Homeಮುಖಪುಟ‘ಬಿಹಾರಿ ಗೂಂಡಾ’ ಎಂದು ನಿಂದಿಸಿದ್ದಾರೆಂದು ಸ್ಪೀಕರ್‌ಗೆ ದೂರು ನೀಡಿದ ಬಿಜೆಪಿ ಸಂಸದ!

‘ಬಿಹಾರಿ ಗೂಂಡಾ’ ಎಂದು ನಿಂದಿಸಿದ್ದಾರೆಂದು ಸ್ಪೀಕರ್‌ಗೆ ದೂರು ನೀಡಿದ ಬಿಜೆಪಿ ಸಂಸದ!

- Advertisement -
- Advertisement -

‘ಐಟಿ ಸಂಸದೀಯ ಸ್ಥಾಯಿ ಸಭೆ’ಯಲ್ಲಿ ತೃಣಮೂಲ ಕಾಂಗ್ರೆಸ್‌ ಸಂಸದೆ ಮಾಹುವಾ ಮೊಯಿತ್ರಾ ಅವರು ತನ್ನನ್ನು ‘ಬಿಹಾರಿ ಗೂಂಡಾ’ ಎಂದು ಮೂರು ಬಾರಿ ಕರೆದಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಿಸಿದ್ದಾರೆ. ಈ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ದುಬೆ ದೂರು ನೀಡಿದ್ದಾರೆ.

ಆದರೆ ಮಾಹುವಾ ಮೊಯಿತ್ರಾ ಅವರು ಈ ಆರೋಪವನ್ನು ನಿರಾಕರಿಸಿದ್ದು, ಈ ಸಭೆ ನಡೆದೆ ಇಲ್ಲ, ನಡೆಯದ ಸಭೆಯಲ್ಲಿ ಇದು ಹೇಗೆ ಸಾಧ್ಯ ಎಂದು ಅವರು ಕೇಳಿದ್ದಾರೆ.

ಈ ಬಗ್ಗೆ ಬುಧವಾರದಂದು ಹೇಳಿಕೆ ನೀಡಿದ ದುಬೆ, “ಹಿಂದಿ ಮಾತನಾಡುವ ಎಲ್ಲಾ ಜನರ ಮೇಲೆ ಟಿಎಂಸಿಗೆ ಅಲರ್ಜಿ ಇದೆ. ಅದಕ್ಕಾಗಿಯೇ ಅವರು ನನ್ನನ್ನು ‘ಬಿಹಾರಿ ಗೂಂಡಾ’ ಎಂದು ಕರೆದರು. ಇದು ಬಿಹಾರದ ಅಭಿಮಾನದ ಮೇಲಿನ ದಾಳಿ. ನಾನು ಎಲ್ಲ ಸಂಗತಿಗಳನ್ನು ಸ್ಪೀಕರ್‌ಗೆ ತಿಳಿಸಿದ್ದೇನೆ. ಮಾಹುವಾ ಮೊಯಿತ್ರಾ ಕ್ಷಮೆಯಾಚಿಸಬೇಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಂಸತ್ತಿನಲ್ಲಿ ಪ್ರಜ್ವಲಿಸಿದ ಮಹುವಾ ಮೊಯಿತ್ರಾ ರವರ ಭಾಷಣದ ಕನ್ನಡ ಅನುವಾದ

ಅಲ್ಲದೆ ತೃಣಮೂಲ ಮುಖ್ಯಸ್ಥೆ ಮತ್ತು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಟ್ಯಾಗ್‌ ಮಾಡಿ ಟ್ವೀಟ್ ಮಾಡಿದ ಅವರು, “ಬಿಹಾರಿ ಗೂಂಡಾ ಎಂಬ ಪದಗಳನ್ನು ಬಳಸಿ ನಿಮ್ಮ ಸಂಸದರು ನನ್ನನ್ನು ನಿಂದಿಸಿರುವುದು, ಉತ್ತರ ಭಾರತೀಯರು ಮತ್ತು ಹಿಂದಿ ಮಾತನಾಡುವ ಜನರ ಬಗ್ಗೆ ನಿಮ್ಮ ಪಕ್ಷದ ದ್ವೇಷವನ್ನು ದೇಶದ ಮುಂದೆ ಬಹಿರಂಗವಾಗಿದೆ” ಎಂದು ಹೇಳಿದ್ದಾರೆ.

ಇದಕ್ಕೆ ಟ್ವಿಟರ್‌‌ನಲ್ಲೇ ಪ್ರತಿಕ್ರಿಯಿಸಿರುವ ಸಂಸದೆ ಮೊಯಿತ್ರಾ, “ಹೆಸರು ಕರೆದಿದ್ದೇನೆ ಎಂಬ ಆರೋಪ ನನ್ನ ಮೇಲೆ ಹಾಕಲಾಗಿದೆ. ಯಾವುದೇ ಕೋರಂ – ಸದಸ್ಯರು ಹಾಜರಾಗದ ಕಾರಣ ಐಟಿ ಸಭೆ ನಡೆಯಲಿಲ್ಲ. ಹಾಜರಿಲ್ಲದ ಒಬ್ಬರ ಹೆಸರನ್ನು ನಾನು ಹೇಗೆ ಕರೆಯಲು ಸಾಧ್ಯ!! ಹಾಜರಾತಿ ಪಟ್ಟಿಯನ್ನು ಪರಿಶೀಲಿಸಿ !” ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಮೋದಿ ಬೀದಿಬದಿ ಪೋಕರಿ ರೀತಿ ಮಾತನಾಡುತ್ತಾರೆ’- ಮೊಹುವಾ ಮೊಯಿತ್ರಾ

ಅಷ್ಟೇ ಅಲ್ಲದೆ ಸಂಸದೆಯು ತಮ್ಮ ಟ್ವೀಟ್‌ನಲ್ಲಿ, ಕಾಂಗ್ರೆಸ್ ಸಂಸದರಾದ ಶಶಿ ತರೂರ್, ಕಾರ್ತಿ ಚಿದಂಬರಂ ಮತ್ತು ನಾಸಿರ್ ಹುಸೇನ್ ಮತ್ತು ತೃಣಮೂಲ ಸಂಸದ ನದೀಮುಲ್ ಹಕ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ನಿನ್ನೆ ನಡೆಯಬೇಕಿದ್ದ ಐಟಿ ಸಂಸದೀಯ ಸ್ಥಾಯಿ ಸಮಿತಿಯ ಸಭೆಯನ್ನು ಬಿಜೆಪಿ ಸಂಸದರು ಬಹಿಷ್ಕರಿಸಿದ್ದರು ಮತ್ತು ಹಾಜರಾತಿ ನೋಂದಣಿಗೆ ಸಹಿ ಹಾಕಲು ನಿರಾಕರಿಸಿದ್ದರು. ಈ ಸಂಸದೀಯ ಸಮಿತಿಯಲ್ಲಿನ ಅಧ್ಯಕ್ಷರಾಗಿರುವ ಶಶಿ ತರೂರ್ ಅವರನ್ನು ಹುದ್ದೆಯಿಂದ ತೆಗೆದು ಹಾಕಬೇಕೆಂಬ ದುಬೆ ಅವರು ಬೇಡಿಕೆಯಿಟ್ಟಿದ್ದರು.

ಇಸ್ರೇಲಿ ಮೂಲದ ಪೆಗಾಸಸ್‌ ತಂತ್ರಾಂಶ ಬಳಸಿ ಪ್ರತಿಪಕ್ಷದ ರಾಜಕಾರಣಿಗಳು, ಇಬ್ಬರು ಒಕ್ಕೂಟ ಸರ್ಕಾರದ ಮಂತ್ರಿಗಳು ಮತ್ತು 40 ಪತ್ರಕರ್ತರ ಮೇಲೆ ಕಣ್ಗಾವಲು ಮಾಡಿರುವ ವಿವಾದದ ಬಗ್ಗೆ ಚರ್ಚೆ ನಡೆಸಲು ಐಟಿ ಸಂಸದೀಯ ಸ್ಥಾಯಿ ಸಮಿತಿ ಸಭೆ ಕರೆದಿತ್ತು. ಆದರೆ ಸಾಕಷ್ಟು ಸದಸ್ಯರು ಭಾಗವಹಿಸದೆ ಇರುವುದರಿಂದ ಸಭೆಯು ರದ್ದುಗೊಂಡಿತು.

ಇದನ್ನೂ ಓದಿ: ‘ಹೌದು ಮೈಲಾರ್ಡ್, ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರೆಲ್ಲಾ ಒಟ್ಟಾಗಿ ಸಂಚು ಹೂಡಿದರು’

ವಿಡಿಯೊ ನೋಡಿ: ಆಕ್ಸಿಜನ್ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದ ಕೇಂದ್ರ ಸರ್ಕಾರ.. ಹಾಗಾದರೆ ಇವು ಏನು??

ಈ ವರ್ಷದ ಏಪ್ರಿಲ್ ಆರಂಭದಲ್ಲಿ ಅಪ್ಪಳಿಸಿದ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಆಕ್ಸಿಜನ್ ಸಿಗದೇ ಜನರು ಒದ್ದಾಡುತ್ತಿರುವ, ಪ್ರಾಣ ಬಿಟ್ಟ ಸಾವಿರಾರು ಪ್ರಕರಣಗಳು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗೆ ಹಲ್ಲೆ ನಡೆಸಿದ ಸ್ವಪಕ್ಷದ ಮುಖಂಡ

0
ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಕೃಷ್ಣಕುಮಾರ್ ಅವರ ಕಣ್ಣಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಪಕ್ಷದ ಸ್ಥಳೀಯ ನಾಯಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕೃಷ್ಣಕುಮಾರ್ ಇತ್ತೀಚೆಗೆ...