ಟೋಕಿಯೋ ಒಲಿಂಪಿಕ್ಸ್‌ನ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದು ಭಾರತೀಯರ ಚಿನ್ನದ ಕನಸು ನನಸು ಮಾಡಿದ್ದ ನೀರಜ್ ಚೋಪ್ರಾ ಅವರ ಹೇಳಿಕೆಯನ್ನು ಬಳಸಿ ಹಲವು ಮಂದಿ ವಿವಾದ ಸೃಷ್ಠಿಸಿದ್ದರು. ಇದಕ್ಕೆ ನೀರಜ್ ಚೋಪ್ರಾ, ನಿಮ್ಮ ಕೊಳಕು ಅಜೆಂಡಾಗಳಿಗೆ ನನ್ನ ಹೇಳಿಕೆ ಬಳಸಬೇಡಿ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋ ಫೈನಲ್ ವೇಳೆ ನೀರಜ್ ಅವರು ಎಸೆಯಬೇಕಿದ್ದ ಜಾವೆಲಿನ್ ಪಾಕಿಸ್ತಾನದ ಅಥ್ಲೀಟ್ ಆರ್ಶದ್ ನದೀಮ್ ಬಳಿಯಿತ್ತು, ಅದನ್ನು ಕೇಳಿದಾಗ ಅವರು ವಾಪಸ್ ನೀಡಿದ್ದರು ಎಂದು ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ತಿಳಿಸಿದ್ದರು.
ನೀರಜ್ ಚೋಪ್ರಾರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಆರ್ಶದ್ ಅವರ ವಿರುದ್ಧ ಹಲವು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ ಹೀಯಾಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ನೀರಜ್, ಕ್ರೀಡೆಯಲ್ಲಿ ಇದೊಂದು ಅತ್ಯಂತ ಸಹಜ ಪ್ರಕ್ರಿಯೆ. ನಾವೆಲ್ಲರೂ ಪ್ರೀತಿಯಿಂದ ಇರುತ್ತೇವೆ. ನಿಮ್ಮ ಕೊಳಕು ಅಜೆಂಡಾಗಳಿಗೆ ನಮ್ಮ ಹೆಸರು ಮತ್ತು ಹೇಳಿಕೆಯನ್ನು ಬಳಸದಿರಿ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗುರು ಕಾಶೀನಾಥ್ ನಾಯ್ಕ್ ಮನೆಗೆ ನೀರಜ್ ಚೋಪ್ರಾ ಭೇಟಿ: ಕೋಚ್ ಅಲ್ಲ ಎಂದಿದ್ದವರ ಬಾಯಿ ಬಂದ್!
मेरी आप सभी से विनती है की मेरे comments को अपने गंदे एजेंडा को आगे बढ़ाने का माध्यम न बनाए। Sports हम सबको एकजूट होकर साथ रहना सिखाता हैं और कमेंट करने से पहले खेल के रूल्स जानना जरूरी होता है ?? pic.twitter.com/RLv96FZTd2
— Neeraj Chopra (@Neeraj_chopra1) August 26, 2021
ಟ್ವಿಟರ್‌ನಲ್ಲಿ ವಿಡಿಯೋ ಶೇರ್ ಮಾಡಿರುವ ನೀರಜ್ ಚೋಪ್ರಾ ಅವರ ಹೇಳಿಕೆ ಹೀಗಿದೆ.
“ಎಲ್ಲರಿಗೂ ನಮಸ್ಕಾರ ಮೊದಲಿಗೆ ನನ್ನನ್ನು ಬೆಂಬಲಿಸಿದ, ಪ್ರೀತಿ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನೀವೆಲ್ಲರೂ ಪ್ರೋತ್ಸಾಹಿಸಿದ ರೀತಿಗೆ ಖುಷಿಯಾಗುತ್ತಿದೆ. ಅದೇ ರೀತಿ ಈಗ ಒಂದು ವಿವಾದ ಅದೇ ರೀತಿ ನಾನು ಟೋಕಿಯೋ ಒಲಿಂಪಿಕ್ಸ್ ಜಾವಲಿನ್ ಥ್ರೋ ಫೈನಲ್‌ನಲ್ಲಿ ಪಾಕಿಸ್ತಾನದ ಆರ್ಶದ್ ನದೀಮ್ ಅವರ ಬಳಿಯಿದ್ದ ಜಾವೆಲಿನ್ ಪಡೆದು ಎಸೆದೆ. ಇದನ್ನು ದೊಡ್ಡ ವಿವಾದ ಮಾಡುತ್ತಿದ್ದಾರೆ. ಇದೊಂದು ಅತ್ಯಂತ ಸರಳ ಹಾಗೂ ಸಹಜ ಪ್ರಕ್ರಿಯೆ. ಜಾವಲಿನ್ ಪಟು ತಮ್ಮದೇ ಆದ ಜಾವಲಿನ್ ಹೊಂದಿರುತ್ತಾರೆ. ಅದನ್ನು ಬೇರೆಯವರು ಸಹ ಬಳಸುತ್ತಾರೆ. ಅದೇ ರೀತಿ ನನ್ನ ಜಾವೆಲಿನ್ ಹಿಡಿದುಕೊಂಡು ಆರ್ಶದ್ ನದೀಂ ಅಭ್ಯಾಸ ನಡೆಸುತ್ತಿದ್ದರು. ಅದರಲ್ಲಿ ಯಾವುದೇ ತಪ್ಪು ಇಲ್ಲ. ಈಗ ನನ್ನ ಸ್ಪರ್ಧೆಯಿದೆ ಎಂದು ಅವರ ಬಳಿಯಿದ್ದ ನನ್ನ ಜಾವೆಲಿನ್ ಪಡೆದುಕೊಂಡು ನನ್ನ ಸ್ಪರ್ಧೆ ಪೂರ್ತಿಗೊಳಿಸಿದೆ. ಇದು ಅಂತಹ ದೊಡ್ಡ ವಿಷಯ ಕೂಡ ಅಲ್ಲ. ನನಗೆ ದುಖಃವಿದೆ. ನನ್ನ ಮನವಿ ಏನೆಂದರೆ, ಈ ರೀತಿ ಮಾಡಬೇಡಿ. ಕ್ರೀಡೆ ಎಲ್ಲರನ್ನೂ ಒಟ್ಟಾಗಿ ಸಾಗುವುದನ್ನು ಕಲಿಸುತ್ತದೆ. ನಾವೆಲ್ಲ ಜಾವೆಲಿನ್ ಥ್ರೋ ಪಟುಗಳು ಪ್ರೀತಿಯಿಂದ ಇರುತ್ತೇವೆ. ನಿಮ್ಮ ಮಾತುಗಳು ನಮಗೆ ಹಿಂಸೆಯಾಗದಿರಲಿ” ಎಂದಿದ್ದಾರೆ.
ಜೊತೆಗೆ ನಿಮ್ಮ ಪ್ರಚಾರಕ್ಕಾಗಿ ನಮ್ಮ ಭಾವನೆಗಳಿಗೆ ಧಕ್ಕೆಯಾಗುವಂತೆ ಈ ವಿಚಾರವನ್ನು ಬಿಂಬಿಸಬೇಡಿ. ನಿಮ್ಮ ಅಜೆಂಡಾಗಳಿಗೆ ನನ್ನ ಹೆಸರು, ಹೇಳಿಕೆಯನ್ನು ಬಳಸದಿರಿ ಎಂದು ನೀರಜ್ ಟ್ವೀಟ್ ಮೂಲಕ ವಿಡಿಯೋ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ: ನೀರಜ್ ಚೋಪ್ರಾ: ‘ಚಿನ್ನದ ತೋಳಿನ ಹುಡುಗ’ ನಡೆದು ಬಂದ ದಾರಿ



???