Homeಮುಖಪುಟಚೆನ್ನೈ: ಸತ್ಯಂ ಟಿವಿಯ ಕಛೇರಿಗೆ ನುಗ್ಗಿ, ಕತ್ತಿ-ಗುರಾಣಿಯಿಂದ ದಾಂಧಲೆ ನಡೆಸಿದ ವ್ಯಕ್ತಿ

ಚೆನ್ನೈ: ಸತ್ಯಂ ಟಿವಿಯ ಕಛೇರಿಗೆ ನುಗ್ಗಿ, ಕತ್ತಿ-ಗುರಾಣಿಯಿಂದ ದಾಂಧಲೆ ನಡೆಸಿದ ವ್ಯಕ್ತಿ

- Advertisement -
- Advertisement -

ಖಡ್ಗ ಮತ್ತು ಗುರಾಣಿಯನ್ನು ಹಿಡಿದ ವ್ಯಕ್ತಿಯೊಬ್ಬ ಚೆನ್ನೈನ ಜನಪ್ರಿಯ ಚಾನೆಲ್ ಸತ್ಯಂ ಟಿವಿಯ ಪ್ರಧಾನ ಕಛೇರಿಗೆ ನುಗ್ಗಿ ಮಂಗಳವಾರ ದಾಂಧಲೆ ನಡೆಸಿ, ಚಾನೆಲ್‌ ಆಸ್ತಿಯನ್ನು ಹಾನಿಗೊಳಿಸಿರುವ ಘಟನೆ ನಡೆದಿದೆ. ಚಾನೆಲ್ ಬಿಡುಗಡೆ ಮಾಡಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ವ್ಯಕ್ತಿಯು ಕತ್ತಿ ಮತ್ತು ಗುರಾಣಿ ಹಿಡಿದುಕೊಂಡು, ಪೀಠೋಪಕರಣಗಳಿಗೆ, ಸ್ವತ್ತಿಗೆ ಹಾನಿ ಮಾಡುತ್ತಿರುವ ದೃಶ್ಯ ಕಂಡುಬಂದಿದೆ.

“ಕಾರ್ ಪಾರ್ಕಿಂಗ್‌ ಏರಿಯಾದ ಮೂಲಕ ಕಚೇರಿ ಆವರಣವನ್ನು ಪ್ರವೇಶಿಸಿದ್ದಾರೆ. ಗಿಟಾರ್ ಬ್ಯಾಗ್‌ನಲ್ಲಿ ಶಸ್ತ್ರಾಸ್ತ್ರಗಳನ್ನು ಮುಚ್ಚಿಟ್ಟುಕೊಂಡು ಬಂದಿದ್ದಾರೆ” ಎಂದು ಚಾನೆಲ್‌ನ ವ್ಯವಸ್ಥಾಪಕ ನಿರ್ದೇಶಕ ಐಸಾಕ್ ಲಿವಿಂಗ್‌ಸ್ಟೋನ್‌ ತಿಳಿಸಿದ್ದಾರೆ.

ದಾಳಿಯ ಹಿಂದೆ ಯಾರದ್ದಾದರೂ ಪ್ರಚೋದನೆ ಅಥವಾ ಏನಾದರೂ ಉದ್ದೇಶವಿದೆಯೇ ಎಂಬ ಉದು ತಿಳಿದಿಲ್ಲ. ಈ ವ್ಯಕ್ತಿಯ ವಿರುದ್ಧ ಯಾವುದೇ ಸುದ್ದಿಯನ್ನು ನಾವು ಮಾಡಿಲ್ಲ. ಘಟನೆ ಹಿಂದೆ ಏನಿದೆ ಎಂದು ನಮಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನಮ್ಮ ವರದಿಗೆ ಸರ್ಕಾರ ಹೆದರಿದೆ, ಆದರೆ ಐಟಿ ದಾಳಿಗೆ ನಾವು ಬಗ್ಗುವುದಿಲ್ಲ: ದೈನಿಕ್ ಭಾಸ್ಕರ್

 

ರಾಯಪುರಂ ಪೊಲೀಸ್ ಠಾಣೆಯ ಪೋಲಿಸರು ಆರೋಪಿಯನ್ನು ಬಂಧಿಸಿದ್ದು, ಆತನನ್ನು ರಾಜೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಆರೋಪಿ ರಾಜೇಶ್ ಕುಮಾರ್‌ ಮೂಲತಃ ಕೊಯಮತ್ತೂರಿನವರಾದರೂ ಗುಜರಾತ್‌ನಲ್ಲಿ ನೆಲೆಸಿದ್ದಾರೆ ಎಂದು ಚಾನೆಲ್‌ನ ವ್ಯವಸ್ಥಾಪಕ ನಿರ್ದೇಶಕ ಐಸಾಕ್ ಲಿವಿಂಗ್‌ಸ್ಟೋನ್‌ ತಿಳಿಸಿದ್ದಾರೆ.

ಚೆನ್ನೈ ಪ್ರೆಸ್ ಕ್ಲಬ್, ಸತ್ಯಂ ಚಾನೆಲ್ ಮೇಲೆ ನಡೆಸ ದಾಳಿಯನ್ನು ಖಂಡಿಸಿದೆ. ಚೆನ್ನೈ ಪ್ರೆಸ್ ಕ್ಲಬ್ ಜಂಟಿ ಕಾರ್ಯದರ್ಶಿ ಭಾರತಿ ತಮಿಳನ್, ಪತ್ರಕರ್ತರು ಮತ್ತು ಅವರ ಕಚೇರಿಗಳ ಸುರಕ್ಷತೆಗಾಗಿ ಕಾನೂನು ರೂಪಿಸುವಂತೆ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.


ಇದನ್ನೂ ಓದಿ: ಹಳಿಯಾಳ: ಅರಣ್ಯ ಸಿಬ್ಬಂದಿಯಿಂದ ಗೌಳಿ ಬುಡಕಟ್ಟು ಜನರ ಮೇಲೆ ದಾಳಿ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...