ಕೊರೊನಾದಿಂದ ವಿಧಿಸಲಾಗಿರುವ ಲಾಕ್‌ಡೌನ್‌ನ ಸಡಿಲತೆಯಾಗಿ ಅನ್‌ಲಾಕ್ 3.0 ಶನಿವಾರ ಪ್ರಕಟಿಸಲಾಗಿದ್ದು, ಜುಲೈ 05 ರಿಂದ (ಸೋಮವಾರ) ಜಾರಿಗೆ ಬರಲಿವೆ. ಇದರಲ್ಲಿ ನಮ್ಮ ಮೆಟ್ರೋಗೂ ಅವಕಾಶ ನೀಡಲಾಗಿದ್ದು. ಆಸನ ಸಾಮರ್ಥ್ಯ ಇರುವಷ್ಟು ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದೆ.
ರಾಜ್ಯ ಸರ್ಕಾರದ ಇತ್ತೀಚಿನ ಆದೇಶದ ಬಳಿಕ ನಮ್ಮ ಮೆಟ್ರೋ ರೈಲು ಈ ಬಗ್ಗೆ ಟ್ವೀಟ್ ಮಾಡಿ ಜುಲೈ 5 ರಿಂದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 8 ರವರೆಗೆ ಮೆಟ್ರೋ ಸೇವೆ ಲಭ್ಯವಿರುತ್ತದೆ ಎಂದು ತಿಳಿಸಿದೆ.
“ಮೆಟ್ರೋ ಸೇವೆಗಳು ಜುಲೈ 5 ರಿಂದ ಬೆಳಿಗ್ಗೆ 7 ರಿಂದ ರಾತ್ರಿ 8 ರವರೆಗೆ ಸೋಮದಿಂದ ಶುಕ್ರವಾರದವರೆಗೆ ಲಭ್ಯವಿರುತ್ತದೆ. ಪಿಕ್ ಮತ್ತು ಸಾಮಾನ್ಯ ಸಮಯದಲ್ಲಿ 5 ನಿಮಿಷದಿಂದ 15 ನಿಮಿಷಗಳ ಅಂತರದಲ್ಲಿ ಮೆಟ್ರೋ ಕಾರ್ಯನಿರ್ವಹಿಸುತ್ತದೆ. ಶನಿವಾರ, ಭಾನುವಾರ ಮತ್ತು ರಜಾದಿನಗಳಲ್ಲಿ ಜನರನ್ನು ನೋಡಿಕೊಂಡು, ಪ್ರೋತ್ಸಾಹವನ್ನು ಗಮನಿಸಿ ಎಷ್ಟು ಮೆಟ್ರೋ ಬಿಡಬೇಕು ಎಂಬುದನ್ನು ಗಮನಿಸಿ ಮೆಟ್ರೋ ಲಭ್ಯವಿರುತ್ತದೆ” ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಪ್ರಕರಣ – ಪ್ರಭಾವಕ್ಕೆ ಒಳಗಾಗದೆ ಜಾಮೀನು ಅರ್ಜಿ ಇತ್ಯರ್ಥ ಮಾಡಿ: ಸುಪ್ರೀಂಕೋರ್ಟ್
Metro services w. e.f 5/7/21, is from 7 am to 8 pm. Mon to Fri , with freq of 5-15mins in peak and non peak hours. On Sat, Sun & Gen holidays with increased / decreased freq. Commuters are requested to wear mask properly,maintain social distancing and hand hygiene at all times .
— ನಮ್ಮ ಮೆಟ್ರೋ (@cpronammametro) July 4, 2021
“ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸುವಾಗ ಎಲ್ಲಾ ಸಮಯದಲ್ಲೂ ಮಾಸ್ಕ್‌ಗಳನ್ನು ಸರಿಯಾಗಿ ಧರಿಸಬೇಕು. ದೈಹಿಕ ಅಂತರ ಕಾಪಾಡಬೇಕು ಮತ್ತು ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳಲು ವಿನಂತಿಸಲಾಗಿದೆ. ಮೆಟ್ರೋ ಸಿಬ್ಬಂದಿಯೊಂದಿಗೆ ಸಹಕರಿಸಬೇಕು” ಎಂದು ನಮ್ಮ ಮೆಟ್ರೋ ವಿನಂತಿಸಿದೆ.
ಸಾರ್ವಜನಿಕ ಸಾರಿಗೆಗಳಾದ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಎಲ್ಲಾ ಬಸ್‌ಗಳು 100 ರಷ್ಟು ಕಾರ್ಯನಿವಘಹಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ವೀಕೆಂಡ್ ಕರ್ಪ್ಯೂ ನಿರ್ಬಂಧ ಸಡಿಲಿಸಿರುವ ಸರ್ಕಾರ, ನೈಟ್ ಕರ್ಫ್ಯೂ ಸಮಯ ರಾತ್ರಿ 9 ರಿಂದ ಬೆಳಗ್ಗೆ 5ರ ವರೆಗೆ ನಿಗದಿ ಪಡಿಸಿದೆ.
ಇದನ್ನೂ ಓದಿ: ಸೋಮವಾರದಿಂದ ಅನ್‌ಲಾಕ್-3.0: ಏನೇನಿರಲಿದೆ? ಇಲ್ಲಿದೆ ಮಾಹಿತಿ


