Homeಮುಖಪುಟಬಿಎಸ್‌ವೈ ಸಂಪುಟದಲ್ಲಿದ್ದ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ತಪ್ಪಿದ್ದವರು ಯಾರು ಯಾರು ಗೊತ್ತೆ?

ಬಿಎಸ್‌ವೈ ಸಂಪುಟದಲ್ಲಿದ್ದ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ತಪ್ಪಿದ್ದವರು ಯಾರು ಯಾರು ಗೊತ್ತೆ?

- Advertisement -
- Advertisement -

ಅಂತೂ ಇಂತೂ ನೂತನ ಸಿಎಂ ಬಸವರಾಜ ಬೊಮ್ಮಾಯಿಯವರು 29 ನೂತನ ಸಚಿವರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ಬಿಎಸ್‌ವೈ ಸಂಪುಟದಲ್ಲಿದ್ದ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ತಪ್ಪಿದ ಮಾಜಿ ಸಚಿವರ ಪಟ್ಟಿ ಇಲ್ಲಿದೆ.

ಜಗದೀಶ್ ಶೆಟ್ಟರ್

ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್‌ರವರು ಬಿ.ಎಸ್ ಯಡಿಯೂರಪ್ಪನವರ ಸಂಪುಟದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕ ಸಚಿವರಾಗಿದ್ದರು. ಅವರು ಬೊಮ್ಮಾಯಿಯವರ ಸಂಪುಟದಲ್ಲಿಲ್ಲ. ಅವರನ್ನು ಸ್ವೀಕರ್ ಅಥವಾ ಬೇರೆ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ಮಾಡುವ ಚಿಂತನೆ ನಡೆದಿದೆ ಅಂತೆ

ಎಸ್ ಸುರೇಶ್ ಕುಮಾರ್

ಬಿಎಸ್‌ವೈ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದರು. ಅವರನ್ನು ಈಗ ಕೈಬಿಡಲಾಗಿದೆ.

ಸಿ.ಪಿ ಯೋಗಿಶ್ವರ್

ಪ್ರವಾಸೋದ್ಯಮ, ಪರಿಸರ ಮತ್ತು ಭೂವಿಜ್ಞಾನ ಸಚಿವರಾಗಿ ಇದೇ ವರ್ಷ ಜನವರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ ಸಿ.ಪಿ ಯೋಗಿಶ್ವರ್‌ರವರಿಗೆ ಗೇಟ್ ಪಾಸ್ ನೀಡಲಾಗಿದೆ.

ಲಕ್ಷ್ಮಣ ಸವದಿ

ಬಿಎಸ್‌ವೈ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರಾಗಿದ್ದ ಲಕ್ಷ್ಮಣ ಸವದಿಯವರನ್ನು ಬಸವರಾಜ ಬೊಮ್ಮಾಯಿ ಸಂಪುಟದಿಂದ ಹೊರಗಿಡಲಾಗಿದೆ.

ಶ್ರೀಮಂತ ಪಾಟೀಲ್

ಜವಳಿ ಸಚಿವರಾಗಿದ್ದ ಶ್ರೀಮಂತ ಪಾಟೀಲ್ ಹೊಸ ಸಂಪುಟದಿಂದ ಹೊರಗುಳಿದಿದ್ದಾರೆ.

ಆರ್ ಶಂಕರ್

ರೇಷ್ಮೆ, ತೋಟಗಾರಿಕೆ ಸಚಿವರಾಗಿದ್ದ ಆರ್ ಶಂಕರ್‌ರವರು ನೂತನ ಸಚಿವರ ಪಟ್ಟಿಯಿಂದ ಹೊರಗಿದ್ದಾರೆ.

ಅರವಿಂದ ಲಿಂಬಾವಳಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅರಣ್ಯ ಇಲಾಖೆಯ ಸಚಿವರಾಗಿದ್ದರು. ಅವರನ್ನು ಕೈಬಿಡಲಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿಯವರು ನೇರವಾಗಿ ಕರೆ ಮಾಡಿ ಸಚಿವರಾಗಿ ಪ್ರಮಾಣ ವಚನಕ್ಕೆ ಆಹ್ವಾನ ನೀಡಿರುವ ಶಾಸಕರ ಪಟ್ಟಿ ಇಂತಿದೆ.

1.ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ

2.ಆರ್.ಅಶೋಕ್- ಪದ್ಮನಾಭ ನಗರ

3.ಬಿ.ಸಿ. ಪಾಟೀಲ್ – ಹಿರೇಕೆರೂರು

4.ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ

5.ಉಮೇಶ್ ಕತ್ತಿ- ಹುಕ್ಕೇರಿ

6.ಎಸ್.ಟಿ.ಸೋಮಶೇಖರ್- ಯಶವಂತಪುರ

7.ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ

8.ಬೈರತಿ‌ ಬಸವರಾಜ – ಕೆ ಆರ್ ಪುರಂ

9.ಮುರುಗೇಶ್ ನಿರಾಣಿ – ಬಿಳಿಗಿ

10.ಶಿವರಾಂ ಹೆಬ್ಬಾರ್- ಯಲ್ಲಾಪುರ

11.ಶಶಿಕಲಾ ಜೊಲ್ಲೆ- ನಿಪ್ಪಾಣಿ

12.ಕೆಸಿ ನಾರಾಯಣ್ ಗೌಡ – ಕೆ‌ಆರ್ ಪೇಟೆ

13.ಸುನೀಲ್ ಕುಮಾರ್ – ಕಾರ್ಕಳ

14.ಅರಗ ಜ್ಞಾನೇಂದ್ರ – ತೀರ್ಥ ಹಳ್ಳಿ

15.ಗೋವಿಂದ ಕಾರಜೋಳ-ಮುಧೋಳ

16.ಮುನಿರತ್ನ- ಆರ್ ಆರ್ ನಗರ

17.ಎಂ.ಟಿ.ಬಿ ನಾಗರಾಜ್ – ಎಂ ಎಲ್ ಸಿ

18.ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್

19.ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ

20.ಹಾಲಪ್ಪ ಆಚಾರ್ – ಯಲ್ಬುರ್ಗ

21.ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ

22.ಕೋಟಾ ಶ್ರೀನಿವಾಸ ಪೂಜಾರಿ – ಎಂ ಎಲ್ ಸಿ

23.ಪ್ರಭು ಚೌವ್ಹಾಣ್ – ಔರಾದ್

24.ವಿ ಸೋಮಣ್ಣ – ಗೋವಿಂದ್ ರಾಜನಗರ

25.ಎಸ್ ಅಂಗಾರ-ಸುಳ್ಯ

26.ಆನಂದ್ ಸಿಂಗ್ – ಹೊಸಪೇಟೆ

27.ಸಿ ಸಿ‌ ಪಾಟೀಲ್ – ನರಗುಂದ

28.ಬಿಸಿ ನಾಗೇಶ್ – ತಿಪಟೂರು

29.ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು

ಜೆ.ಪಿ ನಡ್ಡಾರವರು ಮತ್ತು ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ರವರು ಯಡಿಯೂರಪ್ಪನವರ ಮಗ ಬಿ.ವೈ ವಿಜೇಯೇಂದ್ರರವರ ಜೊತೆ ಮಾತನಾಡಿದ್ದಾರೆ. ಸಚಿವ ಸಂಪುಟದ ಪಟ್ಟಿಯಲ್ಲಿ ಬಿ.ವೈ ವಿಜೇಯೇಂದ್ರ ಹೆಸರು ಇಲ್ಲ ಎಂದು ಸಿಎಂ ತಿಳಿಸಿದ್ದಾರೆ.


ಇದನ್ನೂ ಓದಿ: ನೂತನ ಸಚಿವರ ಪಟ್ಟಿ ಇಲ್ಲಿದೆ: ಬಿ.ವೈ ವಿಜಯೇಂದ್ರಗೆ ಇಲ್ಲ ಸಚಿವ ಸ್ಥಾನ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಾಗತಿಕ ಮಾದ್ಯಮಗಳಲ್ಲಿ ಭಾರೀ ಸುದ್ದಿಯಾದ ಮೋದಿಯ ದ್ವೇಷ ಭಾಷಣ

0
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜಸ್ಥಾನದ ಬನ್ಸ್ವಾರಾದಲ್ಲಿ ಮುಸ್ಲಿಮರ ವಿರುದ್ಧ ಮಾಡಿದ್ದ ದ್ವೇಷ ಭಾಷಣ ಜಾಗತಿಕ ಮಾದ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದು, ಮೋದಿ ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. 'ಕೊಳಕು ಭಾಷಣ’ ಆದರೆ...