ವಿರೋಧ ಪಕ್ಷದ ನಾಯಕರು ಕೂಡ ನಮ್ಮ ಪಕ್ಷದ ಕೆಲಸದ ಬಗ್ಗೆ ಮಾತನಾಡುತ್ತಿರುವುದರಿಂದ ಮತ್ತಷ್ಟು ಪ್ರೋತ್ಸಾಹ ದೊರಕಿದಂತಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಬುಧವಾರ ಹೇಳಿದ್ದಾರೆ.
ಮಂಗಳವಾರವಷ್ಟೇ ಪಂಜಾಬ್‌ನ ಕಾಂಗ್ರೆಸ್ ಶಾಸಕ ನವಜೋತ್ ಸಿಂಗ್ ಸಿಧು ಅವರು ’ಎಎಪಿ ಪಂಜಾಬ್ ಬಗೆಗಿನ ನನ್ನ ದೂರದೃಷ್ಟಿ ಮತ್ತು ಕಾರ್ಯವನ್ನು ಯಾವಾಗಲೂ ಗುರುತಿಸಿದೆ’ ಎಂದು ಟ್ವೀಟ್ ಮಾಡಿದ್ದರು. ಈ ಹಿನ್ನೆಲೆ ಬುಧವಾರ ಅರವಿಂದ್ ಕೇಜ್ರಿವಾಲ್ ಈ ಪ್ರತಿಕ್ರಿಯೆ ನೀಡಿದ್ದಾರೆ.
“ಎಎಪಿ ಇಷ್ಟು ಒಳ್ಳೆಯ ಕೆಲಸವನ್ನು ಮಾಡುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ, ವಿರೋಧ ಪಕ್ಷದ ನಾಯಕರು ಸಹ ನಮ್ಮನ್ನು ಹೊಗಳಿದ್ದಾರೆ. ಆದ್ದರಿಂದ, ಒಬ್ಬರು ಇದರ ಬಗ್ಗೆ ಪ್ರೋತ್ಸಾಹ ನೀಡಿದ್ದಾರೆ” ಎಂದು ದೆಹಲಿ ಮುಖ್ಯಮಂತ್ರಿ ಹೇಳಿದ್ದಾರೆ.
ಇದನ್ನೂ ಓದಿ: ಅಸ್ಸಾಂನಲ್ಲಿ ಗೋಹತ್ಯೆ, ಸಾಗಾಣಿಕೆಗೆ ತಡೆ: ಮಸೂದೆ ಮಂಡಿಸಿದ ಸಿಎಂ ಹಿಮಂತ ಬಿಸ್ವಾ
“ನಮ್ಮ ವಿರೋಧ ಎಎಪಿ ಯಾವಾಗಲೂ ಪಂಜಾಬ್‌ಗಾಗಿ ನಾನು ಹೊಂದಿರುವ ದೃಷ್ಟಿ ಮತ್ತು ಕೆಲಸವನ್ನು ಗುರುತಿಸಿದೆ. ಅದು 2017 ರ ಮೊದಲು ಕೂಡ ಡ್ರಗ್ಸ್, ರೈತರ ಸಮಸ್ಯೆಗಳು, ಭ್ರಷ್ಟಾಚಾರ ಮತ್ತು ವಿದ್ಯುತ್ ಬಿಕ್ಕಟ್ಟು ಬಗ್ಗೆ ಪಂಜಾಬ್ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದೇನೆ. ಇಂದು “ಪಂಜಾಬ್ ಮಾದರಿ” ಅನ್ನು ಪ್ರಸ್ತುತಪಡಿಸುತ್ತಿರುವುದು ಯಾರು, ನಿಜವಾಗಿಯೂ ಪಂಜಾಬ್ ಪರವಾಗಿ ಯಾರು ಹೋರಾಡುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ” ಎಂದು ಸಿಧು ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದರು.
Our opposition AAP has always recognised my vision & work for Punjab. Be it Before 2017- Beadbi, Drugs, Farmers Issues, Corruption & Power Crisis faced by People of Punjab raised by me or today as I present “Punjab Model” It is clear they know – who is really fighting for Punjab. https://t.co/6AmEYhSP67 pic.twitter.com/7udIIGkq1l
— Navjot Singh Sidhu (@sherryontopp) July 13, 2021
ಪಂಜಾಬ್ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು ನಡುವೆ ನಡೆಯುತ್ತಿರುವ ಬಿರುಕು ಸರಿಪಡಿಸಲು ಕಾಂಗ್ರೆಸ್ ಹಲವು ಬಾರಿ ಪ್ರಯತ್ನಿಸಿದೆ. ಕಾಂಗ್ರೆಸ್ ಹೈಕಮಾಂಡ್ ಮಾಡಿದ ಪ್ರಯತ್ನಗಳು ವಿಫಲವಾಗಿವೆ. ಜೊತೆಗೆ ಸಿಧು ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಬಹುದೆಂಬ ಊಹಾಪೋಹಗಳ ಮಧ್ಯೆ ಸಿಧು ಅವರ ಈ ಟ್ವೀಟ್‌ಗಳು ಕಾಣಿಸಿಕೊಂಡಿವೆ.
ಇದನ್ನೂ ಓದಿ: ಹಿಂದೂ ಹುಡುಗ ಹಿಂದೂ ಹುಡುಗಿಗೆ ಸುಳ್ಳು ಹೇಳುವುದು ಕೂಡಾ ‘ಜಿಹಾದ್’ – ಅಸ್ಸಾಂ ಸಿಎಂ


