ಜಾರ್ಜ್ ಫ್ಲಾಯ್ಡ್‌ನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿನ್ನಿಯಾಪೋಲಿಸ್‌ನ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್‌ಗೆ ಶುಕ್ರವಾರ 22 ವರ್ಷ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಡೆರೆಕ್ ಚೌವಿನ್ ತನ್ನ ಮೊಣಕಾಲನ್ನು ಜಾರ್ಜ್ ಫ್ಲಾಯ್ಡ್ ಅವರ ಕುತ್ತಿಗೆ ಇಟ್ಟು ಹಿಂಸೆ ನೀಡಿ ಕೊಂದಿದ್ದು ವಿಡಿಯೊದಲ್ಲಿ ದಾಖಲಾಗಿತ್ತು. ಈ ಜನಾಂಗೀಯ ಹಿಂಸಾಚಾರದ ವಿರುದ್ದ ವಿಶ್ವದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಡೆರೆಕ್ ಇತ್ತೀಚೆಗಷ್ಟೆ ತನ್ನ ವರ್ಷಗಳ ಮೌನವನ್ನು ಮುರಿದು, ಸಂತ್ರಸ್ತ ಕುಟುಂಬಕ್ಕೆ ಸಂತಾಪ ಸೂಚಿಸಿದ್ದನು. ಪ್ರಸ್ತುತ ಘೋಷಿಸಲ್ಪಟ್ಟ ಶಿಕ್ಷೆಯು, ಕಪ್ಪು ಜನಾಂಗದ ವ್ಯಕ್ತಿಯನ್ನು ಹತ್ಯೆ ಮಾಡಿದ ಪೊಲೀಸ್ ಅಧಿಕಾರಿಯೊಬ್ಬನಿಗೆ ವಿಧಿಸಲಾದ ಅತ್ಯಂತ ಸುದೀರ್ಘ ಜೈಲು ಶಿಕ್ಷೆಯಾಗಿದೆ.
ಫ್ಲಾಯ್ಡ್ ಕುಟುಂಬದ ಸದಸ್ಯರು ಮತ್ತು ಇತರರು ತೀರ್ಪಿನ ಬಗ್ಗೆ ನಿರಾಶೆಗೊಂಡಿದ್ದು, ಅವರ ಪರವಾಗಿದ್ದ ಪ್ರಾಸಿಕ್ಯೂಟರ್‌ಗಳು 30 ವರ್ಷಗಳ ಶಿಕ್ಷಯನ್ನು ಕೋರಿದ್ದರು.
ಡೆರೆಕ್ ಚೌವಿನ್‌ಗೆ ಪ್ರಸ್ತುತ 45 ವರ್ಷ ವಯಸ್ಸಾಗಿದ್ದು, ಜೈಲಿನಲ್ಲಿ ಉತ್ತಮ ನಡವಳಿಕೆ ತೋರಿದರೆ 15 ವರ್ಷಗಳ ನಂತರ ಪೆರೋಲ್‌ನಿಂದ ಹೊರಬರಬಹುದಾಗಿದೆ.
“ಪ್ರಸ್ತುತ ತೀರ್ಪು ಸುಧೀರ್ಘ ಸಮಯವೆ ಆಗಿದ್ದರೂ, ಶಿಕ್ಷೆಯ ಪ್ರಮಾಣ ಕಡಿಯೆ ಆಗಿದೆ” ಎಂದು ಮಿನ್ನಿಯಾಪೋಲಿಸ್‌ನ ಪ್ರತಿಭಟನಾ ನಾಯಕ ನೆಕಿಮಾ ಲೆವಿ ಆರ್ಮ್‌ಸ್ಟ್ರಾಂಗ್ ಹೇಳಿದ್ದಾರೆ.
ಡೆರೆಕ್ ವಿರುದ್ದ ಅಮೆರಿಕಾದ ಫೆಡರಲ್ ಸರ್ಕಾರ ಕೂಡಾ ‘ನಾಗರಿಕ ಹಕ್ಕುಗಳ ಉಲ್ಲಂಘನೆ’ಗೆ ಸಂಬಂಧಿಸಿದ ಎರಡು ಪ್ರಕರಣವನ್ನು ದಾಖಲಿಸಿದೆ. ಅದು 2022 ರ ಮಾರ್ಚ್ ವೇಳೆಗೆ ವಿಚಾರಣೆಗೆ ಬರಲಿದೆ. ಈ ಸಮಯಲ್ಲಿ ಡೆರೆಕ್ ಜೊತೆಗೆ ಫ್ಲಾಯ್ಡ್ ಹತ್ಯೆ ಸಮಯದಲ್ಲಿ ಇದ್ದ ಇತರ ಮೂವರು ಅಧಿಕಾರಿಗಳು ಕೂಡಾ ವಿಚಾರಣೆಗೆ ಒಳಪಡುತ್ತಾರೆ.
ಪೊಲೀಸ್ ಅಧಿಕಾರಿಯಾಗಿದ್ದ ಡೆರೆಕ್ ಚೌವಿನ್ ಮೇ 25, 2020 ರಂದು ಆಫ್ರಿಕನ್-ಅಮೆರಿಕನ್ ಜನಾಂಗದ ಜಾರ್ಜ್ ಫ್ಲಾಯ್ಡ್ ಅವರ ಕುತ್ತಿಗೆ ಮೇಲೆ ಒಂಬತ್ತು ನಿಮಿಷಗಳಿಗಿಂತ ಹೆಚ್ಚು ಕಾಲ ತನ್ನ ಮಂಡಿಯನ್ನು ಒತ್ತಿ ಹಿಡಿದಿದ್ದನು. ಜಾರ್ಜ್ ಪ್ಲಾಯ್ಡ್ ತನಗೆ ಉಸಿರಾಡಲು ಆಗುತ್ತಿಲ್ಲ ಎಂದು ದಯನೀಯವಾಗಿ ಕೂಗಿಕೊಂಡರೂ ಪೊಲೀಸ್ ಅಧಿಕಾರಿ ಅದನ್ನು ಲೆಕ್ಕಿಸದೆ ಅವರ ಹತ್ಯೆಗೆ ಕಾರಣವಾಗುತ್ತಾನೆ.
ಇದನ್ನೂ ಓದಿ: ಮಾನವೀಯತೆಯ ಸಾಕ್ಷಿಪ್ರಜ್ಞೆಯಾಗಿ ಉಳಿದ ಜಾರ್ಜ್ ಫ್ಲಾಯ್ಡ್ ಹತ್ಯೆಗೆ ಒಂದು ವರ್ಷ


