾವರಣವಷ್ಟೆ. ಶವಾಗಾರಗಳಿಗೆ ನೇಮಕವಾಗುವ ಈ ಸಿಬ್ಬಂದಿಗಳಿಗೆ ಕೋವಿಡ್ ಸೋಂಕಿನಿಂದ ರಕ್ಷಿಸುವ ಯಾವ ಕ್ರಮವನ್ನು ಕೈಗೊಳ್ಳದಿರುವುದು ಸರ್ಕಾರದ ನಿರ್ಲಕ್ಷತೆಗೆ ಹಿಡಿದ ಕನ್ನಡಿ. ಸಂವಿಧಾನವು ಅನುಚ್ಛೇದ 17 ರ ಮೂಲಕ ಎಲ್ಲರೀತಿಯ ಅಸ್ಪ್ರಶ್ಯತೆಯ ಆಚರಣೆಗಳನ್ನು ನಿರ್ಬಂದಿಸಿದೆ. ಆ ರೀತಿಯ ಆಚರಣೆಗಳು ದೇಶದ ಯಾವುದೇ ಮೂಲೆಯಲ್ಲಿ ಕಂಡುಬಂದರೂ ಕಾರಣವಾದವರನ್ನು ಕಠಿಣವಾಗಿ ಶಿಕ್ಷಿಸಬೇಕೆಂದು ಹೇಳಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವುದು ಸರ್ಕಾರವೇ ಅನುಮೋದಿಸಿದ ಅಸ್ಪಶ್ಯತೆಯ ಆಚರಣೆ‌. ಹಾಗಾದರೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸಂವಿಧಾನವಕ್ಕೂ ಮೀರಿದ ಅಧಿಕಾರವಿದೆಯೇ ? ಇಲ್ಲ ಯಾವ ಸರ್ಕಾರಗಳೂ ಸಂವಿಧಾನಕ್ಕಿಂತ ಮೇಲಲ್ಲ.

2014 ರ ಸಫಾಯಿ ಕರ್ಮಚಾರಿ ಆಂದೋಲನ vs ಭಾರತ ಸರ್ಕಾರ ಪ್ರಕರಣದಲ್ಲಿ ಭಾರತ ಸರ್ವೋಚ್ಛ ನ್ಯಾಯಾಲಯವು ಸ್ವಚ್ಛತಾ ಕಾರ್ಮಿಕರು, ಜಾಡಮಾಲಿಗಳ ಜೀವದ ಸುರಕ್ಷತೆ, ಪುನರ್ವಸತಿಯ ಕುರಿತು ಸರ್ಕಾರಗಳು ಒತ್ತು ನೀಡಬೇಕೆಂದು ಆದೇಶಿಸಿದೆ. ಇದಕ್ಕು ಮುಂದುವರೆದು ಶೇ. 95 ರಷ್ಟು ಸ್ವಚ್ಛತಾ ಕರ್ಮಿಗಳು, ಕಸ ಗುಡಿಸುವವರು, ಚರಂಡಿ, ಮ್ಯಾನ್ ಹೋಲ್ ಗಳಲ್ಲಿ ಕೆಲಸಮಾಡುವವರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸಾಂಪ್ರದಾಯಿಕ ಉದ್ಯೋಗದ ಹೆಸರಿನಲ್ಲಿ ದಲಿತರನ್ನು ಇಂತಹ ಕೆಲಸಗಳಿಗೆ ವ್ಯವಸ್ಥಿತವಾಗಿ ಒತ್ತಾಯಿಸಲಾಗುತ್ತಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಮ್ಯಾನುವೆಲ್ ಸ್ಕೆವೆಂಜರ್‌ಗಳನ್ನು ಇತರ ಜಾತಿಗಳು ಅಸ್ಪ್ರಶ್ಯತೆಯಿಂದ ನಡೆಸಿಕೊಳ್ಳುತ್ತಿದ್ದಾರೆ. ಆ ಮೂಲಕ ಅವರನ್ನು ಗಂಭೀರವಾದ ಸಾಮಾಜಿಕ ಆರ್ಥಿಕ ಸಂಕಟಗಳಿಗೆ ವ್ಯವಸ್ಥಿತವಾಗಿ ದೂಡಲಾಗುತ್ತಿದೆ ಎಂದು ಸುಪ್ರಿಂ ಕೋರ್ಟ್ ಇದೇ ಸಂದರ್ಭದಲ್ಲಿ ಹೇಳಿದೆ.

ಅದೇ ರೀತಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಡಾಮ್ ಸಮುದಾಯವನ್ನು ಕೋವಿಡ್ ಮೃತದೇಹಗಳ ವಿಲೇವಾರಿಗೆ ನೇಮಿಸಿಕೊಳ್ಳುವ ಮೂಲಕ ಗಂಭೀರ ಸಾಮಾಜಿಕ ಆರ್ಥಿಕ ಸಂಕಟಗಳಿಗೆ ಸರ್ಕಾರ ತಳ್ಳಲು ಮುಂದಾಗಿದೆ. ದೇಶವು ತನ್ನ ಯಾವುದೇ ತಳ ಸಮುದಾಯದ ಜನರಿಗೆ ಘನತೆಯ ಬದುಕು ಮತ್ತು ಜೀವದ ಸುರಕ್ಷತೆಯನ್ನು ನಿರಾಕರಿಸಲು ಸಾಧ್ಯವಿಲ್ಲ. ಮೃತದೇಹಗಳ ವಿಲೇವಾರಿಯಂತಹ ಅಪಾಯದ ಕೆಲಸದಲ್ಲಿ ತೊಡಗಿರುವ ಡೊಮ್ ಸಮುದಾಯ ಅಥವಾ ಯಾವುದೇ ಜಾತಿಗೆ ಸೇರಿದ ಫ್ರಂಟ್ ಲೈನ್ ವಾರಿಯರ್ ಗಳ ಜೀವದ ಸುರಕ್ಷತೆ ಮತ್ತು ಜೀವನ ಭದ್ರತೆಗೆ ಸರ್ಕಾರ ಮೊದಲ ಆದ್ಯತೆಯನ್ನು ನೀಡಬೇಕಿದೆ. ಪಶ್ಚಿಮ ಬಂಗಾಳ ಆಡಳಿತ ಕೋವಿಡ್ ಸಾಂಕ್ರಾಮಿಕದಂತಹ ದುರಿತ ಕಾಲದಲ್ಲೂ ಸರ್ಕಾರಕ್ಕೆ ನೆರವಾಗುತ್ತಿರುವ ಡೊಮ್ ಸಮುದಾಯಕ್ಕೆ ಸೇರಿದ ಫ್ರಂಟ್ ಲೈನ್ ವಾರಿಯರ್ ಗಳನ್ನು ತಿರಸ್ಕಾರ ಮತ್ತು ತಾರತಮ್ಯದಿಂದ ನೋಡವುದನ್ನು ಬಿಟ್ಟು ಅವರಿಗೆ ಘನತೆ ಮತ್ತು ಸುರಕ್ಷತೆಯನ್ನು ನೀಡಲು ಮುಂದಾಗಬೇಕಿದೆ.

ಮೂಲ: ದಿ ವೈರ್‌‌; ಅನುರಾಗ್ ಭಾಸ್ಕರ್, ಸುಭಾಜಿತ್ ನಾಸ್ಕರ್
ಕನ್ನಡಕ್ಕೆ : ರಾಜೇಶ್ ಹೆಬ್ಬಾರ್

ಇದನ್ನೂ ಓದಿ: ದ್ವೇಷ-ಅಸೂಯೆ ಮತ್ತು ಹಿಂಸೆಗಳನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡದಿರೋಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...