Homeಕರೋನಾ ತಲ್ಲಣಕನ್ವರ್‌ ಯಾತ್ರೆಗೆ ಒಪ್ಪಿಗೆ ನೀಡಿದ ಯೋಗಿ ಸರ್ಕಾರ: ಜನರ ಜೀವನ, ಆರೋಗ್ಯ ಮುಖ್ಯ ಎಂದ ಸುಪ್ರೀಂ

ಕನ್ವರ್‌ ಯಾತ್ರೆಗೆ ಒಪ್ಪಿಗೆ ನೀಡಿದ ಯೋಗಿ ಸರ್ಕಾರ: ಜನರ ಜೀವನ, ಆರೋಗ್ಯ ಮುಖ್ಯ ಎಂದ ಸುಪ್ರೀಂ

- Advertisement -
- Advertisement -

ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ಕನ್ವರ್‌ ಯಾತ್ರೆಗೆ ಅವಕಾಶ ನೀಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಸೂಚನೆ ನೀಡಿದೆ. ಜನರ ಆರೋಗ್ಯ ಮತ್ತು ಜೀವಿಸುವ ಹಕ್ಕು ಪ್ರಮುಖವಾದದ್ದು ಎಂದು ಹೇಳಿದೆ.

“ಭಾರತದ ನಾಗರಿಕರ ಆರೋಗ್ಯ ಮತ್ತು ಜೀವಿಸುವ ಹಕ್ಕು ಅತ್ಯುನ್ನತವಾದದ್ದು. ಧಾರ್ಮಿಕ ಆಚರಣೆಗಳಾಗಿರಲಿ, ಬೇರೆ ಇತರ ಭಾವನಾತ್ಮಕ ವಿಚಾರಗಳೇ ಆಗಿರಲಿ ಅವು ಈ ಮೂಲಭೂತ ಮೂಲಭೂತ ಹಕ್ಕಿಗೆ ಅಧೀನವಾಗಿವೆ” ಎಂದು ನ್ಯಾಯಮೂರ್ತಿ ನಾರಿಮನ್ ಹೇಳಿದರು. ಪ್ರಕರಣದ ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ನಿಗದಿಪಡಿಸಲಾಗಿದೆ.

ಮುಂದಿನ ವಿಚಾರಣೆಯೊಳಗೆ ಉತ್ತರ ಪ್ರದೇಶ ಸರ್ಕಾರ ತನ್ನ ನಿರ್ಧಾರದ ಬಗ್ಗೆ ನ್ಯಾಯಾಲಯಕ್ಕೆ ತಿಳಿಸುವಂತೆ ಹೇಳಿದೆ. ಇಲ್ಲದಿದ್ದರೇ, ಆದೇಶವನ್ನು ರವಾನಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಉತ್ತರಾಖಂಡ: ಕೋವಿಡ್‌ ಹಿನ್ನಲೆಯಲ್ಲಿ ಕನ್ವರ್‌ ಯಾತ್ರೆ ರದ್ದುಗೊಳಿಸಿದ ಸರ್ಕಾರ

ಈ ವರ್ಷ ಜುಲೈ 25 ರಿಂದ ಆಗಸ್ಟ್ 6 ರವರೆಗೆ ಯಾತ್ರೆ ನಡೆಯಲಿದೆ ಎಂದು ಯುಪಿ ಕಾನೂನು ಸುವ್ಯವಸ್ಥೆ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ)  ಪ್ರಶಾಂತ್ ಕುಮಾರ್ ಗುರುವಾರ ಹೇಳಿದ್ದಾರೆ.

’ಕನ್ವರ್‌ ಯಾತ್ರಾ ಮಾರ್ಗಗಳಲ್ಲಿ ಮಾಸ್ಕ್, ಸ್ಯಾನಿಟೈಜರ್‌ಗಳು, ಕೊರೊನಾ ಪರೀಕ್ಷಾ ಕಿಟ್‌ಗಳು, ಪಲ್ಸ್ ಆಕ್ಸಿಮೀಟರ್‌ಗಳು ಮತ್ತು ಥರ್ಮಾಮೀಟರ್‌ಗಳೊಂದಿಗೆ ಕೋವಿಡ್ ಕೇರ್ ಸೆಂಟರ್‌ಗಳನ್ನು‍ ಸ್ಥಾಪಿಸಲಾಗುವುದು. ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು. ಅಗತ್ಯವಿದ್ದಲ್ಲಿ ಯಾತ್ರೆಗೆ ನೆಗೆಟಿವ್ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ಕಡ್ಡಾಯಗೊಳಿಸಲಾಗುವುದದು’ ಎಂದು ‌ಉತ್ತರ ಪ್ರದೇಶದ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತ, ಕುಂಭ ಮೇಳದ ಸಂದರ್ಭದಲ್ಲಿ ಘಟಿಸಿದ ಅಚಾತುರ್ಯವನ್ನು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ಉತ್ತರಾಖಂಡ ಸರ್ಕಾರ ಮುಂದಾಗಿದ್ದು, ಲಕ್ಷಾಂತರ ಜನರು ಸೇರುವ ಕನ್ವರ್‌ ಧಾರ್ಮಿಕ ಯಾತ್ರೆಯನ್ನು ನಿರ್ಬಂಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಉತ್ತರಾಖಂಡ ಸರ್ಕಾರ ನೆರೆಯ ರಾಜ್ಯಗಳೊಂದಿಗೆ ಸಮಾಲೋಚನೆಯನ್ನು ನಡೆಸಿ ಈ ನಿರ್ಧಾರವನ್ನು ಕೈಗೊಂಡಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ಕುಂಭಮೇಳದಲ್ಲಿ ಘಟಿಸಿದ ದುರಂತ ಮತ್ತೆ ಘಟಿಸದಂತೆ ತಡೆಯಬೇಕು. ಕೋವಿಡ್‌ ಮೂರನೇ ಅಲೆ ಮುನ್ಸೂಚನೆ ನಡುವೆ ಧಾರ್ಮೀಕ ಯಾತ್ರೆಯನ್ನು ನಡೆಸುವುದು ಸುರಕ್ಷಿತವಲ್ಲ ಎಂದು ಹಿರಿಯ ಅಧಿಕಾರಿಗಳು ಮತ್ತು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಸಿಎಂ ಪುಷ್ಕರ್‌ ಸಿಂಗ್ ಧಾಮಿ ಮಾಧ್ಯಮಗಳಿಗೆ ತಿಳಿಸಿದ್ದರು.


ಇದನ್ನೂ ಓದಿ: ಬೆಂಗಳೂರಿನಲ್ಲಿ ಉತ್ತರ ಪ್ರದೇಶದ ಜಾಹೀರಾತು: ಪೋಟೋ ಹಂಚಿಕೊಂಡ ವಕೀಲರಿಗೆ ಯುಪಿ ಪೊಲೀಸರ ಬೆದರಿಕೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಪ್ರಕರಣ: ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಸಿಎಂಗೆ ರಾಹುಲ್ ಗಾಂಧಿ ಪತ್ರ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರ ನೆರವಿಗೆ ನಿಲ್ಲುವಂತೆ ಮತ್ತು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ...