ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 43,509 ಹೊಸ ಕೊರೊನಾ ವೈರಸ್ ಪ್ರಕರಣಗಳು ಮತ್ತು 634 ಸಾವುಗಳು ದಾಖಲಾಗಿವೆ. ಕೇರಳದಲ್ಲಿ ಸತತ ಎರಡನೇ ದಿನ 22,000 ಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗುವ ಮೂಲಕ ಸಕ್ರಿಯ ಪ್ರಕರಣಗಳು ಮತ್ತೆ ಏರಿಕೆಯಾಗಿದ್ದು 4 ಲಕ್ಷಕ್ಕಿಂತ ಹೆಚ್ಚಾಗಿದೆ. ಕೇರಳ ಒಂದರಲ್ಲೇ 1.5 ಲಕ್ಷ ಸಕ್ರಿಯ ಪ್ರಕರಣಗಳಿವೆ.
ಸರ್ಕಾರವು ಬಿಡುಗಡೆ ಮಾಡಿರುವ ರಾಜ್ಯಮಟ್ಟದ ಸಿರೊಸರ್ವೆ ಅಂಕಿಅಂಶಗಳು ಕೇರಳದ ಜನಸಂಖ್ಯೆಯಲ್ಲಿ ಆರು ವರ್ಷಕ್ಕಿಂತ ಮೇಲ್ಪಟ್ಟ ಶೇಕಡಾ 44 ರಷ್ಟು ಜನರು ಮಾತ್ರ ಈವರೆಗೆ ವೈರಸ್ ಸೋಂಕಿಗೆ ಒಳಗಾಗಿದ್ದಾರೆ, ಆದರೆ, ರಾಷ್ಟ್ರೀಯ ಸರಾಸರಿ ಶೇಕಡಾ 67 ಕ್ಕಿಂತ ಹೆಚ್ಚಾಗಿದೆ.
ಅಂದರೆ, ಇನ್ನೂ ಅನೇಕ ರಾಜ್ಯಗಳಿಗೆ ಹೋಲಿಸಿದರೆ ಕೇರಳ ರಾಜ್ಯದ ಜನಸಂಖ್ಯೆಯ ಹೆಚ್ಚಿನ ಭಾಗವು ಕೊರೊನಾ ಸೋಂಕಿಗೆ ಒಳಗಾಗುತ್ತದೆ. ಹೀಗಾಗಿಯೇ ಕೇರಳವು ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ವರದಿ ಮಾಡುತ್ತಿದೆ ಎಂದು ಸಿರೋಸರ್ವೆ ತಿಳಿಸಿದೆ. ಕಳೆದ ಎರಡು ದಿನಗಳಿಂದ ಕೇರಳವು 22,000 ಕ್ಕೂ ಹೆಚ್ಚು ಸೋಂಕಿತರನ್ನು ವರದಿ ಮಾಡಿದೆ, ಇದು ರಾಷ್ಟ್ರೀಯ ಎಣಿಕೆಯ ಶೇಕಡಾ 50 ಕ್ಕಿಂತ ಹೆಚ್ಚಾಗಿದೆ.
ಇದನ್ನೂ ಓದಿ: ಕೇರಳದಲ್ಲಿ ಕೊರೊನಾ ಏರಿಕೆ: ವೀಕೆಂಡ್ ಲಾಕ್‌ಡೌನ್, ಕೇಂದ್ರದಿಂದ ತಂಡ ರವಾನೆ
ದೇಶದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳನ್ನು ಹೊಂದಿರುವ ರಾಜ್ಯವಾದ ಮಹಾರಾಷ್ಟ್ರವು ಕಡಿಮೆ ಸೋಂಕು ಹರಡುವಿಕೆ ಹೊಂದಿದೆ. ಮಹಾರಾಷ್ಟ್ರದ ಜನಸಂಖ್ಯೆಯ ಶೇಕಡಾ 58 ರಷ್ಟು ಜನರು ಈವರೆಗೆ ಸೋಂಕಿಗೆ ಒಳಗಾಗಿದ್ದಾರೆ ಎಂದು ಸಿರೋಸರ್ವೆ ಡೇಟಾ ತಿಳಿಸುತ್ತದೆ.
ಸಿರೋಸರ್ವೆಯ ವರದಿ ಪ್ರಕಾರ ಕೊರೊನಾ ಸೋಂಕು ಹರಡುವಿಕೆಯು ಮಧ್ಯಪ್ರದೇಶದಲ್ಲಿ ಅತಿ ಹೆಚ್ಚಾಗಿತ್ತು ಎಂದು ತಿಳಿಸಿದೆ. ಮಧ್ಯಪ್ರದೇಶದಲ್ಲಿ ಸುಮಾರು 79 ಪ್ರತಿಶತದಷ್ಟು ಜನರು ಈಗಾಗಲೇ ಸೋಂಕಿಗೆ ಒಳಗಾಗದ್ದಾರೆ. ರಾಜಸ್ಥಾನದಲ್ಲಿ ಶೇ 76.2, ಬಿಹಾರದಲ್ಲಿ ಶೇ 76 ಮತ್ತು ಉತ್ತರ ಪ್ರದೇಶದಲ್ಲಿ ಶೇ 71 ರಷ್ಟು ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂಸು ಸರ್ವೆ ತಿಳಿಸಿದೆ.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯೊಂದಿಗೆ (ಐಸಿಎಂಆರ್) ಸಮಾಲೋಚಿಸಿ ಸೋಂಕು ಹರಡುವಿಕೆ ಕುರಿತು ಜಿಲ್ಲಾ ಮಟ್ಟದ ದತ್ತಾಂಶವನ್ನು ಕಲೆಹಾಕಲು ಹೆಚ್ಚಿನ ಸಿರೋಸರ್ವೆಗಳನ್ನು ನಡೆಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಇದನ್ನೂ ಓದಿ: ಸೌದಿ ಅರೇಬಿಯಾ: ಭಾರತ ಸೇರಿ ಕೊರೊನಾ ರೆಡ್ ಲಿಸ್ಟ್‌ನಲ್ಲಿನ ದೇಶಕ್ಕೆ ಭೇಟಿ ನೀಡಿದರೆ 3 ವರ್ಷಗಳ ಪ್ರಯಾಣ ನಿಷೇಧ!


